2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 17ನೇ ಆವೃತ್ತಿ ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ಇದೇ ಮಾರ್ಚ್ 22ರಂದು ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಿನ ಉದ್ಘಾಟನಾ ಪಂದ್ಯದೊಂದಿಗೆ ಬಹು ನಿರೀಕ್ಷಿತ ಪಂದ್ಯಾವಳಿಗೆ ಅದ್ಧೂರಿ ಚಾಲನೆ ಸಿಗಲಿದೆ.
ಇದಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿಯು Bangaloreನಿಂದ Bengaluruಗೆ ತಂಡದ ಹೆಸರು ಬದಲಾವಣೆಯ ಸುಳಿವು ನೀಡುವ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದೆ.

ಬುಧವಾರದಂದು ನಟ ರಿಷಬ್ ಶೆಟ್ಟಿ ಒಳಗೊಂಡ ಮೊದಲ ವಿಡಿಯೋವನ್ನು ಬಿಡುಗಡೆ ಮಾಡಿತ್ತು. ಅಲ್ಲಿ ಫ್ರಾಂಚೈಸಿಯು Bangalore ಎಂಬ ಹೆಸರಿನ ಕೋಣವನ್ನು ತೆಗೆದುಕೊಂಡು ಹೋಗುವಂತೆ ವ್ಯಕ್ತಿಯೊಬ್ಬರಿಗೆ ಆದೇಶಿಸುತ್ತಾರೆ. ಇದು ಸಂಭಾವ್ಯ ಹೆಸರು ಬದಲಾವಣೆಯ ಬಗ್ಗೆ ನೀಡಿದ ಮೊದಲ ಸುಳಿವಾಗಿತ್ತು.
ಇದೀಗ ಗುರುವಾರ, ಮಾರ್ಚ್ 14ರಂದು ಆರ್‌ಸಿಬಿ ಟ್ವೀಟ್‌ನಲ್ಲಿ ದಿ. ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರನ್ನು ಒಳಗೊಂಡ ಮತ್ತೊಂದು ವಿಡಿಯೋವನ್ನು ಹೊರತಂದಿವೆ.
Bangaloreನಿಂದ Bengaluru ಎಂದು ಹೆಸರು ಬದಲಿಸಬೇಕೆನ್ನುವುದು ವಿಶ್ವಾದ್ಯಂತ ಇರುವ ಕನ್ನಡ ಹಾಗೂ ಆರ್‌ಸಿಬಿ ಅಭಿಮಾನಿಗಳ ದಶಕದ ಆಶಯವಾಗಿದೆ.

ಬೆಂಗಳೂರು ಎಂಬ ಹೆಸರು ಕನ್ನಡದ ಆಡುಭಾಷೆಯಿಂದ ಬಂದಿದ್ದು, ಇದನ್ನು ಬದಲಾಯಿಸುವಂತೆ ಕೋಟ್ಯಂತರ ಕನ್ನಡಿಗ ಅಭಿಮಾನಿಗಳು ಹಲವು ವರ್ಷಗಳಿಂದ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಅನ್ನು ಒತ್ತಾಯಿಸುತ್ತಿದ್ದಾರೆ.
ಇದೀಗ ಹೆಸರು ಬದಲಾವಣೆ ಮುನ್ಸೂಚನೆ ನೀಡುವ ವಿಡಿಯೋಗಳು ಹೊರಬೀಳುತ್ತಿದ್ದಂತೆ, ಆರ್‌ಸಿಬಿ ಅಭಿಮಾನಿಗಳು ತಮ್ಮ ಸಂತೋಷವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು ಖುಷಿಪಡುತ್ತಿದ್ದಾರೆ ಮತ್ತು 16 ವರ್ಷಗಳ ಐಪಿಎಲ್ ಟ್ರೋಫಿ ಬರದ ನಂತರ, ಕನಿಷ್ಠ ಈ ವರ್ಷ ಆರ್‌ಸಿಬಿ ಕಪ್ ಗೆಲ್ಲಲು ಸಾಧ್ಯವಾಗುತ್ತದೆ ಎಂದು ವ್ಯಕ್ತಪಡಿಸಿದ್ದಾರೆ.
ಮಾರ್ಚ್ 22ರಂದು ಚೆನ್ನೈನಲ್ಲಿ ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಿನ ಹೈ-ವೋಲ್ಟೇಜ್ ಪಂದ್ಯದೊಂದಿಗೆ ಐಪಿಎಲ್ 17ನೇ ಆವೃತ್ತಿಯುವ ಆರಂಭಗೊಳ್ಳಲು ಸಜ್ಜಾಗಿದೆ. ಇದೇ ವೇಳೆ ಮಾರ್ಚ್ 19ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಅನ್‌ಬಾಕ್ಸ್ ಈವೆಂಟ್‌ನಲ್ಲಿ Royal Challengers Bangalore ಹೆಸರನ್ನು Royal Challengers Bengaluru ಎಂದು ಬದಲಾಯಿಸುವ ಸಾಧ್ಯತೆಯಿದೆ.

ಇದೀಗ ಪವರ್ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಮೂಲಕವೂ ಆರ್‌ಸಿಬಿ ಪ್ರಚಾರ ಕೆಲಸ ಮಾಡಿದೆ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಹೊಸ ವಿಡಿಯೋ ಒಂದನ್ನು ಆರ್‌ಸಿಬಿ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಮಾಡಿದೆ.
"ಅಶ್ವಿನಿ ಪುನೀತ್ ರಾಜಕುಮಾರ್ ಅವರು ಎನ್ ಮಾಡ್ತಿದ್ದಾರೆ ಅರ್ಥ ಆಯ್ತಾ?" ಎಂದು ಶೀರ್ಷಿಕೆ ನೀಡಿ ಆರ್‌ಸಿಬಿ ಪೋಸ್ಟ್ ಮಾಡಿದೆ. ಈ ಪೋಸ್ಟ್ನಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮೂಲಕ ಆರ್‌ಸಿಬಿ ಬ್ಯಾಂಗಲೋರ್ ಅನ್ನು ಬೆಂಗಳೂರು ಆಗಿ ಬದಲಾಗುವ ಸೂಚನೆ ನೀಡಿದ್ದಾರೆ.
ಡಾ. ರಾಜ್‌ಕುಮಾರ್ ಅವರ ಫೋಟೋ ಮತ್ತು ಪುನೀತ್ ರಾಜ್‌ಕುಮಾರ್ ಅವರ ವಿಗ್ರಹವನ್ನು ಒಳಗೊಂಡಿರುವ ವಿಡಿಯೋದಲ್ಲಿ, ಅಶ್ವಿನಿ ಪೋಸ್ಟರ್ ನೋಡುತ್ತಾ ಕ್ಯಾಮೆರಾಗೆ ನಗುತ್ತಾಳೆ. ಲ್ಯಾಪ್ಟಾಪ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂಬ ಪಾಸ್‌ವರ್ಡ್ ಟೈಪ್ ಮಾಡುವಾಗ ರಾಂಗ್ ಎಂದು ತೋರಿಸುತ್ತದೆ.
ನಂತರ ಅಶ್ಚಿನಿ ಅವರು ಒಮ್ಮೆ ಟೈಪಿಂಗ್ ನಿಲ್ಲಿಸಿ, ಪುನೀತ್ ರಾಜ್‌ಕುಮಾರ್ ಅವರು ಈ ಹಿಂದೆ ಮೈದಾನದಲ್ಲಿ ಆರ್‌ಸಿಬಿ ಬಾವುಟ ಹಿಡಿದು ಜೀಪ್‌ನಲ್ಲಿ ಕೈ ಬೀಸುತ್ತಿರುವ ಹಳೆಯ ಫೋಟೋ ಫ್ರೇಮ್ ಕಾಣಿಸುತ್ತದೆ. ಇದನ್ನು ನೋಡಿ ಅಶ್ವಿನಿ ಅವರು ಮುಗುಳ್ನಗುತ್ತಾರೆ.
ಆಗ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು Bangalore ಎನ್ನುವ ಹೆಸರನ್ನು ಬ್ಯಾಕ್ಸ್ಪೇಸ್ ಕೊಟ್ಟು ಅಳಿಸುತ್ತಾರೆ. ಬಳಿಕ ಕ್ಯಾಮೆರಾಗೆ ಅರ್ಥ ಆಯ್ತಾ? ಎಂದು ಹೇಳಿ ಸ್ಮೈಲ್ ಮಾಡುತ್ತಾರೆ. ಇದನ್ನು ನೋಡಿ ಆರ್‌ಸಿಬಿ ಅಭಿಮಾನಿಗಳು ಭಾರೀ ಖುಷಿಗೊಂಡಿದ್ದಾರೆ.
ಈ ಮೂಲಕ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಬ್ಯಾಂಗಲೋರ್ ಎಂದಿರುವ ಹೆಸರು ಬೆಂಗಳೂರು ಆಗಿ ಬದಲಾಗುವ ಸುಳಿವು ಕಂಡುಕೊಂಡಿದ್ದಾರೆ. ಆ ವಿಡಿಯೋ ಭಾರೀ ಕ್ರಿಯೇಟಿವ್ ಆಗಿದ್ದು ವೈರಲ್ ಆಗುತ್ತಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿಯು 2008ರಿಂದಲೂ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಭಾಗವಹಿಸುತ್ತಿದೆ. ಈವರೆಗಿನ 16 ಆವೃತ್ತಿಗಳಲ್ಲಿ ಮೂರು ಬಾರಿ ಫೈನಲ್ ತಲುಪಿದ್ದರೂ, ಟ್ರೋಫಿ ಗೆಲ್ಲಲು ವಿಫಲವಾಗಿದೆ.
ಆದರೆ, ಇದೀಗ ತಂಡದ ಹೆಸರು ಮತ್ತು ತಂಡದ ಜೆರ್ಸಿಯಲ್ಲಿ ಬದಲಾವಣೆ ಮಾಡಿದ ನಂತರ, ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿ ತಂಡದ ಅದೃಷ್ಟ ಬದಲಾಗಲಿದೆ ಎಂದು ಫ್ಯಾನ್ಸ್ ಮಾತನಾಡಿಕೊಳ್ಳುತ್ತಿದ್ದಾರೆ.
'ಈ ಸಲ ಕಪ್ ನಮ್ದೆ' ಎನ್ನುವ ಡೈಲಾಗ್‌ಗೆ ಅರ್ಥ ಬರಬೇಕೆಂದರೆ, ತಮ್ಮ ನಿಷ್ಠಾವಂತ ಅಭಿಮಾನಿಗಳ ಕಟ್ಟಕಡೆಯ ಬೇಡಿಕೆ ಮತ್ತು ಕನಸಾಗಿರುವ ಐಪಿಎಲ್ ಟ್ರೋಫಿ ಗೆಲ್ಲುವ ಜವಾಬ್ದಾರಿ ಆರ್‌ಸಿಬಿ ತಂಡದ ಮೇಲಿದೆ.