Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮತ್ತೆ ಮತ್ತೆ ಮಾಡಿದ್ದೇ ತಪ್ಪನ್ನು ಮಾಡಿ ಕೈ ಸುಟ್ಟುಕೊಂಡ ಆರ್‌ಸಿಬಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್‌ನ ಖ್ಯಾತ ತಂಡಗಳಲ್ಲಿ ಒಂದು. ಈ ತಂಡ ಹುಟ್ಟಿದಾಗಿನಿಂದಲೂ ಕರ್ನಾಟಕದ ಜನ ಈ ತಂಡಕ್ಕೆ ಬೆಂಬಲ ಸೂಚಿಸುತ್ತ ಬಂದಿದ್ದಾರೆ. ಆದರೆ ಆರ್‌ಸಿಬಿ ಜನರ ಪ್ರೀತಿಯನ್ನು ಉಳಿಸಿಕೊಳ್ಳುವಲ್ಲಿ ಕಳೆದ ಕೆಲವು ವರ್ಷಗಳಲ್ಲಿ ವಿಫಲವಾಗಿದೆ. ಆರ್‌ಸಿಬಿ ಮಾಡಿದ್ದೇ ತಪ್ಪನ್ನು ಪದೇ ಪದೇ ಮಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.

ದುಬೈನಲ್ಲಿ ಮಂಗಳವಾರ ಐಪಿಎಲ್‌ ಹರಾಜು ನಡೆಯಿತು. ಈ ಹರಾಜಿನಲ್ಲಿ ಆರ್‌ಸಿಬಿ ತಾನು ಹಿಂದೆ ಮಾಡಿದ ತಪ್ಪುಗಳನ್ನು ಮಾಡುವುದಿಲ್ಲ ಎಂದೇ ಜನರು ಭಾವಿಸಿದ್ದರು. ಆದರೆ ಫ್ಯಾನ್ಸ್‌ ಆಸೆಗೆ ಪೆಟ್ಟು ಬಿದ್ದಿದೆ. ಆರ್‌ಸಿಬಿ ಮತ್ತೊಮ್ಮೆ ಉತ್ತಮ ಆಟಗಾರರಿಗೆ ಹಣ ಹೂಡುವಲ್ಲಿ ವಿಫಲವಾಗಿದೆ. ಅಷ್ಟಕ್ಕೂ ಐಪಿಎಲ್‌ ಹರಾಜಿನಲ್ಲಿ ಆರ್‌ಸಿಬಿ ಮಾಡಿರುವ ತಪ್ಪೇನು ಎಂಬ ಪ್ರಶ್ನೆ ಎದ್ದೇ ಏಳುತ್ತದೆ.

RCB Has Repeatedly Committed The Same Mistake In Ipl Auction


ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಿಂದಿನ ಹರಾಜಿನಲ್ಲಿ ಮಾಡಿದ ತಪ್ಪನ್ನೇ ಈ ಬಾರಿಯೂ ಮಾಡಿ ಕೈ ಸುಟ್ಟುಕೊಂಡಿದೆ. ಅಂದಹಾಗೆ ಈ ಬಾರಿಯ ಹರಾಜನ್ನು ನೋಡಿದ ಮೇಲೆ ಒಂದಂತೂ ಸ್ಪಷ್ಟವಾಗಿ ಗೋಚರವಾಗುತ್ತದೆ. ಆರ್‌ಸಿಬಿಗೆ ವಿದೇಶಿ ಆಟಗಾರರ ಮೇಲೆ ಪ್ರೀತಿ ಇನ್ನು ಕಮ್ಮಿ ಆಗಿಲ್ಲ ಎಂದು ಖಂಡಿತವಾಗಿ ತಿಳಿಯುತ್ತದೆ.

ಆರ್‌ಸಿಬಿ ತನ್ನ ಹರಾಜಿನ ಇತಿಹಾಸವನ್ನು ನೋಡಿದರೆ ದೇಶೀಯ ಆಟಗಾರರಿಗಿಂತಲೂ, ವಿದೇಶಿ ಆಟಗಾರರಿಗೆ ಕೋಟಿ ಕೋಟಿ ಹಣ ನೀಡಿ ಖರೀದಿಸಿದೆ. ಇದೇ ಪರಂಪರೆಯನ್ನು ಆರ್‌ಸಿಬಿ ಮುಂದುವರಿಸಿದೆ.
ಆರ್‌ಸಿಬಿ ನಾಲ್ಕು ವಿದೇಶಿ ಆಟಗಾರರ ಸ್ಲಾಟ್‌ ಫಿಲ್‌ ಮಾಡಿಕೊಳ್ಳುವಲ್ಲೇ ಹೆಚ್ಚಿನ ಒತ್ತು ನೀಡಿದೆ ಬಿಟ್ಟರೆ, ಏಳು ಸ್ಲಾಟ್‌ಗಳನ್ನು ಸರಿಯಾಗಿ ತುಂಬಿಕೊಳ್ಳುವಲ್ಲಿ ಮನಸ್ಸು ಮಾಡಲೇ ಇಲ್ಲ.

RCB Has Repeatedly Committed The Same Mistake In Ipl Auction

ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಿದ್ದೇ ದೇಶೀಯ ಆಟಗಾರರಿಗೆ ವೇದಿಕೆ ಕಲ್ಪಿಸಿಕೊಡುವ ಉದ್ದೇಶದಿಂದ. ಈ ನಿಟ್ಟಿನಲ್ಲಿ ಆರ್‌ಸಿಬಿ ಮೊದಲೆಲ್ಲಾ ಉತ್ತಮ ಕೆಲಸವನ್ನು ಮಾಡಿದೆ. ಆದರೆ ಇತ್ತೀಚಿಗೆ ತನ್ನ ಧೇಯ ಉದ್ದೇಶವನ್ನೇ ಮರೆತು ಬಿಟ್ಟಿದೆ. ದೇಶೀಯ ಸ್ಟಾರ್‌ಗಳ ಹೆಸರು ಕೇಳಿದಾಗ ಆಕ್ಟಿವ್ ಆಗಬೇಕಿದ್ದ ಆರ್‌ಸಿಬಿ, ವಿದೇಶಿ ಆಟಗಾರರ ಹೆಸರು ಕೇಳುತ್ತಲೇ ಕಾರ್ಯ ಪ್ರವೃತ್ತವಾಗುತ್ತಿದೆ.

ರಚಿನ್ ರವೀಂದ್ರಗೆ ಬಿಡ್‌ ಮಾಡದ ಆರ್‌ಸಿಬಿ

ಬೆಂಗಳೂರು ಮೂಲದ ನ್ಯೂಜಿಲೆಂಡ್ ಪ್ಲೇಯರ್‌ ಆರ್‌ಸಿಬಿ ಸೇರುತ್ತಾರೆ ಎಂದು ಫ್ಯಾನ್ಸ್ ಲೆಕ್ಕಾಚಾರವನ್ನು ಹಾಕಿಕೊಂಡಿದ್ದರು. ಆದರೆ ಫ್ಯಾನ್ಸ್‌ ಆಸೆಗೆ ಆರ್‌ಸಿಬಿ ಪೆಟ್ಟು ನೀಡಿದೆ. ಅಲ್ಲದೆ ಹರಾಜಿನಲ್ಲಿ ರಚಿನ್‌ ರವೀಂದ್ರ ಹೆಸರು ಕೂಗುತ್ತಿದ್ದಂತೆ ತನಗೂ ಅದಕ್ಕೂ ಏನು ಸಂಬಂಧವೇ ಇಲ್ಲವಂತೆ ಸುಮ್ಮನೆ ಕುಳಿತಿತ್ತು. ಕಡಿಮೆ ಬೆಲೆಗೆ ಸಿಗಬಹುದಿದ್ದ ಸ್ಟಾರ್ ಆಲ್‌ರೌಂಡರ್‌ಗೆ ಹಣ ಹೂಡುವಲ್ಲಿ ಆರ್‌ಸಿಬಿ ವಿಫಲವಾಯಿತು. ಚೆನ್ನೈ ಇದರ ಲಾಭ ಪಡೆದು ರಚಿನ್‌ಗೆ ತಮ್ಮ ತಂಡಕ್ಕೆ ಬರ ಮಾಡಿಕೊಂಡಿತು.

RCB Has Repeatedly Committed The Same Mistake In Ipl Auction

ದೇಶೀಯ ಆಟಗಾರರಾದ ಶಾರ್ದೂಲ್ ಠಾಕೂರ್, ಶಾರೂಕ್ ಖಾನ್, ಉಮೇಶ್ ಯಾದವ್, ಕಾರ್ತಿಕ್ ತ್ಯಾಗಿ, ಮನೀಷ್ ಪಾಂಡೆ, ಚೇತನ್ ಸಕಾರಿಯಾ, ಕೆ.ಎಸ್ ಭರತ್‌, ಶಿವಂ ಮಾವಿ, ಅಂಡರ್ 19 ವಿಶ್ವಕಪ್‌ನಲ್ಲಿ ಮಿಂಚಿರುವ ಅರ್ಶಿನ್ ಕುಲ್ಕರ್ಣಿ, ಕರ್ನಾಟಕದ ಶ್ರೇಯಸ್ ಗೋಪಾಲ್‌ರಂತಹ ಹೆಸರುಗಳು ಬಂದಾಗಲು ಆರ್‌ಸಿಬಿ ಬೇಸ್‌ ಪ್ರೈಸ್‌ಗೂ ಬಿಡ್ ಮಾಡಲೇ ಇಲ್ಲ. ಅಲ್ಜಾರಿ ಜೋಸೆಫ್‌ ಅವರಿಗೆ ನೀಡುವ 11.50 ಕೋಟಿ ರೂ. ಹಣವನ್ನು ಈ ಆಟಗಾರರಿಗೆ ನೀಡಿದ್ದರೆ, ಪ್ರಾಯಶಃ ಎಲ್ಲ ಆಟಗಾರರು ಆರ್‌ಸಿಬಿ ಜೆರ್ಸಿಯಲ್ಲಿ ಕಂಗೊಳಿಸುತ್ತಿದ್ದರು.

ಕರ್ನಾಟಕದ ಪ್ಲೇಯರ್ಸ್‌ಗಳಿಗೆ ಇಲ್ಲ ಅವಕಾಶ

ಆರ್‌ಸಿಬಿ ಮಿಡ್ಲ್‌ ಆರ್ಡರ್‌ ನಲ್ಲಿ ಸ್ಥಿರ ಒಬ್ಬ ಬ್ಯಾಟರ್‌ ಹುಡುಕುತ್ತಿದೆ. ಈ ಪ್ಲೇಸ್‌ಗೆ ಮನೀಷ್ ಪಾಂಡೆ ಸೂಕ್ತ ವ್ಯಕ್ತಿ. ಮನೀಷ್‌ ಪಾಂಡೆ ಖರೀದಿಸಲು ಆರ್‌ಸಿಬಿ ಮನಸ್ಸು ಮಾಡಲೇ ಇಲ್ಲ. ಶ್ರೇಯಸ್ ಗೋಪಾಲ್‌ ಮುಂಬೈ ತಂಡ ಸೇರಿದರು. ಶ್ರೇಯಸ್‌ ಆರ್‌ಸಿಬಿ ಪಾಳಯದಲ್ಲಿ ಇದ್ದಿದ್ದರೆ ಸ್ಪಿನ್ ವಿಭಾಗದ ಚಿಂತೆ ಕೊಂಚ ಕಮ್ಮಿ ಆಗುತ್ತಿತ್ತು.ಅಂದು ದುಬಾರಿಗೆ ಬೆಲೆಗೆ ಬೇರೆ ತಂಡಕ್ಕೆ ಹರಾಜಿಗಿದ್ದ ಮನೀಷ್‌ ಪಾಂಡೆ ಈ ಬಾರಿ ಹರಾಜಿನಲ್ಲಿ ಬೇಸ್ ಪ್ರೈಸ್ ಪಡೆದು ಕೆಕೆಆರ್‌ ತಂಡದ ಪಾಲಾದರು. ಶ್ರೇಯಸ್ ಗೋಪಾಲ್ 20 ಲಕ್ಷ ತಮ್ಮ ಮೂಲ ಬೆಲೆಗೆ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡರು. 50 ಲಕ್ಷ ಮೂಲ ಬೆಲೆಯನ್ನು ಹೊಂದಿದ್ದ ಕರುಣ್‌ ನಾಯರ್‌ ಹರಾಜಿನಲ್ಲಿ ಸೇಲ್‌ ಆಗದೇ ಉಳಿದರು.

ಆರ್‌ಸಿಬಿ ಹರಾಜಿನಲ್ಲಿ ಇವರನ್ನು ಟಾರ್ಗೆಟ್‌ ಮಾಡಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಮಾಡಿದ್ದೇ ತಪ್ಪನ್ನು ಪದೇ ಪದೇ ಮಾಡುತ್ತಿರುವ ಆರ್‌ಸಿಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

Story first published: Wednesday, December 20, 2023, 7:00 [IST]
Other articles published on Dec 20, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+