Ipl 2024: ಬಣ್ಣ ಬದಲಿಸುತ್ತಾ RCB: ಅದೃಷ್ಟ ಪರೀಕ್ಷೆಗೆ ಮುಂದಾದ ಚಾಲೆಂಜರ್ಸ್
ಇಂಡಿಯನ್ ಪ್ರೀಮಿಯರ್ ಲೀಗ್ ಇನ್ನೇನು ಕೆಲವೇ ದಿನಗಳಲ್ಲಿ ತನ್ನ ರಂಗನ್ನು ವಿಶ್ವದಲ್ಲೇ ಪಸರಿಸಲಿದೆ. ಈ ಲೀಗ್ ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ಕಾತರುರಾಗಿದ್ದಾರೆ. ಸ್ಟಾರ್ ಗಿರಿಯೊಂದಿಗೆ ಕಣಕ್ಕೆ ಇಳಿಯುವ ಆಟಗಾರರು ಅಬ್ಬರದ ಆಟವನ್ನು ಆಡಿ ತಂಡಕ್ಕೆ ನೆರವಾಗುತ್ತಾರೆ. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಐಪಿಎಲ್‌ನ ಯಶಸ್ವಿ ತಂಡಗಳಲ್ಲಿ ಗುರುತಿಸಲಾಗುತ್ತದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು 17ನೇ ಆವೃತ್ತಿಯಲ್ಲಿ ಚೊಚ್ಚಲ ಟ್ರೋಫಿಯ ಕನಸಿನೊಂದಿಗೆ ಅಂಗಳಕ್ಕೆ ಇಳಿಯಲಿದೆ. ಈ ಬಾರಿಯಾದ್ರೂ ಮಾಯಾ ಜಿಂಕೆಯಂತೆ ಕಾಡುತ್ತಿರುವ ಟ್ರೋಫಿಗೆ ಮುತ್ತಿಟ್ಟು ಪ್ರಶಸ್ತಿ ಬರವನ್ನು ನೀಗಿಸಿಕೊಳ್ಳುವ ಪ್ಲ್ಯಾನ್ ಆರ್‌ಸಿಬಿ ತಂಡದ್ದಾಗಿದೆ. ಈ ನಿಟ್ಟಿನಲ್ಲಿ ಆರ್‌ಸಿಬಿ ಹಲವು ಸರ್ಕಸ್ ಮಾಡುತ್ತಿದೆ.

ಅದೃಷ್ಟ ಖುಲಾಯಿಸುತ್ತಾ 'Bengaluru'
ಆರ್‌ಸಿಬಿ ಸ್ಟಾರ್ ಆಟಗಾರರಿಗೆ ತಂಡದಲ್ಲಿ ಸ್ಥಾನ ನೀಡಿ ಸೈ ಎನಿಸಿಕೊಂಡಿದೆ. ವಿಶ್ವದ ಸ್ಟಾರ್ ಆಟಗಾರರ ಕ್ರಿಸ್ ಗೇಲ್, ಎಬಿಡಿ ವಿಲಿಯರ್ಸ್, ಡೇಲ್ ಸ್ಟೇನ್, ಶೇನ್ ವ್ಯಾಟ್ಸನ್, ಸೇರಿದಂತೆ ಹಲವು ಸ್ಟಾರ್ ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೂ ಸಹ ಆರ್‌ಸಿಬಿ ಒಮ್ಮೆಯೂ ಪ್ರಶಸ್ತಿ ಗೆಲ್ಲುವಲ್ಲಿ ಸಫಲವಾಗಿಲ್ಲ. ಇದಕ್ಕಾಗಿ ಆರ್‌ಸಿಬಿ ಈಗ ವಾಮ ಮಾರ್ಗದತ್ತ ಮುಖ ಮಾಡಿದೆ.
ಆಟಗಾರರು ಆಡುವ ಕೆಲಸವನ್ನು ಮೈದಾನದಲ್ಲಿ ಅವರು ಮಾಡಲಿ ನಾವು ಅದೃಷ್ಟದ ಆಟವನ್ನು ಆಡೋಣ ಎಂಬ ಲೆಕ್ಕಾಚಾರಕ್ಕೆ ಆರ್‌ಸಿಬಿ ಮ್ಯಾನೇಜ್ಮೆಂಟ್ ಇಳಿದಂತೆ ಕಾಣುತ್ತಿದೆ. ಅಸಲಿಗೆ ಸತತ 16 ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಪೇಲಿಂಗ್ ಬದಲಾವಣೆಗೆ ಮುಂದಾಗಿದೆ. ಮೊದಲು Bangalore ಎಂದಾಗಿತ್ತು. 17ನೇ ಆವೃತ್ತಿಗೆ ಇದನ್ನು ಮ್ಯಾನೇಜ್ಮೆಂಟ್ Bengaluru ಬದಲಿಸಿ ಅದೃಷ್ಟ ಪರೀಕ್ಷೆ ನಡೆಸಲು ಮುಂದಾಗಿದೆ. ಹೀಗಾದರೂ ಕಪ್ ನಮ್ಮ ಕೈ ಸೇರಲಿ ಎಂಬ ಭಾವನೆ ಟೀಮ್ ಮ್ಯಾನೇಜ್ಮೆಂಟ್‌ನದ್ದಾಗಿದೆ.
ಬಣ್ಣ ಬದಲಾಗುತ್ತದಾ?
ಆರ್‌ಸಿಬಿ ತಂಡದ ಜೆರ್ಸಿ ಕಲರ್ ಚೇಂಜ್ ಆಗುತ್ತದಾ ಎಂಬ ಊಹಾಪೋಹಗಳು ಈಗ ಶುರುವಾಗಿವೆ. ಇದಕ್ಕೆ ಪುಷ್ಠಿ ನೀಡಿದಂತೆ ಕಾಣುವ ಪ್ರ್ಯಾಕ್ಟಿಸ್ ಡ್ರೆಸ್. ಮೊದಲು ಪ್ರ್ಯಾಕ್ಟಿಸ್ ಡ್ರೇಸ್ ಕಡು ನೀಲಿ ಬಣ್ಣದ್ದಾಗಿತ್ತು. ಆದರೆ ಈ ಬಾರಿ ನೀಲಿ ಹಾಗೂ ಕೆಂಪು ಬಣ್ಣದ ಡ್ರೆಸ್‌ನಲ್ಲಿ ಆಟಗಾರರು ಕಂಗೊಳಿಸಿದ್ದಾರೆ. ಇದನ್ನು ನೋಡಿದರೆ ಆರ್‌ಸಿಬಿ ಮೈದಾನಕ್ಕೆ ಇಳಿಯುವಾಗಲೂ ಜೆರ್ಸಿ ಕಲರ್ ಚೇಂಜ್ ಮಾಡುತ್ತದಾ ಎಂಬ ಸಂಶಯ ಉದ್ಭವಿಸಿದೆ.

ಯಾವ ಕಲರ್ ಚೇಂಜ್?
ಆರ್‌ಸಿಬಿ ಮೊದಲಿನಿಂದಲೂ ಕೆಂಪು, ಹಳದಿ ಅಥವಾ ಬಂಗಾರದ ಬಣ್ಣದೊಂದಿಗೆ ಕಣಕ್ಕೆ ಇಳಿಯುತ್ತದೆ. ಇತ್ತೀಚಿಗೆ ತವರು ಅಂಗಳಕ್ಕೆ ಬೇರೆ ಡ್ರೆಸ್ ಹಾಗೂ ಎದುರಾಳಿ ಅಂಗಳದಲ್ಲಿ ಆಡುವಾಗ ಬೇರೆ ಡ್ರೆಸ್ ಕೋಡ್ ಮಾಡಿಕೊಂಡಿತ್ತು. ಕಳೆದ ಕೆಲವು ಆವೃತ್ತಿಗಳಲ್ಲಿ ಬ್ಲ್ಯಾಕ್ ಹಾಗೂ ರೆಡ್ ಕಾಂಬಿನೇಷನ್‌ನಲ್ಲಿ ಆರ್‌ಸಿಬಿ ಕಣಕ್ಕೆ ಇಳಿದಿತ್ತು. ಈ ಬಾರಿಯ ಪಂದ್ಯಗಳನ್ನು ಆಡಲು ಆರ್‌ಸಿಬಿ ಯಾವ ಬಣ್ಣದ ಮೊರೆ ಹೋಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಬಣ್ಣ, ಹೆಸರನ್ನು ಬದಲಿಸಿದರಾದ್ರೂ ಐಪಿಎಲ್ ಟ್ರೋಫಿ ಕೈಗೆ ಸಿಗುತ್ತದಾ ಎಂಬ ಲೆಕ್ಕಾಚಾರ ಆರ್‌ಸಿಬಿ ಮ್ಯಾನೇಜ್ಮೆಂಟ್ ನದ್ದಾಗಿದೆ. ಈ ತಂತ್ರ ಫಲಿಸುತ್ತದಾ ಎಂಬುದನ್ನು ಕಾದು ನೋಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications