ಲೋಗೋ ಬಳಿಕ ಆರ್‌ಸಿಬಿ ಹೊಸ ಜರ್ಸಿ ಬಿಡುಗಡೆ; ಇಷ್ಟಕ್ಕೇ ಅಂತ್ಯವಾಗಿಲ್ಲ ಆರ್‌ಸಿಬಿ ಕ್ವಾಟ್ಲೆ

ಸಾಮಾಜಿಕ ಜಾಲತಾಣದಲ್ಲಿ ಪ್ರೊಫೈಲ್ ಚಿತ್ರ ಕಿತ್ತು ಹಾಕಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದ ಆರ್‌ಸಿಬಿ ಗಿಮಿಕ್‌ನೊಂದಿಗೆ ನೂತನ ಲೋಗೋವನ್ನು ಬಿಡುಗಡೆಗೊಳಿಸಿದೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯ ವಿಚಾರವಾಗಿತ್ತು. ಇದೀಗ ಆರ್‌ಸಿಬಿ ಮತ್ತೊಂದು ಪ್ರಮುಖ ವಿಚಾರವನ್ನು ಬಹಿರಂಗಗೊಳಿಸಿದೆ.
ಹೌದು, ಆರ್‌ಸಿಬಿ ಈ ವರ್ಷದ ಜರ್ಸಿ ಹೇಗಿರಲಿದೆ ಎಂಬುದನ್ನು ಬಹಿರಂಗಪಡಿಸಿದೆ. ಹೊಸ ಜರ್ಸಿಯ ಗ್ರಾಫಿಕ್ ಫೋಟೋವನ್ನು ಆರ್‌ಸಿಬಿ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದೆ. ಈ ಮೂಲಕ ಅಭಿಮಾನಿಗಳಿಗಿದ್ದ ಮತ್ತೊಂದು ಕುತೂಹಲಕ್ಕೆ ಉತ್ತರವನ್ನು ನೀಡಿದೆ. ಆದರೆ ಇದರ ಜೊತೆಗೆ "ವಿ ಆರ್ ನಾಟ್ ಸ್ಟಿಲ್ ಡನ್" ಅನ್ನುವ ಮೂಲಕ ಮತ್ತಷ್ಟು ಕುತೂಹಲವನ್ನು ಹೆಚ್ಚಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಆರ್‌ಸಿಬಿ ಸಾಕಷ್ಟು ಸಕ್ರಿಯವಾಗಿದೆ. ಪ್ರತೀ ಬಾರಿಯೂ ಏನಾದರೂ ವಿಚಾರಕ್ಕೆ ಸುದ್ದಿ ಮಾಡುತ್ತಲೇ ಇರುತ್ತದೆ ಆರ್‌ಸಿಬಿಯ ಸಾಮಾಜಿಕ ಜಾಲತಾಣ ತಂಡ. ಇದೀಗ ಕಳೆದ ಮೂರ್ನಾಲ್ಕು ದಿನದಿಂದ ಸಾಮಾಜಿಕ ಜಾಲತಾಣದಲ್ಲಿ ಎಲ್ಲರನ್ನೂ ಸಾಕಷ್ಟು ಕುತೂಹಲಕ್ಕೀಡುಮಾಡಿತ್ತು.
ಮೊದಲಿಗೆ ಪ್ರೊಫೈಲ್ ಫೋಟೋ ರಿಮೂವ್ ಮಾಡಿ ಗೊಂದಲ ಸೃಷ್ಟಿಸಿದ ಬಳಿಕ ಅಪ್‌ಡೇಟಿಂಗ್ ಫೋಟೋ ಹಾಕಿ ಕುತೂಹಲ ಮೂಡಿಸಿತ್ತು. ಬಳಿಕ ಫೆಬ್ರವರಿ 14ರಂದು ಮಹತ್ವದ ಬದಲಾವಣೆಯಾಗಲಿದೆ ಎಂದು ಪೋಸ್ಟ್ ಹಾಕಿ ಲೋಗೋ ಬದಲಾವಣೆಯ ಬಗ್ಗೆ ಸುಳಿವನ್ನು ನೀಡಿತ್ತು.
ಇಂದು ಈ ಎಲ್ಲಾ ಚರ್ಚೆಗೆ ಆರ್‌ಸಿಬಿ ಲೋಗೋ ಬದಲಾವಣೆ ಮಾಡುವ ಮೂಲಕ ಅಂತ್ಯಹಾಡಿದೆ. ಅದಾದ ಬಳಿಕ ಮತ್ತೊಂದು ಪೋಸ್ಟ್ ಮಾಡಿದ್ದು ಅಭಿಮಾನಿಗಳ ತಲೆಗೆ ಹುಳಬಿಟ್ಟಂತಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications