IPL 2025 RCB: ಮಹತ್ವದ ನಿರ್ಧಾರ ಕೈಗೊಳ್ಳಲಿರುವ RCB: ಏನದು ಇಲ್ಲಿದೆ ಮಾಹಿತಿ
ಇದೇ ಗುರುವಾರ ಐಪಿಎಲ್ ನ ಎಲ್ಲ ಮಾಲೀಕರು ತಾವು ಉಳಿಸಿಕೊಂಡ ಆಟಗಾರರ ಬಗ್ಗೆ ಬಿಸಿಸಿಐಗೆ ತಿಳಿಸಬೇಕಿದೆ. ಈ ವೇಳೆ ಒಂದು ತಂಡಕ್ಕೆ ಗರಿಷ್ಠ ಆರು ಆಟಗಾರರನ್ನು ಉಳಿಸಿಕೊಳ್ಳುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಎಲ್ಲ ತಂಡಗಳು ಪಕ್ಕಾ ಪ್ಲ್ಯಾನಿಂಗ್ ನಡೆಸಿವೆ. ಆರ್‌ಸಿಬಿ ಸಹ ತನ್ನ ರಿಟೆನ್ಷನ್ ಲೀಸ್ಟ್ ಮೇಲೆ ವರ್ಕ್ ಮಾಡುತ್ತಿದೆ.
ಈಗ ಬರುತ್ತಿರುವ ಮಾಹಿತಿಯನ್ನು ನಂಬುವುದಾದದರೆ ಆರ್‌ಸಿಬಿ ಸ್ಟಾರ್ ಆಟಗಾರರನ್ನು ಉಳಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಆರ್‌ಸಿಬಿ ತನ್ನ ಮೊದಲ ಆಯ್ಕೆಯ ಆಟಗಾರನಾಗಿ ವಿರಾಟ್ ಕೊಹ್ಲಿ ಅವರನ್ನು ಉಳಿಸಿಕೊಳ್ಳಬಹುದು. ಮತ್ತು ಟೀಮ್ ಇಂಡಿಯಾದ ಬೌಲರ್ ಮೊಹಮ್ಮದ್ ಸಿರಾಜ್ ಅವರನ್ನು ತಂಡದಲ್ಲಿ ಸ್ಥಾನ ನೀಡಬಹುದಾಗಿದೆ. ಇನ್ನು ಫಾಫ್ ಡುಪ್ಲೇಸಿಸ್ ಹಾಗೂ ಗ್ಲೇನ್ ಮ್ಯಾಕ್ಸ್‌ವೆಲ್ ಅವರನ್ನು ಸಹ ಉಳಿಸಿಕೊಳ್ಳಬಹುದು ಎಂಬ ಲೆಕ್ಕಾಚಾರ ಆರಂಭವಾಗಿದೆ.

ಆರ್‌ಸಿಬಿ ಮಹತ್ವದ ನಿರ್ಧಾರ
ಆರ್‌ಸಿಬಿ ರಿಟೆನ್ಷನ್ ಪಾಲೀಸಿಯನ್ನು ನೀಡುತ್ತಿದ್ದಂತೆ ಇನ್ನೊಂದು ಟೆನ್ಷನ್ ಆರಂಭವಾಗುತ್ತದೆ. ಐಪಿಎಲ್ ಮೆಗಾ ಹರಾಜಿನಲ್ಲಿ ಯಾವ ಪ್ಲೇಯರ್‌ಗೆ ಗಾಳ ಹಾಕಬೇಕೆಂದು ಲೆಕ್ಕಾಚಾರ ಆರಂಭಿಸಿದೆ. ಈ ನಿಟ್ಟಿನಲ್ಲಿ ಆರ್‌ಸಿಬಿ ಕೆಲವು ಆಟಗಾರರನ್ನು ಟಾರ್ಗೆಟ್ ಮಾಡಿಕೊಂಡಿದೆ. ಆರ್‌ಸಿಬಿ ಟಾರ್ಗೆಟ್ ಮಾಡಿರುವುದು ಹೆಚ್ಚಾಗಿ ಯಂಗ್ ಪ್ಲೇಯರ್‌ಗಳನ್ನೇ. ಅದರಲ್ಲೂ ಮಲ್ಟಿ ಟ್ಯಾಲೆಂಟೆಡ್ ಆಟಗಾರರನ್ನು ಆರ್‌ಸಿಬಿ ಗುರಿಯಾಗಿಸಲಿದೆ.
ಈ ಬಾರಿ ಆರ್‌ಸಿಬಿ ಹರಾಜಿನಲ್ಲಿ ಯುವ ಆಟಗಾರರು ಹಾಗೂ ನಾಯಕತ್ವದ ಗುಣಗಳನ್ನು ಹೊಂದಿರುವ ಪ್ಲೇಯರ್‌ಗಳನ್ನೇ ತಮ್ಮ ಮೊದಲ ಆಯ್ಕೆ ಆಗಿಸಿದೆ. ಈ ನಿಟ್ಟಿನಲ್ಲಿ ಇಬ್ಬರು ಆಟಗಾರರು ಆರ್‌ಸಿಬಿ ಕಣ್ಣು ಮುಂದೆ ಬರುತ್ತಾರೆ. ಈಗಾಗಲೇ ಈ ಇಬ್ಬರೂ ಯುವ ಆಟಗಾರರು ಈಗಾಗಲೇ ಐಪಿಎಲ್‌ನಲ್ಲಿ ತಮ್ಮ ನಾಯಕತ್ವದಿಂದ ಎಲ್ಲರ ಗಮನ ಸೆಳೆದವರೇ.
ಇಬ್ಬರು ನಾಯಕರ ಮೇಲೆ ಕಣ್ಣು
ಆರ್‌ಸಿಬಿ ಟಾರ್ಗೆಟ್ ಮಾಡುವ ಆಟಗಾರರ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಆಟಗಾರ ಶ್ರೇಯಸ್ ಅಯ್ಯರ್. ಶ್ರೇಯಸ್ ಅಯ್ಯರ್ ಅವರನ್ನು ಕೆಕೆಆರ್ ತಂಡ ಉಳಿಸಿಕೊಳ್ಳುವುದೋ ಇಲ್ಲವೋ ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ. ಅಲ್ಲದೆ ಶ್ರೇಯಸ್ ಅಯ್ಯರ್ ಅವರಿಗೆ ಅಲ್ಲಿ ಇರುವ ಆಸೆ ಇದೆಯೋ ಇಲ್ಲವೋ ಎಂಬುದು ತಿಳಿದಿಲ್ಲ. ಒಂದು ವೇಳೆ ಇವರು ಹರಾಜು ಅಂಗಳಕ್ಕೆ ಎಂಟ್ರಿ ನೀಡಿದರೆ, ಇವರಿಗೆ ಆರ್‌ಸಿಬಿ ದೊಡ್ಡ ಮೊತ್ತ ಬಾಜಿ ಕಟ್ಟಲು ತಯಾರಿ ಮಾಡಿಕೊಂಡಿದೆ. 29 ವರ್ಷದ ಶ್ರೇಯಸ್ ಅಯ್ಯರ್ ಐಪಿಎಲ್‌ನಲ್ಲಿ ಹೆಚ್ಚು ಕಾಲ ಆಡಬಹುದು ಎಂಬ ಪ್ಲ್ಯಾನ್ ಆರಸಿಬಿ ತಂಡದ್ದಾಗಿದೆ. ಹೀಗಾಗಿ ಇವರಿಗೆ ಗಾಳ ಹಾಕಲು ಸಿದ್ಧತೆ ನಡೆಸಿದೆ.
ಶ್ರೆಯಸ್ ಅಯ್ಯರ್ ಬಿಟ್ಟರೆ ಆರ್‌ಸಿಬಿ ಚಿತ್ತ ನೆಟ್ಟಿರುವ ಯುವ ಪ್ಲೇಯರ್ ಶುಭಮನ್ ಗಿಲ್. ಇವರು ಸಹ ಹಾರ್ದಿಕ್ ಪಾಂಡ್ಯ ಅವರಿಂದ ತೆರವಾದ ನಾಯಕತ್ವ ಸ್ಥಾನದಲ್ಲಿ ಕಂಗೊಳಿಸಿದ ಪ್ಲೇಯರ್. ಇವರನ್ನು ಗುಜರಾತ್ ಟೈಟನ್ಸ್ ರಿಟೇನ್ ಮಾಡಿಕೊಳ್ಳುವ ಸಾಧ್ಯತೆ ಇದೆ. ಒಂದು ವೇಳೆ ಇವರು ಬಿಡ್ಡಿಂಗ್ ಅಖಾಡಕ್ಕೆ ಇಳಿದರೆ ಆರ್‌ಸಿಬಿ ಸಹ ಹಣದ ಹೊಳೆ ಹರಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications