For Quick Alerts
ALLOW NOTIFICATIONS  
For Daily Alerts
 

RCB Playing 11: ಎಸ್‌ಆರ್‌ಎಚ್‌ ವಿರುದ್ಧ ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್ 11 ಭವಿಷ್ಯ

RCB Playing 11 Prediction: ಇತಿಹಾಸದಲ್ಲೇ ಮೊದಲ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಹಾಲಿ ಚಾಂಪಿಯನ್‌ ಆಗಿ ಐಪಿಎಲ್ ಸೀಸನ್‌ಗೆ ಕಾಲಿಡುತ್ತಿದೆ. ಕಳೆದ ಬಾರಿ 'ಈ ಸಲ ಕಪ್ ನಮ್ಮದೇ' ಎಂಬ ಘೋಷವಾಕ್ಯವನ್ನ ನಿಜ ಮಾಡಿ ಗರ್ಜಿಸಿದ್ದ ಆರ್‌ಸಿಬಿ ಈಗ ಚಾಂಪಿಯನ್ ಪಟ್ಟದೊಂದಿಗೆ ಎಸ್‌ಆರ್‌ಎಚ್‌ ವಿರುದ್ಧ ಮಾರ್ಚ್‌ 28ರಂದು ಉದ್ಘಾಟನಾ ಪಂದ್ಯ ಆಡಲು ಸಜ್ಜಾಗಿದೆ. ಹಾಗಾದ್ರೆ, ಪ್ಲೇಯಿಂಗ್ 11 ಹೇಗಿರಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಆರ್‌ಸಿಬಿಯು ಕಳೆದ ವರ್ಷ ಚೊಚ್ಚಲ ಐಪಿಎಲ್ ಟ್ರೋಫಿಯನ್ನು ಗೆದ್ದುಕೊಂಡಿತು. ರಜತ್ ಪಾಟಿದಾರ್ ಅವರು ತಂಡವನ್ನು ವಿಜಯದ ಪಥದತ್ತ ಮುನ್ನಡೆಸುವ ಮೂಲಕ ಆರ್‌ಸಿಬಿ ಅಭಿಮಾನಿಗಳ 18 ವರ್ಷಗಳ ಸುದೀರ್ಘ ಕಾಯುವಿಕೆಯನ್ನು ಕೊನೆಗೊಳಿಸಿದರು. ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನ ಅಲಂಕರಿಸಿದ್ದ ಆರ್‌ಸಿಬಿ, ಸತತ ಎರಡು ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿತು. ಮೊದಲು ಕ್ವಾಲಿಫೈಯರ್ 1 ಮತ್ತು ಬಳಿಕ ಫೈನಲ್‌ನಲ್ಲಿ ಜಯ ಸಾಧಿಸುವ ಮೂಲಕ ಚಾಂಪಿಯನ್ ಪಟ್ಟಕ್ಕೇರಿತು.

RCB Playing 11 Prediction for IPL 2026 Opener vs Sunrisers Hyderabad Full Squad amp amp Key Updates

ಮಿನಿ ಹರಾಜಿಗೂ ಮುನ್ನ ಆರ್‌ಸಿಬಿ 7 ಆಟಗಾರರನ್ನು ಬಿಡುಗಡೆ ಮಾಡಿ 17 ಆಟಗಾರರನ್ನು ತಂಡದಲ್ಲೇ ಉಳಿಸಿಕೊಂಡಿದೆ. ಬಳಿಕ ಐಪಿಎಲ್ 2026ರ ಮಿನಿ ಹರಾಜಿನಲ್ಲಿ ಹರಾಜಿನಲ್ಲಿ ಆರ್‌ಸಿಬಿ ತನ್ನ ತಂಡವನ್ನು ಪೂರ್ಣಗೊಳಿಸಲು ಎಂಟು ಆಟಗಾರರನ್ನು ಖರೀದಿಸಿತು. ಇವರಲ್ಲಿ ವೆಂಕಟೇಶ್ ಅಯ್ಯರ್ ಅವರನ್ನು 7 ಕೋಟಿ ರೂಪಾಯಿಗೆ ಖರೀದಿಸುವ ಮೂಲಕ ತಂಡದ ಅತ್ಯಂತ ದುಬಾರಿ ಆಟಗಾರನನ್ನಾಗಿ ಮಾಡಿಕೊಂಡಿತು. ಅಲ್ಲದೆ, ಜೋಶ್ ಹ್ಯಾಜಲ್‌ವುಡ್ ಅವರ ಬ್ಯಾಕಪ್‌ಗಾಗಿ ಜೇಕಬ್ ಡಫಿ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.

ಹೊಸದಾಗಿ ಆರ್‌ಸಿಬಿಗೆ ಸೇರ್ಪಡೆಯಾದ ಆಟಗಾರರು

* ವೆಂಕಟೇಶ್ ಅಯ್ಯರ್
* ಮಂಗೇಶ್ ಯಾದವ್
* ಜಾಕೋಬ್ ಡಫಿ
* ಜಾರ್ಡನ್ ಕಾಕ್ಸ್
* ಸಾತ್ವಿಕ್ ದೇಸ್ವಾಲ್
* ಕನಿಷ್ಕ್ ಚೌಹಾಣ್
* ವಿಹಾನ್ ಮಲ್ಹೋತ್ರಾ
* ವಿಕ್ಕಿ ಓಸ್ವಾಲ್

ಹ್ಯಾಜಲ್‌ವುಡ್‌ ಇಲ್ಲದೆಯೇ ಕಣಕ್ಕಿಳಿಯುತ್ತಿರುವ ಆರ್‌ಸಿಬಿ

ಹಾಲಿ ಚಾಂಪಿಯನ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಮಾರ್ಚ್ 28ರಂದು ನಡೆಯುವ ಉದ್ಘಾಟನಾ ಪಂದ್ಯದಲ್ಲಿ ತವರು ಅಂಗಳ ಎಂ.ಚಿನ್ನಸ್ವಾಮಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಅನ್ನು ಎದುರಿಸಲಿದೆ. ಐಪಿಎಲ್ ಟ್ರೋಫಿಯನ್ನೇ ಗೆದ್ದಿಲ್ಲ ಎನ್ನುವ ಕೊರಗಿನಿಂದ ಮುಕ್ತವಾಗಿರುವ ಆರ್‌ಸಿಬಿ, ಈಗ ಮತ್ತೊಮ್ಮೆ ಅತ್ಯಂತ ಬಲಿಷ್ಠ ತಂಡದೊಂದಿಗೆ ಕಣಕ್ಕಿಳಿಯುತ್ತಿದೆ. ಆದರೆ, ಈ ಸೀಸನ್‌ ಆರಂಭದ ಪಂದ್ಯಗಳಲ್ಲಿ ತಂಡವು ತನ್ನ ಪ್ರಮುಖ ವೇಗಿ ಬೌಲರ್ ಹ್ಯಾಜಲ್‌ವುಡ್‌ ಇಲ್ಲದೆಯೇ ಕಣಕ್ಕಿಳಿಯಲಿದೆ.

ಐಪಿಎಲ್ 2026ರ ಆರಂಭದಲ್ಲಿ ಕೆಲವು ಪಂದ್ಯಗಳಿಗೆ ಆರ್‌ಸಿಬಿಯಲ್ಲಿ ಜೋಶ್ ಹ್ಯಾಜಲ್‌ವುಡ್ ಅಲಭ್ಯರಾಗಲಿದ್ದಾರೆ. ಅವರು ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿದ್ದು, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಉದ್ಘಾಟನಾ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಈ ಆಸ್ಟ್ರೇಲಿಯಾದ ವೇಗದ ಬೌಲರ್ ಏಪ್ರಿಲ್ ಮಧ್ಯಭಾಗದಲ್ಲಿ ಆರ್‌ಸಿಬಿ ಸೇರಿಕೊಳ್ಳುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ.

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯಕ್ಕಾಗಿ ಆರ್‌ಸಿಬಿ ನಾಲ್ವರು ವಿದೇಶಿ ಆಟಗಾರರ ಪೈಕಿ ಯಾರನ್ನು ಆಯ್ಕೆ ಮಾಡಬೇಕು ಎನ್ನುವ ಚರ್ಚೆಯಲ್ಲಿದೆ. ಜೊತೆಗೆ ದೇವದತ್ ಪಡಿಕ್ಕಲ್ ಅಥವಾ ವೆಂಕಟೇಶ್ ಅಯ್ಯರ್ ಇವರಲ್ಲಿ ಯಾರನ್ನು ಕಣಕ್ಕಿಳಿಸಬೇಕು ಎಂಬುದು ಕೂಡ ಮ್ಯಾನೇಜ್‌ಮೆಂಟ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ವಿರಾಟ್ ಕೊಹ್ಲಿ ಅವರೊಂದಿಗೆ ಆರಂಭಿಕರಾಗಿ ಕಣಕ್ಕಿಳಿಯಲಿರುವ ಫಿಲ್ ಸಾಲ್ಟ್, ಆರ್‌ಸಿಬಿ ತಂಡದ ವಿದೇಶಿ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತವಾಗಿದೆ. ಇನ್ನು ನಾಯಕ ರಜತ್ ಪಾಟಿದಾರ್ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ಆದರೆ, 3ನೇ ಕ್ರಮಾಂಕದ ಸ್ಥಾನಕ್ಕಾಗಿ ಭಾರಿ ಚರ್ಚೆ ನಡೆಯುತ್ತಿದೆ. ಏಕೆಂದರೆ ವೆಂಕಟೇಶ್ ಅಯ್ಯರ್ ಮತ್ತು ದೇವದತ್ ಪಡಿಕ್ಕಲ್ ಇಬ್ಬರೂ ಈ ಸ್ಥಾನಕ್ಕೆ ಪ್ರಬಲ ಸ್ಪರ್ಧಿಗಳಾಗಿದ್ದಾರೆ.

ಕಳೆದ ವರ್ಷದ ಫೈನಲ್ ಪಂದ್ಯದಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್ ಆರ್‌ಸಿಬಿ ಪರ ಕಣಕ್ಕಿಳಿದಿದ್ದರು. ಆದರೆ, ಈ ಬಾರಿ ಅವರ ಸ್ಥಾನವನ್ನು ಯುವ ಆಟಗಾರ ಜೇಕಬ್ ಬೆಥೆಲ್ ತುಂಬುವುದು ಬಹುತೇಕ ಖಚಿತವಾಗಿದೆ. ಬೆಥೆಲ್ ಅವರು ಇದೇ ತಿಂಗಳ ಆರಂಭದಲ್ಲಿ ಭಾರತದ ವಿರುದ್ಧ ನಡೆದ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಸ್ಫೋಟಕ ಶತಕ ಸಿಡಿಸಿ ಮಿಂಚಿದ್ದರು. ಈ ಇಬ್ಬರ ಪ್ರಸ್ತುತ ಫಾರ್ಮ್ ಅನ್ನು ಗಮನಿಸಿದರೆ, ಆರಂಭಿಕ ಹಂತದಲ್ಲಿ ಟಿಮ್ ಡೇವಿಡ್ ಅವರು ಬೆಂಚ್ ಕಾಯುವುದು ಖಚಿತವಾದಂತಾಗಿದೆ.

ಜಿತೇಶ್ ಶರ್ಮಾ ವಿಕೆಟ್ ಕೀಪರ್ ಮತ್ತು ಫಿನಿಶರ್ ಆಗಿದ್ದರೆ, ರೊಮಾರಿಯೋ ಶೆಫರ್ಡ್ ಮತ್ತು ಕೃನಾಲ್ ಪಾಂಡ್ಯ ಆರ್‌ಸಿಬಿ ತಂಡದ ಪ್ರಮುಖ ಆಲ್-ರೌಂಡರ್ ಹಾಗೂ ಫಿನಿಶರ್‌ಗಳಾಗಿದ್ದಾರೆ. ಜೋಶ್ ಹ್ಯಾಜಲ್‌ವುಡ್ ಅಲಭ್ಯರಾಗಿರುವುದರಿಂದ, ಆರ್‌ಸಿಬಿ ತಂಡದ ಬೌಲಿಂಗ್ ವಿಭಾಗವನ್ನು ಭುವನೇಶ್ವರ್ ಕುಮಾರ್ ಮುನ್ನಡೆಸಲಿದ್ದಾರೆ. ಅವರಿಗೆ ಬೆಂಬಲವಾಗಿ ಯಶ್ ದಯಾಳ್ ಮತ್ತು ಜೇಕಬ್ ಡಫಿ ಸಾಥ್ ನೀಡಲಿದ್ದಾರೆ.

ಇನ್ನು ಲೆಗ್ ಸ್ಪಿನ್ನರ್ ಸುಯೇಶ್ ಶರ್ಮಾ ಅವರನ್ನು 'ಇಂಪ್ಯಾಕ್ಟ್ ಪ್ಲೇಯರ್' ಆಗಿ ಬಳಸಿಕೊಳ್ಳುವ ನಿರೀಕ್ಷೆಯಿದೆ. ವೆಂಕಟೇಶ್ ಅಯ್ಯರ್ ಅಥವಾ ದೇವದತ್ ಪಡಿಕ್ಕಲ್ ಇವರಲ್ಲಿ ಯಾರು ಪಂದ್ಯದಲ್ಲಿ ಆಡುತ್ತಾರೋ, ಅವರ ಬದಲಿಗೆ ಸುಯೇಶ್ ಶರ್ಮಾ ಅವರನ್ನು ಮೈದಾನಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.

ಆರ್‌ಸಿಬಿ ಸಂಭ್ಯಾವ್ಯ ಪ್ಲೇಯಿಂಗ್ 11: ಫಿಲ್ ಸಾಲ್ಟ್‌, ವಿರಾಟ್ ಕೊಹ್ಲಿ, ವೆಂಕಟೇಶ್ ಅಯ್ಯರ್/ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಜೇಕಬ್ ಬೆಥೆಲ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಕೃನಾಲ್ ಪಾಂಡ್ಯ, ರೊಮಾರಿಯೋ ಶೆಫರ್ಡ್, ಯಶ್ ದಯಾಲ್, ಭುವನೇಶ್ವರ್ ಕುಮಾರ್, ಜಾಕೋಬ್ ಡಫಿ, ಸುಯೇಶ್ ಶರ್ಮಾ (ಇಂಪ್ಯಾಕ್ಟ್‌ ಪ್ಲೇಯರ್)

Story first published: Monday, March 23, 2026, 11:36 [IST]
Other articles published on Mar 23, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+