For Quick Alerts
ALLOW NOTIFICATIONS  
For Daily Alerts
 

2019ರಲ್ಲೇ ವಿರಾಟ್ ಕೊಹ್ಲಿ ವಿರುದ್ಧ ಈ ಕೆಲಸಕ್ಕೆ ಮುಂದಾಗಿತ್ತು RCB ಮ್ಯಾನೇಜ್ಮೆಂಟ್‌

ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಈಗಾಗಲೇ ಟಿ20 ಹಾಗೂ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಇವರು ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದಲ್ಲಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಹಲವು ವರ್ಷಗಳ ಕಾಲ ಮುನ್ನಡೆಸಿದ ಖ್ಯಾತಿ ಸಹ ಇವರಿಗೆ ಸಲ್ಲುತ್ತದೆ. ಆದರೆ ವಿರಾಟ್‌ ಕೊಹ್ಲಿ ಅವರ ವಿರುದ್ಧ 2019ರಲ್ಲಿ ಆರ್‌ಸಿಬಿ ಮ್ಯಾನೇಜ್ಮೆಂಟ್ ಆ ಒಂದು ಕಾರ್ಯವನ್ನು ಮಾಡಲು ಮುಂದಾಗಿತ್ತು ಎಂದು ತಿಳಿದು ಬಂದಿದೆ.

ಆರ್‌ಸಿಬಿ 18ನೇ ಆವೃತ್ತಿಯಲ್ಲಿ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದೆ. ಈ ಮೂಲಕ ಅಪಾರ ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣ ಬಡಿಸಿದೆ. ಕಳೆದ 17 ವರ್ಷಗಳಲ್ಲಿ ಆಗದ ಕೆಲಸವನ್ನು ಆರ್‌ಸಿಬಿ 18ನೇ ಆವೃತ್ತಿಯಲ್ಲಿ ಮಾಡಿ ತೋರಿಸಿದೆ. ಈ ವೇಳೆ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ತಂಡದ ಪರ ಸ್ಥಿರ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾಗಿದ್ದಾರೆ. ಆರ್‌ಸಿಬಿ ಎರಡು ಬಾರಿ ಕಪ್‌ ಹತ್ತಿರಕ್ಕೆ ಹೋಗಿ ನಿರಾಸೆಯನ್ನು ಅನುಭವಿಸಿದೆ. ಆದರೆ ಈಗ ಬರುತ್ತಿರುವ ಒಂದು ಸುದ್ದಿ ನಿಜಕ್ಕೂ ಆರ್‌ಸಿಬಿ ಅಭಿಮಾನಿಗಳಿಗೆ ಶಾಕ್‌ ನೀಡಿದೆ.

RCB Management Considered Replacing Virat Kohli as Captain in 2019

ಆರ್‌ಸಿಬಿ ತಂಡದ ಮಾಜಿ ಆಟಗಾರ ಇಂಗ್ಲೆಂಡ್‌ನ ಮೋಯಿನ್‌ ಅಲಿ, ಇಂಡಿಯಾ ಟುಡೆಗೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಅವರು ಆರ್‌ಸಿಬಿ ಜೊತೆಗಿನ ಸಂಬಂಧವನ್ನು ಮೆಲಕು ಹಾಕಿದ್ದಾರೆ. ಆರ್‌ಸಿಬಿ 2019ರಲ್ಲಿ ವಿರಾಟ್‌ ಕೊಹ್ಲಿ ಅವರನ್ನು ನಾಯಕತ್ವದಿಂದ ಕೆಳಗಿಳಿಸಲು ಬಯಸಿತ್ತು ಎಂಬುದಾಗಿ ತಿಳಿಸಿದ್ದಾರೆ. 2018ರ ಐಪಿಎಲ್‌ನಲ್ಲಿ ಆರ್‌ಸಿಬಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದ ಆರ್‌ಸಿಬಿ, ಪ್ಲೇ ಆಫ್‌ ರೇಸ್‌ ನಿಂದ ಹೊರ ಬಿದ್ದಿತ್ತು. ಹೀಗಾಗಿ ಮ್ಯಾನೇಜ್ಮೆಂಟ್‌ ನಾಯಕನ ಬದಲಾವಣೆಗೆ ಚಿಂತನೆ ನಡೆಸಿತ್ತು ಎಂದು ಹೇಳಿದ್ದಾರೆ.

ಆ ಪ್ಲ್ಯಾನ್‌ ಏನು?

ವಿರಾಟ್‌ ಕೊಹ್ಲಿ ಅವರ ಸ್ಥಾನದಲ್ಲಿ ಟೀಮ್ ಇಂಡಿಯಾದ ವಿಕೆಟ್‌ ಕೀಪರ್ ಬ್ಯಾಟರ್‌ ಪಾರ್ಥಿವ್ ಪಟೇಲ್ ಅವರಿಗೆ ನಾಯಕತ್ವ ನೀಡುವ ಬಗ್ಗೆಯೂ ಚರ್ಚೆಗಳು ನಡೆದಿದ್ದವು ಎಂಬುದನ್ನು ಮೊಯಿನ್ ಅಲಿ ತಿಳಿಸಿದ್ದಾರೆ. ಗ್ಯಾರಿ ಕರ್ಸ್ಟನ್‌ ವಿರಾಟ್‌ ಬದಲಿಗೆ ಪಾರ್ಥಿವ್ ಅವರನ್ನು ನಾಯಕರನ್ನಾಗಿ ಮಾಡುವ ಆಸೆಯನ್ನು ಹೊಂದಿದ್ದರು. ಆದರೆ ಮುಂದೆ ಏನಾಯಿತು ಎಂಬುದರ ಅರಿವು ನನಗೆ ಇಲ್ಲ ಎಂದು ಇಂಗ್ಲೆಂಡ್ ಪ್ಲೇಯರ್‌ ತಿಳಿಸಿದ್ದಾರೆ. 2018ರಲ್ಲಿ ಆರ್‌ಸಿಬಿ ಕಳಪೆ ಪ್ರದರ್ಶನವನ್ನು ನೀಡಿತ್ತು. ಅಡಿದ್ದ 14 ಪಂದ್ಯಗಳಲ್ಲಿ 6 ಗೆಲುವು, 8 ಸೋಲು ಕಂಡಿದ್ದ ಆರ್‌ಸಿಬಿ 12 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಆರನೇ ಸ್ಥಾನ ಪಡೆದಿತ್ತು.

RCB Management Considered Replacing Virat Kohli as Captain in 2019

ವಿರಾಟ್‌ ಕೊಹ್ಲಿ ಆರ್‌ಸಿಬಿ ತಂಡದ ಸ್ಟಾರ್ ಆಟಗಾರ. ಇವರು ಐಪಿಎಲ್‌ನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಒಂದೇ ತಂಡದ ಪರ ಅತಿ ಹೆಚ್ಚು ಐಪಿಎಲ್‌ ಪಂದ್ಯಗಳನ್ನು ಆಡಿದ ದಾಖಲೆ ಸಹ ಇವರ ಹೆಸರಿನಲ್ಲೇ ಇದೆ. ಅಲ್ಲದೆ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್‌ ಬಾರಿಸಿದ ದಾಖಲೆ ಸಹ ಇವರ ಹೆಸರಿನಲ್ಲಿದೆ. ವಿರಾಟ್ ಅವರ ಮುಡಿಗೆ ಐಪಿಎಲ್‌ ಚಾಂಪಿಯನ್‌ ಪಟ್ಟದ ಕಡಿಮೆ ಇತ್ತು. ಈ ಆಸೆ ಸಹ ಈ ಬಾರಿ ಈಡೇರಿದೆ.

Story first published: Thursday, July 31, 2025, 22:25 [IST]
Other articles published on Jul 31, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+