IPL Auction 2025 RCB: ಹರಾಜಿನಲ್ಲಿ ಆರ್‌ಸಿಬಿಗೆ ಸಿಕ್ಕಿಲ್ಲ ನಾಯಕ: ಎರಡನೇ ದಿನವೂ ನಡೆಯಲಿದೆ ಹುಡುಕಾಟ
ಆರ್‌ಸಿಬಿ ಐಪಿಎಲ್ ಮೆಗಾ ಹರಾಜಿನ ಎರಡನೇ ದಿನವೂ ಭರ್ಜರಿ ಆಟಗಾರರ ಬೇಟೆ ನಡೆಸಲಿದೆ. ಈ ವೇಳೆ ಎರಡನೇ ದಿನದ ಅತಿ ಹೆಚ್ಚು ಹಣವನ್ನು ಹೊಂದಿರುವ ತಂಡ ಆರ್‌ಸಿಬಿ. ಬೆಂಗಳೂರು ತಂಡ ಮೊದಲ ದಿನ ಹಲವು ಆಟಗಾರರನ್ನು ಖರೀದಿ ಮಾಡಿದ ಆದರೆ, ಆ ಒಂದು ಸ್ಪಾಟ್ ಮಾತ್ರ ಇನ್ನು ಖಾಲಿ ಇದೆ. ಆ ಸ್ಪಾಟ್‌ಗೆ ಸೂಕ್ತ ಆಟಗಾರನ ಹುಡುಕಾಟದಲ್ಲಿದೆ. ಈ ಸ್ಥಾನಕ್ಕೆ ಯಾರನ್ನು ತುಂಬಿಕೊಳ್ಳುತ್ತದೆ ಎಂಬ ಕುತೂಹಲ ಮನೆ ಮಾಡಿದೆ.
ಆರ್‌ಸಿಬಿ ಮೊದಲ ದಿನ ಹರಾಜು ಅಂಗಳವನ್ನು 83 ಕೋಟಿ ರೂಪಾಯಿಯೊಂದಿಗೆ ಪ್ರವೇಶಿಸಿತ್ತು. ಮೊದಲ ದಿನ ಸುಮಾರು 32 ಕೋಟಿ ರೂಪಾಯಿ ಉಳಿಸಿಕೊಂಡಿದೆ. 50 ಕೋಟಿ ರೂಪಾಯಿಗೂ ಹೆಚ್ಚಿನ ಹಣವನ್ನು ಹೂಡಿದರೂ ಆರ್‌ಸಿಬಿಗೆ ಇನ್ನು ನಾಯಕ ಸಿಕ್ಕಿಲ್ಲ. ಹೀಗಾಗಿ ಆರ್‌ಸಿಬಿ ಎರಡನೇ ದಿನದ ಹಾರಜಿನಲ್ಲಿ ನಾಯಕನ ಹುಡುಕಾಟವನ್ನು ಮುಂದುವರೆಸಲಿದೆ. ಆರ್‌ಸಿಬಿ ಯಾರಿಗೆ ದೊಡ್ಡ ಬಿಡ್ ಮಾಡುತ್ತದೆ ಎಂಬುದೇ ಕುತೂಹಲ ಮೂಡಿಸಿದೆ.

ಮೊದಲ ದಿನ ಅಂಗಳ ಪ್ರವೇಶಿಸಿದ್ದ ಸ್ಟಾರ್ ನಾಯಕರನ್ನು ಕೊಳ್ಳಲು ಆರ್‌ಸಿಬಿ ಹಿಂದೇಟು ಹಾಕಿತು. ಕರ್ನಾಟಕದ ಸೂಪರ್ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಅವರಿಗೆ ಬಿಡ್ ಮಾಡದೇ ಇರುವುದು ನಿಜಕ್ಕೂ ಅಭಿಮಾನಿಗಳಲ್ಲಿ ಬೇಸರ ತರಿಸಿದೆ. ಇನ್ನು ಟೀಮ್ ಇಂಡಿಯಾದ ಭರವಸೆಯ ಆಟಗಾರ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರಿಗೂ ಆರ್‌ಸಿಬಿ ಹಣವನ್ನು ಹೂಡುವಲ್ಲಿ ಹಿಂದೇಟು ಹಾಕಿದೆ. ಐಪಿಎಲ್ 2024ರ ಚಾಂಪಿಯನ್ ತಂಡದ ಮುಂದಾಳು ಶ್ರೇಯಸ್ ಅಯ್ಯರ್ ಅವರಿಗೆ ಡೆಲ್ಲಿ ಭಾರೀ ಮೊತ್ತ ನೀಡಿತು. ಇವರನ್ನು ಕೊಳ್ಳುವ ಗೋಜಿಗೆ ಆರ್‌ಸಿಬಿ ಹೋಗಲಿಲ್ಲ.
ಎರಡನೇ ದಿನದ ಹರಾಜಿನಲ್ಲಿ ಆರ್‌ಸಿಬಿ ನಿಶ್ಚಿತವಾಗಿ ನಾಯಕನ ಹುಡುಕಾಟ ಜೋರಾಗಿ ನಡೆಸುತ್ತದೆ. ಇನ್ನು ಹಲವು ಸ್ಟಾರ್ ಆಟಗಾರರು ಅಖಾಡ ಪ್ರವೇಶಿಸುವುದು ಬಾಕಿ ಇದೆ. ಈ ವೇಳೆ ಆರ್‌ಸಿಬಿ ಯಾವ ಪ್ಲೇಯರ್‌ಗೆ ಬಾಜಿ ಕಟ್ಟುತ್ತದೆ ಎಂಬುದೇ ಕುತೂಹಲ ಮೂಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications