For Quick Alerts
ALLOW NOTIFICATIONS  
For Daily Alerts
 

RCB ಕೊಳ್ಳಲು ಮ್ಯಾಂಚೆಸ್ಟರ್‌ ಯುನೈಟೆಡ್‌ ಸಹ ಮಾಲೀಕರಿಗೆ ಸೆಡ್ಡು ಹೊಡೆದ ಡೇವಿಡ್ ಬ್ಲಿಟ್ಜರ್ ಯಾರು?

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಆರಂಭಕ್ಕೆ ದಿನಗಣನೆ ಆರಂಭವಾಗಿದೆ. 19ನೇ ಆವೃತ್ತಿಯ ಐಪಿಎಲ್‌ ಆರಂಭಕ್ಕೂ ಮುನ್ನ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ಮಾಲೀಕತ್ವ ಬದಲಾವಣೆ ಆಗುವ ಸಾಧ್ಯತೆ ಇದೆ. ಹಾಲಿ ಚಾಂಪಿಯನ್‌ ಆರ್‌ಸಿಬಿ ತಂಡವನ್ನು ಖರೀದಿಸಲು ದೂರದ ಅಮೆರಿಕ ಮೂಲದ ಕ್ರೀಡಾ ಸಂಸ್ಥೆಗಳು ಮುಂದಾಗಿವೆ. ಈಗ ಈ ಸಾಲಿಗೆ ಹೊಸ ಹೆಸರು ಕೇಳಿ ಬಂದಿದೆ. ಹಾಗಿದ್ದರೆ ಅವರು ಯಾರು? ಎಂಬ ಬಗ್ಗೆ ಕಂಪ್ಲೀಟ್ ವರದಿ ಇಲ್ಲಿದೆ.

ಆರ್‌ಸಿಬಿ ತಂಡವನ್ನು ಖರೀದಿಸಲು ಮ್ಯಾಂಚೆಸ್ಟರ್ ಯುನೈಟೆಡ್ ಸಹ-ಅಧ್ಯಕ್ಷ ಅವ್ರಾಮ್ ಗ್ಲೇಜರ್ ಸಹ ಮನಸ್ಸು ಮಾಡಿದ್ದು ಈಗಾಗಲೇ ಎಲ್ಲರಿಗೂ ತಿಳಿದೇ ಇದೆ. ಈಗ ಈ ಸಾಲಿಗೆ ಕ್ರೀಡಾ ವಲಯದಲ್ಲಿ ತಮ್ಮದೇ ಛಾಪು ಮೂಡಿಸಿರುವ ಡೇವಿಡ್ ಬ್ಲಿಟ್ಜರ್ ಮುಂದಾಗಿದ್ದಾರೆ. ಇವರು ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಬಹುಪಾಲು ಪಾಲನ್ನು ಪಡೆಯುವತ್ತ ಗಮನ ಹರಿಸಿದ್ದಾರೆ. ಡೇವಿಡ್ ಬ್ಲಿಟ್ಜರ್ ಬರೀ ಆರ್‌ಸಿಬಿ ಅಷ್ಟೇ ಅಲ್ಲ ರಾಜಸ್ಥಾನ ರಾಯಲ್ಸ್‌ ತಂಡದ ಮೇಲೂ ಚಿತ್ತ ನೆಟ್ಟಿದ್ದಾರೆ ಎಂದು ಮೂಲಗಳ ತಿಳಿಸಿವೆ.

RCB Ownership Race

18ನೇ ಆವೃತ್ತಿಯ ಐಪಿಎಲ್‌ನಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ಆರ್‌ಸಿಬಿ ಸುಮಾರು 1.8 ಬಿಲಿಯನ್‌ ಡಾಲರ್‌ ಮೌಲ್ಯದ್ದಾಗಿದೆ ಎಂದು ಮೂಲಗಳು ತಿಳಿಸಿವೆ. ಡೇವಿಡ್ ಬ್ಲಿಟ್ಜರ್ ಅರ್‌ಸಿಬಿ ತಂಡವನ್ನು ಹಾಗೂ ರಾಜಸ್ಥಾನ ಬಿಡ್ ಮಾಡುವ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಗಳನ್ನು ನೀಡಿಲ್ಲ. ಐಪಿಎಲ್‌ನಲ್ಲಿ ಹೂಡಿಕೆ ಮಾಡುವ ಮೂಲಕ ಬ್ಲಿಟ್ಜರ್‌ ಅವರ ಕ್ರೀಡಾ ಬಂಡವಾಳ ಮತ್ತಷ್ಟು ವೈವಿಧ್ಯಮಯವಾಲಿದೆ. ಇವರು ಉತ್ತರ ಅಮೆರಿಕಾದ ವೃತ್ತಿಪರ ಕ್ರೀಡಾ ಲೀಗ್‌ಗಳಲ್ಲಿನ ಪಾಲುದಾರಿಕೆಯನ್ನು ಹೊಂದಿದ್ದಾರೆ. ಇವರು ಈಗಾಗಲೇ ಫಿಲಡೆಲ್ಫಿಯಾ 76ers ಮತ್ತು ಎನ್‌ಎಚ್‌ಎಲ್‌ನ ನ್ಯೂಜೆರ್ಸಿ ತಂಡಗಳಲ್ಲಿ ಹೂಡಿಕೆ ಮಾಡಿದ್ದಾರೆ.

ವಿದೇಶಿಗರ ಚಿತ್ತ ಕದ್ದಿರುವ ಆರ್‌ಸಿಬಿ

ಶ್ರೀಮಂತ ಕ್ರಿಕೆಟ್‌ ಲೀಗ್‌ ಎಂದೇ ಖ್ಯಾತಿ ಪಡೆದಿರುವ ಐಪಿಎಲ್‌ ವಿದೇಶಿ ಹೂಡಿಕೆದಾರರನ್ನು ಸೆಳೆಯುತ್ತಿದೆ. ಇದರಿಂದ ಭಾರತೀಯ ಕ್ರಿಕೆಟ್‌ಗೆ ಜಾಗತಿಕ ಮಟ್ಟದ ಮಾರುಕಟ್ಟೆ ಸಿಗುತ್ತದೆ.

ಯುಎಸ್ ಮೂಲದ ಡಿಯಾಜಿಯೊ ಕಂಪನಿಯು ಆರ್‌ಸಿಬಿ ಮಾಲೀಕತ್ವ ಹೊಂದಿದೆ. ಇದೇ ನವೆಂಬರ್‌ನಲ್ಲಿ ಆರ್‌ಸಿಬಿ ತಂಡದ ಮಾತುಕತೆ ಆರಂಭವಾಯಿತು. ಅಲ್ಲದೆ ಆರ್‌ಸಿಬಿ ತಂಡ ಮಾರಾಟದ ಬಗ್ಗೆ ಚರ್ಚೆಗಳು ಆರಂಭವಾದವು. ಆಗಿನಿಂದಲೂ ಈ ತಂಡವನ್ನು ತಮ್ಮ ಸುಪರ್ದಿಗೆ ಪಡೆಯಲು ಹಲವು ಕೋಟ್ಯಾಧಿಪತಿಗಳು ಕಣ್ಣು ನೆಟ್ಟಿದ್ದಾರೆ.

ಇನ್ನು ಆರ್‌ಸಿಬಿ ತಂಡದಲ್ಲಿ ಪಾಲು ಪಡೆಯಲು ಮಣಿಪಾಲ್ ಶಿಕ್ಷಣ ಸಂಸ್ಥೆ ಹಾಗೂ ಆಸ್ಪತ್ರೆಗಳ ಸಮೂಹದ ಅಧ್ಯಕ್ಷ ರಂಜನ್ ಪೈ ಕೂಡ ಮನಸ್ಸು ಮಾಡಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಐಪಿಎಲ್‌ನ ಯಾವುದೇ ಒಪ್ಪಂದ ನಡೆಯಬೇಕಿದ್ದರೂ ಸಹ ಬಿಸಿಸಿಐ ಒಪ್ಪಿಗೆ ಅನಿವಾರ್ಯವಾಗಿದೆ.

ಆರ್‌ಸಿಬಿ 17 ಆವೃತ್ತಿಯ ಐಪಿಎಲ್‌ನಲ್ಲಿ ಪ್ರಶಸ್ತಿ ಬರವನ್ನು ಅನುಭವಿಸಿತ್ತು. ಆದರೆ 2025ರಲ್ಲಿ ಪ್ರಶಸ್ತಿ ಗೆದ್ದು ತನ್ನ ಬ್ರ್ಯಾಂಡ್‌ ವ್ಯಾಲ್ಯೂವನ್ನು ಹೆಚ್ಚಿಸಿಕೊಂಡಿದೆ. ಈ ತಂಡಕ್ಕೆ ದೇಶ ವಿದೇಶಗಳಲ್ಲೂ ಅಭಿಮಾನಿಗಳು ಇದ್ದಾರೆ. ಈ ತಂಡ ಚುಕ್ಕಾಣಿ ಯಾರು ಹಿಡಿಯುತ್ತಾರೆ ಎಂಬುದೇ ಕುತೂಹಲ ಮೂಡಿಸಿದೆ.

Story first published: Thursday, February 26, 2026, 14:03 [IST]
Other articles published on Feb 26, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+