Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2025 RCB: ತಂಡಕ್ಕೆ ತಲೆನೋವಾಗಿದ್ದಾರೆ 8.75 ಕೋಟಿ ರೂ. ಆಟಗಾರ: ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಬದಲಾವಣೆ

ಭಾನುವಾರ ಜೈಪುರ್‌ದಲ್ಲಿ ರಾಜಸ್ಥಾನ ರಾಯಲ್ಸ್‌ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಿ, ಗೆಲುವಿನ ಟ್ರ್ಯಾಕ್‌ಗೆ ಮರಳಲು ಆರ್‌ಸಿಬಿ ಪ್ಲ್ಯಾನ್ ಮಾಡಿಕೊಂಡಿದೆ. ಈ ವೇಳೆ ಆರ್‌ಸಿಬಿ ಆ ಒಂದು ಸ್ಲಾಟ್‌ ನಿಜಕ್ಕೂ ತಂಡಕ್ಕೆ ತಲೆ ನೋವಾಗಿ ಪರಿಣಮಿಸಿದೆ. ಹೀಗಾಗಿ ಇವರಿಗೆ ಗೇಟ್‌ ಪಾಸ್‌ ನೀಡುವ ಎಲ್ಲ ಸಾಧ್ಯತೆಯೂ ಇದೆ.

ರಾಜಸ್ಥಾನ ರಾಯಲ್ಸ್ ವಿರುದ್ಧ ಪಂದ್ಯದಲ್ಲಿ ಆರ್‌ಸಿಬಿ ಹೊಸ ಉತ್ಸಾಹದಿಂದ ಕಣಕ್ಕೆ ಇಳಿಯಲಿದೆ. ಈ ವೇಳೆ ಆರ್‌ಸಿಬಿ ತಂಡದಲ್ಲಿ ಬದಲಾವಣೆಯ ಗಾಳಿ ಬೀಸುವ ಸಾಧ್ಯತೆ ಇದೆ. ಸೌದಿಯಲ್ಲಿ ನಡೆದ ಹರಾಜಿನಲ್ಲಿ ಭಾರೀ ಮೊತ್ತವನ್ನು ನೀಡಿ ಆರ್‌ಸಿಬಿ ಮ್ಯಾನೇಜ್ಮೆಂಟ್‌ ಈ ಸ್ಟಾರ್‌ ಆಟಗಾರನಿಗೆ ಮಣೆ ಹಾಕಿತು. ಆದರೆ ಈ ಪ್ಲೇಯರ್‌ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಫ್ಲಾಪ್‌ ಶೋ ನಡೆಸುತ್ತಿದ್ದು ತಂಡದ ಚಿಂತೆಯನ್ನು ಹೆಚ್ಚಿಸಿದೆ.

RCB Likely to Drop Liam Livingstone for Clash Against Rajasthan Royals Amid Poor Form

ಸೌದಿಯಲ್ಲಿ ನಡೆದ ಹರಾಜಿನಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್‌ ಅವರಿಗೆ ಆರ್‌ಸಿಬಿ 8.75 ಕೋಟಿ ನೀಡಿ ತಂಡಕ್ಕೆ ಬರ ಮಾಡಿಕೊಂಡಿತ್ತು. ಆದರೆ ಈ ಪ್ಲೇಯರ್‌ ತಂಡಕ್ಕೆ ಯಾವುದೇ ಕಾಣಿಕೆ ನೀಡುತ್ತಿಲ್ಲ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಫ್ಲಾಪ್ ಶೋ ನಡೆಸುತ್ತಿದ್ದು, ತಂಡಕ್ಕೆ ತಲೆ ನೋವಾಗಿದ್ದಾರೆ. ಮಹತ್ವದ ಸನ್ನಿವೇಶದಲ್ಲಿ ಬ್ಯಾಟಿಂಗ್‌ಗೆ ಬಂದು ಲೂಸ್ ಶಾಟ್‌ಗಳನ್ನು ಪ್ರಯೋಗಿಸಿ ಔಟ್ ಆಗುತ್ತಿದ್ದಾರೆ. ಇವರು ಆಡಿದ 5 ಪಂದ್ಯಗಳಲ್ಲಿ 1 ಅರ್ಧಶತಕ ಸೇರಿದಂತೆ 83 ರನ್‌ ಸಿಡಿಸಿದ್ದಾರೆ. ಇವರ ಬ್ಯಾಟ್ ಮೌನಕ್ಕೆ ಶರಣಾಗಿದ್ದು, ತಂಡಕ್ಕೆ ದೊಡ್ಡ ಚಿಂತೆಯಾಗಿದೆ.

ಆರ್‌ಸಿಬಿ ಆಲ್‌ರೌಂಡರ್‌ ಎಂದು ಇವರಿಗೆ ಮಣೆ ಹಾಕಿದ್ದು, ಇವರು ವಿಕೆಟ್‌ ಪಡೆಯುವಲ್ಲಿ ವಿಫಲರಾಗಿದ್ದಾರೆ. ಇವರು ಕೇವಲ 2 ವಿಕೆಟ್ ಕಬಳಿಸಿದ್ದಾರೆ. ಹೀಗಾಗಿ ಇವರು ಬೌಲಿಂಗ್‌ನಲ್ಲೂ ತಂಡಕ್ಕೆ ನೆರವಾಗುತ್ತಿಲ್ಲ.

RCB Likely to Drop Liam Livingstone for Clash Against Rajasthan Royals Amid Poor Form

ಲಿಯಾಮ ಬದಲಿಗೆ ಯಾರು?

ಲಿಯಾಮ್ ಲಿವಿಂಗ್ ಸ್ಟೋನ್ ಸ್ಥಾನವನ್ನು ತುಂಬಲು ಅವರದ್ದೇ ದೇಶದ ಜಾಕಬ್‌ ಬೆತೆಲ್‌ ಕಾತುರರಾಗಿದ್ದಾರೆ. ಇವರಿಗೆ ಆರ್‌ಸಿಬಿ 2.60 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿದೆ. ಇವರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ಆಧಾರವಾಗಬಲ್ಲ ಆಟಗಾರ. ಇವರು ತಂಡಕ್ಕೆ ಎಂಟ್ರಿ ನೀಡುವುದರಿಂದ ರೈಟ್ ಹಾಗೂ ಲೆಫ್ಟ್ ಕಾಂಬಿನೇಷನ್‌ ಸಹ ವರ್ಕ್ ಆಗುತ್ತದೆ. ಅಲ್ಲದೆ ಇವರು ಆಫ್‌ ಸ್ಪಿನ್ ಬೌಲಿಂಗ್ ಸಹ ಮಾಡಬಲ್ಲರು.

ಲಿಯಾಮ್‌ ಸ್ಥಾನವನ್ನು ತುಂಬಲ ವೆಸ್ಟ್‌ ಇಂಡೀಸ್ ಪ್ಲೇಯರ್‌ ರೊಮಾರಿಯೊ ಶೆಫರ್ಡ್ ಸಹ ತುದಿಗಾಲಿನಲ್ಲಿ ನಿಂತಿದ್ದಾರೆ. ಇವರು ಸಹ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅಬ್ಬರಿಸುವ ಆಟಗಾರ. ಇವರಿಗೆ ಆರ್‌ಸಿಬಿ ಹರಾಜಿನಲ್ಲಿ ಮೂಲ ಬೆಲೆ ಎಂದರೆ 1.50 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿದೆ. ಇವರಿಗೆ ಐಪಿಎಲ್‌ನಲ್ಲಿ ಆಡಿದ ಅನುಭವ ಇದ್ದು, ಇವರಿಗೂ ಆದ್ಯತೆ ನೀಡಬಹುದು. ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಯಾರಿಗೆ ಮಣೆ ಹಾಕುತ್ತೆ ಎಂಬುದೇ ಕುತೂಹಲ ಮೂಡಿಸಿದೆ.

Story first published: Saturday, April 12, 2025, 11:21 [IST]
Other articles published on Apr 12, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+