ವಿರಾಟ್ ಕೊಹ್ಲಿ ಮುಖಕ್ಕೆ ಕೇಕ್ ಮೆತ್ತಿದ ಆರ್‌ಸಿಬಿ ಆಟಗಾರರು: ವಿಡಿಯೋ

ದುಬೈ: ಟೀಮ್ ಇಂಡಿಯಾ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿಗೆ ನವೆಂಬರ್ 5 ವಿಶೇಷ ದಿನ. ಯಾಕೆಂದರೆ ಇದು ಕೊಹ್ಲಿಯ ಜನ್ಮದಿನ. ನವೆಂಬರ್ 5ರ ಗುರುವಾರ ಕೊಹ್ಲಿ 32ರ ಹರೆಯಕ್ಕೆ ಕಾಲಿರಿಸುತ್ತಿದ್ದಾರೆ. ಈ ದಿನ ಆರ್‌ಸಿಬಿ ಆಟಗಾರರು ವಿಭಿನ್ನ ರೀತಿಯಲ್ಲಿ ಆಚರಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಸಲುವಾಗಿ ವಿರಾಟ್ ಕೊಹ್ಲಿ ಪಡೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿದೆ. ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕೂಡ ಯುಎಇಯಲ್ಲಿದ್ದಾರೆ. ಅಲ್ಲೇ ಆರ್‌ಸಿಬಿ ಆಟಗಾರರ ಜೊತೆ ಕೊಹ್ಲಿ ತನ್ನ ಹುಟ್ಟುಹಬ್ಬ ಆಚರಿಸಿದ್ದಾರೆ. ಕೇಕ್ ಕತ್ತರಿಸಿ ಕೊಹ್ಲಿ ಸಂಭ್ರಮಾಚರಿಸಿದ್ದಾರೆ.
ಹುಟ್ಟು ಹಬ್ಬವನ್ನು ಕೊಹ್ಲಿ ಪ್ರತೀಸಾರಿಯೂ ಅವಿಸ್ಮರಣೀಯವಾಗಿ ಆಚರಿಸುತ್ತಾರೆ. ಈ ಬಾರಿಯ ಆರ್‌ಸಿಬಿ ಆಟಗಾರರೆಲ್ಲ ಸೇರಿ ಕೊಹ್ಲಿ ಮುಖಕ್ಕೆ ಕೇಕ್ ಮೆತ್ತುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ.
ಈ ಬಾರಿ ಆರ್‌ಸಿಬಿ ಪ್ಲೇ ಆಫ್‌ಗೆ ಪ್ರವೇಶಿಸಿದೆ. ಉತ್ತಮ ಪ್ರದರ್ಶನ ನೀಡುತ್ತಿರುವ ಬೆಂಗಳೂರು ಕಪ್ ಗೆಲ್ಲುವ ಯೋಚನೆಯಲ್ಲಿದೆ. ಆರ್‌ಸಿಬಿ ಕಳೆದ ನಾಲ್ಕು ವರ್ಷಗಳಲ್ಲಿ ಪ್ಲೇ ಆಫ್‌ಗೆ ಪ್ರವೇಶಿಸುತ್ತಿರುವುದು ಇದೇ ಮೊದಲು. ಇನ್ನು ನವೆಂಬರ್ 6ಕ್ಕೆ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಆರ್‌ಸಿಬಿಗೆ ಪಂದ್ಯವಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications