For Quick Alerts
ALLOW NOTIFICATIONS  
For Daily Alerts
 

RCB Retention: ವಿದೇಶಿ ಆಟಗಾರರಿಗೆ ಇಲ್ಲ ಅವಕಾಶ: ಹರಾಜು ಅಂಗಳಕ್ಕೆ ಸ್ಟಾರ್ಸ್‌ ಎಂಟ್ರಿ

ಆರ್‌ಸಿಬಿ ತಂಡ ತನ್ನ ತಂಡದಲ್ಲಿ ಯಾವುದೇ ವಿದೇಶಿ ಆಟಗಾರರನ್ನು ಉಳಿಸಿಕೊಂಡಿಲ್ಲ. ಆರ್ ಸಿಬಿ ಉಳಿಸಿಕೊಂಡ ಮೂವರು ಆಟಗಾರರು ಭಾರತದವರೇ ಆಗಿದ್ದು, ಏನೆಲ್ಲಾ ಪ್ಲ್ಯಾನ್‌ ಮಾಡಿಕೊಳ್ಳುತ್ತಿದೆ ಎಂಬುದು ಕುತೂಹಲ ಮೂಡಿಸಿದೆ. ಆರ್‌ಸಿಬಿ ಐಪಿಎಲ್‌ ಹರಾಜಿನಲ್ಲಿ ಮೂರು ರೈಟ್‌ ಟು ಮ್ಯಾಚ್‌ ಕಾರ್ಡ್‌ಗಳನ್ನು ಬಳಸಬಹುದಾ ಎಂಬ ಪ್ರಶ್ನೆಗಳು ಎದ್ದಿವೆ.

ಆರ್‌ಸಿಬಿ ತಂಡದಲ್ಲಿ ವಿದೇಶಿ ಸ್ಟಾರ್‌ ಆಟಗಾರರಾದ ವಿಲ್ ಜಾಕ್ಸ್, ಗ್ಲೇನ್‌ ಮ್ಯಾಕ್ಸ್‌ ವೆಲ್‌, ಫಾಫ್‌ ಡುಪ್ಲೇಸಿಸ್‌, ಕ್ಯಾಮರೂನ್‌ ಗ್ರೀನ್ ಸೇರಿದಂತೆ ಸ್ಟಾರ್‌ ಆಟಗಾರರ ದಂಡೇ ಇತ್ತು. ಆದರೆ ಇವರು ಮಾಲೀಕರ ಮನ ಗೆಲ್ಲುವಲ್ಲಿ ವಿಫಲರಾಗಿದ್ದು, ಹರಾಜು ಅಂಗಳ ಪ್ರವೇಶಿಸಲಿದ್ದಾರೆ.

RCB Retains Only Indian Players Foreign Stars Released Ahead of IPL Auction 2025

ವಿದೇಶಿಗರಿಗೆ ಗೇಟ್‌ ಪಾಸ್‌?

ಆರ್‌ಸಿಬಿ ಪರ ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಆಟಗಾರ ವಿಲ್‌ ಜಾಕ್ಸ್‌. ಇವರು ಆಡಿದ 8 ಪಂದ್ಯಗಳಲ್ಲಿ 230 ರನ್‌ ಸಿಡಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ ಒಂದು ಅರ್ಧಶತಕ ಸಹ ಸೇರಿದೆ. ಅಲ್ಲದೆ ಬೌಲಿಂಗ್‌ನಲ್ಲೂ ಎರಡು ವಿಕೆಟ್‌ ಕಬಳಿಸಿದ್ದಾರೆ. ಇವರನ್ನು ಆರ್‌ಸಿಬಿ ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ.

ಮ್ಯಾಕ್ಸ್‌ ಠುಸ್‌..

ಗ್ಲೇನ್‌ ಆಡಿದ 10 ಪಂದ್ಯಗಳಲ್ಲಿ ಕೇವಲ 6 ವಿಕೆಟ್‌ ಪಡೆದಿದ್ದಾರೆ. ಅಲ್ಲದೆ ಕೇವಲ 52 ರನ್‌ ಕಲೆಹಾಕಿ ಟೀಕೆಗೆ ಗುರುಯಾಗಿದ್ದರು. ಹೀಗಾಗಿ ಇವರನ್ನು ಆರ್‌ಸಿಬಿ ಕೈ ಬಿಟ್ಟಿದೆ.

ಫಾಫ್‌ ಹರಾಜು ಅಂಗಳಕ್ಕೆ

ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಮನಮೋಹಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಫಾಫ್‌ ಡುಪ್ಲೇಸಿಸ್‌ ಆಡಿದ 15 ಪಂದ್ಯಗಳಲ್ಲಿ 29.20ರ ಸರಾಸರಿಯಲ್ಲಿ 438 ರನ್‌ ಸಿಡಿಸಿದ್ದರು. ಇದರಲ್ಲಿ 4 ಅರ್ಧಶತಕಗಳು ಸೇರಿವೆ. ಇವರ ವಯಸ್ಸು ಇವರನ್ನು ತಂಡದಿಂದ ಕೈ ಬಿಡುವಂತೆ ಮಾಡಿದೆ.

ಕಳೆದ ಬಾರಿ ಐಪಿಎಲ್‌ ಹರಾಜಿನ ವೇಳೆ ಮುಂಬೈ ಇಂಡಿಯನ್ಸ್ ತಂಡದಿಂದ ಟ್ರೇಡ್ ಮಾಡಿಕೊಂಡಿದ್ದ ಕ್ಯಾಮರೂನ್‌ ಗ್ರೀನ್ ಅವರನ್ನು ಸಹ ತಂಡ ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ. ಇವರು ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡುವಲ್ಲಿ ವಿಫಲರಾಗಿದ್ದು, ಹರಾಜು ಅಂಗಳ ಪ್ರವೇಶಿಸಲಿದ್ದಾರೆ.

ಉಳಿದಂತೆ ಭರವಸೆ ಇಟ್ಟು ಹಣ ನೀಡಿ ತಂಡಕ್ಕೆ ಬರಮಾಡಿಕೊಳ್ಳಲಾಗಿದ್ದ ಅಲ್ಜಾರಿ ಜೋಸೆಫ್‌, ಲಾಕಿ ಫಾರ್ಗ್ಯೂಸನ್‌, ರೀಸ್ ಟಾಪ್ಲಿ ಸಹ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು.

ಹರಾಜಿನಲ್ಲಿ ಅವಕಾಶ

ಐಪಿಎಲ್‌ ಮೆಗಾ ಹರಾಜಿನಲ್ಲಿ ಆರ್‌ಸಿಬಿ ರೈಟ್‌ ಟು ಮ್ಯಾಚ್ ಕಾರ್ಡ್‌ ಬಳಸಿ ವಿದೇಶಿ ಆಟಗಾರರನ್ನು ಸೆಳೆಯಬಹುದು ಎಂಬ ಮಾತುಗಳ ಸಹ ಕೇಳಿ ಬರುತ್ತಿವೆ. ಫಾಫ್‌ ಡುಪ್ಲೇಸಿಸ್ ಹಾಗೂ ವಿಲ್‌ ಜಾಕ್ಸ್‌ ಅವರಿಗೆ ಆರ್‌ಸಿಬಿ ಒಂದು ಚಾನ್ಸ್‌ ತೆಗೆದುಕೊಳ್ಳಲಿದೆ. ಈ ಇಬ್ಬರೂ ಆಟಗಾರರು ಕಳೆದ ಆವೃತ್ತಿಯಲ್ಲಿ ತಮ್ಮ ಕ್ಷಮತೆಯನ್ನು ತೋರಿಸಿದ್ದರು. ಹೀಗಾಗಿ ಇವರು ತಂಡದಲ್ಲಿದ್ದರೆ ಸಂಘಟಿತ ಆಟ ಮೂಡಿ ಬರಬಹುದು ಎಂದು ನಿರೀಕ್ಷಿಸಲಾಗಿದೆ. ಆದರೆ ಗ್ಲೇನ್‌ ಮ್ಯಾಕ್ಸ್‌ವೆಲ್ ಮೇಲೆ ತಂಡ ಹಣ ಸುರಿಯಲು ಮನಸ್ಸಿಲ್ಲ.

Story first published: Thursday, October 31, 2024, 18:27 [IST]
Other articles published on Oct 31, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+