For Quick Alerts
ALLOW NOTIFICATIONS  
For Daily Alerts
 

RCB ಚಿಂತೆ ಹೆಚ್ಚಿಸಿದ ಮಾಜಿ ಪ್ಲೇಯರ್‌

ಮಂಗಳವಾರ ನ್ಯೂ ಚಂಡೀಗಡ್‌ ಅಂಗಳದಲ್ಲಿ ಪಂಜಾಬ್‌ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸಿದೆ. ಲೋ ಸ್ಕೋರ್ ಗೇಮ್‌ನಲ್ಲಿ ಜಯ ಸಾಧಿಸಿರುವ ಪಂಜಾಬ್‌ ಅಬ್ಬರಿಸಿದೆ. 112 ರನ್‌ಗಳ ಟಾರ್ಗೆಟ್‌ ಬೆನ್ನಟ್ಟಿದ ಕೆಕೆಆರ್‌ ನಿರಾಸೆ ಅನುಭವಿಸಿದೆ. ಈ ಗೆಲುವಿನ ಪಂಜಾಬ್‌ ಆಡಿದ 6 ಪಂದ್ಯಗಳಲ್ಲಿ 4 ಜಯ ಸಾಧಿಸಿ, 8 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಕೆಕೆಆರ್‌ ಈ ಪಂದ್ಯದಲ್ಲಿ ಸೋತು ಆರನೇ ಸ್ಥಾನ ಪಡೆದಿದೆ. ಈ ಪಂದ್ಯವನ್ನು 16 ರನ್‌ಗಳಿಂದ ಗೆದ್ದ ಪಂಜಾಬ್‌ ಅಬ್ಬರಿಸಿದೆ.

ನ್ಯೂ ಚಂಡಿಗಡ್ ಅಂಗಳದಲ್ಲಿ ನಡೆದ ಪಂದ್ಯವನ್ನು ನೋಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಟೆನ್ಷನ್‌ ಶುರುವಾಗಿದೆ. ಕಡಿಮೆ ಮೊತ್ತವನ್ನು ಪಂಜಾಬ್ ಡಿಫೆಂಡ್ ಮಾಡಿಕೊಂಡ ರೀತಿಯನ್ನು ಕಂಡು, ಇವರ ವಿರುದ್ಧ ಹೇಗೆ ಆಡಬೇಕು ಎಂಬ ಭಯ ಶುರುವಾಗಿದೆ. ಆರ್‌ಸಿಬಿ ತನ್ನ ಲೀಗ್ ಹಂತದ ಮುಂದಿನ ಪಂದ್ಯವನ್ನು ಪಂಜಾಬ್‌ ಕಿಂಗ್ಸ್‌ ವಿರುದ್ಧ ಇದೇ ಶುಕ್ರವಾರ ಆಡಲಿದೆ. ಟೂರ್ನಿಯ ಮಧ್ಯದಲ್ಲಿ ಆ ಸ್ಟಾರ್‌ ಪ್ಲೇಯರ್‌ ಲಯಕ್ಕೆ ಮರಳಿರುವುದು ನಿಜಕ್ಕೂ ಆರ್‌ಸಿಬಿ ಟೆನ್ಷನ್‌ ದುಪ್ಪಟ್ಟು ಮಾಡಿದೆ.

RCB on Alert as Former Star Yuzvendra Chahal s Fiery Spell for Punjab Raises Spin Threat

ಪಂಜಾಬ್‌ ಆರಂಭ ಉತ್ತಮವಾಗಿ ಇತ್ತು. ಈ ಹಂತದಲ್ಲಿ ಪಂಜಾಬ್‌ ನಾಯಕ ಶ್ರೇಯಸ್ ಅಯ್ಯರ್ ಇನಿಂಗ್ಸ್‌ನ ಎಂಟನೇ ಓವರ್ ಮಾಡಲು ಚೆಂಡನ್ನು ಯುಜುವೇಂದ್ರ ಚಹಾಲ್‌ಗೆ ನೀಡಿದರು. ಇಲ್ಲೇ ಗೇಮ್‌ ಟರ್ನ್ ಆಯಿತು. ಇಷ್ಟು ದಿನ ಲಯಕ್ಕಾಗಿ ಪರದಾಡುತ್ತಿದ್ದ ಚಹಾಲ್‌ ಮಾರಕ ಬೌಲಿಂಗ್ ನಡೆಸಿದರು. ಮೊದಲ ಓವರ್‌ನಲ್ಲೇ ಅಜಿಂಕ್ಯ ರಹಾನೆ ಅವರ ವಿಕೆಟ್‌ ಪಡೆದ ಚಹಾಲ್‌, ಕೆಕೆಆರ್‌ಗೆ ಕಂಠಕವಾಗುವ ಸೂಚನೆ ನೀಡಿದರು. ತಮ್ಮ ಎರಡನೇ ಓವರ್‌ನ ಮೊದಲ ಎಸೆತದಲ್ಲೇ ಅಂಗ್‌ಕ್ರಿಶ್ ರಘುವಂಶಿ ಅವರಿಗೆ ಖೆಡ್ಡಾ ತೋಡಿದ ಚಹಾಲ್ ಕಮಾಲ್ ಮಾಡಿದರು. ಇಲ್ಲಿಂದ ಮುಂದೆ ನಡೆದಿದ್ದು ಎಲ್ಲ ಚಹಾಲ್ ಚಮತ್ಕಾರ.

ಚಹಾಲ್ ಮ್ಯಾಜಿಕ್

ಚಹಾಲ್‌ ನಿಜಕ್ಕೂ ತಮ್ಮ ಆರ್ಭಟ ನಡೆಸಿದರು. ಇನಿಂಗ್ಸ್‌ನ 12ನೇ ಓವರ್‌ನಲ್ಲಿ ರಿಂಕು ಸಿಂಗ್‌ಗೆ ಬಿಗ್‌ ಹಿಟ್‌ ಬಾರಿಸಲು ಆಮಂತ್ರಣ ನೀಡಿ ಸ್ಟಂಪಿಂಗ್ ಮಾಡಿಸಿದರು. ಇಲ್ಲಿಂಗ್‌ ಪಂಜಾಬ್‌ ಗೆಲುವಿನ ಆಸೆ ಚಿಗುರಿತು. ಮುಂದಿನ ಎಸೆತದಲ್ಲಿ ರಮಣದೀಪ್‌ಗೆ ಖೆಡ್ಡಾ ತೋಡಿ ಅಬ್ಬರಿಸಿದರು. ತಮ್ಮ ಕೊನೆಯ ಓವರ್‌ನಲ್ಲಿ ಕೊಂಚ ದುಬಾರಿ ಆದ್ರೂ ಸಹ ಚಹಾಲ್‌ ತಮ್ಮ ನಾಲ್ಕು ಓವರ್‌ಗಳ ಸ್ಪೇಲ್‌ನಲ್ಲಿ 28 ರನ್‌ ನೀಡಿ 4 ವಿಕೆಟ್‌ ಕಬಳಿಸಿದರು.

ಆರ್‌ಸಿಬಿ ತಂಡದ ಮಾಜಿ ಸ್ಪಿನ್ ಬೌಲರ್‌ ಬೌಲಿಂಗ್ ಕಂಡು ಆರ್‌ಸಿಬಿ ಟೆನ್ಷನ್‌ ಶುರುವಾಗಿದೆ. ಇವರನ್ನು ಹೇಗೆ ಎದುರಿಸುವುದು ಎಂಬ ಲೆಕ್ಕಾಚಾರ ಆರಂಭವಾಗಿದೆ. ಈ ಸ್ಪಿನ್‌ ಬೌಲಿಂಗ್‌ಗೆ ಆರ್‌ಸಿಬಿ ಹೇಗೆ ಉತ್ತರ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಪಂಜಾಬ್‌ಗೆ ಗೆಲುವಿನ ಚಾನ್ಸ್‌ ಕಡಿಮೆ ಇದ್ದರೂ, ಇರುವ ಅವಕಾಶವನ್ನು ಎಲ್ಲ ಬಳಸಿಕೊಂಡು ಅಬ್ಬರಿಸಿತು.

Story first published: Wednesday, April 16, 2025, 12:55 [IST]
Other articles published on Apr 16, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+