Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2020: ಸದ್ದಿಲ್ಲದೇ ಅಭಿಮಾನಿಗಳಿಗೆ ಶಾಕ್ ನೀಡಿದ ಆರ್‌ಸಿಬಿ !

Rcb Removed Their Twitter Profile Pic And Header

ಇನ್ನೇನು ಒಂದೂವರೆ ತಿಂಗಳಲ್ಲಿ ಐಪಿಎಲ್ ಆರಂಭವಾಗಲಿದೆ. ಕ್ರಿಕೆಟ್‌ ಅಭಿಮಾನಿಗಳಿಗೆ ರಸದೌತಣ ನೀಡಲು ತಂಡಗಳ ಫ್ರಾಂಚೈಸಿಗಳು ಆಟಗಾರರು ಸಿದ್ಧರಾಗಿದ್ದಾರೆ. ಈ ಮಧ್ಯೆ ಅಭಿಮಾನಿಗಳ ನೆಚ್ಚಿನ ತಂಡವಾಗಿರುವ ಆರ್‌ಸಿಬಿ ಸದ್ದಿಲ್ಲದೇ ತನ್ನ ತಂಡದ ಅಭಿಮಾನಿಗಳಿಗೆ ಶಾಕ್ ನೀಡಿದೆ.

ಯಾವಾಗಲೂ ಟ್ವಿಟರ್ ಖಾತೆಯಲ್ಲಿ ಆ್ಯಾಕ್ಟಿವ್ ಆಗಿದ್ದು ಅಭಿಮಾನಿಗಳೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದ ಆರ್‌ಸಿಬಿ ಇದ್ದಕ್ಕಿದ್ದಂತೆ ಅಚ್ಚರಿ ಮೂಡಿಸಿದೆ. ಈ ಬೆಳವಣಿಗೆಯ ಬಗ್ಗೆ ಆರ್‌ಸಿಬಿ ಅಭಿಮಾನಿಗಳು ನಾನಾ ರೀತಿಯಲ್ಲಿ ಚರ್ಚೆಯನ್ನು ಶುರುವುಟ್ಟುಕೊಂಡಿದ್ದಾರೆ.

ಆರ್‌ಸಿಬಿ ಅಭಿಮಾನಿಗಳ ತಲೆಗೆ ಹುಳಬಿಟ್ಟುಕೊಳ್ಳುವಂತೆ ಮಾಡಿದ ಆ ವಿಚಾರ ಏನು ಅನ್ನೋದನ್ನು ಮುಂದೆ ನೋಡೋಣ:

ಟ್ವಿಟರ್ ಅಕೌಂಟ್‌ನಲ್ಲಿ ಪ್ರೊಫೈಲ್ ಪಿಕ್ ನಾಪತ್ತೆ:

ಟ್ವಿಟರ್ ಅಕೌಂಟ್‌ನಲ್ಲಿ ಪ್ರೊಫೈಲ್ ಪಿಕ್ ನಾಪತ್ತೆ:

ಎಲ್ಲಾ ಐಪಿಎಲ್ ಫ್ರಾಂಚೈಸಿಗಳೂ ಕೂಡ ತಮ್ಮ ಸಾಮಾಜಿಕ ಜಾಲತಾಣಗಳ ಪ್ರೊಫೈಲ್ ಚಿತ್ರದಲ್ಲಿ ತಂಡದ ಲೋಗೋವನ್ನು ಬಳಸಿಕೊಳ್ಳುವುದು ಸಾಮಾನ್ಯ. ಆರ್‌ಸಿಬಿ ಕೂಡ ಹೀಗೇ ತನ್ನ ಲೋಗೋವನ್ನು ಪ್ರೊಫೈಲ್‌ ಚಿತ್ರವಾಗಿ ಬಳಸಿಕೊಂಡಿತ್ತು. ಆದರೆ ಮಂಗಳವಾರದಂದು ತೆಗೆದುಹಾಕಿದೆ. ಪ್ರೊಫೈಲ್ ಇತ್ರವನ್ನು ಖಾಲಿಬಿಟ್ಟು ಅಚ್ಚರಿ ಮೂಡಿಸಿದೆ.

ನಾನಾ ಚರ್ಚೆಗಳು ಆರಂಭ:

ಯಾವುದೇ ಕಾರಣವನ್ನು ನೀಡದೆ ಆರ್‌ಸಿಬಿ ಈ ರೀತಿ ನಡೆದುಕೊಂಡಿರುವುದಕ್ಕೆ ಬೇರೆ ಬೇರೆ ರೀತಿಯಲ್ಲಿ ಕಾರಣಗಳನ್ನು ಹೇಳಿತ್ತಿದ್ದಾರೆ ಆರ್‌ಸಿಬಿ ಅಭಿಮಾನಿಗಳು. ಕೆಲವರು ನಾಯಕ ವಿರಾಟ್ ಕೊಹ್ಲಿಯ ತಂಡ ನ್ಯೂಜಿಲೆಂಡ್ ವಿರುದ್ಧ ವೈಟ್‌ವಾಶ್ ಆದ ಕಾರಣಕ್ಕೆ ಈ ರೀತಿ ಪ್ರೊಫೈಲ್ ಖಾಲಿ ಬಿಟ್ಟಿದೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ಬದಲಾಗಲಿದ್ಯಾ ಆರ್‌ಸಿಬಿ ಲೋಗೋ:

ಬದಲಾಗಲಿದ್ಯಾ ಆರ್‌ಸಿಬಿ ಲೋಗೋ:

ಆರ್‌ಸಿಬಿ ಟ್ವಿಟರ್ ಖಾತೆಯ ಪ್ರೊಫೈಲ್ ಚಿತ್ರ ಖಾಲಿ ಬಿಡಲು ತ್ತೊಂದು ಬಲವಾದ ಕಾರಣ ಕೇಳಿ ಬರುತ್ತಿದೆ. ಆರ್‌ಸಿಬಿ ಲೋಗೋ ಬದಲಾಗಲಿದೆ ಎಂಬ ಮಾತುಗಳು ಅಭಿಮಾನಿಗಳ ಚರ್ಚೆಯ ಕೇಂದ್ರ ಬಿಂದುವಾಗಿದೆ. ಇದನ್ನು ಕೂಡ ಆರ್‌ಸಿಬಿ ಖಚಿತಪಡಿಸಬೇಕಿದೆ.

ಮುತ್ತೂಟ್ ಫಿನ್‌ಕಾರ್ಪ್‌ಗೆ ಆರ್‌ಸಿಬಿ ಟೈಟಲ್ ಪ್ರಾಯೋಜಕತ್ವ:

ಮುತ್ತೂಟ್ ಫಿನ್‌ಕಾರ್ಪ್‌ಗೆ ಆರ್‌ಸಿಬಿ ಟೈಟಲ್ ಪ್ರಾಯೋಜಕತ್ವ:

ಈ ಚರ್ಚೆಗಳ ಮಧ್ಯೆ ಮತ್ಯೊಂದು ಬದಲಾವಣೆ ಆರ್‌ಸಿಬಿಯಲ್ಲಾಗಿದೆ. ಆರ್‌ಸಿಬಿ ಟೈಟಲ್ ಪ್ರಾಯೋಜಕತ್ವ ಮುತ್ತೂಟ್ ಫಿನ್‌ಕಾರ್ಪ್ ಲಿಮಿಟೆಡ್‌ನ ಪಾಲಾಗಿದೆ. ಮುತ್ತೂಟ್ ಪಾಪ್ಪಚಾನ್ ಗ್ರೂಪ್‌ನ ಸಹಸಂಸ್ಥೆಯಾಗಿದೆ. ಹೀಗಾಗಿ ಈ ಬಾರಿಯ ಆರ್‌ಸಿಬಿ ಜರ್ಸಿಯ ಮುಂಬಾಗದಲ್ಲಿ ಮುತ್ತೂಟ್ ಫಿನ್‌ಕಾರ್ಪ್‌ನ ಲೋಗೋ ಇರಲಿದೆ.

Story first published: Wednesday, February 12, 2020, 13:42 [IST]
Other articles published on Feb 12, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+