For Quick Alerts
ALLOW NOTIFICATIONS  
For Daily Alerts
 

ಸೂಪರ್ ಸ್ಮ್ಯಾಷ್‌ನಲ್ಲಿ 37 ಎಸೆತಗಳಲ್ಲಿ 78 ರನ್ ಚಚ್ಚಿದ ಆರ್‌ಸಿಬಿ ಆಟಗಾರ

RCB Player Finn Allen Smashes 78 Runs In 37 Deliveries In Super Smash 2023

ನ್ಯೂಜಿಲೆಂಡ್‌ನಲ್ಲಿ ನಡೆಯುತ್ತಿರುವ ಸೂಪರ್ ಸ್ಮ್ಯಾಷ್‌ನಲ್ಲಿ ಆರ್‌ಸಿಬಿ ಆಟಗಾರ ಫಿನ್ ಅಲೆನ್ ಅಬ್ಬರಿಸಿದ್ದಾರೆ. ಕೇವಲ 37 ಎಸೆತಗಳಲ್ಲಿ 78 ರನ್ ಗಳಿಸಿ ವೆಲ್ಲಿಂಗ್ಟನ್ ತಂಡ ಸುಲಭದ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಸೂಪರ್ ಸ್ಮ್ಯಾಷ್‌ನಲ್ಲಿ ಫಿನ್ ಅಲೆನ್ ಆರ್‌ಸಿಬಿ ಪರವಾಗಿ ಆಡುತ್ತಿದ್ದಾರೆ. ಜನವರಿ 1 ರಂದು, ನಡೆದ ವೆಲ್ಲಿಂಗ್ಟನ್ ಮತ್ತು ಕ್ಯಾಂಟರ್ಬರಿ ನಡುವೆ ನಡೆದ ಪಂದ್ಯದಲ್ಲಿ ಅಲೆನ್ ಈ ಸ್ಫೋಟಕ ಇನ್ನಿಂಗ್ಸ್ ಆಡಿದರು.

ಮೊದಲು ಬ್ಯಾಟ್ ಮಾಡಿದ ಕ್ಯಾಂಟರ್ಬರಿ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 132 ರನ್ ಗಳಿಸಿತು. ಈ ಮೊತ್ತವನ್ನು ಬೆನ್ನತ್ತಿದ ವೆಲ್ಲಿಂಗ್ಟನ್ ಫಿನ್ ಅಲೆನ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕೇವಲ 11.5 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 133 ರನ್ ಗಳಿಸಿ, 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.

ಆರಂಭಿಕನಾಗಿ ಕಣಕ್ಕಿಳಿದ ಫಿನ್ ಅಲೆನ್ 37 ಎಸೆತಗಳಲ್ಲಿ 78 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಮತ್ತು 3 ಭರ್ಜರಿ ಸಿಕ್ಸರ್ ಸೇರಿದ್ದವು.

RCB Player Finn Allen Smashes 78 Runs In 37 Deliveries In Super Smash 2023

ಆರ್‌ಸಿಬಿ ತಂಡದಲ್ಲಿರುವ ಫಿನ್ ಅಲೆನ್

ಫಿನ್ ಅಲೆನ್ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದಾರೆ. 2022ರ ಐಪಿಎಲ್ ಹರಾಜಿನಲ್ಲಿ ಆರ್‌ಸಿಬಿ ಅವರನ್ನು 80 ಲಕ್ಷ ರೂಪಾಯಿ ನೀಡಿ ಖರೀದಿ ಮಾಡಿದೆ. ಕಳೆದ ಆವೃತ್ತಿಯಲ್ಲಿ ಸ್ಥಾನ ಪಡೆದರು ಕೂಡ ಅವರು ಒಂದು ಪಂದ್ಯದಲ್ಲಿ ಕೂಡ ಆಡುವ ಅವಕಾಶ ಪಡೆಯಲಿಲ್ಲ. ಅವರಿಗೆ ಅವಕಾಶ ನೀಡದ್ದಕ್ಕೆ ಅಭಿಮಾನಿಗಳು ಟೀಕೆ ಮಾಡಿದ್ದರು.

ಟಿ20 ವಿಶ್ವಕಪ್‌ನಲ್ಲಿ ಕೂಡ ಫಿನ್ ಅಲೆನ್ ಆಸ್ಟ್ರೇಲಿಯಾ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಮಾಡಿದ್ದರು. ಕೇವಲ 16 ಎಸೆತಗಳಲ್ಲಿ 42 ರನ್ ಗಳಿಸಿದ್ದರು. ಫಿನ್ ಅಲೆನ್ ಸ್ಫೋಟಕ ಬ್ಯಾಟರ್ ಆದರು, ಅವರು ಪ್ರದರ್ಶನದಲ್ಲಿ ಸ್ಥಿರತೆ ಹೊಂದಿಲ್ಲದಿರುವುದು ದೊಡ್ಡ ಕೊರತೆಯಾಗಿದೆ.

2023ರ ಐಪಿಎಲ್‌ನಲ್ಲಿ ಫಿನ್ ಅಲೆನ್ ಸ್ಥಾನ ಪಡೆಯುವ ಅವಕಾಶ ಇದೆ. ಫಾಫ್ ಡುಪ್ಲೆಸಿಸ್ ಜೊತೆ ಅವರು ಇನ್ನಿಂಗ್ಸ್ ಆರಂಭಿಸಿದರೆ ಸ್ಫೋಟಕ ಆರಂಭ ಪಡೆಯಬಹುದು ಎಂದು ಅಭಿಮಾನಿಗಳು, ಮಾಜಿ ಕ್ರಿಕೆಟಿಗರು ಅಭಿಪ್ರಾಯಪಟ್ಟಿದ್ದಾರೆ.

ಸೂಪರ್ ಸ್ಮ್ಯಾಶ್‌ನಲ್ಲಿ ಫಿನ್ ಅಲೆನ್ ನೀಡುತ್ತಿರುವ ಪ್ರದರ್ಶನವನ್ನು ಆರ್ ಸಿಬಿ ಕೂಡ ಗಮನಿಸುತ್ತಿದೆ. ಮುಂದಿನ ದಿನಗಳಲ್ಲಿ ಫಿನ್ ಅಲೆನ್ ಆರ್ ಸಿಬಿ ತಂಡದ ಪ್ರಮುಖ ಆಟಗಾರನಾಗುವ ಸಾಧ್ಯತೆ ಇದೆ.

Story first published: Monday, January 2, 2023, 19:07 [IST]
Other articles published on Jan 2, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+