For Quick Alerts
ALLOW NOTIFICATIONS  
For Daily Alerts
 

RCB 15 ಕೋಟಿ ರೂ. ಉಳಿಸಿಕೊಳ್ಳಲು 3 ಸ್ಟಾರ್ ಆಟಗಾರರನ್ನು ಬಿಡುಗಡೆ ಮಾಡುವ ಸಾಧ್ಯತೆ!

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಚಾಂಪಿಯನ್‌ ಪಟ್ಟಕ್ಕೆ ಮುತ್ತಿಟ್ಟಿತ್ತು. ಈ ಮೂಲಕ 17 ವರ್ಷಗಳ ಕಾಯುವಿಕೆ ಕೊನೆಯಾಗಿತ್ತು. ತಂಡದ ಸಂಘಟಿತ ಆಟ ತಂಡವನ್ನು ಚಾಂಪಿಯನ್ ಪಟ್ಟಕ್ಕೆ ತಂದು ನಿಲ್ಲಿಸಿತ್ತು. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಆರ್‌ಸಿಬಿ ಆಟಗಾರರು ಅಭಿಮಾನಿಗಳ ಮನ ಗೆದ್ದಿದ್ದರು. ಆದರೆ ಆರ್‌ಸಿಬಿ ಮುಂದಿನ ಬಾರಿಯ ಮಿನಿ ಹರಾಜಿಗೆ ಭರ್ಜರಿ ಪ್ಲ್ಯಾನ್ ಮಾಡಿಕೊಳ್ಳುತ್ತಿದೆ. ಹೀಗಾಗಿ ಈ ಮೂವರು ಸ್ಟಾರ್ ಆಟಗಾರರನ್ನು ರಿಲೀಸ್ ಮಾಡುವ ಸಾಧ್ಯತೆ ಇದೆ.

ಆರ್‌ಸಿಬಿ ಪರ 2025ರ ಐಪಿಎಲ್‌ನಲ್ಲಿ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಎಡವಿದ್ದ ಆಟಗಾರರಿಗೆ ಗೇಟ್‌ ಪಾಸ್‌ ನೀಡುವ ಸಾಧ್ಯತೆ ಇದೆ. ಇದರಲ್ಲಿ ಒಬ್ಬ ವಿದೇಶಿ ಆಟಗಾರ ಇನ್ನಿಬ್ಬರು ದೇಶೀಯ ಆಟಗಾರರು ಸೇರಿದ್ದಾರೆ.

RCB Likely to Release Liam Livingstone Rasikh Salam And Swapnil Singh

ಲಿಯಾಮ್‌ ಲಿವಿಂಗ್‌ಸ್ಟೋನ್‌

ಆರ್‌ಸಿಬಿ ಸೌದಿಯಲ್ಲಿ ನಡೆದ ಹರಾಜಿನಲ್ಲಿ ಇಂಗ್ಲೆಂಡ್‌ ತಂಡದ ಸ್ಟಾರ್ ಆಲ್‌ರೌಂಡರ್‌ ಲಿಯಾಮ್‌ ಲಿವಿಂಗ್‌ಸ್ಟೋನ್‌ (Liam Livingstone) ಅವರಿಗೆ 8.75 ಕೋಟಿ ನೀಡಿ ತಂಡಕ್ಕೆ ಬರಮಾಡಿಕೊಂಡಿತ್ತು. ಆದರೆ ಈ ಸ್ಟಾರ್‌ ಪ್ಲೇಯರ್ ತಮ್ಮ ಕ್ಷಮತೆಗೆ ತಕ್ಕ ಆಟವನ್ನು ಆಡುವಲ್ಲಿ ವಿಫಲರಾಗಿದ್ದಾರೆ. ಮೊದಲು ಮೂರು ಪಂದ್ಯಗಳಲ್ಲಿ ಒಂದು ಅರ್ಧಶತಕ ಸೇರಿದಂತೆ 79 ರನ್‌ ಬಾರಿಸಿದ್ದ ಲಿಯಾಮ್‌ ನಂತರದ ಐದು ಪಂದ್ಯಗಳಲ್ಲಿ 33 ರನ್‌ ಸಿಡಿಸಲು ಸಫಲರಾದರು. ಅಲ್ಲದೆ ಇವರು ಟೂರ್ನಿಯಲ್ಲಿ ಒಟ್ಟಾರೆ 9 ಓವರ್‌ ಬೌಲಿಂಗ್ ಮಾಡಿ 2 ವಿಕೆಟ್‌ ಕಬಳಿಸಿದ್ದಾರೆ. ಇವರ ನೀರಸ ಪ್ರದರ್ಶನ ಇವರನ್ನು ತಂಡದಿಂದ ಕೈ ಬಿಡುವಂತೆ ಮಾಡಬಹುದು.

RCB Likely to Release Liam Livingstone Rasikh Salam And Swapnil Singh

ರಸಿಕ್ ಸಲಾಂ

ಆರ್‌ಸಿಬಿ ಹಿಂದಿನ ಹರಾಜಿನಲ್ಲಿ 25 ವರ್ಷದ ಜಮ್ಮು ಕಾಶ್ಮೀರ್ ತಂಡದ ವೇಗದ ಬೌಲರ್‌ ರಸಿಕ್ ಸಲಾಂ (Rasikh Salam) ಅವರಿಗೆ 6 ಕೋಟಿ ರೂ. ನೀಡಿ ಖರೀದಿಸಿತ್ತು. ಆದರೆ ಇವರು ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾದರು. ಅಲ್ಲದೆ ಇವರಿಗೆ ಕೇವಲ 2 ಪಂದ್ಯಗಳಲ್ಲಿ ಆಡುವ ಅವಕಾಶ ಸಿಕ್ಕಿತು. ಇವರು ಕಳೆದ ಐಪಿಎಲ್‌ನಲ್ಲಿ ನೀಡಿದ ಪ್ರದರ್ಶನವನ್ನು ನೋಡಿ ಆರ್‌ಸಿಬಿ ಇವರಿಗೆ ಮಣೆ ಹಾಕಿತ್ತು. ಆದರೆ ಇವರ ಕ್ಷಮತೆಯನ್ನು ಬಳಸಿಕೊಳ್ಳುವಲ್ಲಿ ಎಡವಿತು. ಹೀಗಾಗಿ ಇವರನ್ನು ರಿಲೀಸ್ ಮಾಡುವ ಸಾಧ್ಯತೆ ಇದೆ.

RCB Likely to Release Liam Livingstone Rasikh Salam And Swapnil Singh

ಸ್ವಪ್ನಿಲ್‌ ಸಿಂಗ್‌

ಎಡಗೈ ಸ್ಪಿನ್ ಬೌಲರ್‌ ಸ್ವಪ್ನಿಲ್‌ ಸಿಂಗ್‌ ಅವರನ್ನು ಆರ್‌ಸಿಬಿ 50 ಲಕ್ಷ ನೀಡಿ ಖರೀದಿ ಮಾಡಿತ್ತು. ಆದರೆ ಇವರಿಗೆ 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಆಡುವ ಅವಕಾಶವೇ ಸಿಗಲಿಲ್ಲ. ಇವರು 2024ರಲ್ಲಿ ಆರ್‌ಸಿಬಿ ಪರ ಸ್ಥಿರ ಪ್ರದರ್ಶನ ನೀಡಿದ್ದರು. ಇವರು ಒಟ್ಟಾರೆ ಐಪಿಎಲ್‌ನಲ್ಲಿ ಆಡಿದ 14 ಪಂದ್ಯಗಳಲ್ಲಿ 7 ವಿಕೆಟ್‌ ಕಬಳಿಸಿದ್ದಾರೆ. ಸುಯೇಶ್‌ ಶರ್ಮಾ ತಂಡದ ಪರ ಸ್ಥಿರ ಪ್ರದರ್ಶನ ನೀಡಿದ್ದರಿಂದ ಇವರಿಗೆ ಹಿಂದಿನ ಆವೃತ್ತಿಯಲ್ಲಿ ಹೆಚ್ಚಿನ ಅವಕಾಶಗಳು ಸಿಗಲಿಲ್ಲ.

Story first published: Friday, July 11, 2025, 10:22 [IST]
Other articles published on Jul 11, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+