ಐಪಿಎಲ್ ಕಿರುಚಿತ್ರ : ಆರ್ ಸಿಬಿ ಫ್ಯಾನ್ಸ್ ಗಳ ಕ್ರಿಕೆಟ್ ಜ್ವರ
ಬೆಂಗಳೂರು, ಮಾರ್ಚ್ 31: ಏಪ್ರಿಲ್ ತಿಂಗಳು ಬಂದಾಗ ಕ್ರಿಕೆಟ್ ಪ್ರೇಮಿಗಳಿಗೆ ಐಪಿಎಲ್ ಜ್ವರ ಆವರಿಸುತ್ತದೆ. ತಮ್ಮ ತಂಡದ ಪರ ಅಭಿಮಾನಿಗಳು ಸ್ವಯಂಪ್ರೇರಿತರಾಗಿ ಪ್ರಚಾರಕ್ಕೆ ನಿಲ್ಲುತ್ತಾರೆ. ಅದರಲ್ಲೂ ಆರ್ ಸಿಬಿ ಫ್ಯಾನ್ಸ್ ಗಳಿಗೆ ಜ್ವರದ ತೀವ್ರತೆ ಹೆಚ್ಚಾಗೇ ಇರುತ್ತದೆ ಎಂದು ಕಿರುಚಿತ್ರದ ಮೂಲಕ ಹೇಳಲಾಗಿದೆ.
ಐಪಿಎಲ್ 2017 : ಆರ್ ಸಿಬಿ ವೇಳಾಪಟ್ಟಿ | ಸಂಪೂರ್ಣ ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು?
ಎಸ್4ಡಿ ಕ್ರಿಯೇಷನ್ಸ್ ನಿರ್ಮಾಣದ 'ಇನ್ ದಿ ಬ್ಲಡ್' ಕನ್ನಡ ಕಿರುಚಿತ್ರದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ಮೇಲೆ ತೀವ್ರ ಅಭಿಮಾನ ಇಟ್ಟುಕೊಂಡ ಯುವಕನೊಬ್ಬ ಏಪ್ರಿಲ್ ನಲ್ಲಿ ಐಪಿಎಲ್ ಸೀಸನ್ ಆರಂಭವಾಗುತ್ತಿದ್ದಂತೆ ನಡೆದುಕೊಳ್ಳುವ ರೀತಿ ಹೇಗಿರುತ್ತೆ? ಕಬ್ಬನ ಪಾರ್ಕ್ ಸುತ್ತಾ ಮುತ್ತಾ ಆತ ಸುಳಿಯುವುದೇಕೆ? ಯಾವುದೋ ವಾಹನದ ಹಿಂದೆ ಓಡುವುದೇಕೆ? ಪುಸ್ತಕವನ್ನು ನೋಡಿ ವಿಚಿತ್ರವಾಗಿ ವರ್ತಿಸುವುದೇಕೆ? ಎಂಬುದನ್ನು ತೋರಿಸಲಾಗಿದೆ. [ಹರಾಜು ನಂತರ ವಿರಾಟ್ ಕೊಹ್ಲಿ ಆರ್ ಸಿಬಿ ಪಡೆ ಹೀಗಿದೆ]

ಆರ್ ಸಿಬಿ ತನ್ನ ರಕ್ತದಲ್ಲೇ ಬೆರೆಸಿಕೊಂಡಿರುವುದರಿಂದ ಸದಾಕಾಲ ಆರ್ ಸಿಬಿ ಬಗ್ಗೆ ಯೋಚಿಸುತ್ತಾನೆ ಎಂದು ಡಾಕ್ಟರ್ ಹೇಳುತ್ತಾರೆ. ಇದೆಲ್ಲ ನಿಮಗೆ ಹೇಗೆ ಗೊತ್ತು ಡಾಕ್ಟರ್ ಎಂದು ಕೇಳಿದರೆ ತಾನು ಕೂಡಾ ಆರ್ ಸಿಬಿ ಫ್ಯಾನ್ ಎಂದು ಟೀ ಶರ್ಟ್ ತೋರಿಸುತ್ತಾರೆ.
ಈ ಕಿರುಚಿತ್ರದಲ್ಲಿ ರಘು ಗೌಡ, ಆರ್ ಜೆ ವಿಕ್ಕಿ, ದೀಪಕ್ ಶರ್ಮ, ನಿಶ್ಚಲ್ ಆತ್ರೇಯ, ಅಭಿಶೇಕ್ ಆಚಾರ್ಯ, ಮಂಜುನಾಥ್ ಎಂಎಸ್, ಪೃಥ್ವಿರಾಜ್ ನಟಿಸಿದ್ದಾರೆ. ರಘು ಗೌಡ ಹಾಗೂ ದೀಪಕ್ ಶರ್ಮ ಅವರು ಸ್ಕ್ರಿಪ್ಟ್ ಬರೆದು ನಿರ್ದೇಶಿಸಿದ್ದಾರೆ.[ಐಪಿಎಲ್ 2017: ಆರ್ ಸಿಬಿ ಪಂದ್ಯಗಳ ಪೂರ್ಣ ವೇಳಾಪಟ್ಟಿ]
ನಮ್ಮ ಕರ್ನಾಟಕ ಮೀಮ್ಸ್, ಸ್ಯಾಂಡಲ್ವುಡ್ ಅಡ್ಡಾ, ನಮ್ ಸಿನಿಮಾ.ಕಾಂ, ಟ್ರಾಲ್ ಅಣ್ತಾಸ್, ಓತ್ಲಾ ನನ್ ಮಕ್ಳು ಪೇಜ್ ನವರು ಈ ಕಿರುಚಿತ್ರವನ್ನು ಬೆಂಬಲಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications