Will Jacks: ಐಪಿಎಲ್‌ನಲ್ಲಿ ಈ ದಾಖಲೆ ಬರೆದ ಐದನೇ ಆಟಗಾರ ವಿಲ್ ಜ್ಯಾಕ್ಸ್
2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 45ನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 9 ವಿಕೆಟ್‌ಗಳಿಂದ ಗೆದ್ದು ಬೀಗಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಹೈವೋಲ್ಟೇಜ್ ಪಂದ್ಯದಲ್ಲಿ ಆರ್‌ಸಿಬಿ ಬ್ಯಾಟರ್ಸ್ ಅಬ್ಬರಿಸಿದರು. ಬೌಂಡರಿ, ಸಿಕ್ಸರ್ ಮಳೆ ಸುರಿಸಿದ ವಿಲ್ ಜ್ಯಾಕ್ ಮತ್ತು ವಿರಾಟ್ ಕೊಹ್ಲಿ ಕೇವಲ 16 ಓವರ್‌ಗಳಲ್ಲಿ ಗುಜರಾತ್ ವಿರುದ್ಧ ಆರ್‌ಸಿಬಿ ಗೆಲ್ಲಲು ಪ್ರಮುಖ ಪಾತ್ರ ವಹಿಸಿದರು.

ಕಳೆದ ಐಪಿಎಲ್ ಆವೃತ್ತಿಯಿಂದ ಕೇವಲ ಬೆಂಚ್‌ಗಷ್ಟೆ ಸೀಮಿತವಾಗಿದ್ದ ವಿಲ್ ಜ್ಯಾಕ್ಸ್ ಅವರಿಗೆ ಈ ಬಾರಿ ಆರ್‌ಸಿಬಿ ಫ್ರಾಂಚೈಸಿ ಆಡಲು ಅವಕಾಶ ನೀಡಿತ್ತು. ಈ ಅವಕಾಶವನ್ನು ಎರಡು ಕೈ ಯಿಂದ ಬಾಚಿಕೊಂಡ ವಿಲ್ ಜ್ಯಾಕ್ಸ್ ಕಳೆದ ಐದು ಪಂದ್ಯಗಳಿಂದ ಆರ್‌ಸಿಬಿ ಫ್ರಾಂಚೈಸಿ ಇಟ್ಟ ನಂಬಿಕೆ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಇದೆ ನಂಬಿಕೆ ಇಟ್ಟುಕೊಂಡು ಗುಜರಾತ್ ವಿರುದ್ಧ ಕಣಕ್ಕೀಳಿದ ವಿಲ್ ಜ್ಯಾಕ್ಸ್ ತನ್ನ ಉಗ್ರ ಸ್ವರೂಪ ತಾಳೀದರು. ವಿಲ್ ಜ್ಯಾಕ್ಸ್ (100*) ಎದುರಿಸಿದ ಕೇವಲ 41 ಎಸೆತಗಳಲ್ಲಿ 10 ಭರ್ಜರಿ ಸಿಕ್ಸರ್ ಮತ್ತು 5 ಬೌಂಡರಿಗಳ ನೆರವಿನಿಂದ ಐಪಿಎಲ್ ನಲ್ಲಿ ತಮ್ಮ ಚೊಚ್ಚಲ ಶತಕ ಸಿಡಿಸಿ ಮಿಂಚಿದರು.
ಶತಕದ ಜೊತೆಗೆ ಸಂಭ್ರಮಿಸಿದ ವಿಲ್ ಜ್ಯಾಕ್ಸ್ ಮತ್ತೊಂದು ದಾಖಲೆ ಬರೆದರು. ಐಪಿಎಲ್‌ನಲ್ಲಿ ಈವರೆಗೆ ಅತಿ ವೇಗವಾಗಿ ಶತಕ ಹೊಡೆದವರ ಪೈಕಿ ವಿಲ್ ಜ್ಯಾಕ್ಸ್ 5ನೇ ಆಟಗಾರನಾಗಿ ದಾಖಲೆಯ ಪುಟ ಸೇರಿದರು. ಜ್ಯಾಕ್ಸ್ ಅಬ್ಬರ ನೋಡಿದ ಆರ್‌ಸಿಬಿ ಅಭಿಮಾನಿಗಳು ಸಂತಸಕೊಂಡಿದ್ದಾರೆ.

ಅತಿ ವೇಗದ ಶತಕ ಬಾರಿಸಿದ ಆಟಗಾರರು :
ಐಪಿಎಲ್ ಇತಿಹಾಸದಲ್ಲಿ ಆರ್‌ಸಿಬಿ ಮಾಜಿ ಆಟಗಾರ ಕ್ರಿಸ್ ಗೇಲ್ ಕೇವಲ 30 ಎಸೆತಗಳಲ್ಲಿ ಅತಿ ವೇಗವಾಗಿ ಪುಣೆ ವಾರಿಯರ್ಸ್ ಇಂಡಿಯಾ ತಂಡದ ವಿರುದ್ಧ 2013ರಲ್ಲಿ ದಾಖಲೆಯ ಶತಕ ಹೊಂದಿದ್ದಾರೆ. ಇಲ್ಲಿಯವರೆಗೂ ಈ ದಾಖಲೆಯನ್ನು ಮುರಿಯಲು ಯಾವುದೇ ಬ್ಯಾಟರ್‌ನಿಂದ ಸಾಧ್ಯವಾಗಿಲ್ಲ. ಇದಕ್ಕೂ ಮುನ್ನ 2010 ರಲ್ಲಿ ಯೂಸುಫ್ ಪಠಾಣ್ ಕೇವಲ 37 ಎಸತೆಗಳಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಶತಕ ಹೊಂದಿದ್ದಾರೆ.
ಬಳಿಕ ಡೇವಿಡ್ ಮಿಲ್ಲರ್ 2013ರಲ್ಲಿ ಆರ್‌ಸಿಬಿ ವಿರುದ್ಧ ಪಂದ್ಯದಲ್ಲಿ ಕೇವಲ 38 ಎಸೆತಗಳಲ್ಲಿ ಅತಿ ವೇಗವಾಗಿ ಶತಕ ಸಿಡಿಸಿ ಮೂರನೇ ಆಟಗಾರನಾಗಿದ್ದಾರೆ. ಇನ್ನು ಪ್ರಸ್ತುತ ಐಪಿಎಲ್‌ನಲ್ಲಿ ಟ್ರಾವಿಸ್ ಹೆಡ್ ಆರ್‌ಸಿಬಿ ಎದುರು 39 ಎಸೆತಗಳಲ್ಲಿ ಶತಕ ನಿರ್ಮಿಸಿ ನಾಲ್ಕನೇ ಆಟಗಾರ ಎಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಇದೀಗ ಈ ಸಾಲಿಗೆ ಆರ್‌ಸಿಬಿ ಬ್ಯಾಟರ್ ವಿಲ್ ಜ್ಯಾಕ್ 41 ಎಸೆತಗಳಲ್ಲಿ ಗುಜರಾತ್ ಟೈಟನ್ಸ್ ಎದುರು ಅಬ್ಬರ ಶತಕ ಸಿಡಿಸಿ ಸಾಧನೆ ಗೈದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications