ಬೇರೆ ತಂಡಗಳ ಪರ ಕಣಕ್ಕೆ ಇಳಿಯಲಿರುವ ಆರ್‌ಸಿಬಿ ಸ್ಟಾರ್ಸ್
ಕಳೆದ ವರ್ಷದ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದ ಸ್ಟಾರ್ ಆಟಗಾರರು ಈಗ ಬೇರೆ ಬೇರೆ ತಂಡಗಳತ್ತ ಮುಖ ಮಾಡಿದ್ದಾರೆ. ಇವರಿಗೆ ಆರ್‌ಸಿಬಿ ಏಕೆ ಆರ್‌ಟಿಎಂ ಬಳಸಲಿಲ್ಲ ಎಂಬ ಪ್ರಶ್ನೆ ಇನ್ನು ಕಾಡುತ್ತಲೇ ಇದೆ. ಆರ್‌ಸಿಬಿಯಿಂದ ಬೇರೆ ತಂಡಗಳಿಗೆ ಸೇಲ್ ಆಗಿರುವ ಆಗಿರುವ ಆಟಗಾರರ ಜೇಬು ಭರ್ತಿ ಮಾಡಿಕೊಂಡಿದ್ದಾರೆ. ಆರ್‌ಸಿಬಿ ಇವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಗೋಜಿಗೆ ಹೋಗಲಿಲ್ಲ. ಹಾಗಿದ್ದರೆ ಮುಂದಿನ ಬಾರಿ ಐಪಿಎಲ್‌ನಲ್ಲಿ ಯಾವ ತಂಡಗಳ ಆರ್‌ಸಿಬಿ ಆಟಗಾರರು ಕಣಕ್ಕೆ ಇಳಿಯುತ್ತಾರೆ ಇಲ್ಲಿದೆ ಮಾಹಿತಿ.
ಆರ್‌ಸಿಬಿ ತಂಡದ ಪರ ಪವರ್ ಪ್ಲೇನಲ್ಲಿ ಪವರ್ ಫುಲ್ ಬೌಲಿಂಗ್ ದಾಳಿ ನಡೆಸಿ ಗಮನ ಸೆಳೆದಿದ್ದ ಮೊಹಮ್ಮದ್ ಸಿರಾಜ್ ಅವರಿಗೆ ಗುಜರಾತ್ ಟೈಟನ್ಸ್ ಭಾರೀ ಮೊತ್ತ ನೀಡಿ ತಂಡಕ್ಕೆ ಸೇರಿಸಿಕೊಂಡಿತು. ಇವರಿಗೆ ಗುಜರಾತ್ 12.25 ಕೋಟಿ ತಂಡಕ್ಕೆ ಬರಮಾಡಿಕೊಂಡಿತು. ಇವರಿಗೆ ಆರ್‌ಸಿಬಿ ಆರ್‌ಟಿಎಂ ಬಳಸಬಹುದು ಎಂಬ ಊಹೆಗಳು ಇದ್ದವು. ಆದರೆ ಈ ಊಹೆಗಳಲ್ಲಾ ಮಣ್ಣು ಪಾಲಾಗಿದೆ.

ಭರವಸೆಯ ಆಟಗಾರ ಮಹೀಪಾಲ್ ಲೋಮ್ರರ್ ಅವರನ್ನು ಕೊಳ್ಳಲು ಸಹ ಆರ್‌ಸಿಬಿ ಹಿಂದೆಟು ಹಾಕಿತು. ಇವರು ತಮ್ಮ ಮೂಲ ಬೆಲೆಗಿಂತ ಹೆಚ್ಚಿನ ಹಣವನ್ನು ನೀಡಿತು. ಇವರಿಗೆ ಭಾರೀ ಮೊತ್ತವನ್ನು ನೀಡಿ ಗುಜರಾತ್ ತಂಡಕ್ಕೆ ಸೇರಿಸಿಕೊಂಡಿತು. ಇವರು ಯುವ ಆಲ್‌ರೌಂಡರ್ ಆಗಿದ್ದು, ಇವರಿಗೆ 1.70 ಕೋಟಿ ನೀಡಿ ತಂಡಕ್ಕೆ ಗುಜರಾತ್ ಸೇರಿಸಿಕೊಂಡಿದೆ.
ವಿಕೆಟ್ ಕೀಪರ್ ಬ್ಯಾಟರ್ ಅನುಜ್ ರಾವತ್ ಅವರ ಮೇಲೂ ಆರ್‌ಸಿಬಿ ಭರವಸೆ ಇಡಲಿಲ್ಲ. ಕಳೆದ ಆವೃತ್ತಿಯಲ್ಲಿ ಕೆಲವು ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡಿದ್ದ ಇವರಿಗೆ ಬಾಜಿ ಕಟ್ಟುವ ಗೋಜಿಗೆ ಆರ್‌ಸಿಬಿ ಹೋಗಲಿಲ್ಲ. ಇವರು ಮೂಲ ಬೆಲೆಗೆ ಗುಜರಾತ್ ತಂಡವನ್ನು ಸೇರಿದರು.
ಪಂಜಾಬ್ ತಂಡ ಸೇರಿದ ಇಬ್ಬರು ಆಟಗಾರರು
ವಿಶ್ವದ ಸ್ಟಾರ್ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿರುವ ಆಸ್ಟ್ರೇಲಿಯಾದ ಗ್ಲೇನ್ ಮ್ಯಾಕ್ಸ್‌ವೆಲ್ ಅವರನ್ನು ಕೊಂಡು ಕೊಳ್ಳಲು ಪಂಜಾಬ್ ಹಣವನ್ನು ಹೂಡಿತು. ಇವರಿಗೆ ಪಂಜಾಬ್ ಬರೋಬರಿ 4.20 ಕೋಟಿ ನೀಡಿತು. ಆದರೆ ಇವರಿಗೆ ಆರ್‌ಸಿಬಿ ಆರ್‌ಟಿಎಂ ಬಳಿಸಲೇ ಇಲ್ಲ.
ವಿಜಯ್ ಕುಮಾರ್ ವೈಶಾಖ್ ಅವರಿಗೆ ಪಂಜಾಬ್ 1.80 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿತು. ಕರ್ನಾಟಕದ ಸ್ಟಾರ್ ಪ್ಲೇಯರ್ ರಣಜಿ ಟ್ರೋಫಿ ಹಾಗೂ ಇತ್ತೀಚಿಗೆ ನಡೆದಿದ್ದ ಮಹರಾಜ ಟ್ರೋಫಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ್ದರಿಂದ ಇವರಿಗೆ ಆರ್‌ಸಿಬಿ ಆರ್‌ಟಿಎಂ ಬಳಸುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಈ ಆಸೆ ಮಣ್ಣು ಪಾಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications