ಐಪಿಎಲ್ 2021: ಯಾವೆಲ್ಲಾ ಆಟಗಾರರನ್ನು ಕೈಬಿಡಬಹುದು ಆರ್‌ಸಿಬಿ
ಐಪಿಎಲ್ 2020 ಯಲ್ಲಿ ಸಹ 'ಈ ಸಲ ಕಪ್ ನಮ್ದೆ' ಎಂಬುದು ಮರೀಚಿಕೆಯಾಗಿಯೇ ಉಳಿಯಿತು. ಆದರೆ ಆರ್‌ಸಿಬಿ ಅಭಿಮಾನಿಗಳು ಮಾಮೂಲಿನಿಂತೆ, ಮುಂದಿನ ಬಾರಿಯಾದರೂ ಕಪ್ ನಮ್ದೆ ಎಂಬ ನಿರೀಕ್ಷೆಯಲಿದ್ದಾರೆ.
ಮುಂದಿನ ಐಪಿಎಲ್ ಗೆ ಹೆಚ್ಚೇನು ಸಮಯವಿಲ್ಲ. ಕೆಲವೇ ತಿಂಗಳುಗಳಲ್ಲಿ ಅಂದರೆ ಏಪ್ರಿಲ್-ಮೇ ತಿಂಗಳಲ್ಲಿ ಐಪಿಎಲ್ 2021 ಪ್ರಾರಂಭವಾಗಲಿದ್ದು, ಅದಕ್ಕೆ ಮುನ್ನಾ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ.
ಈ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಯಾವ ಆಟಗಾರರನ್ನು ಕೈಬಿಟ್ಟು, ಯಾವೆಲ್ಲಾ ಆಟಗಾರರಿಗೆ ಮಣೆ ಹಾಕಬೇಕು ಎಂಬ ಲೆಕ್ಕಾಚಾರ ಆರ್‌ಸಿಬಿ ತಂಡದಲ್ಲಿ ನಡೆದಿದೆ. ಇಲ್ಲಿದೆ ಕೆಲವು ಲೆಕ್ಕಾಚಾರ.

ಹಿರಿಯ ಆಟಗಾರರನ್ನು ಕೈಬಿಡುವ ಸಾಧ್ಯತೆ
ಆರ್‌ಸಿಬಿ ಯು ತಂಡದ ಕೆಲವು ಹಿರಿಯ ಆಟಗಾರರಾದ ಡೇಲ್ ಸ್ಟೇನ್, ಉಮೇಶ್ ಯಾದವ್, ಪಾರ್ಥಿವ್ ಪಟೇಲ್, ಗುರುಕೀರತ್ ಸಿಂಗ್ ಮಾನ್, ಆರನ್ ಫಿಂಚ್, ಮೋಯಿನ್ ಅಲಿ ಅವರುಗಳನ್ನು ಕೈ ಬಿಡುವ ಸಾಧ್ಯತೆ ಹೆಚ್ಚಿದೆ.

ಮೂವರು ಆಟಗಾರರನ್ನು ಉಳಿಸಿಕೊಳ್ಳಲಿದೆ
ಆರ್‌ಸಿಬಿಯು ಎಂದಿನಂತೆ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಹಾಗೂ ಯಜುವೇಂದರ್ ಚಾಹಲ್ ಅನ್ನು ಉಳಿಸಿಕೊಳ್ಳಲಿದೆ. ಈ ಬಾರಿ ದೇವದತ್ ಪಡಿಕ್ಕಲ್ ಅನ್ನು ಸಹ ಉಳಿಸಿಕೊಳ್ಳುವ ಸಾಧ್ಯತೆ ಇದೆ. ಸೈನಿ ಯನ್ನೂ ಉಳಿಸಿಕೊಂಡರೆ ಅಚ್ಚರಿಪಡುವಂತಿಲ್ಲ.

ಒಬ್ಬ ಬೌಲರ್, ಆಲ್‌ರೌಂಡರ್, ಓಪನರ್ ಬೇಕಿದೆ
ಆರ್‌ಸಿಬಿಗೆ ಒಬ್ಬ ಒಳ್ಳೆಯ ಆಲ್‌ರೌಂಡರ್ ಅಗತ್ಯ ಬಹಳವಾಗಿದೆ. ಜೊತೆಗೆ ಒಬ್ಬ ವಿದೇಶಿ ವೇಗಿಯ ಅಗತ್ಯವೂ ಇದೆ. ಆರನ್ ಫಿಂಚ್ ಹೊರಗೆ ಹೋದಲ್ಲಿ ಒಬ್ಬ ವಿದೇಶಿ ಆರಂಭಿಕ ಬ್ಯಾಟ್ಸ್‌ಮನ್ ಸಹ ಬೇಕಾಗಬಹುದು ಹಾಗಾಗಿ ಆ ನಿಟ್ಟಿನಲ್ಲಿ ಆಟಗಾರರ ಖರೀದಿಗೆ ಮುಂದಾಗಲಿದೆ ಆರ್‌ಸಿಬಿ.

ಆರ್‌ಸಿಬಿ ಕ್ಯಾಪ್ಟನ್ ಆಗಿ ಕೊಹ್ಲಿ ಮುಂದುವರಿಕೆ
ಆರ್‌ಸಿಬಿ ನಾಯಕತ್ವ ಬದಲಾವಣೆ ಮಾಡಬೇಕು ಎಂದು ಗಂಭೀರ್ ಹೇಳಿದ್ದಾರೆ. ಆದರೆ ಅದು ಸನಿಹ ಭವಿಷ್ಯದಲ್ಲಿ ಸಾಧ್ಯವಿಲ್ಲ. ಕೊಹ್ಲಿ ಆರ್‌ಸಿಬಿಯ ಕ್ಯಾಪ್ಟನ್ ಆಗಿ ಮುಂದುವರೆಯುವುದು ಬಹುತೇಕ ಖಾತ್ರಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications