RCB ತಂಡದ ಸಂಭಾವ್ಯ ರಿಟೇನ್ ಪಟ್ಟಿ: ಈ ಸ್ಟಾರ್ ವಿದೇಶಿ ಆಟಗಾರರಿಗೆ ಟೆನ್ಷನ್
ಐಪಿಎಲ್‌ನ ಮಾಲೀಕರು ಬಿಸಿಸಿಐನಿಂದ ಹೊರ ಬೀಳುವ ರಿಟೇನ್ ಪಾಲಿಸ್ ಲೀಸ್ಟ್ ಎದುರು ನೋಡುತ್ತಿದೆ. ಈ ಬಾರಿ ಐಪಿಎಲ್‌ನಲ್ಲಿ ಮೆಗಾ ಹರಾಜು ನಡೆಯಲಿದ್ದು, ಈ ಹಿನ್ನೆಲೆ ರಿಟೇನ್ ಪಾಲಿಸ್ ಲೀಸ್ಟ್ ಮಹತ್ವ ಪಡೆದಿದೆ. ಮಾಲೀಕರು ಸಹ ಅಳೆದು ತೂಗಿ ಆಟಗಾರರನ್ನು ಉಳಿಸಿಕೊಳ್ಳುವ ಬಗ್ಗೆ ಪ್ಲ್ಯಾನ್ ಮಾಡುತ್ತಿದ್ದಾರೆ. ಇನ್ನು ಮಾಹಿತಿಯ ಪ್ರಕಾರ ಬಿಸಿಸಿಐ ಆರು ಆಟಗಾರರಿಗೆ ರಿಟೇನ್ ಮಾಡಿಕೊಳ್ಳುವ ಅವಕಾಶ ನೀಡುವ ಸಾಧ್ಯತೆ ಇದೆ.
ಐಪಿಎಲ್‌ನಲ್ಲಿ ಇಷ್ಟು ವರ್ಷಗಳಿಂದ ತಂಡವನ್ನು ಕಟ್ಟಿದ ಬಳಿಕ ಉತ್ತಮ ಆರು ಆಟಗಾರರನ್ನು ಉಳಿಸಿಕೊಳ್ಳುವುದು ಮಾಲೀಕರಿಗೆ ಸವಾಲಿನ ಕೆಲಸವಾಗಿದೆ. ಐಪಿಎಲ್‌ನ 10 ಮಾಲೀಕರು ಈಗ ಯಾವ ಪ್ಲೇಯರ್‌ನ್ನು ಉಳಿಸಿಕೊಳ್ಳಬೇಕು ಯಾರನ್ನು ಕೈ ಬಿಡಬೇಕು ಎಂಬ ಬಗ್ಗೆ ಚಿಂತನೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಆರ್‌ಸಿಬಿ ಸಹ ಮೆಗಾ ಹರಾಜಿಗೆ ಭರದ ಸಿದ್ಧತೆಯನ್ನು ಮಾಡಿಕೊಂಡಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB), ಸಹ ರಿಟೇನ್ ಲಿಸ್ಟ್ ಮಾಡಲು ಸಿದ್ಧತೆ ನಡೆಸಿದೆ. ಈ ಪಟ್ಟಿಯನ್ನು ಸಿದ್ಧ ಪಡಿಸುವಲ್ಲಿ ಮ್ಯಾನೇಜ್ಮೆಂಟ್ ಮಹತ್ವದ ತೀರ್ಮಾನವನ್ನು ಕೈ ಗೊಳ್ಳಬಹುದಾಗಿದೆ. ಕಳೆದ ಆವೃತ್ತಿಯ ಆರಂಭದಲ್ಲಿ ಆರ್‌ಸಿಬಿ ಕಳಪೆ ಪ್ರದರ್ಶನ ನೀಡಿತ್ತು. ಆದರೆ ಬಳಿಕ ಧಮಾಕೆದಾರ್ ಆಟದ ಪ್ರದರ್ಶನ ನೀಡಿ ಪ್ಲೇ ಆಫ್‌ಗೆ ಕ್ವಾಲಿಫೈ ಆಗಿತ್ತು. ಈಗ ಆರ್‌ಸಿಬಿ ಯಾವ ಆಟಗಾರರನ್ನು ಉಳಿಸಿಕೊಳ್ಳಲಿದೆ ಎಂಬುದೇ ದೊಡ್ಡ ಸವಾಲಾಗಿದೆ.
ವಿರಾಟ್ ಕೊಹ್ಲಿ ಫಿಕ್ಸ್
ಆರ್‌ಸಿಬಿ ಉಳಿಸಿಕೊಳ್ಳುವ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅವರಿಗೆ ಮೊದಲ ಸ್ಥಾನ. ಈಗಾಗಲೇ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ವಿರಾಟ್, ಐಪಿಎಲ್ ಆಡುತ್ತಾರೆ. ಅಲ್ಲದೆ ಐಪಿಎಲ್ ಫ್ರಾಂಚೈಸಿಗಳ ನೆಚ್ಚಿನ ಆಟಗಾರ. 2024ರ ಐಪಿಎಲ್ ಆವೃತ್ತಿಯಲ್ಲಿ ವಿರಾಟ್ ಗರಿಷ್ಠ ರನ್ ಬಾರಿಸಿದ ಬ್ಯಾಟರ್. ಇವರು ಕಳೆದ ಆವೃತ್ತಿಯಲ್ಲಿ 741 ರನ್ ಬಾರಿಸಿದ್ದರು. ಆರ್‌ಸಿಬಿ ಇವರನ್ನು ಹೊರಗಿಟ್ಟು ತಂಡವನ್ನು ರಚಿಸುವ ಬಗ್ಗೆ ಯೋಚನೆಯನ್ನು ಸಹ ಮಾಡುವುದಿಲ್ಲ.
ಸಿರಾಜ್, ದಯಾಳ್‌ಗೆ ಸ್ಥಾನ?
ಆರ್‌ಸಿಬಿ ಉಳಿಸಿಕೊಳ್ಳುವ ಆಟಗಾರರ ಪಟ್ಟಿಯಲ್ಲಿ ಮೊಹಮ್ಮದ್ ಸಿರಾಜ್ ಅವರಿಗೆ ಸ್ಥಾನ ಫಿಕ್ಸ್. ಇವರು ಈ ಫ್ರಾಂಚೈಸಿ ಕೋರ್ ಮೆಂಬರ್‌ಗಳಲ್ಲಿ ಒಬ್ಬರು. ಕಳೆದ ಆವೃತ್ತಿಯಲ್ಲಿ ಸಿರಾಜ್ ಸ್ಥಿರ ಪ್ರದರ್ಶನವನ್ನು ನೀಡುವಲ್ಲಿ ವಿಫಲರಾದರೂ, ಅವರನ್ನು ಉಳಿಸಿಕೊಳ್ಳಲು ತಂಡ ಚಿಂತನೆ ನಡೆಸಿದೆ.
ಕಳೆದ ಬಾರಿಯ ಐಪಿಎಲ್ ಮಿನಿ ಹರಾಜಿನಲ್ಲಿ ಆರ್‌ಸಿಬಿ ಯಶ್ ದಯಾಳ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿತ್ತು. ಆಗ ಅಭಿಮಾನಿಗಳು ಮ್ಯಾನೇಜ್ಮೆಂಟ್ ಕ್ರಮದ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದ್ದರು. ಆದರೆ ಮ್ಯಾನೇಜ್ಮೆಂಟ್ ದಯಾಳ್ ಅವರಲ್ಲಿನ ಪ್ರತಿಭೆಗೆ ಮಣೆ ಹಾಕಿತ್ತು. ಪರಿಣಾಮ ಅವರು ತಮ್ಮ ಮೇಲೆ ತಂಡ ಇಟ್ಟ ಭರವಸೆಗೆ ಪೂರಕವಾಗಿ ಬೌಲಿಂಗ್ ನಡೆಸಿದ್ದಾರೆ. ಈ ಮೂಲಕ ರಾಷ್ಟ್ರೀಯ ಆಯ್ಕೆ ಸಮಿತಿಯ ಗಮನವನ್ನು ಸಹ ಸೆಳೆದಿದ್ದರು. ಇವರು ಸಹ ಭಾರತ ತಂಡದ ಜೆರ್ಸಿಯನ್ನು ಹಾಕಿಕೊಳ್ಳುವ ಕನಸು ಶೀಘ್ರದಲ್ಲಿ ಸಾಕಾರ ಗೊಳ್ಳಬಹುದು.
ರಜತ್ ಪರ ಒಲವು
ಆರ್‌ಸಿಬಿ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಆಧಾರವಾದ ಆಟಗಾರ ರಜತ್ ಪಟಿದಾರ್. ಕಳೆದ ಆವೃತ್ತಿಯಲ್ಲಿ ರಜತ್ ಪಟಿದಾರ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನಡೆಸಿ ಮಿಂಚಿದ್ದರು. ಇವರ ಆಟವನ್ನು ಕಂಡು ಆರ್‌ಸಿಬಿ ಮ್ಯಾನೇಜ್ಮೆಂಟ್ ಇವರನ್ನು ತಂಡದಲ್ಲಿ ಉಳಿಸಿಕೊಳ್ಳುವ ಮನಸ್ಸು ಮಾಡಬಹುದು.
ಇಬ್ಬರಲ್ಲಿ ಒಬ್ಬರಿಗೆ ಅವಕಾಶ
ಸದ್ಯ ಲಭ್ಯವಾಗಿರುವ ಮಾಹಿತಿಯಂತೆ ಆರ್‌ಸಿಬಿ ಜಸ್ಟ್ ಐದು ಆಟಗಾರರನ್ನು ಉಳಿಸಿಕೊಳ್ಳುವ ಸಾಧ್ಯತೆ ಇದೆ. ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಕೊನೆಯ ಹೆಸರು ವಿದೇಶಿ ಆಟಗಾರ ವಿಲ್ ಜಾಕ್ಸ್. ಇವರು ಸಹ ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಕ್ಲಾಸಿಕ್ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಹೀಗಾಗಿ ಅವರನ್ನು ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಯಶ್ ದಯಾಳ್ ಅವರನ್ನು ಉಳಿಸಿಕೊಳ್ಳುವಲ್ಲಿ ಆರ್‌ಸಿಬಿ ಸಫಲರಾದಲ್ಲಿ ವಿಲ್ ಜಾಕ್ಸ್ ಹಾಗೂ ಕ್ಯಾಮರೂನ್ ಗ್ರೀನ್ ಇಬ್ಬರಲ್ಲಿ ಒಬ್ಬರು ಹರಾಜು ಅಂಗಳಕ್ಕೆ ಎಂಟ್ರಿ ನೀಡಬಹುದು ಎಂದು ಅಂದಾಜಿಸಲಾಗಿದೆ.
ಒಂದು ವೇಳೆ ಆರ್‌ಸಿಬಿ ಆರು ಜನರನ್ನು ಉಳಿಸಿಕೊಳ್ಳುವ ಪ್ಲ್ಯಾನ್ ಮಾಡಿದ್ದೇ ಆದಲ್ಲಿ, ಫಾಫ್ ಡುಪ್ಲೇಸಿಸ್ ಅವರತ್ತ ಒಮ್ಮೆ ಚಿತ್ತವನ್ನು ಹರಿಸಬಹುದು. ಇಲ್ಲವಾದಲ್ಲಿ ಎಂದಿನಂತೆ ಹರಾಜಿನಲ್ಲಿ ಬಲಿಷ್ಠ ತಂಡವನ್ನು ಕಟ್ಟುವ ಕನಸು ಆರ್‌ಸಿಬಿಯದ್ದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications