For Quick Alerts
ALLOW NOTIFICATIONS  
For Daily Alerts
 

IPL 2024: RCB ಪ್ಲೇಆಫ್ ಸನ್ನಿವೇಶ ಹೇಗಿದೆ?; ತಂಡಕ್ಕೆ 2016ರ ಟೂರ್ನಿ ನೆನಪಿಸಬೇಕಿದೆ ವಿರಾಟ್ ಕೊಹ್ಲಿ

ಸೋಮವಾರ, ಏಪ್ರಿಲ್ 15ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 25 ರನ್‌ಗಳ ವೀರೋಚಿತ ಸೋಲು ಅನುಭವಿಸಿತು. ಈ ಮೂಲಕ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ನಲ್ಲಿ ಸತತ ಐದನೇ ಸೋಲನ್ನು ಕಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಟ್ರಾವಿಸ್ ಹೆಡ್ ಅವರ 41 ಎಸೆತಗಳಲ್ಲಿ 102 ರನ್‌ಗಳ ಅಮೋಘ ಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 287 ರನ್‌ಗಳ ದಾಖಲೆಯ ಮೊತ್ತವನ್ನು ಗಳಿಸಿತು.

RCB Playoff Qualification Scenario in IPL 2024 RCB Team Needs to Recall 2016 from Virat Kohli

ಪ್ರತ್ಯುತ್ತರವಾಗಿ, ಬೃಹತ್ ಮೊತ್ತವನ್ನು ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತಮ್ಮ ಅತ್ಯುತ್ತಮ ಪ್ರಯತ್ನವನ್ನು ಮಾಡಿತು. ದಿನೇಶ್ ಕಾರ್ತಿಕ್ ಅವರ 35 ಎಸೆತಗಳಲ್ಲಿ 83 ರನ್‌ಗಳ ದಿಟ್ಟ ಹೋರಾಟದ ಹೊರತಾಗಿಯೂ, 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 262 ರನ್‌ಗಳನ್ನು ಮಾತ್ರ ತಲುಪಲು ಸಾಧ್ಯವಾಯಿತು.

ಇದರೊಂದಿಗೆ ಆರ್‌ಸಿಬಿ ತಂಡ 25 ರನ್‌ಗಳಿಂದ ಪಂದ್ಯವನ್ನು ಸೋತು ಐಪಿಎಲ್ 2024ರ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಫಾಫ್ ಡು ಪ್ಲೆಸಿಸ್ ನಾಯಕತ್ವದ ತಂಡವು ಆಡಿದ ಏಳು ಪಂದ್ಯಗಳಲ್ಲಿ ಕೇವಲ ಒಂದು ಗೆಲುವು ಸಾಧಿಸಿ ಎರಡು ಅಂಕಗಳೊಂದಿಗೆ 10ನೇ ಸ್ಥಾನದಲ್ಲಿದೆ.

RCB Playoff Qualification Scenario in IPL 2024 RCB Team Needs to Recall 2016 from Virat Kohli

ಮೂರು ಬಾರಿಯ ರನ್ನರ್-ಅಪ್‌ ಆರ್‌ಸಿಬಿ ದಕ್ಷಿಣದ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರು ವಿಕೆಟ್‌ಗಳ ಸೋಲಿನೊಂದಿಗೆ ತಮ್ಮ ಐಪಿಎಲ್ 2024ರ ಅಭಿಯಾನವನ್ನು ಪ್ರಾರಂಭಿಸಿತು. ನಂತರ ಪಂಜಾಬ್ ಕಿಂಗ್ಸ್ ವಿರುದ್ಧ ತಮ್ಮ ಮುಂದಿನ ಪಂದ್ಯವನ್ನು 4 ವಿಕೆಟ್‌ಗಳಿಂದ ಗೆಲ್ಲುವ ಮೂಲಕ ಅದ್ಭುತ ಪುನರಾಗಮನ ಮಾಡಿತು.

ಆದರೆ, ನಂತರದ ಮುಂದಿನ ಐದು ಪಂದ್ಯಗಳಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್), ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ), ರಾಜಸ್ಥಾನ್ ರಾಯಲ್ಸ್ (ಆರ್‌ಆರ್), ಮುಂಬೈ ಇಂಡಿಯನ್ಸ್ (ಎಂಐ) ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ವಿರುದ್ಧ ಸೋಲು ಕಂಡಿತು.

ಆರ್‌ಸಿಬಿ ತಂಡಕ್ಕೆ ಪರಿಸ್ಥಿತಿಗಳನ್ನು ವಿಷಯಗಳನ್ನು ಇನ್ನಷ್ಟು ಹದಗೆಡಿಸಲು ಕೆಕೆಆರ್ ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧದ ದೊಡ್ಡ ಸೋಲುಗಳು ತಮ್ಮ ನೆಟ್ ರನ್‌ರೇಟ್ ಅನ್ನು -1.185ಗೆ ಕಡಿಮೆಗೊಳಿಸಿತು. ಪ್ರಸ್ತುತ ಇದು ಎಲ್ಲಾ ಹತ್ತು ತಂಡಗಳಿಗಿಂತ ಕೆಟ್ಟದಾಗಿದೆ.

ಇದುವರೆಗಿನ ಏಳು ಪಂದ್ಯಗಳಿಂದ ಕೇವಲ ಒಂದು ಗೆಲುವು ಹೊಂದಿರುವ ಆರ್‌ಸಿಬಿ ತಂಡ ಐಪಿಎಲ್ 2024ರ ಪ್ಲೇಆಫ್‌ಗೆ ಅರ್ಹತೆ ಪಡೆಯಲು ಅದ್ಭುತ ತಿರುವು ಪಡೆಯಬೇಕಾಗಿದೆ. ತಮ್ಮ ಮುಂದಿನ ನಾಲ್ಕು ಪಂದ್ಯಗಳಲ್ಲಿ ಕೆಕೆಆರ್, ಎಸ್‌ಆರ್‌ಎಚ್ ಮತ್ತು ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಲಿರುವುದರಿಂದ ಆರ್‌ಸಿಬಿ ತಂಡದ ಹಾದಿಯು ಇನ್ನೂ ಕಠಿಣವಾಗಲಿದೆ.

ಆರ್‌ಸಿಬಿ ಮುಂದಿನ ಪಂದ್ಯಗಳಲ್ಲಿ ಯಾವುದೇ ಒಂದು ಪಂದ್ಯ ಸೋಲುವಂತಿಲ್ಲ

ಫಾಫ್ ಡು ಪ್ಲೆಸಿಸ್ ನಾಯಕತ್ವದ ಆರ್‌ಸಿಬಿ ತಂಡವು ಸದ್ಯ ನಡೆಯುತ್ತಿರುವ ಐಪಿಎಲ್ 2024ರ ಮುಂದಿನ ಪಂದ್ಯಗಳಲ್ಲಿ ಒಂದೇ ಒಂದು ಸೋಲು ಪಡೆಯಲು ಸಾಧ್ಯವಿಲ್ಲ ಮತ್ತು ಪ್ಲೇಆಫ್‌ಗಳಿಗೆ ಸುಗಮ ಅರ್ಹತೆಗಾಗಿ ತಮ್ಮ ಉಳಿದ ಎಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ.

ಆರ್‌ಸಿಬಿ ತನ್ನ ಉಳಿದ ಎಲ್ಲಾ ಪಂದ್ಯಗಳನ್ನು ಗೆಲ್ಲಲು ಯಶಸ್ವಿಯಾದರೆ, 16 ಅಂಕಗಳೊಂದಿಗೆ ಲೀಗ್ ಹಂತವನ್ನು ಪೂರ್ಣಗೊಳಿಸುತ್ತಾರೆ. ಇದು ಪ್ಲೇಆಫ್‌ನಲ್ಲಿ ತಮ್ಮ ಸ್ಥಾನವನ್ನು ಪಡೆಯಲು ಉತ್ತಮ ಎಂದು ಸಾಬೀತುಪಡಿಸುತ್ತದೆ.

ಆದರೆ, ಆರ್‌ಸಿಬಿ ಇನ್ನೂ ಒಂದು ಪಂದ್ಯವನ್ನು ಸೋತರೆ, ಅಂಕಪಟ್ಟಿಯಲ್ಲಿ 14 ಅಂಕಗಳೊಂದಿಗೆ ಮುಗಿಸುತ್ತಾರೆ. ಅದು ಪ್ಲೇಆಫ್ ತಲುಪಲು ಸಾಕಾಗುವುದಿಲ್ಲ. ಏಕೆಂದರೆ ನೆಟ್‌ ರನ್‌ರೇಟ್‌ನಲ್ಲಿ ಇತರ ತಂಡಗಳನ್ನು ದೊಡ್ಡ ಪ್ರಮಾಣದಲ್ಲಿ ಹಿಂದಿಕ್ಕಬೇಕಾಗುತ್ತದೆ.

ಆರ್‌ಸಿಬಿ ತಂಡವು ಮುಂದಿನ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಭಾನುವಾರ, ಏಪ್ರಿಲ್ 21ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಆಡಲಿದೆ.

ಹೀಗಾಗಿ ಆರ್‌ಸಿಬಿ ತಂಡ ಇನ್ನು ಮುಂದೆ ಈ ಅವೃತ್ತಿಯಲ್ಲಿ ಯಾವುದೇ ತಪ್ಪು ಮಾಡಲು ಮುಂದಾಗಬಾರದು. ಒಂದೇ ಒಂದು ಸೋಲು ತಂಡದ ಪ್ಲೇಆಫ್ ಅರ್ಹತೆಯ ಎಲ್ಲಾ ಭರವಸೆಗಳನ್ನು ಹಾಳು ಮಾಡಬಹುದು.

ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ ತಮ್ಮ ತಂಡದ ಆಟಗಾರರಿಗೆ 2016ರ ಐಪಿಎಲ್ ಆವೃತ್ತಿಯ ಬಗ್ಗೆ ನೆನಪಿಸಬೇಕಿದೆ. ಅಲ್ಲಿ ಆರ್‌ಸಿಬಿ ಪ್ಲೇಆಫ್‌ಗೆ ಪ್ರವೇಶಿಸಲು ಕೊನೆಯ ಏಳು ಪಂದ್ಯಗಳಲ್ಲಿ ಆರು ಪಂದ್ಯಗಳಲ್ಲಿ ಗೆದ್ದಿದ್ದರು. ಈಗಲೂ ಅದೇ ರೀತಿಯ ಫಲಿತಾಂಶವನ್ನು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

Story first published: Tuesday, April 16, 2024, 17:10 [IST]
Other articles published on Apr 16, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+