ಏಷ್ಯಾದ ಜನಪ್ರಿಯ ಕ್ರಿಕೆಟ್ ತಂಡ ಎಂದು ದಾಖಲೆ ಬರೆದ ಐಪಿಎಲ್ ತಂಡವಿದು, ವಿಶ್ವದಲ್ಲೂ ಇವರಿಗಿಲ್ಲ ಸಾಟಿ!

ಜಗತ್ತಿನ ಅತಿ ದೊಡ್ಡ ಮತ್ತು ಅತಿ ಶ್ರೀಮಂತ ಫ್ರಾಂಚೈಸಿ ಕ್ರಿಕೆಟ್ ಲೀಗ್ ಯಾವುದು ಎಂಬ ಪ್ರಶ್ನೆ ಎದುರಾದಾಗ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯ ಬಾಯಲ್ಲಿಯೂ ಕೂಡ ಬರುವ ಪ್ರಥಮ ಉತ್ತರವೇ ಇಂಡಿಯನ್ ಪ್ರೀಮಿಯರ್ ಲೀಗ್ ಎಂಬುದು. ಹೌದು, ವಿಶ್ವದ ಯಾವುದೇ ಫ್ರಾಂಚೈಸಿ ಕ್ರಿಕೆಟ್ ಲೀಗ್ ಟೂರ್ನಿಯೂ ಕೂಡ ಕ್ರೇಜ್ ವಿಷಯದಲ್ಲಾಗಲೀ ಅಥವಾ ಆದಾಯದ ವಿಷಯದಲ್ಲಾಗಲಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಮೀರಿಸುವುದು ಅಸಾಧ್ಯದ ಮಾತು. ವಿಶ್ವದ ಹಲವಾರು ಕ್ರಿಕೆಟಿಗರಿಗೆ ಕೋಟಿ ಕೋಟಿ ಕೊಟ್ಟು ಖರೀದಿಸುವ ಫ್ರಾಂಚೈಸಿಗಳು ಯುವ ಕ್ರಿಕೆಟಿಗರನ್ನು ಕೂಡ ಖರೀದಿಸುವುದರ ಮೂಲಕ ಅವರ ಕ್ರಿಕೆಟ್ ಭವಿಷ್ಯ ಉಜ್ವಲಿಸುವಂತೆ ಮಾಡಿದ್ದಾರೆ. ಹೀಗೆ ಫ್ರಾಂಚೈಸಿಗಳಿಗೆ ಮತ್ತು ಆಯೋಜಕರಿಗೆ ಆದಾಯ ಹಾಗೂ ಪ್ರತಿಭಾವಂತರ ಕ್ರಿಕೆಟಿಗರಿಗೆ ಅವಕಾಶಗಳನ್ನು ತಂದುಕೊಟ್ಟಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಸದ್ಯ ವಿಶ್ವದಾದ್ಯಂತ ಫುಟ್‌ಬಾಲ್ ಟೂರ್ನಿಯ ರೇಂಜಿಗೆ ಸದ್ದನ್ನು ಮಾಡುತ್ತಿದೆ.
ಹೌದು, ವಿಶ್ವದ ಅತಿದೊಡ್ಡ ಜಾಗತಿಕ ಮಾಹಿತಿ ವಿಶ್ಲೇಷಣಾ ಸಂಸ್ಥೆಯಾದ ಡಿಪೋರ್ಟ್ಸ್ & ಫಿನಾನ್ಜಾಸ್ ವಿಶ್ವದಲ್ಲಿ ಅತಿ ಹೆಚ್ಚು ಜನಪ್ರಿಯತೆಯನ್ನು ಹೊಂದಿರುವ ಕ್ರೀಡಾ ತಂಡಗಳ ಟಾಪ್ 10 ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ 9 ಫುಟ್‌ಬಾಲ್ ಆಡುವ ತಂಡಗಳು ಸ್ಥಾನ ಪಡೆದುಕೊಂಡಿದ್ದರೆ, ಕೇವಲ ಒಂದೇ ಒಂದು ಕ್ರಿಕೆಟ್ ತಂಡ ಮಾತ್ರ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹೀಗೆ ಜಾಗತಿಕ ಪಟ್ಟಿಯಲ್ಲಿ ಫುಟ್‌ಬಾಲ್ ಫ್ರಾಂಚೈಸಿಗಳ ಜತೆ ಕ್ರಿಕೆಟ್ ತಂಡವೊಂದರ ಹೆಸರನ್ನು ನೋಡಿದ ವಿಶ್ವ ಕ್ರೀಡಾ ಅಭಿಮಾನಿಗಳು ಹುಬ್ಬೇರಿಸಿದ್ದಾರೆ. ಕ್ರಿಕೆಟ್ ತಂಡವೊಂದು ಜಾಗತಿಕ ಜನಪ್ರಿಯ ಕ್ರೀಡಾ ತಂಡಗಳ ಪಟ್ಟಿಗೆ ಬರುವಷ್ಟು ಬೆಳೆದಿದೆಯಾ ಎಂದು ಆಶ್ಚರ್ಯಕ್ಕೊಳಗಾಗಿದ್ದಾರೆ.
ಇನ್ನು ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಆ ಕ್ರಿಕೆಟ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್ ಈ ಟೂರ್ನಿಗೆ ಸೇರಿದ್ದು ಎಂಬುದು ಹೆಮ್ಮೆಯ ವಿಷಯವಾಗಿದ್ದು, ಈ ಕುರಿತಾದ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ ಓದಿ..

ಏಷ್ಯಾದ ಜನಪ್ರಿಯ ಕ್ರೀಡಾ ತಂಡವಿದು
ವಿಶ್ವದ ಅತಿದೊಡ್ಡ ಜಾಗತಿಕ ಮಾಹಿತಿ ವಿಶ್ಲೇಷಣಾ ಸಂಸ್ಥೆಯಾದ ಡಿಪೋರ್ಟ್ಸ್ & ಫಿನಾನ್ಜಾಸ್ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ಏಷ್ಯಾ ಖಂಡದಲ್ಲಿ ಅತಿ ಹೆಚ್ಚು ಅಭಿಮಾನಿಗಳು ಹಾಗೂ ಜನಪ್ರಿಯತೆಯನ್ನು ಹೊಂದಿರುವ ಕ್ರಿಕೆಟ್ ತಂಡವೆಂದರೆ ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು. ಹೌದು, ಏಷ್ಯಾದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊಂದಿರುವಷ್ಟು ಜನಪ್ರಿಯತೆಯನ್ನು ಇತರೆ ಯಾವುದೇ ಫ್ರಾಂಚೈಸಿ ಕ್ರಿಕೆಟ್ ತಂಡವಾಗಲಿ, ಅಂತರರಾಷ್ಟ್ರೀಯ ಕ್ರಿಕೆಟ್ ತಂಡವಾಗಲಿ ಹಾಗೂ ಇತರೆ ಯಾವುದೇ ಕ್ರೀಡಾ ತಂಡವಾಗಲಿ ಹೊಂದಿಲ್ಲ ಎಂದು ಈ ವರದಿ ತಿಳಿಸಿದೆ.

ವಿಶ್ವದಲ್ಲಿಯೂ ಆರ್‌ಸಿಬಿ ನಂಬರ್ ಒನ್!
ರಾಯಲ್ ಚಾಲೆಂಜರ್ಸ್ ಬೆಂಗಳೂರು ಏಷ್ಯಾ ಖಂಡದ ಜನಪ್ರಿಯ ಕ್ರೀಡಾ ತಂಡವಾಗಿ ಮಾತ್ರವಲ್ಲದೆ ವಿಶ್ವದ ಜನಪ್ರಿಯ ಫ್ರಾಂಚೈಸಿ ಕ್ರಿಕೆಟ್ ತಂಡ ಎಂದು ಕೂಡ ಗುರುತಿಸಿಕೊಂಡಿದೆ. ಕ್ರಿಕೆಟ್ ಜಗತ್ತಿನಲ್ಲಿ ಇರುವ ಎಲ್ಲಾ ಫ್ರಾಂಚೈಸಿ ಕ್ರಿಕೆಟ್ ತಂಡಗಳ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೊಂದಿರುವಷ್ಟು ಜನಪ್ರಿಯತೆಯನ್ನು ಬೇರೆ ಯಾವುದೇ ಫ್ರಾಂಚೈಸಿ ಕ್ರಿಕೆಟ್ ತಂಡ ಹೊಂದಿಲ್ಲ.

2021ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ದರ್ಬಾರ್
ಹೀಗೆ ವಿಶ್ವ ಮಟ್ಟದಲ್ಲಿ ಸದ್ದು ಮಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಳೆದ ವರ್ಷ ಸಾಮಾಜಿಕ ಜಾಲತಾಣದಲ್ಲಿಯೂ ಕೂಡ ದರ್ಬಾರ್ ನಡೆಸಿದೆ. ಕಳೆದ ವರ್ಷ ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿದ ವಿಶ್ವದ ಮೂರನೇ ಕ್ರೀಡಾ ತಂಡ ಎಂಬ ಹೆಗ್ಗಳಿಕೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾತ್ರವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications