Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2026 Auction: ದೀಪ್ತಿ ಶರ್ಮಾಗೆ ಗಾಳ ಹಾಕಲು ಆರ್‌ಸಿಬಿ ಪ್ಲ್ಯಾನ್

ಮಹಿಳಾ ಪ್ರೀಮಿಯರ್ ಲೀಗ್‌ನ ತಯಾರಿಗಳು ಭರದಿಂದ ಸಾಗಿವೆ. ನವೆಂಬರ್‌ 5 ರಂದು ಎಲ್ಲ ತಂಡಗಳು ಬಿಸಿಸಿಐಗೆ ತಾವು ಉಳಿಸಿಕೊಂಡ ಆಟಗಾರರು ಹಾಗೂ ಹರಾಜಿನ ಅಂಗಳಕ್ಕೆ ಇಳಿಸಿದ ಆಟಗಾರರ ಪಟ್ಟಿಯನ್ನು ನೀಡಿದೆ. ಇದೇ ವೇಳೆ ಫ್ರಾಂಚೈಸಿಗಳು ಅಳೆದು ತೂಗಿ ಆಟಗಾರರಿಗೆ ಮಣೆ ಹಾಕಿದ್ದಾರೆ. ಆದರೆ ಯುಪಿ ಅಪ್ ವಾರಿಯರ್ಜ್ ಫ್ರಾಂಚೈಸಿ ಸ್ಟಾರ್ ಆಟಗಾರರನ್ನು ಕೈ ಬಿಟ್ಟಿದೆ. ಹೀಗಾಗಿ ಈ ಪ್ಲೇಯರ್‌ಗಳ ಮೇಲೆ ಉಳಿದ ಫ್ರಾಂಚೈಸಿಗಳ ಕಣ್ಣು ನೆಟ್ಟಿವೆ.

ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಸಹ ಇದೆ. ಈ ತಂಡ ಈ ಹಿಂದೆ ಒಮ್ಮೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಈ ಬಾರಿ ಎರಡನೇ ಬಾರಿ ಟ್ರೋಫಿಗೆ ಮುತ್ತಿಡುವ ಬಯಕೆಯನ್ನು ತಂಡ ಹೊಂದಿದೆ. ಹೀಗಾಗಿ ಆರ್‌ಸಿಬಿ ಬಲಿಷ್ಠ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ರೂಪು ರೇಷೆಗಳನ್ನು ಮಾಡಿಕೊಂಡಿದೆ. ಇದೇ ವೇಳೆ ಹರಾಜು ಅಂಗಳ ಪ್ರವೇಶಿಸಲಿರುವ ಸ್ಟಾರ್ ಆಟಗಾರ್ತಿಯರಿಗೆ ಆರ್‌ಸಿಬಿ ಸಹ ಬಾಜಿ ಕಟ್ಟಲಿದೆ. ಯುಪಿ ಅಪ್ ವಾರಿಯರ್ಜ್ ಕೈ ಬಿಟ್ಟಿರುವ ಸ್ಟಾರ್ ಆಟಗಾರ್ತಿಯನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಆರ್‌ಸಿಬಿ ಬಿಗ್ ಪ್ಲ್ಯಾನ್ ಮಾಡುತ್ತಿದೆ.

RCB Plans Big Bid for Deepti Sharma After UP Warriorz Release Her Ahead of WPL Auction

ಯುಪಿ ವಾರಿಯರ್ಸ್‌ ಕೈ ಬಿಟ್ಟ ಆಟಗಾರ್ತಿಯರಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವ ಹೆಸರು ದೀಪ್ತಿ ಶರ್ಮಾ. ಇತ್ತೀಚಿಗೆ ಭಾರತದಲ್ಲಿ ಮುಕ್ತಾಯವಾದ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಇವರು ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಪ್ರಶಸ್ತಿ ಪಡೆದ ಮೂರೇ ದಿನಗಳ ಅಂತರದಲ್ಲಿ ಯುಪಿ ಅಪ್ ವಾರಿಯರ್ಜ್ ಇವರನ್ನು ಕೈ ಬಿಟ್ಟಿದೆ. ಹೀಗಾಗಿ ಇವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಹಲವು ತಂಡಗಳು ಬಾಜಿ ಕಟ್ಟಲಿವೆ. ಈ ಪಟ್ಟಿಯಲ್ಲಿ ಆರ್‌ಸಿಬಿಗೂ ಸ್ಥಾನ.

ಆರ್‌ಸಿಬಿ ತನ್ನ ಮಿಡ್ಲ್ ಆರ್ಡರ್ ಹಾಗೂ ಸ್ಪಿನ್ ವಿಭಾಗವನ್ನು ಬಲ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಡಬ್ಲ್ಯೂಪಿಎಲ್‌ ಮೆಗಾ ಹರಾಜಿನಲ್ಲಿ ಆಟಗಾರ್ತಿಯರಿಗೆ ಮಣೆ ಹಾಕಲಿದೆ. ದೀಪ್ತಿ ಶರ್ಮಾ ಸಹ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗಬಲ್ಲ ಪ್ಲೇಯರ್. ಹೀಗಾಗಿ ಇವರನ್ನು ತಂಡಕ್ಕೆ ಸೇರಿಸಿಕೊಂಡು ತಂಡದ ಬಲವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಆರ್‌ಸಿಬಿ ಪ್ಲ್ಯಾನ್ ಮಾಡಿಕೊಳ್ಳುತ್ತಿದೆ. ಅಲ್ಲದೆ ಈ ಆಟಗಾರ್ತಿಯರ ಅನುಭವ ಸಹ ತಂಡಕ್ಕೆ ಪ್ಲಸ್ ಆಗಲಿದೆ.

ದೀಪ್ತಿ ಸಾಧನೆ

ದೀಪ್ತಿ ಶರ್ಮಾ ಈಗಾಗಲೇ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಮಿಂಚಿರುವ ಪ್ರತಿಭೆ. ಇವರು ಡಬ್ಲ್ಯೂಪಿಎಲ್‌ನಲ್ಲಿ ಆಡಿದ 25 ಪಂದ್ಯಗಳಲ್ಲಿ 28ರ ಸರಾಸರಿಯಲ್ಲಿ 507 ರನ್‌ ಸಿಡಿಸಿದ್ದಾರೆ. ಈ ವೇಳೆ 3 ಅರ್ಧಶತಕ ಸಹ ಸೇರಿವೆ. ಇವರು ಮಧ್ಯಮ ಕ್ರಮಾಂಕಕ್ಕೆ ಬಲ ತುಂಬ ಬಲ್ಲ ಆಟಗಾರ್ತಿ. ಇನ್ನು ಬೌಲಿಂಗ್‌ನಲ್ಲಿ 8.30ಯ ಎಕಾನಮಿಯಲ್ಲಿ 27 ವಿಕೆಟ್‌ ಕಬಳಿಸಿದ್ದಾರೆ. ಇನ್ನು ಅಂತಾರಾಷ್ಟ್ರೀಯ ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ಇವರು ಆಡಿದ 129 ಪಂದ್ಯಗಳಲ್ಲಿ 1100 ರನ್‌ ಸಿಡಿಸಿದ್ದು, 147 ವಿಕೆಟ್‌ ಪಡೆದಿದ್ದಾರೆ. ಹೀಗಾಗಿ ಇವರ ಮೇಲೆ ಫ್ರಾಂಚೈಸಿಗಳು ಹಣದ ಹೊಳೆ ಹರಿಸಲು ಸಜ್ಜಾಗಿದ್ದಾರೆ.

Story first published: Sunday, November 9, 2025, 12:05 [IST]
Other articles published on Nov 9, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+