Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2024: ಸೋತು ಸುಣ್ಣವಾದರೂ ಪಾರ್ಟಿ ಮಾಡಿದ ಆರ್‌ಸಿಬಿ ಪ್ಲೇಯರ್ಸ್; ಕೊಹ್ಲಿ ವಿರುದ್ಧ ರೊಚ್ಚಿಗೆದ್ದ ಫ್ಯಾನ್ಸ್

2024ರ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಇಲ್ಲಿಯವರೆಗೆ ಅತ್ಯಂತ ಭಯಾನಕ ಅಭಿಯಾನ ಹೊಂದಿದ್ದು, ಕೇವಲ ಒಂದು ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಉದ್ಘಾಟನಾ ಪಂದ್ಯದಿಂದಲೇ ಶುರುವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಸೋಲಿನ ಸರಮಾಲೆ ಮುಂದುವರೆದಿದೆ. ಆರ್‌ಸಿಬಿ ಫ್ರಾಂಚೈಸಿ ಈವರೆಗೆ ಪಂದ್ಯಾವಳಿಯಲ್ಲಿ ಆಡಿದ 8 ಪಂದ್ಯಗಳಲ್ಲಿ ಬರೋಬ್ಬರಿ ಪಂದ್ಯಗಳಲ್ಲಿ ಸೋಲುಗಳನ್ನು ಎದುರಿಸಿದೆ.

RCB Players Seen Partying Despite 6 Consecutive Losses in IPL 2024 Fans Upset with Virat Kohli

ಕಳೆದ 17 ವರ್ಷಗಳಿಂದಲೂ ಆರ್‌ಸಿಬಿ ತಂಡದ ಆಘಾತಕಾರಿ ಪ್ರದರ್ಶನ ನೋಡಿಕೊಂಡು ಬರುತ್ತಿರುವ ನಿಷ್ಠಾವಂತ ಅಭಿಮಾನಿಗಳು ಪ್ರತಿ ಪಂದ್ಯದಲ್ಲೂ ಆಶಾವಾದಿಗಳಾಗಿರುತ್ತಾರೆ. ಆದರೆ, ಈ ಬಾರಿ ಸತತ 6 ಪಂದ್ಯಗಳ ಸೋಲಿನ ನಂತರವೂ ವಿರಾಟ್ ಕೊಹ್ಲಿ ಸೇರಿದಂತೆ ಕೆಲವು ಆರ್‌ಸಿಬಿ ತಾರೆಗಳ ಔಟಿಂಗ್ ಮತ್ತು ಪಾರ್ಟಿ ಮಾಡಿರುವ ಬಗ್ಗೆ ಅಭಿಮಾನಿಗಳು ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ.

ಹೈದರಾಬಾದ್‌ನ One8 ಕಮ್ಯೂನ್‌ನಲ್ಲಿ ಆರ್‌ಸಿಬಿ ಸ್ಟಾರ್ ವಿರಾಟ್ ಕೊಹ್ಲಿ ಅವರೊಂದಿಗೆ ಅನುಜ್ ರಾವತ್, ಮಹಿಪಾಲ್ ಲೋಮ್ರೋರ್, ಕರ್ಣ್ ಶರ್ಮಾ, ಸುಯಶ್ ಪ್ರಭುದೇಸಾಯಿ ಮತ್ತು ವೈಶಾಕ್ ವಿಜಯ್‌ಕುಮಾರ್ ಕಾಣಿಸಿಕೊಂಡಿದ್ದಾರೆ.

ಕಳೆದ ಭಾನುವಾರದಂದು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ಕೇವಲ 1 ರನ್ ಅಂತರದಲ್ಲಿ ಸೋತ ನಂತರ ಆರ್‌ಸಿಬಿ ಆಟಗಾರರು ಪಾರ್ಟಿ ಎಂಜಾಯ್ ಮಾಡಿದ್ದ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಇದನ್ನು ನೋಡಿದ ಆರ್‌ಸಿಬಿ ಅಭಿಮಾನಿಗಳು ಹಿಗ್ಗಾಮುಗ್ಗಾ ಟೀಕಿಸಿದ್ದಾರೆ ಮತ್ತು ಆರ್‌ಸಿಬಿ ತಂಡ ಮತ್ತು ಆಟಗಾರರನ್ನು ನಾಚಿಕೆಯಿಲ್ಲದವರೆಂದು ಕರೆದಿದ್ದಾರೆ. ಸದ್ಯ ನಡೆಯುತ್ತಿರುವ ಐಪಿಎಲ್ 2024ರ ಋತುವಿನಲ್ಲಿ ಗುಣಮಟ್ಟಕ್ಕಿಂತ ಕೆಳಮಟ್ಟದ ಪ್ರದರ್ಶನವನ್ನು ಹೊಂದಿದ್ದರೂ ಆಟಗಾರರು ಮಾತ್ರ ತುಂಬಾ ನಿರಾಳರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.

ಐಪಿಎಲ್ 2024ರ ಪ್ಲೇಆಫ್‌ಗೆ ಆರ್‌ಸಿಬಿ ಹೇಗೆ ಅರ್ಹತೆ ಪಡೆಯಬಹುದು?

ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2024ರಲ್ಲಿ ಕೇವಲ ಒಂದು ಪಂದ್ಯವನ್ನು ಗೆದ್ದಿದೆ, ಉಳಿದ ಏಳು ಪಂದ್ಯಗಳಲ್ಲಿ ಸೋತಿದೆ. ಆರ್‌ಸಿಬಿ ನೆಟ್ ರನ್‌ರೇಟ್ -1.046 ರೊಂದಿಗೆ ಎರಡು ಅಂಕಗಳನ್ನು ಹೊಂದಿದೆ ಮತ್ತು ಸದ್ಯ ಆರ್‌ಸಿಬಿ 10ನೇ ಕೊನೆಯ ಸ್ಥಾನದಲ್ಲಿದೆ.

ಆದಾಗ್ಯೂ, ಆರ್‌ಸಿಬಿ ತಂಡ ಪ್ಲೇಆಫ್‌ಗೆ ಅರ್ಹತೆ ಪಡೆಯುವ ಅವಕಾಶವನ್ನು ಖಚಿತಪಡಿಸಿಕೊಳ್ಳಲು ತಮ್ಮ ಉಳಿದ ಎಲ್ಲಾ ಪಂದ್ಯಗಳನ್ನು ಗೆಲ್ಲುವ ಅಗತ್ಯವಿದೆ.

ಅಲ್ಲದೆ, ಆರ್‌ಸಿಬಿ ಉಳಿದ ಇತರ ತಂಡಗಳ ರನ್‌ರೇಟ್‌ಗಳನ್ನು ನೋಡಬೇಕು ಮತ್ತು ಫಲಿತಾಂಶಗಳು ತಮ್ಮ ಪರವಾಗಿ ಬರಲಿವೆ ಎಂಬ ಆಶಾಭಾವನೆಯಲ್ಲಿರಬೇಕಿದೆ. ಆದರೂ ಆರ್‌ಸಿಬಿ ಪ್ಲೇಆಫ್‌ಗೆ ಅರ್ಹತೆ ಪಡೆಯುವ ಸಾಧ್ಯತೆ ಕಡಿಮೆ ಎಂದೇ ಹೇಳಬಹುದು.

ಆರ್‌ಸಿಬಿ ತಂಡದ ಪರ ಧನಾತ್ಮಕವಾಗಿರುವ ಏಕೈಕ ವಿಷಯವೆಂದರೆ, ಒನ್ ಮ್ಯಾನ್ ಶೋ ಎಂದು ಸಾಬೀತುಪಡಿಸುತ್ತಿರುವ ಭಾರತೀಯ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಪ್ರದರ್ಶನ. ಪ್ರಸ್ತುತ ಆರೆಂಜ್ ಕ್ಯಾಪ್ ಮಾಲೀಕನಾಗಿರುವ ಅವರು ರಾಜಸ್ಥಾನ್ ರಾಯಲ್ಸ್ ವಿರುದ್ಧ ಶತಕ ಸೇರಿದಂತೆ ಆಡಿದ 8 ಪಂದ್ಯಗಳಲ್ಲಿ 379 ರನ್‌ಗಳನ್ನು ಗಳಿಸಿದ್ದಾರೆ.

ಆರ್‌ಸಿಬಿ ತಮ್ಮ ಮುಂದಿನ ಪಂದ್ಯದಲ್ಲಿ ಗುರುವಾರ, ಏಪ್ರಿಲ್ 25ರಂದು ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಕಣಕ್ಕಿಳಿಯಲಿದೆ.

Story first published: Wednesday, April 24, 2024, 18:30 [IST]
Other articles published on Apr 24, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+