ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದೀಪಾವಳಿ ಸಂದೇಶಕ್ಕಾಗಿ ವಿರಾಟ್ ಕೊಹ್ಲಿ ಟ್ರೋಲ್: ಆರ್‌ಸಿಬಿ ಸ್ಪಷ್ಟನೆ

RCB issues clarification after Virat Kohli gets trolled on his Diwali message

ಸಿಡ್ನಿ: ದೀಪಾವಳಿ ದಿನ ಅಭಿಮಾನಿಗಳಿಗೆ ಶುಭ ಕೋರಿದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಈ ಸಾರಿ ಪಟಾಕಿ ಸಿಡಿಸಬೇಡಿ. ವಾಯು ಮಾಲಿನ್ಯಕ್ಕೆ ಕಾರಣರಾಗಬೇಡಿ. ದೀಪ ಹಚ್ಚಿ ದೀಪಾವಳಿ ಆಚರಿಸೋಣ ಎಂದು ಕೋರಿಕೊಂಡಿದ್ದರು. ಆದರೆ ಇದಕ್ಕೆ ಟೀಕೆ ವ್ಯಕ್ತವಾಗಿತ್ತು.

ಭಾರತ vs ಆಸೀಸ್: ಟೆಸ್ಟ್‌ಗಾಗಿ ವಿರಾಟ್, ರಾಹುಲ್ ಅಭ್ಯಾಸ-ವಿಡಿಯೋಭಾರತ vs ಆಸೀಸ್: ಟೆಸ್ಟ್‌ಗಾಗಿ ವಿರಾಟ್, ರಾಹುಲ್ ಅಭ್ಯಾಸ-ವಿಡಿಯೋ

ನವೆಂಬರ್ 5ರಂದು 32ರ ಹರೆಯಕ್ಕೆ ಕಾಲಿರಿಸಿದ್ದ ವಿರಾಟ್ ಕೊಹ್ಲಿ ತನ್ನ ಹುಟ್ಟು ಹಬ್ಬವನ್ನು ಪಟಾಕಿ ಸಿಡಿಸುವ ಮೂಲಕ ಆಚರಿಸಿದ್ದಾರೆ ಎಂದು ಕೆಲವರು ಆರೋಪಿಸಿ ದೂರಿದ್ದರು. ಇದಕ್ಕೆ ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಪಷ್ಟನೆ ನೀಡಿದೆ.

'ಕುಟುಂಬಸ್ಥರು, ಸ್ನೇಹಿತರ ಜೊತೆ ನೀವು ದೀಪಾವಳಿಯನ್ನು ಖುಷಿಯಾಗಿ ಆಚರಿಸುತ್ತಿದ್ದೀರಿ ಎಂದು ಭಾವಿಸುತ್ತೇವೆ. ಈ ಮೂಲಕ ಒಂದು ವಿಚಾರಕ್ಕೆ ಸ್ಪಷ್ಟನೆ ನೀಡುತ್ತಿದ್ದೇವೆ. ಆರ್‌ಸಿಬಿ ಪಟಾಕಿ ಹಚ್ಚಿ ಸೆಲೆಬ್ರೇಟ್ ಮಾಡಿದೆ ಎನ್ನಲಾದ ವಿಡಿಯೋ ಹಳೆಯದ್ದು. ಯುಎಇಯ ಫ್ಲ್ಯಾಗ್‌ ಡೇ ಸಂಭ್ರಮದ್ದು. ಆರ್‌ಸಿಬಿ ಕಳೆದ ವರ್ಷಗಳಿಂದಲೂ ಪರಿಸರದ ಉಳಿವಿಗಾಗಿ ಪರಿಶ್ರಮ ಪಡುತ್ತಿದೆ,' ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕೊಹ್ಲಿ ನಾಯಕತ್ವದ ಆರ್‌ಸಿಬಿ 4ನೇ ಸ್ಥಾನದಲ್ಲಿ ಟೂರ್ನಿ ಮುಗಿಸಿತ್ತು. ಚಾಂಪಿಯನ್ಸ್ ಆಗಿ ಐದನೇ ಬಾರಿಗೆ ಮುಂಬೈ ಇಂಡಿಯನ್ಸ್ ಹೊರ ಬಂದಿದ್ದರೆ, ರನ್ನರ್ಸ್ ಆಗಿ ಡೆಲ್ಲಿ ಕ್ಯಾಪಿಟಲ್ಸ್ ಮಿನುಗಿತ್ತು.

Story first published: Tuesday, November 17, 2020, 20:56 [IST]
Other articles published on Nov 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X