IPL 2025 RCB Time Table: ಬೆಂಗಳೂರಿನಲ್ಲಿ ಪಂದ್ಯಗಳು ನಡೆಯುವುದು ಯಾವಾಗ? ಆರ್‌ಸಿಬಿ ಕಂಪ್ಲೀಟ್ ವೇಳಾಪಟ್ಟಿ
ಶುಕ್ರವಾರದಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಲಿದೆ. ಈ ಲೀಗ್‌ನ ಅತ್ಯಂತ ಪ್ರಸಿದ್ಧ ತಂಡಗಳಲ್ಲಿ ಒಂದಾಗಿರುವ ಆರ್‌ಸಿಬಿ ಈ ಬಾರಿಯೂ ಕಣಕ್ಕೆ ಇಳಿಯಲಿದೆ. ಕಳೆದ 17 ಆವೃತ್ತಿಗಳಲ್ಲಿ ತಂಡವನ್ನು ಬಹುವಾಗಿ ಕಾಡಿದ ಟ್ರೋಫಿಯನ್ನು ಎತ್ತಲೇ ಬೇಕು ಎಂಬ ವಿಶ್ವಾಸದಲ್ಲಿ ಆರ್‌ಸಿಬಿ ಈ ಬಾರಿ ಕಣಕ್ಕೆ ಇಳಿಯಲಿದೆ. ಹೊಸ ನಾಯಕನೊಂದಿಗೆ ಹೊಸ ಆಟಗಾರರನ್ನು ಹೊಂದಿರುವ ಆರ್‌ಸಿಬಿ ಬಲಿಷ್ಠವಾಗಿ ಕಾಣುತ್ತಿದೆ. ಈ ಬಾರಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಎಷ್ಟು ಪಂದ್ಯಗಳನ್ನು ಆಡಲಿದೆ ಎಂಬ ಬಗ್ಗೆ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ ಆರ್‌ಸಿಬಿ, ನವ ಉತ್ಸಾಹದಲ್ಲಿ ಈ ಬಾರಿ ಕಣಕ್ಕೆ ಇಳಿಯಲಿದೆ. ಈ ಬಾರಿ ಬ್ಯಾಟಿಂಗ್ ಹಗೂ ಬೌಲಿಂಗ್ ವಿಭಾಗದಲ್ಲಿ ಸ್ಟಾರ್ ಆಟಗಾರರು ತಂಡದಲ್ಲಿದ್ದು ಭರವಸೆ ಮೂಡಿಸಿದೆ. ಈ ಬಾರಿ ಬೆಂಗಳೂರು ತಂಡ ತನ್ನ ತವರು ಎಂ ಚಿನ್ನಸ್ವಾಮಿ ಅಂಗಳದಲ್ಲಿ ಒಟ್ಟು 7 ಪಂದ್ಯಗಳನ್ನು ಆಡಲಿದೆ. ಲೀಗ್ ಹಂತದಲ್ಲಿ ಆರ್‌ಸಿಬಿ ಒಟ್ಟು 14 ಪಂದ್ಯಗಳನ್ನು ಆಡಲಿದ್ದು, 7 ತವರಿನಲ್ಲಿ ಹಾಗೂ 7 ವಿರೋಧಿಗಳ ತವರಿನಲ್ಲಿ ಪಂದ್ಯವನ್ನು ಆಡಲಿದೆ.

ಈ ಬಾರಿ ಬೆಂಗಳೂರು ತಂಡ ಬೆಂಗಳೂರಿನಲ್ಲಿ ಒಟ್ಟು ಏಳು ಪಂದ್ಯಗಳನ್ನು ಆಡಲಿದ್ದು, ಏಪ್ರಿಲ್ 2 ರಂದು ಪಂದ್ಯ ತವರಿನಲ್ಲಿ ನಡೆಯಲಿದೆ. ಮೊದಲ ಪಂದ್ಯದಲ್ಲಿ ಆರ್‌ಸಿಬಿ ತವರಿನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಕಾದಾಟ ನಡೆಸಲಿದೆ. ಲೀಗ್ ಹಂತದ ಕೊನೆಯ ಪಂದ್ಯವನ್ನು ಆರ್‌ಸಿಬಿ ಚಿನಸ್ವಾಮಿ ಅಂಗಳದಲ್ಲಿ ಮೇ 17 ರಂದು ಆಡಲಿದ್ದು, ಉದ್ಘಾಟನಾ ಪಂದ್ಯವನ್ನು ಆಡಿದ ಕೆಕೆಆರ್ ವಿರುದ್ಧ ಕಣಕ್ಕೆ ಇಳಿಯಲಿದೆ. ಇನ್ನೊಂದು ವಿಶೇಷ ಅಂದ್ರೆ ಈ ಬಾರಿ ರೋಹಿತ್ ಶರ್ಮಾ ಹಾಗೂ ರಿಷಭ್ ಪಂಥ್ ಅವರ ತಂಡ ಬೆಂಗಳೂರಿನಲ್ಲಿ ಪಂದ್ಯಗಳನ್ನು ಆಡುತ್ತಿಲ್ಲ.
ಬೆಂಗಳೂರಿನಲ್ಲಿ ನಡೆಯುವ ಆರ್‌ಸಿಬಿ ಪಂದ್ಯಗಳು
ಏ.2, ಗುಜರಾತ್ ಟೈಟಾನ್ಸ್ ವಿರುದ್ಧ, ಸಂಜೆ 7.30ಕ್ಕೆ
ಏ.10, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ, ಸಂಜೆ 7.30ಕ್ಕೆ
ಏ.18, ಪಂಜಾಬ್ ಕಿಂಗ್ಸ್ ವಿರುದ್ಧ, ವಿರುದ್ಧ, ಸಂಜೆ 7.30ಕ್ಕೆ
ಏ.24, ರಾಜಸ್ಥಾನ ರಾಯಲ್ಸ್ ವಿರುದ್ಧ, ಸಂಜೆ 7.30ಕ್ಕೆ
ಮೇ 3, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ, ಸಂಜೆ 7.30ಕ್ಕೆ
ಮೇ 13, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ, ಸಂಜೆ 7.30ಕ್ಕೆ
ಮೇ 17, ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ, ಸಂಜೆ 7.30ಕ್ಕೆ
ಇನ್ನು ಆರ್‌ಸಿಬಿ ಈ ಬಾರಿ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ಕಾದಾಟವನ್ನು ನಡೆಸಲಿದ್ದು, ವಿರೋಧಿಗಳ ತವರಿನಲ್ಲಿ ತನ್ನ ಕೊನೆಯ ಪಂದ್ಯವನ್ನು ಆರ್‌ಸಿಬಿ ಮೆ 9 ರಂದು ಲಕ್ನೋನಲ್ಲಿ ಆಡಲಿದೆ. ಆರ್‌ಸಿಬಿ ಗುಜರಾತ್ ಹಾಗೂ ಸನ್‌ರೈಸರ್ಸ್ ತವರಿನಲ್ಲಿ ಪಂದ್ಯಗಳನ್ನು ಆಡುತ್ತಿಲ್ಲ.

ಎದುರಾಳಿಗಳ ತವರಿನಲ್ಲಿ ನಡೆಯುವ ಆರ್‌ಸಿಬಿ ಪಂದ್ಯಗಳು
ಮಾ.22, ಕೆಕೆಆರ್ ವಿರುದ್ಧ, ಸಂಜೆ 7.30ಕ್ಕೆ
ಮಾ.28, ಸಿಎಸ್‌ಕೆ ವಿರುದ್ಧ, ಸಂಜೆ 7.30ಕ್ಕೆ
ಏ.7, ಮುಂಬೈ ವಿರುದ್ಧ, ಸಂಜೆ 7.30ಕ್ಕೆ
ಏ.13, ರಾಜಸ್ಥಾನ ವಿರುದ್ಧ, ಮಧ್ಯಾಹ್ನ 3.30ಕ್ಕೆ
ಏ.20, ಪಂಜಾಬ್ ವಿರುದ್ಧ, ಮಧ್ಯಾಹ್ನ 3.30ಕ್ಕೆ
ಏ.27, ಡೆಲ್ಲಿ ವಿರುದ್ಧ, ಸಂಜೆ 7.30ಕ್ಕೆ
ಮೇ 9, ಲಕ್ನೋ ಸೂಪರ್ ಜೇಂಟ್ಸ್ ವಿರುದ್ಧ, ಸಂಜೆ 7.30ಕ್ಕೆ
ಎರಡು ಪಂದ್ಯ ಮಧ್ಯಾಹ್ನ
ಆರ್‌ಸಿಬಿ 14 ಪಂದ್ಯಗಳಲ್ಲಿ 2 ಪಂದ್ಯಗಳನ್ನು ಮಧ್ಯಾಹ್ನ ಆಡಲಿದೆ. ಈ ಪಂದ್ಯಗಳು ಎದುರಾಳಿಗಳ ತವರಿನಲ್ಲಿ ನಡೆಯಲಿವೆ. ಮೊದಲ ಪಂದ್ಯಕ್ಕೆ ಜೈಪುರ್, ಎರಡನೇ ಪಂದ್ಯಕ್ಕೆ ಪಂಜಾಬ್‌ನ ತವರು ಮುಲ್ಲನ್‌ಪುರ ಅಂಗಳ ಸಾಕ್ಷಿಯಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications