ಟಿ20 ವಿಶ್ವಕಪ್‌ಗೆ ಮುನ್ನ ಫಾರ್ಮ್‌ಗೆ ಮರಳಿದ ಆರ್‌ಸಿಬಿ ಪ್ಲೇಯರ್; ಟೀಮ್ ಇಂಡಿಯಾಗೆ ಬಂತು ಬಲ
ಜೂನ್ 2ರಿಂದ ಯುಎಸ್ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ಆರಂಭವಾಗಲಿರುವ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಗೆ ಇನ್ನು 3 ವಾರಗಳು ಮಾತ್ರ ಬಾಕಿ ಉಳಿದಿವೆ. ಇದೀಗ ಭಾರತೀಯ ಕ್ರಿಕೆಟ್ ತಂಡಕ್ಕೆ ಸದ್ಯದ ಪರಿಸ್ಥಿತಿಗಳು ಒತ್ತಡಕ್ಕೆ ಸಿಲುಕಿಸಲು ಪ್ರಾರಂಭಿಸಿವೆ.
ಐಸಿಸಿ ಪಂದ್ಯಾವಳಿಗೆ ಮುನ್ನ ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾದ ಪ್ರಮುಖ ಸಮಸ್ಯೆಯೆಂದರೆ ದುರ್ಬಲ ವೇಗದ ಬೌಲಿಂಗ್ ಶಕ್ತಿ. ಭಾರತ ತಂಡಕ್ಕೆ ಆಯ್ಕೆ ಬೌಲರ್‌ಗಳ ಪೈಕಿ ಜಸ್ಪ್ರೀತ್ ಬುಮ್ರಾ ಮಾತ್ರ ಉತ್ತಮ ಲಯದಲ್ಲಿ ಕಂಡುಬಂದಿದ್ದಾರೆ.
ಆದರೆ, ಇದೀಗ ಐಪಿಎಲ್ 2024ರ ದ್ವಿತೀಯಾರ್ಧದಲ್ಲಿ ಆರ್‌ಸಿಬಿ ವೇಗಿ ಮೊಹಮ್ಮದ್ ಸಿರಾಜ್ ಕೆಲವು ಉತ್ತಮ ಪ್ರದರ್ಶನ ನೀಡುವುದನ್ನು ಮುಂದುವರೆಸಿದ್ದು, ಇದು ಭಾರತ ತಂಡಕ್ಕೆ ದೊಡ್ಡ ಉತ್ತೇಜನವಾಗಿದೆ.

ಟಿ20 ವಿಶ್ವಕಪ್‌ಗೆ ಮುನ್ನ ಭಾರತ ತಂಡ ಅತಂತ್ರ ಸ್ಥಿತಿಯಲ್ಲಿತ್ತು. ಮೊಹಮ್ಮದ್ ಶಮಿ ಅನುಪಸ್ಥಿತಿಯಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ ಬೌಲಿಂಗ್ ನೇತೃತ್ವ ವಹಿಸಿದ್ದರು.
ಮೊಹಮ್ಮದ್ ಸಿರಾಜ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಪರ ಭಯಾನಕವಾಗಿ ಐಪಿಎಲ್ 2024ರ ಪಂದ್ಯಾವಳಿಯನ್ನು ಪ್ರಾರಂಭಿಸಿದ್ದರಿಂದ, ಟಿ20 ವಿಶ್ವಕಪ್‌ಗೆ ಆಯ್ಕೆಯ ಬಗ್ಗೆ ಅನುಮಾನಗಳಿದ್ದವು.
ಟಿ20 ವಿಶ್ವಕಪ್‌ಗೆ ಮುನ್ನ ಫಾರ್ಮ್ ಕಂಡುಕೊಂಡ ಸಿರಾಜ್
ಐಪಿಎಲ್ 2024ರ ಕಳಪೆ ಆರಂಭದ ಹೊರತಾಗಿಯೂ ಅಂತಿಮವಾಗಿ, ಮೊಹಮ್ಮದ್ ಸಿರಾಜ್ ಟಿ20 ವಿಶ್ವಕಪ್‌ಗಾಗಿ ಭಾರತ ತಂಡದಲ್ಲಿ ಜಸ್ಪ್ರೀತ್ ಬುಮ್ರ ಮತ್ತು ಅರ್ಶ್‌ದೀಪ್ ಸಿಂಗ್ ಜೊತೆಗೆ ಸ್ಥಾನ ಪಡೆದರು.
ಆದರೆ ಐಪಿಎಲ್ 2024ರ ಪಂದ್ಯಾವಳಿ ಮುಂದುವರೆದಂತೆ ಮೊಹಮ್ಮದ್ ಸಿರಾಜ್ ತಮ್ಮ ಲಯ ಕಂಡುಕೊಳ್ಳಲು ಮುಂದಾಗಿದ್ದಾರೆ. ಐಪಿಎಲ್ ಪ್ಲೇಆಫ್‌ಗಳ ಭರವಸೆಯನ್ನು ಜೀವಂತವಾಗಿರಿಸಲು ಆರ್‌ಸಿಬಿ ತಂಡ ಸಹ ಸತತ 5 ಗೆಲುವುಗಳನ್ನು ದಾಖಲಿಸಿ ಪುಟಿದೆದ್ದಿದೆ.

ಆರ್‌ಸಿಬಿ ಪ್ಲೇಆಫ್‌ಗೆ ತಲುಪುವ ಸನ್ನಿವೇಶವು ವಿಭಿನ್ನವಾಗಿದೆ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ, ಬಲಗೈ ವೇಗಿ ಮೊಹಮ್ಮದ್ ಸಿರಾಜ್ ಇದೀಗ ಭರ್ಜರಿ ಫಾರ್ಮ್‌ಗೆ ಮರಳಿರುವುದರಿಂದ ಭಾರತ ತಂಡಕ್ಕೆ ಅತ್ಯಂತ ಒಳ್ಳೆಯ ಹಾಗೂ ಖುಷಿಯ ಸುದ್ದಿಯಾಗಿದೆ.
ಮುಂಬೈ ಇಂಡಿಯನ್ಸ್ ಪರ ಜಸ್ಪ್ರೀತ್ ಬುಮ್ರಾ 13 ಪಂದ್ಯಗಳಲ್ಲಿ 20 ವಿಕೆಟ್ ಪಡೆದು ಅತ್ಯುತ್ತಮ ಬೌಲರ್ ಆಗಿದ್ದಾರೆ. ಪಂಜಾಬ್ ಕಿಂಗ್ಸ್‌ನ ಅರ್ಶ್‌ದೀಪ್ ಸಿಂಗ್ 12 ಪಂದ್ಯಗಳಿಂದ 16 ವಿಕೆಟ್ ಪಡೆದಿದ್ದಾರೆ. ಮತ್ತೊಂದೆಡೆ, ತಡವಾಗಿ ಪುನರಾಗಮನ ಮಾಡಿರು ಮೊಹಮ್ಮದ್ ಸಿರಾಜ್ 12 ಪಂದ್ಯಗಳಿಂದ 12 ವಿಕೆಟ್ ಕಬಳಿಸಿದ್ದಾರೆ.
ಮುಂಬರುವ 2024ರ ಟಿ20 ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಲು ಭಾರತ ತಂಡವು ಈ ಮೂವರು ವೇಗಿಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications