IPL 2025 RCB: ದೇಶೀಯ ಮಿಡ್ಲ್ ಆರ್ಡರ್ ಬ್ಯಾಟರ್+ ಮ್ಯಾಚ್ ಫಿನಿಷರ್ ಮೊದಲ ಆಯ್ಕೆ
ಐಪಿಎಲ್ 2025ರ ಹರಾಜಿಗೆ ದಿನಗಣನೆ ಆರಂಭವಾಗಿದೆ. ಇನ್ನು ಐಪಿಎಲ್‌ನ 10 ತಂಡಗಳು ತಾವು ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ನೀಡಬೇಕಿದೆ. ತಾವು ಉಳಿಸಿಕೊಂಡ ಆಟಗಾರರ ಹಾಗೂ ಕೈ ಬಿಟ್ಟ ಆಟಗಾರರನ್ನು ತಿಳಿಸಲು ಮಾಲಿಕರಿಗೆ ಇನ್ನು ಬೆರಳೇಣಿಕೆ ದಿನಗಳು ಮಾತ್ರ ಬಾಕಿ ಇವೆ. ಈ ನಿಟ್ಟಿನಲ್ಲಿ ಎಲ್ಲ ಮಾಲೀಕರು ಭರ್ಜರಿ ಲೆಕ್ಕಾಚಾರ ಆರಂಭಿಸಿದ್ದಾರೆ. ಆರ್‌ಸಿಬಿ ಸಹ ಈ ನಿಟ್ಟಿನಲ್ಲಿ ತನ್ನ ಪ್ರಯತ್ನವನ್ನು ಮುಂದುವರೆಸಲಿದೆ.
ಆರ್‌ಸಿಬಿ ಈ ಬಾರಿ ಯಾರನ್ನು ಉಳಿಸಿಕೊಳ್ಳಬಹುದು ಎಂಬ ಬಗ್ಗೆ ಇನ್ನು ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ. ಆದರೆ ವಿರಾಟ್ ಕೊಹ್ಲಿ ಅವರನ್ನು ಆರ್‌ಸಿಬಿ ಮೊದಲ ಆಯ್ಕೆಯ ಆಟಗಾರನಾಗಿ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಆದರೆ ಉಳಿದ ಐವರು ಆಟಗಾರರ ಯಾರು ಎಂಬ ಬಗ್ಗೆ ಇನ್ನು ನಿಖರತೆ ಸಿಕ್ಕಿಲ್ಲ. ಆದರೆ ಆರ್‌ಸಿಬಿ ಉಳಿಸಿಕೊಳ್ಳುವ ಹಾಗೂ ಕೈ ಬಿಡುವ ಆಟಗಾರರ ಜೊತೆಗೆ ಇನ್ನೊಂದು ಲೆಕ್ಕಾಚಾರವನ್ನು ಆರಂಭಿಸಿದೆ.

ಆರ್‌ಸಿಬಿ ಮುಂದಿನ ಬಾರಿಯ ಮೇಗಾ ಹರಾಜಿನಲ್ಲಿ ಯಾರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು ಎಂಬ ಬಗ್ಗೆ ಒಂದು ಬ್ಲ್ಯೂ ಪ್ರಿಂಟ್ ಮಾಡಿಕೊಳ್ಳುತ್ತಿದೆ. ಈ ಬಾರಿ ದೇಶೀಯ ಆಟಗಾರರಿಗೆ ಆರ್‌ಸಿಬಿ ಹೆಚ್ಚಾಗಿ ಮಣೆ ಹಾಕಬೇಕು ಎಂಬ ಕೂಗ ಸಹ ಹೆಚ್ಚಾಗಿ ಕೇಳಿ ಬರುತ್ತಿವೆ. ಈ ವೇಳೆ ಆರ್‌ಸಿಬಿ ಸಹ ದೇಶೀಯ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ ಆಟಗಾರನಿಗೆ ಟಾರ್ಗೆಟ್ ಮಾಡಲಿದೆ.
ಮಿಡ್ಲ್ ಆರ್ಡರ್ ಬ್ಯಾಟರ್
ಆರ್‌ಸಿಬಿ ಈ ಬಾರಿ ಹರಾಜಿನಲ್ಲಿ ಹಲವು ಸಂಯೋಜನೆಗಳೊಂದಿಗೆ ಹರಾಜು ಅಂಗಳಕ್ಕೆ ಇಳಿಯಲಿದೆ. ಈ ನಿಟ್ಟಿನಲ್ಲಿ ಆರ್‌ಸಿಬಿ ಮಿಡ್ಲ್ ಆರ್ಡರ್ ಬ್ಯಾಟರ್ ಬಗ್ಗೆ ಹೆಚ್ಚಿನ ಗಮನ ಹರಿಸಲಿದೆ. ಏಕೆಂದರೆ ಆರ್‌ಸಿಬಿಯ ಟಾಪ್ ಆರ್ಡರ್ ಬ್ಯಾಟರ್‌ಗಳು ಭರ್ಜರಿ ಪ್ರದರ್ಶನ ನೀಡುತ್ತಿದ್ದು, ತಂಡದ ಚಿಂತೆಯನ್ನು ದೂರ ಮಾಡಿದ್ದಾರೆ. ಆದರೆ, ಮಿಡ್ಲರ್ ಆರ್ಡರ್ ಬ್ಯಾಟರ್ ಸಮಸ್ಯೆ ಬಹುವಾಗಿ ಕಾಡುತ್ತಿದೆ. ಈ ನಿಟ್ಟಿನಲ್ಲಿ ಆರ್‌ಸಿಬಿ ಯುವ ಆಟಗಾರರಿಗೆ ಮಣೆ ಹಾಕಿ, ದೊಡ್ಡ ಜವಾಬ್ದಾರಿ ನೀಡುವ ಸಾಧ್ಯತೆ ಇದೆ.
ಒಂದೇ ಕಲ್ಲಿಗೆ ಎರಡು ಹಕ್ಕಿ
ಆರ್‌ಸಿಬಿ ಹರಾಜಿನಲ್ಲಿ ಬೈ ಒನ್ ಗೆಟ್ ಒನ್ ಫ್ರಿ ಕಾನ್ಸಪ್ಟ್‌ನಲ್ಲಿ ಲೆಕ್ಕಾಚಾರ ಆರಂಭಿಸುತ್ತದೆ. ಅಂದರೆ ಈಗ ಮಿಡ್ಲ್ ಆರ್ಡರ್ ಕೋಟಾದಲ್ಲಿ ಯಾರಿಗಾದ್ರೂ ಮಣೆ ಹಾಕಿದರೆ, ಆತ ಕೆಲವು ಓವರ್ ಬೌಲಿಂಗ್ ಮಾಡಬೇಕು. ಇಲ್ಲವೇ ಫಿನಿಶರ್ ರೋಲ್ ನಿಭಾಯಿಸಬೇಕು. ಮಿಡ್ಲ್ ಆರ್ಡರ್ ಬ್ಯಾಟಿಂಗ್ ಹಾಗೂ ಫಿನಿಶರ್ ರೋಲ್ ಗಾಗಿ ನಾನು ರೆಡಿ ಎಂದು ಟೀಮ್ ಇಂಡಿಯಾದ ಯುವ ಆಟಗಾರ ಒಬ್ಬ ಸಾರಿ ಹೇಳಿದ್ದಾನೆ. ಆತ ಬೆಂಗಳೂರಿನಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಶತಕ ಬಾರಿ ತನ್ನ ಕ್ಷಮತೆಯನ್ನು ಸಾಬೀತು ಪಡಿಸಿದ್ದಾರೆ.

ಎಸ್.. ಸರ್ಫರಾಜ್ ಖಾನ್ ಮೇಲೆ ಆರ್‌ಸಿಬಿ ಕಣ್ಣು ನೆಟ್ಟಿದೆ. ಮಿಡ್ಲ್ ಆರ್ಡರ್‌ನಲ್ಲಿ ಅಟ್ಯಾಕಿಂಗ್ ಆಟವಾಡುವ ಕ್ಷಮತೆ ಇವರಿಗೆ ಇದೆ. ಅಲ್ಲದೆ ಇವರ ಬತ್ತಳಿಕೆಯಲ್ಲಿ ಹಲವು ಶಾಟ್‌ಗಳು ಇದ್ದು, ರನ್ ವೇಗವನ್ನು ಹೆಚ್ಚಿಸಬಲ್ಲವು. ಇವರನ್ನು ಖರೀದಿ ಮಾಡಿ ಫಿನಿಷರ್ ರೋಲ್ ಸಹ ನೀಡುವ ಸಾಧ್ಯತೆ ಇದೆ. ಏಕೆಂದರೆ ಆರ್‌ಸಿಬಿಯಲ್ಲಿ ಈಗ ಫಿನಿಷರ್ ರೋಲ್ ಸಹ ಖಾಲಿ ಇದೆ. ದಿನೇಶ್ ಕಾರ್ತಿಕ್ ಕಳೆದ ಆವೃತ್ತಿಯ ಬಳಿಕ ನಿವೃತ್ತರಾದ ಬಳಿಕ ಈ ಸ್ಥಾನದ ಹುಡುಕಾಟ ನಡೆದಿದೆ.
ಸರ್ಫರಾಜ್ ಖಾನ್ ಈಗಾಗಲೇ ಆರ್‌ಸಿಬಿ ಡ್ರೆಸ್ಸಿಂಗ್ ರೂಮ್‌ನ ಭಾಗವಾಗಿದ್ದಾರೆ. ಇವರನ್ನು ಸೇರಿಸಿಕೊಂಡಲ್ಲಿ ತಂಡದ ಬ್ಯಾಟಿಂಗ್‌ಗೆ ಆನೆ ಬಲ ಬರಬಹುದು. ಇನ್ನು ಇವರ ಬಗ್ಗೆ ಹಲವು ಟೀಕೆಗಳಿವೆ. ಆದರೆ ಇವರಲ್ಲಿನ ಕ್ಷಮತೆಯನ್ನು ಗುರುತಿಸಿ ತಂಡದಲ್ಲಿ ಅವಕಾಶ ನೀಡಬೇಕು ಎಂಬುದು ಅಭಿಮಾನಿಗಳ ಬಯಕೆ ಆಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications