ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಐಪಿಎಲ್ ಹರಾಜಿಗೆ ಭರದ ಸಿದ್ಧತೆಯನ್ನು ನಡೆಸಿದೆ. ಈಗಾಗಲೇ ಆರ್‌ಸಿಬಿ ಬೆಂಗಳೂರಿನಲ್ಲಿ ಮಾಕ್ ಆಕ್ಷನ್ ನಡೆಸಿರುವ ಸುದ್ದಿ ಎಲ್ಲಡೆ ಹರಿದಾಡಿತ್ತು. ಈ ಅಣಕು ಹರಾಜಿನಲ್ಲಿ ಆರ್‌ಸಿಬಿ ರಿಷಭ್ ಪಂತ್ ಅವರಿಗೆ ಬಾಜಿ ಕಟ್ಟಿ ಗೆದ್ದಿತ್ತು. ಈ ವಿಡಿಯೋ ಸಖತ್ ವೈರಲ್ ಆಗಿತ್ತು. ಆರ್‌ಸಿಬಿ ಹರಾಜಿಗೆ ಇನ್ನೇನು ದಿನಗಳು ಬಾಕಿ ಇರುವಾಗ ಯಾವ ಯಾವ ಪ್ಲೇಯರ್‌ಗಳನ್ನು ಟಾರ್ಗೆಟ್ ಮಾಡಬೇಕು ಎಂಬ ಬಗ್ಗೆ ಲೀಸ್ಟ್ ಮಾಡಿಕೊಳ್ಳುತ್ತಿದೆ. ಹಾಗಿದ್ರೆ ಪಟ್ಟಿಯಲ್ಲಿರುವ ವಿದೇಶಿ ಆಟಗಾರರು ಯಾರು ಎಂಬ ಬಗ್ಗೆ ವರದಿ ಇಲ್ಲಿದೆ.
ಆರ್‌ಸಿಬಿ ಈಗಾಗಲೇ ರಿಟೇನ್ಷನ್ ಲಿಸ್ಟ್ ನೀಡಿದೆ. ಈ ಲೀಸ್ಟ್‌ನಲ್ಲಿ ದೇಶೀಯ ಆಟಗಾರರನ್ನು ಆರ್‌ಸಿಬಿ ಉಳಿಸಿಕೊಂಡಿದೆ. ಆರ್‌ಸಿಬಿ ಒಬ್ಬನೇ ಒಬ್ಬ ವಿದೇಶಿ ಪ್ಲೇಯರ್‌ನನ್ನು ಉಳಿಸಿಕೊಂಡಿಲ್ಲ. ಹೀಗಿರುವಾಗ ಆರ್‌ಸಿಬಿ ಹರಾಜಿನಲ್ಲಿ ವಿದೇಶಿ ಆಟಗಾರರಿಗೂ ಬಾಜಿ ಕಟ್ಟಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಸ್ಟಾರ್ ಆಟಗಾರರ ಮೇಲೆ ಆರ್‌ಸಿಬಿ ದೃಷ್ಟಿ ನೆಟ್ಟಿದೆ.

ಆರ್‌ಸಿಬಿ ಹರಾಜಿನಲ್ಲಿ ಇಬ್ಬರು ದಕ್ಷಿಣ ಆಫ್ರಿಕಾದ ಆಟಗಾರರಿಗೆ ಟಾರ್ಗೆಟ್ ಮಾಡಲಿದೆ. ಈ ಪಟ್ಟಿಯಲ್ಲಿ ಮೊದಲು ಕಾಣಿಸಿಕೊಳ್ಳುವುದು ಕ್ವಿಂಟನ್ ಡಿಕಾಕ್. ಇವರನ್ನು ಲಕ್ನೋ ಸೂಪರ್ ಜೈಂಟ್ಸ್ ಹರಾಜು ಅಂಗಳಕ್ಕೆ ಬಿಟ್ಟಿದ್ದು, ಇವರಿಗೆ ಗಾಳ ಹಾಕಬಹುದು. ಇವರು ಲೆಫ್ಟ್ ಹ್ಯಾಂಡೆಡ್ ಬ್ಯಾಟರ್ ಹಾಗೂ ಸಮಯಕ್ಕೆ ತಕ್ಕಂತೆ ಬ್ಯಾಟ್ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಇವರಿಗೆ ಆರ್‌ಸಿಬಿ ಬಾಜಿ ಕಟ್ಟುವ ಸಾಧ್ಯತೆ ಇದೆ. ಬೆಂಗಳೂರು ತಂಡದೊಂದಿಗೆ ಇವರನ್ನು ಕೊಳ್ಳಲು ಮುಂಬೈ ಸಹ ಬಾಜಿಗೆ ಇಳಿಯಬಹುದು.
ಇನ್ನು ದಕ್ಷಿಣ ಆಫ್ರಿಕಾ ತಂಡದ ಸದ್ಯದ ಎಡಗೈ ಆರಂಭಿಕ ಆಟಗಾರ ರಿಯಾನ್ ರಿಕಲ್ಟನ್ ಅವರಿಗೂ ಸಹ ಬಾಜಿ ಕಟ್ಟಬಹುದು. ಇವರು ತಂಡಕ್ಕೆ ಸೇರಿದರೆ, ವಿರಾಟ್ ಕೊಹ್ಲಿ ಜೊತೆ ಉತ್ತಮವಾಗಿ ಆಡಬಲ್ಲರು. ಇವರು ಭಾರತದ ಪರಿಸ್ಥಿತಿಗಳಲ್ಲಿ ಹೇಗೆ ಆಡುತ್ತಾರೆ ಎಂಬುದೇ ಒಂದು ದೊಡ್ಡ ಚಿಂತೆ ಆಗಿದೆ. ಆದರೆ ಇವರು ಚುಟುಕು ಫಾರ್ಮೆಟ್‌ನಲ್ಲಿ ಆಡಿದ 103 ಪಂದ್ಯಗಳಲ್ಲಿ 2675 ರನ್ ಸಿಡಿಸಿದ್ದಾರೆ.

ಈಗಾಗಲೇ ಐಪಿಎಲ್‌ನಲ್ಲಿ ಆಡಿ ಸೈ ಎನಿಸಿಕೊಂಡಿರುವ ಇಂಗ್ಲೆಂಡ್‌ನ ಜಾಸ್ ಬಟ್ಲರ್ ಹಾಗೂ ಫಿಲ್ ಸಾಲ್ಟ್ ಮೇಲೆ ಆರ್‌ಸಿಬಿ ಕಣ್ಣು ನೆಟ್ಟಿದೆ. ಈ ಇಬ್ಬರೂ ಆಟಗಾರರು ವಿಕೆಟ್ ಕೀಪರ್ ಬ್ಯಾಟರ್ ಹಾಗೂ ಆರಂಭಿಕ ಆಟಗಾರರಿಗೆ ತಂಡಕ್ಕೆ ಬಲ ತುಂಬ ಬಲ್ಲರು. ಫಿಲ್ ಸಾಲ್ಟ್ 34 ಟಿ20 ಪಂದ್ಯಗಳಲ್ಲಿ 38.77ರ ಸರಾಸರಿಯಲ್ಲಿ 1047 ರನ್ ಸಿಡಿಸಿದ್ದಾರೆ. ಇದರಲ್ಲಿ 3 ಶತಕ ಹಾಗೂ 3 ಅರ್ಧಶತಕಗಳು ಸೇರಿವೆ.
ರಾಜಸ್ಥಾನ ರಾಯಲ್ಸ್ ತಂಡ ಕೈ ಬಿಟ್ಟ ಜಾಸ್ ಬಟ್ಲರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಆರ್‌ಸಿಬಿ ಪ್ಲ್ಯಾನ್ ಮಾಡಿಕೊಳ್ಳುತ್ತಿದೆ. ಇವರು ಈಗಾಗಲೇ ಐಪಿಎಲ್‌ನಲ್ಲಿ ಏಳು ಶತಕ ಸಿಡಿಸಿದ್ದಾರೆ. ಇದೇ ತಿಂಗಳು ನಡೆಯಲಿರುವ ಎರಡು ದಿನಗಳ ಹಾರಜಿನಲ್ಲಿ ಇವರು ಸಹ ಫಸ್ಟ್ ಚಾಯ್ಸ್ ಪ್ಲೇಯರ್ ಎಂಬುದರಲ್ಲಿ ಎರಡು ಮಾತಿಲ್ಲ. ಇವರನ್ನು ಕೊಳ್ಳಲು ಆರ್‌ಸಿಬಿ, ಬೇರೆ ತಂಡಗಳೊಂದಿಗೆ ಪೈಪೋಟಿ ನಡೆಸಲಿದೆ.
ಆಸ್ಟ್ರೇಲಿಯಾ ತಂಡದ ಸ್ಟಾರ್ ಆಟಗಾರ ಜೋಶ್ ಇಂಗ್ಲಿಷ್ ಅವರ ಮೇಲೆ ಆರ್‌ಸಿಬಿ ಬಾಜಿ ಕಟ್ಟಬಹುದು. ಇವರು ವಿಕೆಟ್ ಕೀಪರ್ ಆಗಿ ಉತ್ತಮ ಅನುಭವ ಹೊಂದಿದ್ದಾರೆ. ಅಲ್ಲದೆ ಕ್ಲಾಸಿಕ್ ಬ್ಯಾಟಿಂಗ್ ಮಾಡಬಲ್ಲರು. ಇವರು ಬೇರೆ ಬೇರೆ ಲೀಗ್‌ಳಲ್ಲಿ ತಮ್ಮ ಬ್ಯಾಟಿಂಗ್ ಛಾಪು ಮೂಡಿಸಿದ್ದಾರೆ.