Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Phil Salt: ಆರ್‌ಸಿಬಿ ತೊರೆದ ಸ್ಫೋಟಕ ಓಪನರ್ ಫಿಲ್ ಸಾಲ್ಟ್

RCB Phil Salt IPL 2026: ಐಪಿಎಲ್‌ನಲ್ಲಿ ಸತತ ಎರಡನೇ ಬಾರಿಗೆ ಟ್ರೋಫಿ ಗೆಲ್ಲುವ ಕನಸು ಕಾಣುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ತಂಡದ ಆಧಾರಸ್ತಂಭವಾಗಿದ್ದ ಇಂಗ್ಲೆಂಡ್‌ನ ಸ್ಟಾರ್ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಬೆರಳಿನ ಗಾಯದ ಸಮಸ್ಯೆಯಿಂದಾಗಿ ತವರಿಗೆ ಮರಳಿದ್ದಾರೆ. ಪ್ಲೇ ಆಫ್‌ ಹಂತ ಸಮೀಪಿಸುತ್ತಿರುವ ಹೊತ್ತಿನಲ್ಲೇ ಈ ಬೆಳವಣಿಗೆ ನಡೆದಿರುವುದು ಮ್ಯಾನೇಜ್‌ಮೆಂಟ್‌ಗೆ ತಲೆನೋವಾಗಿದೆ.

ಏಪ್ರಿಲ್ 18ರಂದು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಫಿಲ್ ಸಾಲ್ಟ್ ಗಾಯಗೊಂಡಿದ್ದರು. ಬೌಂಡರಿ ತಡೆಯುವ ವೇಳೆ ಅವರ ಎಡಗೈ ಬೆರಳಿಗೆ ಬಲವಾದ ಪೆಟ್ಟು ಬಿದ್ದಿತ್ತು. ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಜೊತೆ ಕೇಂದ್ರ ಒಪ್ಪಂದ ಹೊಂದಿರುವ ಕಾರಣ ಅವರ ಗಾಯದ ಗಂಭೀರತೆಯನ್ನು ಪರೀಕ್ಷಿಸಲು ಇಂಗ್ಲೆಂಡ್ ಮ್ಯಾನೇಜ್‌ಮೆಂಟ್ ಅವರನ್ನು ತಕ್ಷಣವೇ ವಾಪಸ್ ಕರೆಸಿಕೊಂಡಿದೆ. ಸದ್ಯ ಅಲ್ಲಿ ಅವರಿಗೆ ಸ್ಕ್ಯಾನಿಂಗ್ ಮತ್ತು ಚಿಕಿತ್ಸೆ ನಡೆಯುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

RCB IPL 2026 Star batter Phil Salt Injury Update Returns to England Bethell Opens with Kohli

ಫಿಲ್‌ ಸಾಲ್ಟ್ ಸ್ಥಾನ ತುಂಬಲಿರುವ ಜೇಕಬ್ ಬೆಥೆಲ್

ಈ ಸೀಸನ್‌ ಆರಂಭದಿಂದಲೂ ಫಿಲ್‌ ಸಾಲ್ಟ್ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿ ಎದುರಾಳಿ ತಂಡದ ಬೌಲರ್‌ಗಳಿಗೆ ನಡುಕು ಹುಟ್ಟಿಸಿದ್ದರು. ಕೇವಲ 6 ಇನ್ನಿಂಗ್ಸ್‌ಗಳಲ್ಲಿ 168.33 ರ ಭರ್ಜರಿ ಸ್ಟ್ರೈಕ್ ರೇಟ್‌ನಲ್ಲಿ 202 ರನ್ ಸಿಡಿಸಿ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ತಂಡದ ಪರ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅವರು ನಾಲ್ಕನೇ ಸ್ಥಾನದಲ್ಲಿದ್ದಾರೆ. ಸಾಲ್ಟ್ ಅನುಪಸ್ಥಿತಿಯಲ್ಲಿ ಅವರ ಇಂಗ್ಲೆಂಡ್ ಸಹ ಆಟಗಾರ ಜೇಕಬ್ ಬೆಥೆಲ್ ಅವರಿಗೆ ಕಳೆದ ಎರಡು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಜೊತೆ ಇನ್ನಿಂಗ್ಸ್ ಆರಂಭಿಸಲು ಅವಕಾಶ ಸಿಕ್ಕಿದೆ. ಹಾಗೆಯೇ ಫಿಲ್ಸ್‌ ಸಾಲ್ಟ್ ಬರುವವರೆಗೂ ಅವರೇ ಮುಂದುವರೆಯಲಿದ್ದಾರೆ ಎನ್ನುವ ಮಾಹಿತಿಯಿದೆ.

ಆರ್‌ಸಿಬಿ ಪ್ಲೇ ಆಫ್ ಹಾದಿ ಹೇಗಿದೆ?

ಸದ್ಯ ಅಂಕಪಟ್ಟಿಯಲ್ಲಿ ಆರ್‌ಸಿಬಿ 9 ಪಂದ್ಯಗಳಲ್ಲಿ 6ರಲ್ಲಿ ಜಯ ಸಾಧಿಸಿ 12 ಅಂಕ ಗಳಿಸಿ ಎರಡನೇ ಸ್ಥಾನದಲ್ಲಿದೆ. ಪಂಜಾಬ್ ಕಿಂಗ್ಸ್‌ಗಿಂತ ಕೇವಲ ಒಂದು ಅಂಕ ಹಿಂದೆ ಇರುವ ಬೆಂಗಳೂರು ತಂಡಕ್ಕೆ ಮುಂದಿನ ಪಂದ್ಯಗಳಲ್ಲಿ ಜಯ ಅನಿವಾರ್ಯವಾಗಿದೆ. ಏಕೆಂದರೆ ಆರ್‌ಸಿಬಿ ಹೊರತಾಗಿ ಇನ್ನೂ ಮೂರು ತಂಡಗಳು 12 ಅಂಕಗಳೊಂದಿಗೆ ಸಮಬಲದಲ್ಲಿವೆ. ಮೇ 7ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆಯಲಿರುವ ಪಂದ್ಯ ಆರ್‌ಸಿಬಿಗೆ ಅತ್ಯಂತ ನಿರ್ಣಾಯಕವಾಗಿದೆ.

ಫಿಲ್ ಸಾಲ್ಟ್ ಶೀಘ್ರ ಮರಳುವ ಸಾಧ್ಯತೆ

ಮೇ 7ರಂದು ನಡೆಯುವ ಪಂದ್ಯದಲ್ಲಿ ಗೆದ್ದರೆ ಆರ್‌ಸಿಬಿ ಪ್ಲೇಆಫ್‌ ಹಾದಿ ಸುಗಮಗೊಳ್ಳಲಿದೆ. ಇನ್ನೂ ಮೂಲಗಳ ಪ್ರಕಾರ ಫಿಲ್‌ ಸಾಲ್ಟ್ ಗಾಯದಿಂದ ಶೀಘ್ರವಾಗಿ ಚೇತರಿಸಿಕೊಂಡು ಮತ್ತೆ ಆರ್‌ಸಿಬಿ ಗೂಡು ಸೇರಲಿದ್ದಾರೆ. ಲೀಗ್‌ನ ಅಂತಿಮ ಮತ್ತು ನಿರ್ಣಾಯಕ ಹಂತದ ಪಂದ್ಯಗಳ ವೇಳೆಗೆ ಅವರು ಮತ್ತೆ ತಂಡವನ್ನು ಸೇರಿಕೊಳ್ಳುವ ಸಾಧ್ಯತೆಯಿದೆ. ಒಂದು ವೇಳೆ ಅವರು ಶೀಘ್ರದಲ್ಲೇ ಮರಳಿದರೆ ಬೆಂಗಳೂರು ತಂಡಕ್ಕೆ ಆನೆಬಲ ಬಂದಂತಾಗಲಿದೆ. ಈ ಕ್ಷಣಕ್ಕಾಗಿ ಅಭಿಮಾನಿಗಳು ಕೂಡ ಕಾತರದಿಂದ ಕಾಯುತ್ತಿದ್ದಾರೆ.

Story first published: Monday, May 4, 2026, 18:04 [IST]
Other articles published on May 4, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+