Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RCB vs PBKS IPL Final: ಪಂಜಾಬ್‌ ಜಯಕ್ಕೆ 191 ರನ್‌ ಗುರಿ ನೀಡಿದ ಆರ್‌ಸಿಬಿ

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕ ಆಟಗಾರ ಫಿಲ್‌ ಸಾಲ್ಟ್ ಆರಂಭದಲ್ಲಿ ಅಬ್ಬರಿಸುವ ಸೂಚನೆಯನ್ನು ನೀಡಿದರು. ಆದರೆ ಈ ಅವಧಿಯಲ್ಲಿ ಪಂಜಾಬ್‌ ಬೌಲರ್‌ಗಳು ಡ್ರೆಸ್ಸಿಂಗ್ ರೂಮ್‌ನಲ್ಲಿ ಮಾಡಿಕೊಂಡ ರಣ ತಂತ್ರದಂತೆ ಬೌಲ್ ಮಾಡಿದರು. ಈ ವೇಳೆ ಫಿಲ್‌ ಸಾಲ್ಟ್‌ 16 ರನ್‌ ಬಾರಿಸಿದ್ದಾಗ ಕೈಲ್‌ ಜೇಮಿಸನ್ ಅವರ ಎಸೆತದಲ್ಲಿ ಶ್ರೇಯಸ್‌ ಅಯ್ಯರ್‌ಗೆ ಕ್ಯಾಚ್ ನೀಡಿದರು.

ಎರಡನೇ ವಿಕೆಟ್‌ಗೆ ಮಯಾಂಕ್‌ ಅಗರ್‌ವಾಲ್‌ ಹಾಗೂ ವಿರಾಟ್ ಕೊಹ್ಲಿ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಪವರ್‌ ಪ್ಲೇನಲ್ಲಿ ವಿಕೆಟ್‌ ಕಳೆದುಕೊಳ್ಳದಂತೆ ಬ್ಯಾಟ್ ಮಾಡಿ ತಂಡಕ್ಕೆ ಆಧಾರವಾದರು. ಆರ್‌ಸಿಬಿ ಪವರ್‌ ಪ್ಲೇನಲ್ಲಿ ಒಂದು ವಿಕೆಟ್‌ನಷ್ಟಕ್ಕೆ 55 ರನ್‌ ಬಾರಿಸಿತು. ಈ ಜೋಡಿ ಎರಡನೇ ವಿಕೆಟ್‌ಗೆ 28 ಎಸೆತಗಳಲ್ಲಿ 38 ರನ್‌ ಸಿಡಿಸಿತು. ಈ ವೇಳೆ ಮಯಾಂಕ್‌ ಅಗರ್‌ವಾಲ್‌ 2 ಬೌಂಡರಿ, 1 ಸಿಕ್ಸರ್‌ ಸಹಾಯದಿಂದ 24 ರನ್‌ ಸಿಡಿಸಿ ಔಟ್ ಆದರು.

RCB Posts Competitive Total Against Punjab Kings in IPL Final

ಮಯಾಂಕ್‌ ಅಗರ್‌ವಾಲ್‌ ಔಟ್ ಆಗುತ್ತಿದ್ದಂತೆ ಕ್ರೀಸ್‌ಗೆ ಬಂದ ರಜತ್‌ ಪಾಟಿದಾರ್ ಸಹ ತಂಡಕ್ಕೆ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಇವರು ವಿರಾಟ್ ಕೊಹ್ಲಿ ಜೊತೆಗೂಡಿ 27 ಎಸೆತಗಳಲ್ಲಿ 40 ರನ್‌ ಬಾರಿಸಿದರು. ರಜತ್‌ ಪಾಟಿದಾರ್‌ 1 ಬೌಂಡರಿ, 2 ಸಿಕ್ಸರ್ ಸಹಾಯದಿಂದ 26 ರನ್‌ ಸಿಡಿಸಿದರು. ಮಹತ್ವದ ಪಂದ್ಯದ ಮಹತ್ವ ಅರಿತು ಬ್ಯಾಟ್ ಮಾಡಿದ ವಿರಾಟ್ ಕೊಹ್ಲಿ ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಮಾಡಿದರು. ಆದರೆ ಇವರಿಗೆ ಪಂಜಾಬ್‌ ಲೂಸ್‌ ಬೌಲ್‌ಗಳನ್ನು ಎಸೆಯದೆ ಕಾಟ ನೀಡಿತು. ಅಲ್ಲದೆ ಸುಲಭವಾಗಿ ರನ್‌ ಬಾರಿಸಲು ಅವಕಾಶ ನೀಡಲೇ ಇಲ್ಲ. ವಿರಾಟ್‌ 35 ರನ್‌ ಬಾರಿಸಿದ್ದಾಗ ಅಜ್ಮತುಲ್ಲಾ ಓಮರ್ಜಾಯಿ ಎಸೆತದಲ್ಲಿ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು.

ಟೂರ್ನಿಯಲ್ಲಿ ರನ್‌ ಕಲೆ ಹಾಕುವಲ್ಲಿ ವಿಫಲರಾಗಿದ್ದ ಲಿಯಾಮ್‌ ಲಿವಿಂಗ್‌ಸ್ಟೋನ್ ಮಹತ್ವದ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿದರು. ಇವರು 2 ಸಿಕ್ಸರ್ ಸಹಾಯದಿಂದ 25 ರನ್‌ ಸಿಡಿಸಿ ಔಟ್ ಆದರು. ಇನ್ನು ವಿಕೆಟ್‌ ಕೀಪರ್‌ ಜಿತೇಶ್‌ ಶರ್ಮಾ ಸಹ ರನ್‌ ವೇಗಕ್ಕೆ ಚುರುಕು ಮುಟಿಸುವ ಕೆಲಸವನ್ನು ಮಾಡಿದರು. ಇವರು 10 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್ ಸಹಾಯದಿಂದ 24 ರನ್‌ ಬಾರಿಸಿ ಕರ್ನಾಟಕದ ವಿಜಯಕುಮಾರ್‌ ವೈಶಾಕ್‌ಗೆ ವಿಕೆಟ್‌ ಒಪ್ಪಿಸಿದರು. ಕೆಳ ಕ್ರಮಾಂಕದಲ್ಲಿ ರೊಮಾರಿಯೋ ಶೆಫರ್ಡ್‌ 17 ರನ್‌ಗೆ ಆಟ ಮುಗಿಸಿದರು.

ಅರ್ಷದೀಪ್‌ ಅಬ್ಬರ

20ನೇ ಓವರ್‌ನಲ್ಲಿ ರನ್‌ ವೇಗಕ್ಕೆ ಚುರುಕು ಮುಟ್ಟಿಸುವ ಭರದಲ್ಲಿ ರೊಮಾರಿಯೊ ಶೆಫರ್ಡ್‌, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್ ಔಟ್ ಆದರು. ಪರಿಣಾಮ ಆರ್‌ಸಿಬಿ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 190 ರನ್‌ ಸಿಡಿಸಿತು. ಪಂಜಾಬ್‌ ಪರ ಅರ್ಷದೀಪ್‌ ಸಿಂಗ್, ಕೈಲ್‌ ಜೈಮಿಸನ್‌ ತಲಾ ಮೂರು ವಿಕೆಟ್‌ ಪಡೆದರು.

ಪವರ್‌ ಪ್ಲೇ: 55ಕ್ಕೆ 1
ಮಿಡ್ಲ್‌ ಒವರ್‌: 90ಕ್ಕೆ 3
ಡೆತ್ ಓವರ್: 45ಕ್ಕೆ 5

Story first published: Tuesday, June 3, 2025, 21:21 [IST]
Other articles published on Jun 3, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+