For Quick Alerts
ALLOW NOTIFICATIONS  
For Daily Alerts
 

ಆ ಒಬ್ಬ ಪ್ಲೇಯರ್‌ ಉಳಿಸಿಕೊಂಡಿದ್ದಕ್ಕೆ RCB ವಿರುದ್ಧ ಫ್ಯಾನ್ಸ್‌ ಗರಂ

ಐಪಿಎಲ್‌ 2026ರ ರಿಟೆನ್ಷನ್‌ ಲೀಸ್ಟ್‌ನ್ನು ಎಲ್ಲ ತಂಡಗಳು ಬಿಡುಗಡೆ ಮಾಡಿವೆ. ಅಂತೆ ಶನಿವಾರ ಸಂಜೆ ಆರ್‌ಸಿಬಿ ಸಹ ತಾನು ಉಳಿಸಿಕೊಂಡ ಹಾಗೂ ಕೈ ಬಿಟ್ಟ ಆಟಗಾರರ ಪಟ್ಟಿಯನ್ನು ಐಪಿಎಲ್‌ ಮಂಡಳಿಗೆ ನೀಡಿದೆ. ಈ ವೇಳೆ ಆರ್‌ಸಿಬಿ ಉಳಿಸಿಕೊಂಡ ಆ ಒಬ್ಬ ಆಟಗಾರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಹಾಲಿ ಚಾಂಪಿಯನ್‌ ಬೆಂಗಳೂರು ತಂಡ ಇವರನ್ನು ಉಳಿಸಿಕೊಂಡಿದ್ದು ಈಗ ವಿವಾದ ಸೃಷ್ಟಿಸಿದೆ.

ಎರಡು ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ವೇಗದ ಬೌಲರ್ ಯಶ್ ದಯಾಳ್‌ ಅವರನ್ನು ಆರ್‌ಸಿಬಿ ರಿಟೇನ್ ಮಾಡಿದೆ. ಇವರನ್ನು ಆರ್‌ಸಿಬಿ ಉಳಿಸಿಕೊಂಡಿದ್ದು, ಸಾಮಾಜಿಕ ತಾಣಗಳಲ್ಲಿ ಸದ್ದು ಮಾಡುತ್ತಿದೆ. ಇವರ ವಿರುದ್ಧ ಎಫ್‌ಐಆರ್‌ ಸಹ ದಾಖಲಾಗಿದೆ. ಗಾಜಿಯಾಬಾದ್‌ನಲ್ಲಿ ಮಹಿಳೆ ಕಿರುಕುಳ ನೀಡಿದ ಆರೋಪ ಮಾಡಿ ದೂರು ದಾಖಲಿಸಿದ್ದಾರೆ. ದೂರು ದಾರೆ ಯಶ್‌ ದಯಾಳ್ ಅವರು ತಮ್ಮನ್ನು ಮದುವೆ ಮಾಡಿಕೊಳ್ಳುವುದಾಗಿ ತಿಳಿಸಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಇದರಿಂದ ಜುಲೈನಲ್ಲಿ ಎಫ್‌ಐಆರ್‌ ಸಹ ದಾಖಲಿಸಲಾಗಿದೆ.

RCB Retains Controversial Bowler Yash Dayal Despite Serious Sexual Assault amp amp Cheating Allegations

ಈ ಪ್ರಕರಣ ಬೆಳಕಿಗೆ ಬರುತ್ತಲೆ ಮತ್ತೊಬ್ಬ ಮಹಿಳೆ ಸಹ ಇದೇ ರೀತಿ ಧ್ವನಿ ಎತ್ತಿದ್ದಾರೆ. ಯುವತಿ ಯಶ್‌, ತಮ್ಮನ್ನು ರೇಪ್‌ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಅಲ್ಲದೆ ತಮಗೆ 17 ವರ್ಷ ಆಗಿದ್ದಾಗಿನಿಂದ ಯಶ್‌ ಜೊತೆ ಸಂಬಂಧ ಹೊಂದಿದ್ದಾಗಿ ತಿಳಿಸಿದ್ದಾರೆ. ಐಪಿಎಲ್‌ ಪಂದ್ಯಗಳ ವೇಳೆ ಯಶ್ ಹೊಟೇಲ್‌ನಲ್ಲಿ ತಮ್ಮ ವಿರುದ್ಧ ಸಂಬಂಧವನ್ನು ಹೊಂದಿದ್ದಾಗಿ ಬಹಿರಂಗ ಪಡಿಸಿದ್ದಾರೆ. ಅಲ್ಲದೆ ಆ ಸಮಯದಲ್ಲಿನ ಯುವತಿ 17 ವರ್ಷ ಆಗಿದ್ದರಿಂದ ಪೋಸ್ಕೊ ಕೇಸ್ ದಾಖಲಿಸಲಾಗಿದೆ.

ಫೈನಲ್‌ ಪಂದ್ಯ ಆಡಿದ್ದೇ ಕೊನೆ..

ಗಾಜಿಯಾಬಾದ್ ಪ್ರಕರಣದಲ್ಲಿ ದಯಾಳ್ ಅವರಿಗೆ ಬಂಧನದಿಂದ ತಾತ್ಕಾಲಿಕ ರಕ್ಷಣೆ ಸಿಕ್ಕಿದ್ದರೂ, ಅಲಹಾಬಾದ್ ಹೈಕೋರ್ಟ್ ಎರಡೂ ವಿಷಯಗಳಲ್ಲಿ ತನಿಖೆ ಮುಂದುವರೆದಿದೆ. ಕಳೆದ ಬಾರಿ ಆರ್‌ಸಿಬಿ ಚಾಂಪಿಯನ್‌ ಆಗಿರುವಲ್ಲಿ ಯಶ್‌ ದಯಾಳ್‌ ಪ್ರಮುಖ ಪಾತ್ರವನ್ನು ವಹಿಸಿದ್ದರು. ಯಶ್‌ ದಯಾಳ್ ಐಪಿಎಲ್‌ ಫೈನಲ್‌ ಆದ ಬಳಿಕ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್‌ ಆಡಿಲ್ಲ. ಆದರೂ ಫ್ರಾಂಚೈಸಿ ಯಶ್‌ ದಯಾಳ್‌ ಅವರನ್ನು ಉಳಿಸಿಕೊಂಡಿದ್ದು ಏಕೆ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಫ್ರಾಂಚೈಸಿ ಕ್ರಮದ ವಿರುದ್ಧ ಅಭಿಮಾನಿಗಳು ಗರಂ ಆಗಿದ್ದಾರೆ.

ಆರ್‌ಸಿಬಿ ತನ್ನ ಆಟಗಾರರನ್ನು ಉಳಿಸಿಕೊಳ್ಳುವಾಗ ರಾಜ್ಯ ಕ್ರಿಕೆಟ್ ಸಂಸ್ಥೆಯ ಶಿಸ್ತಿನ ಕ್ರಮವನ್ನು ಏಕೆ ನಿರ್ಲಕ್ಷಿಸಿತು ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ. ಐಪಿಎಲ್ ಹರಾಜು ಸಮೀಪಿಸುತ್ತಿರುವಾಗ, ಈ ವಿವಾದವು ಹಾಲಿ ಚಾಂಪಿಯನ್ಸ್‌ ಚಿಂತೆ ಹೆಚ್ಚಿಸಿದೆ.

ಆರ್‌ಸಿಬಿ ಉಳಿಸಿಕೊಂಡ ಆಟಗಾರರು: ರಜತ್ ಪಾಟಿದಾರ್ (ಸಿ), ವಿರಾಟ್ ಕೊಹ್ಲಿ, ಜಿತೇಶ್ ಶರ್ಮಾ (ವಿಕೆಟ್‌ ಕೀಪರ್), ದೇವದತ್ ಪಡಿಕ್ಕಲ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ರಸಿಖ್ ಸಲಾಂ, ಸುಯಶ್ ಶರ್ಮಾ, ಯಶ್ ದಯಾಲ್, ಅಭಿನಂದನ್ ಸಿಂಗ್, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ಫಿಲ್ ಸಾಲ್ಟ್ (ವಿಕೆಟ್‌ ಕೀಪರ್), ಜಾಕೋಬ್ ಬೆಥೆಲ್, ರೊಮಾರಿಯೊ ಶೆಫರ್ಡ್, ಜೋಶ್‌ ಹ್ಯಾಜಲ್‌ವುಡ್‌, ನುವಾನ್‌ ತುಷಾರ.

Story first published: Sunday, November 16, 2025, 13:15 [IST]
Other articles published on Nov 16, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+