Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RCB ತಂಡ ಮಾರಾಟಕ್ಕೆ? ಬೆಲೆ ಕೇಳಿದ್ರೆ ತಲೆ ತಿರುಗೋದು ಗ್ಯಾರಂಟಿ

17 ವರ್ಷಗಳಿಂದ ಚಾಂಪಿಯನ್‌ ಪಟ್ಟವನ್ನು ಅಲಂಕರಿಸುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಆಸೆ ಫಲಿಸಿದೆ. ಈ ತಂಡ 18ನೇ ಆವೃತ್ತಿಯ ಐಪಿಎಲ್‌ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದೆ. ಅಹಮದಾಬಾದ್‌ನಲ್ಲಿ 6 ರನ್‌ಗಳಿಂದ ಪಂಜಾಬ್‌ ಕಿಂಗ್ಸ್ ತಂಡವನ್ನು ಮಣಿಸಿದ್ದ ಆರ್‌ಸಿಬಿ, ಪ್ರಶಸ್ತಿ ಬರಕ್ಕೆ ಕೊನೆ ಹಾಡಿದೆ. ಈ ಗೆಲುವಿನ ಸಂಭ್ರಮಾಚರಣೆಯ ರಾತ್ರಿ ಇಡಿ ನಡೆಯಿತು. ಅಲ್ಲದೆ ಬುಧವಾರವೂ ಬೆಂಗಳೂರಿನ ವಿಧಾನಸೌಧ ಹಾಗೂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಿತು. ಈ ವೇಳೆ ನೂಕು ನುಗ್ಗಲು ನಡೆದು 11 ಜನರ ಸಾವನ್ನಪ್ಪಿದ್ರು. ಇದರಿಂದ ಆರ್‌ಸಿಬಿ ತಂಡಕ್ಕೆ ಭಾರೀ ಮುಜುಗರವಾಗಿದೆ.

ಆರ್‌ಸಿಬಿ ತಂಡ ತರಾತುರಿಯಲ್ಲಿ ಸಂಭ್ರಮಾಚರಣೆಯನ್ನು ಮಾಡಿಲು ನಿರ್ಧರಿಸುವುದು ಈಗ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದೆ. ಈ ಬಗ್ಗೆ ಹೈಕೋರ್ಟ್‌ನಲ್ಲಿ ಕೇಸ್ ಸಹ ದಾಖಲಿಸಲಾಗಿದೆ. ಇನ್ನು ಆರ್‌ಸಿಬಿ, ಈವೆಂಟ್‌ ಮ್ಯಾನೇಜ್ಮೆಂಟ್‌ ಡಿಎನ್‌ಎ, ಕೆಎಸ್‌ಸಿಎ ವಿರುದ್ಧ ಕಬ್ಬನ್ ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ಸಹ ದಾಖಲಿಸಲಾಗಿದೆ. ಈಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಸಿಬಿ ಮಾರ್ಕೆಟಿಂಗ್ ಹೆಡ್‌ ನಿಖಿಲ್‌ ಸೋಸ್ಲೆ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಇದು ವಿಶ್ವ ಮಟ್ಟದಲ್ಲಿ ಆರ್‌ಸಿಬಿ ತಂಡಕ್ಕೆ ಮುಜುಗರ ತಂದಿದೆ.

RCB Reportedly Up for Sale at 2 Billion Following IPL Trophy Celebration Tragedy

ಕಪ್‌ ಚುಕ್ಕೆ

ವಿಶ್ವ ಮಟ್ಟದಲ್ಲಿ ಅತಿ ಹೆಚ್ಚು ಫ್ಯಾನ್‌ಗಳನ್ನು ಹೊಂದಿರುವ ಕ್ರಿಕೆಟ್‌ ತಂಡ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದ ಆರ್‌ಸಿಬಿ, ತಂಡ ಕಪ್‌ ಗೆಲ್ಲುತ್ತಿದ್ದಂತೆ ಟೀಕೆಗಳು ಕೇಳಿ ಬರುತ್ತಿವೆ. ಈ ಎಲ್ಲ ಮುಜುಗುರದಿಂದ ಬಚಾವ್ ಆಗಲು ಆರ್‌ಸಿಬಿ ಮಾಸ್ಟರ್‌ ಪ್ಲ್ಯಾನ್‌ ಮಾಡಿದೆ. ಈ ಮಾಸ್ಟರ್‌ ಪ್ಲ್ಯಾನ್‌ ಅದೆಷ್ಟೋ ಉದ್ಯಮಿಗಳ ಚಿತ್ತವನ್ನು ಕದ್ದಿದೆ.

ಎಷ್ಟು ಬೆಲೆ ಗೊತ್ತಾ?

ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್, ಡಿಯಾಜಿಯೊದ ಇಂಡಿಯಾ ಈಗ ತನ್ನ ವಿಶ್ವ ವಿಖ್ಯಾತ ತಂಡವನ್ನು ಮಾರಟಕ್ಕೆ ಮುಂದಾಗಿದೆ ಎಂಬ ಸುದ್ದಿಗಳು ಕೇಳಿ ಬರುತ್ತಿವೆ. ಹಾಗಿದ್ದರೆ, ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್, ಎಷ್ಟು ಹಣಕ್ಕೆ ಮಾರಟಮಾಡಲು ಪ್ಲ್ಯಾನ್‌ ಮಾಡಿಕೊಂಡಿದೆ ಎಂದು ಕೇಳಿದ್ರೆ ನಿಜಕ್ಕೂ ಒಮ್ಮೆ ತಲೆ ಕೆಡೋದು ಗ್ಯಾರಂಟಿ. ವರದಿಗಳ ಪ್ರಕಾರಣ ಸಂಸ್ಥೆ ಆರ್‌ಸಿಬಿ ತಂಡವನ್ನು 2 ಬಿಲಿಯನ್‌ ಯುಸ್‌ ಡಾಲರ್‌ಗೆ ಮಾರಾಟ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ ಎಂದು ತಿಳಿದು ಬಂದಿದೆ. ಅಂದರೆ ಭಾರತೀಯ ರೂಪಾಯಿಗಲ್ಲಿ ಈ ತಂಡವನ್ನು ಕಂಪನಿ ಸುಮಾರು 1.72 ಸಾವಿರ ಕೋಟಿ ರೂ.ಗೆ ಮಾರಾಟ ಮಾಡಲಿದೆ.

ಈ ಸುದ್ದಿಯ ಬಗ್ಗೆ ಆರ್‌ಸಿಬಿ ಇನ್ನು ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಆದರೆ ಈ ಸುದ್ದಿ ಸದ್ಯ ಸಾಮಾಜಿಕ ತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹಾಗಿದ್ದಾರೆ 19ನೇ ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಮಾಲೀಕತ್ವ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಬಳಿ ಇರುವುದಿಲ್ಲವೇ ಎಂಬ ಚರ್ಚೆಗಳು ಆರಂಭವಾಗಿದೆ. ಈ ಎಲ್ಲ ಪ್ರಶ್ನೆಗಳಿಗೆ ಇನ್ನೇನು ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.

Story first published: Tuesday, June 10, 2025, 13:55 [IST]
Other articles published on Jun 10, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+