Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2025 RCB: ಮೆಗಾ ಆಕ್ಷನ್​ ಪ್ಲಾನ್​ ಬಗ್ಗೆ ಹೆಡ್‌ಕೋಚ್​ ಏನಂದ್ರು?

ಇಂಡಿಯನ್ ಪ್ರೀಮಿಯರ್ ಲೀಗ್‌ ( ಐಪಿಎಲ್) 2025ರ ಮೆಗಾ ಹರಾಜಿಗೆ ಕೇವಲ ಮೂರು ದಿನಗಳು ಮಾತ್ರ ಬಾಕಿ ಉಳಿದಿದ್ದು, ಭಾರತೀಯ ಕ್ರಿಕೆಟ್‌ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಐಪಿಎಲ್ 2025ರ ಟೂರ್ನಿಗಾಗಿ
ಬಲಿಷ್ಠ ತಂಡ ಕಟ್ಟಲು ಎಲ್ಲಾ ಫ್ರಾಂಚೈಸಿಗಳು ಯೋಜನೆ ರೂಪಿಸಿವೆ. ಈ ಮಧ್ಯೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿ ಈಗಾಗಲೇ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲು ಮುಂದಾಗಿದೆ.

ಐಪಿಎಲ್ 2025ರ ಆವೃತ್ತಿಗೆ ಆರ್‌ಸಿಬಿ ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ ಮತ್ತು ಯಶ್ ದಯಾಳ್‌ ಅವರನ್ನು ಉಳಿಸಿಕೊಂಡಿದ್ದು, ಉಳಿದ ಆಟಗಾರರನ್ನೂ ಬಿಡುಗಡೆ ಮಾಡಿದೆ. ಇದರೊಂದಿಗೆ ಮುಂದಿನ ಆವೃತ್ತಿಗೆ ಬಲಿಷ್ಠ ತಂಡ ಕಟ್ಟಲು ಆರ್‌ಸಿಬಿ ತಯಾರಾಗಿದೆ. ಕಳೆದ ಎರಡು ದಿನಗಳ ಹಿಂದೆ ಆರ್‌ಸಿಬಿ ತನ್ನ ಬೌಲಿಂಗ್ ಕೋಚ್‌ ಅನ್ನು ಘೋಷಣೆ ಮಾಡಿದೆ.

RCB head coach Andy Flower talk about IPL 2025 mega action

ಮುಂಬೈ ರಣಜಿ ತಂಡದ ಕೋಚ್ ಆಗಿದ್ದ ಓಂಕಾರ್ ಸಾಲ್ವಿ ಅವರು ಆರ್‌ಸಿಬಿಯ ನೂತನ ಬೌಲಿಂಗ್ ಕೋಚ್‌ ಆಗಿ ನೇಮಕಗೊಂಡಿದ್ದಾರೆ. ಇದರ ಮಧ್ಯೆ ಹೆಡ್‌ಕೋಚ್ ಆ್ಯಂಡಿ ಫ್ಲವರ್, ಮೆಂಟರ್ ಮತ್ತು ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್‌, ನಿರ್ದೇಶಕ ಮೊ ಬೊಂಬಾಟ್ ಐಪಿಎಲ್ 2025ರ ಮೆಗಾ ಹರಾಜಿನ ಬಗ್ಗೆ ಸಭೆ ನಡೆಸಿದ್ದಾರೆ. ಮೆಗಾ ಹರಾಜಿಗಾಗಿ ತಾವು ಮಾಡಿಕೊಂಡಿರುವ ಪ್ಲಾನ್‌ಗಳ ಬಗ್ಗೆ ಆ್ಯಂಡಿ ಫ್ಲವರ್ ಸುಳಿವು ಬಿಟ್ಟು ಕೊಟ್ಟಿದ್ದಾರೆ.

ಆರ್‌ಸಿಬಿ ಹೆಡ್‌ಕೋಚ್ ಹೇಳಿದ್ದೇನು?

ಐಪಿಎಲ್ ಮೆಗಾ ಹರಾಜಿಗೆ ಇನ್ನೇನು 4 ದಿನಗಳು ಮಾತ್ರ ಇವೆ. ನಾವು ಎಲ್ಲಾ ರೀತಿಯಲ್ಲೂ ತಯಾರು ಮಾಡಿಕೊಂಡಿದ್ದೇವೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಆಟಗಾರರು ಹೆಚ್ಚಿನ ಪಂದಗಳನ್ನು ಆಡಲಿದ್ದಾರೆ. ಇತರೆ ಸ್ಟೇಡಿಯಂಗಳಿಗೆ ಎಂ ಚಿನ್ನಸ್ವಾಮಿ ಸ್ಟೇಡಿಯಂ ಹೋಲಿಕೆ ಮಾಡಿದರೆ ಭಿನ್ನವಾಗಿದೆ. ಹಾಗಾಗಿ ಇಲ್ಲಿ ಆಡುವ ಆಟಗಾರರಿಗೆ ಸ್ಪೆಷಲ್​ ಕ್ವಾಲಿಟಿಗಳು ಇರಬೇಕಿದೆ. ಅದರಲ್ಲೂ ಹೆಚ್ಚು ಕೌಶಲ್ಯ ಹೊಂದಿರೋ ಆಟಗಾರರೇ ಆರ್‌ಸಿಬಿಗೆ ಬೇಕು ಎಂದು ಆ್ಯಂಡಿ ಫ್ಲವರ್ ಹೇಳಿದ್ದಾರೆ.

ಸಾಮಾನ್ಯವಾಗಿ ಆರ್‌ಸಿಬಿ ವೇಗದ ಬೌಲರ್‌ಗಳನ್ನು ಇಟ್ಟುಕೊಂಡರೆ ವರ್ಕೌಟ್ ಆಗುವುದಿಲ್ಲ. ನಿರ್ದಿಷ್ಟ ಯೋಜನೆಗಳೊಂದಿಗೆ ಬೌಲಿಂಗ್ ಮಾಡುವ ವೇಗದ ಬೌಲರ್‌ಗಳು ಬೇಕು. ಬ್ಯಾಟಿಂಗ್ ವಿಚಾರಕ್ಕೆ ಬಂದರೆ ತಂಡದಲ್ಲಿ ಪವರ್‌ ಹಿಟರ್‌ಗಳು ಇರಬೇಕು. ಹೀಗಾಗಿ ಬಲಿಷ್ಠ ತಂಡ ಕಟ್ಟುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಪವರ್​ ಹಿಟ್ಟರ್‌ಗಳು​​ ಮತ್ತು ಹೆಚ್ಚು ಕೌಶಲ್ಯ ಇರುವ ಬೌಲರ್‌ಗಳನ್ನೇ ಬಿಡ್ ಮಾಡಲಿದ್ದೇವೆ ಎಂದು ಆ್ಯಂಡಿ ಫ್ಲವರ್ ಮಾಹಿತಿ ಹಂಚಿಕೊಂಡಿದ್ದಾರೆ.

Story first published: Wednesday, November 20, 2024, 19:43 [IST]
Other articles published on Nov 20, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+