Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸದ್ದಿಲ್ಲದೇ ಗುಟ್ಟಾಗಿ ನಡೆಯಿತು ಆರ್‌ಸಿಬಿ ವೇಗಿ ಯಶ್‌ ದಯಾಳ್‌ ಮದುವೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ವೇಗದ ಬೌಲರ್‌ ಯಶ್‌ ದಯಾಳ್ ಗುಟ್ಟಾಗಿ ಮದುವೆ ಆಗಿದ್ದು ತಡವಾಗಿ ಬೆಳಕಿಗೆ ಬಂದಿದೆ. ಇವರ ಮೇಲೆ ಕೆಲ ತಿಂಗಳುಗಳ ಹಿಂದೆ ಯುವತಿಯೊಬ್ಬಳು ಲೈಂಗಿಕ ಕಿರುಕುಳದ ಗಂಭೀರ ಆರೋಪ ಹೇರಿದ್ದರು. ಹೀಗಾಗಿ ಇವರು ಸ್ವಲ್ಪ ಸಮಯದಿಂದ ಕ್ರಿಕೆಟ್‌ ಅಂಗಳದಿಂದ ದೂರ ಉಳಿಯುವಂತೆ ಮಾಡಿತು. ಹೀಗಾಗಿ ಯಶ್ ದಯಾಳ್ ಅವರು ಯುಪಿ ಟಿ20 ಲೀಗ್‌ನಲ್ಲೂ ಕಣಕ್ಕೆ ಇಳಿಯಲು ಆಗಿರಲಿಲ್ಲ. ಯಶ್‌ ದಯಾಳ್ ಅವರು ಮುಂಬರುವ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡುತ್ತಾರೋ ಇಲ್ಲವೋ ಎಂಬ ಬಗ್ಗೆ ಇನ್ನು ಸ್ಪಷ್ಟತೆ ಇಲ್ಲ. ಈ ವೇಳೆಗೆ ಅವರು ವಿವಾಹವಾದ ಸುದ್ದಿ ಎಲ್ಲರನ್ನು ಅಚ್ಚರಿಗೊಳಿಸಿತು.

ವಿವಾಹ ಫೆಬ್ರವರಿ 4 ರಂದು ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಆರ್‌ಸಿಬಿ ವೇಗಿ ಮದುವೆಯಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್‌ ವರದಿ ಮಾಡಿದೆ. ಇವರ ವಿವಾಹವು ಸರಳವಾಗಿ ನಡೆಯಿತು. ಹೀಗಾಗಿ ಇವರ ಮದುವೆ ಒಂದು ತಿಂಗಳಿಗಿಂತ ಹೆಚ್ಚು ಸಮಯದ ನಂತರ ಬೆಳಕಿಗೆ ಬಂದಿದೆ.

RCB

ಯಶ್‌ ದಯಾಳ್ ಅವರ ಮದವೆ ರಹಸ್ಯವಾಗಿ ಆಗಿದೆ. ಈ ಮದುವೆಗೆ ಕುಟುಂಬಸ್ಥರನ್ನು ಹೊರತು ಪಡಿಸಿ ಬೇರೆ ಯಾರನ್ನು ಆಹ್ವಾನಿಸಲಾಗಿಲ್ಲ ಎಂದು ತಿಳಿದು ಬಂದಿದೆ. ಹೀಗಾಗಿ ಈ ಮದುವೆ ವಿಷಯ ತಡವಾಗಿ ಬೆಳಕಿಗೆ ಬಂದಿದೆ.

ಯಶ್ ದಯಾಳ್ ಪತ್ನಿ ಯಾರು?

ಆರ್‌ಸಿಬಿ ವೇಗದ ಬೌಲರ್‌ ಯಶ್‌ ದಯಾಳ್ ಅವರ ಜೊತೆಗೆ ಸಪ್ತ ಪದಿ ತುಳಿದ ಯುವತಿ ಯಾರು ಎಂಬ ಪ್ರಶ್ನೆಗಳು ಉದ್ಭವಿಸಿವೆ. ಯಶ್‌ ದಯಾಳ್‌ ಅವರನ್ನು ಮದುವೆ ಆದ ಯುವತಿ ಶ್ವೇತಾ ಪುಂಡೀರ್. ಇವರು ಕಂಟೆಟ್‌ ಕ್ರಿಯೇಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶ್ವೇತಾ ಪುಂಡೀರ್ ಅವರು ಯಶ್‌ ದಯಾಳ್‌ ಅವರ ಜೊತೆಗಿನ ರೀಲ್‌ನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದರು. ಶ್ವೇತಾ ತಮ್ಮ ಯೂಟ್ಯೂಬ್ ಮತ್ತು ಫೇಸ್‌ಬುಕ್ ಚಾನೆಲ್‌ಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಯೂಟ್ಯೂಬ್‌ನಲ್ಲಿ, ಅವರು ಆಗಾಗ್ಗೆ ಜೀವನಶೈಲಿ ಮತ್ತು ವ್ಲಾಗಿಂಗ್ ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ.

ಯಶ್ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪವನ್ನೂ ಎದುರಿಸುತ್ತಿದ್ದಾರೆ. ಈ ವಿಷಯದಲ್ಲಿ ಸಂಗನೇರ್ ಸದರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಮದುವೆಯ ಸುಳ್ಳು ಭರವಸೆಯಡಿಯಲ್ಲಿ ತನ್ನನ್ನು ಶೋಷಿಸಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದರು., ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜನವರಿ 2026 ರಲ್ಲಿ, ರಾಜಸ್ಥಾನ ಹೈಕೋರ್ಟ್ ಅವರಿಗೆ ನಿರೀಕ್ಷಣಾ ಜಾಮೀನು ನೀಡಿತ್ತು.

ಯಶ್‌ ದಯಾಳ್ ಸಾಧನೆ

28 ವರ್ಷದ ಎಡಗೈ ವೇಗದ ಬೌಲರ್ ಯಶ್‌ ದಯಾಳ್‌ ಐಪಿಎಲ್‌ನಲ್ಲಿ ಈ ವರೆಗೆ ಆರ್‌ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ತಂಡದ ಪರ ಆಡಿದ್ದಾರೆ. ಇವರು ಐಪಿಎಲ್‌ನಲ್ಲಿ 43 ಪಂದ್ಯಗಳಲ್ಲಿ ಕಣಕ್ಕೆ ಇಳಿದಿದ್ದು, 41 ವಿಕೆಟ್‌ ಕಬಳಿಸಿದ್ದಾರೆ. ಕಳೆದ ಬಾರಿ ಆರ್‌ಸಿಬಿ ಐಪಿಎಲ್‌ ಪಟ್ಟವನ್ನು ಅಲಂಕರಿಸುವಲ್ಲಿ ಇವರು ಮಹತ್ವದ ಕಾಣಿಕೆ ನೀಡಿದ್ದರು.

Story first published: Sunday, March 15, 2026, 19:33 [IST]
Other articles published on Mar 15, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+