Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ಬ್ಯಾಟ್ ಮಾತಾಡಲಿ' ಮತ್ತೆ ಕುಣಿಯುತ್ತಾ ಬಂದ ಆರ್ ಸಿಬಿ ಗರ್ಲ್

RCB Girl is back cheers for Virat Kohli and Team India

ಐಪಿಎಲ್ 12ರ ಕೊನೆ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿದ ಖುಷಿ ಒಂದು ಕಡೆಯಾದರೆ, ಮತ್ತೊಂದು ಕಡೆ ಕೆಂಪು ದಿರಿಸಿನ ಫ್ಯಾನ್ ಗರ್ಲ್ ನೋಡುವುದೇ ಆನಂದವಾಗಿತ್ತು. ಆರ್ ಸಿಬಿ ಗರ್ಲ್ ದೀಪಿಕಾ ರಾತ್ರಿ ಕಳೆದು ಬೆಳಕು ಹರಿಯುವಷ್ಟರಲ್ಲಿ 'ಸೆಲೆಬ್ರಿಟಿ ಸ್ಟಾರ್' ಎನಿಸಿಕೊಂಡಿದ್ದಳು.

ಈಗ ವಿಶ್ವಕಪ್ 2019ರಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾವನ್ನು ಹುರಿದುಂಬಿಸಲು ದೀಪಿಕಾ ಮುಂದಾಗಿದ್ದಾಳೆ. ಹೊಸ ನ್ಯಾಷನಲ್ ಕ್ರಶ್ ಎನಿಸಿಕೊಂಡ ಈಕೆ ಹೆಸರು ದೀಪಿಕಾ, ಸದ್ಯ ಆಕೆ ಬಗ್ಗೆ ಅನೇಕ ಮೀಮ್ಸ್, ಟ್ರಾಲ್ ಗಳು ಬಂದಿದ್ದು, ಎಲ್ಲವನ್ನು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಳು. ಯಾವ ಖಾತೆ ಅಸಲಿ ಎಂದು ಹೇಳಿದ್ದಳು.

ನನ್ನಲ್ಲಿ ನನ್ನದೇ ಆದ ಪ್ರತಿಭೆಗಳಿವೆ ಅವುಗಳ ಮೂಲಕ ವೃತ್ತಿ ಬದುಕಿನಲ್ಲೂ ಡ್ಯಾನ್ಸರ್‌/ಟೀಚರ್‌/ಉದ್ಯಮಿಯಾಗಿ ಯಶಸ್ಸು ಕಂಡಿದ್ದೇನೆ.ನಾನೇ ಆರ್‌ಸಿಬಿ ಗರ್ಲ್‌. ಆದರೆ, ಅದಕ್ಕಿಂತಲೂ ಮೀರಿದ ವ್ಯಕ್ತಿತ್ವ ನನ್ನದು,'' ಎಂದು ದಿಟ್ಟ ಸಂದೇಶವನ್ನೂ ಸಾರಿದ್ದಳು.

ಮೂಲತಃ ಡ್ಯಾನ್ಸ್ ಟೀಚರ್ ಬಾಲಿವುಡ್ ನ ಕೋರಿಯಾಗ್ರಾಫರ್

ಮೂಲತಃ ಡ್ಯಾನ್ಸ್ ಟೀಚರ್ ಬಾಲಿವುಡ್ ನ ಕೋರಿಯಾಗ್ರಾಫರ್

ಮೂಲತಃ ಡ್ಯಾನ್ಸ್ ಟೀಚರ್ ಬಾಲಿವುಡ್ ನ ಕೋರಿಯಾಗ್ರಾಫರ್ ಆಗಿರುವ ದೀಪಿಕಾಗೆ ಸೆಲೆಬ್ರಿಟಿ ಪಟ್ಟ ಬೇಕಿರಲಿಲ್ಲ. ಆದರೆ, ಬಯಸದೆ ಬಂದ ಅಭಿಮಾನಿಗಳನ್ನು ತಿರಸ್ಕರಿಸಿರಲಿಲ್ಲ. ಆದರೆ, ಫ್ಯಾನ್ಸ್ ಹೆಸರಿನಲ್ಲಿ ಕಿಡಿಗೇಡಿಯಿಂದ ಕಿರಿಕಿರಿ ಅನುಭವಿಸಿದ್ದರ ಬಗ್ಗೆ ದೀಪಿಕಾ ಘೋಸ್‌ ತಮ್ಮ ಇನ್‌ಸ್ಟಾಗ್ರಾಮ್‌ ಗೋಡೆಯ ಮೇಲೆ ಬರೆದುಕೊಳ್ಳುವ ಮೂಲಕ ಎಲ್ಲರ ಎದುರು ತಮ್ಮ ಅಳಲು ತೋಡಿಕೊಂಡಿದ್ದಾರೆ. "ನನ್ನ ಹೆಸರು ದೀಪಿಕಾ ಘೋಸ್‌. ಇದಷ್ಟೇ ಸತ್ಯ,'' ಎಂದು ತಮ್ಮೊಳಗಿನ ನೋವನ್ನು ಹಂಚಿಕೊಂಡಿದ್ದಳು.

ವಿಶ್ವಕಪ್ ಪಂದ್ಯಕ್ಕಾಗಿ ಶುಭ ಹಾರೈಕೆ

ಡ್ಯಾನ್ಸ್ ಮೂಲಕ ವಿರಾಟ್ ಕೊಹ್ಲಿ ಹಾಗೂ ಟೀಂ ಇಂಡಿಯಾಕ್ಕೆ ಶುಭಹಾರೈಸಿದ ದೀಪಿಕಾ, ಕೊಹ್ಲಿ ಹಿಂದೊಮ್ಮೆ ಹೇಳಿದ ಡೈಲಾಗ್ ಹ್ಯಾಶ್ ಟ್ಯಾಗ್ ಮಾಡಿಕೊಂಡಿದ್ದಾರೆ. #LetTheBatDoTheTaking and #SOCKTHEM ಎಂದು ಹಾಕಿದ್ದಾರೆ. ಕಪ್ ಮತ್ತೊಮ್ಮೆ ಭಾರತಕ್ಕೆ ತನ್ನಿ ಎಂದಿದ್ದಾರೆ.

ವಿದ್ಯಾರ್ಥಿಗಳ ಜತೆ ಕುಣಿತದ ಮತ್ತೊಂದು ವಿಡಿಯೋ

ನನ್ನ ವಿದ್ಯಾರ್ಥಿ ವೃಂದಕ್ಕೆ ಪಾಠದ ಜೊತೆಗೆ ಭಾರತಕ್ಕೆ ಶುಭ ಹಾರೈಸುವ ಸಂದೇಶವುಳ್ಳ ವಿಡಿಯೋ ಹಾಕಿದ್ದೇನೆ. ಇದು ಟೀಂ ವರ್ಕ್, ಟೀಂ ಇಂಡಿಯಾಕ್ಕಾಗಿ ಶುಭಹಾರೈಕೆ, ಭಾನುವಾರದಂದು ಭಾರತ ಆಡುವುದನ್ನು ನೋಡಲು ಕಾತುರಳಾಗಿದ್ದೇನೆ ಎಂದು ಎಂದು ದೀಪಿಕಾ ಹೇಳಿದ್ದಾಳೆ.

ನನ್ನ ಹೆಸರು ದೀಪಿಕಾ ಘೋಸ್‌

ನನ್ನ ಹೆಸರು ದೀಪಿಕಾ ಘೋಸ್‌

"ನನ್ನ ಹೆಸರು ದೀಪಿಕಾ ಘೋಸ್‌. ನನ್ನ ಬಗ್ಗೆ ಹೇಳಲಾಗುತ್ತಿರುವ ವಿಷಯಗಳಲ್ಲಿ ಇದಷ್ಟೇ ಶೇ. 100 ರಷ್ಟು ಸತ್ಯ. ಶನಿವಾರ ನಡೆದ ಎಸ್‌ಆರ್‌ಎಚ್‌ ಮತ್ತು ಆರ್‌ಸಿಬಿ ನಡುವಣ ಪಂದ್ಯದಿಂದ ಇದೆಲ್ಲವೂ ಶುರುವಾಯಿತು. ಹಲವು ವರ್ಷಗಳಿಂದ ನಾನು ಆರ್‌ಸಿಬಿ ಪಂದ್ಯಗಳನ್ನು ವೀಕ್ಷಿಸುತ್ತಿದ್ದೇನೆ. ಬೆಂಗಳೂರು ತಂಡವನ್ನು ಹುರಿದುಂಬಿಸುವುದು ನಮ್ಮ ಕುಟುಂಬದ ಸಂಪ್ರದಾಯದಂತೆ ಆಗಿಬಿಟ್ಟಿದೆ. ಅಂತೆಯೇ ಮೇ 4ರಂದು ಪಂದ್ಯ ವೀಕ್ಷಿಸಲು ಹೋದಾಗ ಈ ರೀತಿಯ ವಿಭಿನ್ನ ಅನುಭವ ಎದುರಾಗುತ್ತದೆ ಎಂದು ಕಂಡಿತಾ ಅಂದಾಜಿಸಿರಲಿಲ್ಲ,'' ಎಂದು ತಮ್ಮ ಅನುಭವವನ್ನು ದೀಪಿಕಾ ಹಂಚಿಕೊಂಡಿದ್ದಾರೆ.

Story first published: Sunday, June 9, 2019, 17:19 [IST]
Other articles published on Jun 9, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+