RCB ಯಾವ ಅನ್ ಕ್ಯಾಪ್ಡ್ ಆಟಗಾರನಿಗೆ ಮಣೆ ಹಾಕಲಿದೆ? ಇಲ್ಲಿದೆ ಮಾಹಿತಿ
ಬಹುನಿರೀಕ್ಷಿತ ಆಟಗಾರರ ರಿಟೇನ್ಶನ್ ಲೀಸ್ಟ್ ಹೊರ ಬಿದ್ದಿದೆ. ಶನಿವಾರ ಬಿಸಿಸಿಐ ರಿಟೇನ್ಶನ್ ಪಾಲಿಸ್‌ಯನ್ನು ಬಿಡುಗಡೆ ಗೊಳಿಸಿದೆ. ಈ ಪಾಲಿಸಿಯನ್ನು ನೋಡಿದ ಫ್ರಾಂಚೈಸಿಗಳು ಕೊಂಚ ನಿರಾಳರಾಗಿದ್ದಾರೆ. ಅಲ್ಲದೆ ಯಾವ ಆಟಗಾರರನ್ನು ಉಳಿಸಿಕೊಳ್ಳಬೇಕು ಎಂಬ ಚಿಂತೆ ಆರಂಭವಾಗಿದೆ.
ರಿಟೇನ್ಶನ್ ಪಾಲಿಸಿಯ ಅಡಿಯಲ್ಲಿ ಎಲ್ಲ ಆಟಗಾರರು ಆರು ಆಟಗಾರರನ್ನು ಉಳಿಸಿಕೊಳ್ಳಬಹುದು. ಈ ಪಟ್ಟಿಯಲ್ಲಿ ಕನಿಷ್ಠ ಇಬ್ಬರು ಅನ್‌ಕ್ಯಾಪ್ಡ್ ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶವನ್ನು ನೀಡಲಾಗಿದೆ. ಅಲ್ಲದೆ ಗರಿಷ್ಠ ಐವರು ಕ್ಯಾಪ್ಡ್ ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ಇದೆ. ಈ ನಿಟ್ಟಿನಲ್ಲಿ ಆರ್‌ಸಿಬಿ ಯಾವ ಅನ್‌ಕ್ಯಾಪ್ಡ್ ಆಟಗಾರರನ್ನು ಉಳಿಸಿಕೊಳ್ಳುತ್ತದೆ ಎಂಬ ಕುತೂಹಲ ಮನೆ ಮಾಡಿದೆ.

ಯಾವ ಅನ್‌ಕ್ಯಾಪ್ಡ್ ಪ್ಲೇಯರ್‌ಗೆ ಅವಕಾಶ?
ಅಂದಹಾಗೆ ಆರ್‌ಸಿಬಿ ತಂಡದಲ್ಲೂ ಸ್ಟಾರ್ ಆಟಗಾರರ ದಂಡೇ ಇದೆ. ಈ ಬಾರಿ ರಿಟೇನ್ಶನ್ ಪಾಲಿಸಿಯಡಿ ಆರ್‌ಸಿಬಿ ಕ್ಯಾಪ್ಡ್ ಆಟಗಾರರನ್ನು ಉಳಿಸಿಕೊಳ್ಳುವುದು ಚಿಂತೆಯಲ್ಲ. ಆದರೆ ಅನ್‌ಕ್ಯಾಪ್ಡ್ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳುವುದೇ ಸವಾಲಾಗಿದೆ. ಈ ಬಾರಿ ಅನ್‌ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ಯಾರನ್ನು ಉಳಿಸಿಕೊಳ್ಳಬಹುದು ಎಂಬ ಲೆಕ್ಕಾಚರವನ್ನು ಅಭಿಮಾನಿಗಳು ಆರಂಭಿಸಿದ್ದಾರೆ.
ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್, ಯಶ್ ದಾಯಳ್ ಅವರನ್ನು ಉಳಿಸಿಕೊಳ್ಳುವುದು ಪಕ್ಕಾ ಎನ್ನಲಾಗುತ್ತಿದೆ. ಇನ್ನು ಅನ್‌ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ಅನುಜ್ ರಾವತ್ ಕಾಣಿಸಿಕೊಳ್ಳುತ್ತಾರೆ. ಇವರು ಕಳೆದ ಬಾರಿಯ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಇವರು ಐಪಿಎಲ್ 2024ರಲ್ಲಿ ಐದು ಪಂದ್ಯಗಳಲ್ಲಿ 24.50ರ ಸರಾಸರಿಯಲ್ಲಿ 98 ರನ್ ಸಿಡಿಸಿದ್ದಾರೆ.

ದಿನೇಶ್ ಕಾರ್ತಿಕ್ ಬದಲಿಗೆ ಯಾರಿಗೆ ಅವಕಾಶ?
24 ವರ್ಷದ ಈ ಯುವ ವಿಕೆಟ್ ಕೀಪರ್ ಬ್ಯಾಟರ್ ಕಳೆದ ವರ್ಷ ಕ್ಲಾಸಿಕ್ ಬ್ಯಾಟಿಂಗ್ ಪ್ರದರ್ಶನ ನೀಡಿದ ಅನುಜ್ ಭರವಸೆ ಮೂಡಿಸಿದ್ದರು. ಈಗ ಇವರನ್ನು ಅನ್‌ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ಉಳಿಸಿಕೊಳ್ಳುವ ಸಾಧ್ಯತೆ ಇದೆ. ಇವರು ಇತ್ತೀಚಿಗೆ ನಡೆದ ಡೆಲ್ಲಿ ಪ್ರೀಮಿಯರ್ ಲೀಗ್ 2024ರಲ್ಲಿ ಅಬ್ಬರಿಸಿದ್ದರು. ಅನುಜ್ ಆಡಿದ 10 ಪಂದ್ಯಗಳಲ್ಲಿ 44.5ರ ಸರಾಸರಿಯಲ್ಲಿ 356 ರನ್ ಸಿಡಿಸಿದ್ದಾರೆ. ಅಲ್ಲದೆ ಇವರು 66 ಎಸೆತಗಳಲ್ಲಿ 11 ಸಿಕ್ಸರ್ ಸಹಾಯದಿಂದ 121 ರನ್ ಕಲೆ ಹಾಕಿ ಅಬ್ಬರಿಸಿದ್ದಾರೆ.
ಆರ್‌ಸಿಬಿ ತಂಡ ಅನ್‌ಕ್ಯಾಪ್ಡ್ ಆಟಗಾರನ್ನಾಗಿ ಅನುಜ್ ರಾವತ್ ಅವರನ್ನು ಉಳಿಸಿಕೊಳ್ಳಬಹುದು. ಕ್ರಿಕ್‌ಬಜ್ ವರದಿಯ ಪ್ರಕಾರ ಇವರಿಗೆ ತಂಡ 4 ಕೋಟಿ ರೂ. ನೀಡಿ ತಂಡದಲ್ಲಿ ರಿಟೇನ್ ಮಾಡಿಕೊಳ್ಳಬಹುದು. ದಿನೇಶ್ ಕಾರ್ತಿಕ್ ಅವರ ಅನುಪಸ್ಥಿತಿಯಲ್ಲಿ ಇವರು ವಿಕೆಟ್ ಕೀಪರ್ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಬಲ ತುಂಬಿದ ಆಟಗಾರ.
ಕಳೆದ ಬಾರಿಯ ಐಪಿಎಲ್‌ನಲ್ಲಿ ಅನುಜ್ ರಾವತ್ ಸಿಕ್ಕ ಅವಕಾಶವನ್ನು ಬಳಿಕೊಂಡು ಅಬ್ಬರಿಸಿದ್ದಾರೆ. ಇವರು ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ನೆರವಾಗಿದ್ದು, ಭರವಸೆ ಮೂಡಿಸಿದ್ದಾರೆ. ಹೀಗಾಗಿ ತಂಡ ಇವರಿಗೆ ಮಣೆ ಹಾಕುವ ಸಾಧ್ಯತೆ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications