ಗುಜರಾತ್ ಟೈಟನ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಣ ಪಂದ್ಯ ಮಂಗಳವಾರ ಗುವಾಹಟಿಯಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಮೊದಲು ಫೀಲ್ಡಿಂಗ್ ಮಾಡಿತು. ಈ ವೇಳೆ ಬ್ಯಾಟಿಂಗ್‌ನಲ್ಲಿ ಪಂಜಾಬ್ ಪರ ಅಬ್ಬರಿಸಿದ ಶ್ರೇಯಸ್ ಅಯ್ಯರ್ ಹಾಗೂ ಶಶಾಂಕ್ ಸಿಂಗ್ ಮೊತ್ತವನ್ನು ಹಿಗ್ಗಿಸಿದರು. ಆದರೆ ಬೌಲಿಂಗ್‌ನಲ್ಲಿ 34 ಓವರ್ ಡಗ್‌ಔಟ್‌ನಲ್ಲಿ ಕುಳಿತು ನಂತರ ಅಂಗಳಕ್ಕೆ ಮರಳಿದ ಯಂಗ್ ಪ್ಲೇಯರ್ ಸೋಲುವ ಪಂದ್ಯದಲ್ಲಿ ಗೆಲುವಿನ ಟಚ್ ನೀಡಿದರು.
244 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಟೈಟನ್ಸ್ ಸ್ಥಿರ ಆರಂಭವನ್ನೇ ಪಡಿಯಿತು. ಈ ವೇಳೆ ಟಾಪ್ ಆರ್ಡರ್ ಬ್ಯಾಟರ್‌ಗಳಿಂದ ಸ್ಥಿರ ಪ್ರದರ್ಶನ ಮೂಡಿ ಬಂದಿತ್ತು. ಒಂದು ಹಂತದಲ್ಲಿ 36 ಎಸೆತಗಳಲ್ಲಿ 75 ರನ್‌ಗಳ ಅವಶ್ಯಕತೆ ಇತ್ತು. ಇದು ಟಿ20 ಕ್ರಿಕೆಟ್‌ನಲ್ಲಿ ಅಸಾಧ್ಯವಾದ ಕೆಲಸವೇನು ಅಲ್ಲ. ಆದರೆ ಬ್ಯಾಟರ್‌ಗಳು ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಬೇಕಿತ್ತು. ಆಗ ಜಿಟಿ ಪರ ಜೋಟ್ ಬಟ್ಲರ್ ಹಾಗೂ ರುದರ್ಫೋಡ್ ಬ್ಯಾಟಿಂಗ್ ಮಾಡುತ್ತಿದ್ದರು. ಆಗಲೇ ನೋಡಿ ಡಗೌಟ್‌ನಲ್ಲಿ ಕುಳಿತ್ತಿದ್ದ ಕನ್ನಡಿಗ ಮೈದಾನಕ್ಕೆ ಎಂಟ್ರಿ ಆದ್ರು.

ಡೆತ್ ಓವರ್‌ಗಳಲ್ಲಿ ಬೌಲಿಂಗ್ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿರುವ ಪ್ಲೇಯರ್, ಚೆಂಡನ್ನು ಹಿಡಿದು ಬೌಲ್ ಮಾಡಿದರು. ಅಬ್ಬ ಇವರ ಬೌಲಿಂಗ್ ಎದುರಿಸುವಲ್ಲಿ ವಿಂಡೀಸ್ ತಂಡದ ರುದರ್ಫೋಡ್ ಎಡವಿದ್ರು. 15ನೇ ಓವರ್‌ನ್ನು ಬಿಗುವಾಗಿ ಮಾಡಿದ ಬೌಲರ್ ವಿಜಯ್ ಕುಮಾರ್ ವೈಶಾಖ್. ವೈಡ್ ಯಾರ್ಕರ್‌ಗಳ ಮೂಲಕ ವಿಜಯ್‌ಕುಮಾರ್ ಜಿಟಿ ಬೌಲರ್‌ಗಳನ್ನು ಕಾಡಿದರು. 15ನೇ ಓವರ್‌ನಲ್ಲಿ ಕೇವಲ 5 ರನ್ ನೀಡಿದ ವಿಜಯ್ ಎದುರಾಳಿ ರನ್ ರೇಟ್ ಹಿಗ್ಗಿಸಿದರು.
ವಿಜಯ್ ಕುಮಾರ್ ವೈಶಾಖ್ ತಿರುಗಾ 17ನೇ ಓವರ್ ಬೌಲ್ ಮಾಡಲು ಬಂದ್ರು. ಇವರು ಈ ಹಿಂದಿನ ಓವರ್‌ನಲ್ಲಿ ಮಾಡಿದ್ದನ್ನೇ ಈ ಓವರ್‌ನಲ್ಲೂ ಮಾಡಿದ್ರು. ಆಫ್ ಸ್ಟಂಪ್ ಆಚೆಗೆ ವೈಡ್ ಯಾರ್ಕರ್‌ಗಳನ್ನು ಪದೇ ಪದೇ ಹಾಕಿ ಬ್ಯಾಟರ್‌ಗಳನ್ನು ಸತಾಯಿಸಿದರು. ಇವರ ದಾಳಿಯನ್ನು ಎದುರಿಸುವಲ್ಲಿ ವಿಫಲರಾದ ರುದರ್ಫೋಡ್ ರನ್ ಬಾರಿಸುವಲ್ಲಿ ವಿಫಲರಾದರು. ಆಗಲೇ ಅಗತ್ಯ ರನ್ ರೇಟ್ ಆಕಶದತ್ತ ಮುಖ ಮಾಡಿತ್ತು.

ವಿಜಯ್ ಕುಮಾರ್ ಬೌಲಿಂಗ್ ಬಗ್ಗೆ ಈಗ ಸಾಕಷ್ಟು ಚರ್ಚೆಗಳು ನಡೆದಿವೆ. ಅಸಲಿಗೆ ವಿಜಯ್ ಕುಮಾರ್ ವೈಶಾಖ್ ಅಪ್ಪಟ ದೇಶೀಯ ಪ್ರತಿಭೆ. ಇವರು ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿ ಸೈ ಎನಿಸಿಕೊಂಡಿದ್ದರು. ತಮ್ಮ ಶಿಸ್ತು ಬದ್ಧ ದಾಳಿಯಿಂದ ಎದುರಾಳಿಗಳನ್ನು ಕಾಡಿದ್ದರು. ಐಪಿಎಲ್ ಮೆಗಾ ಹರಾಜಿನಲ್ಲಿ ಇವರಿಗೆ ಆರ್‌ಸಿಬಿ ಗಾಳ ಹಾಕುತ್ತದೆ ಎಂದು ಎಲ್ಲರೂ ಭಾವಿಸಿದ್ದರು.
ಆದರೆ ಆರ್‌ಸಿಬಿ ಇವರತ್ತ ಮನಸ್ಸು ಮಾಡಲಿಲ್ಲ. ಅಲ್ಲದೆ ರೈಟ್ ಟು ಮ್ಯಾಚ್ ಕಾರ್ಡ್ ಸಹ ಬಳಿಸಲಿಲ್ಲ. ಇದನ್ನು ಕಂಡು ಅಭಿಮಾನಿಗಳು ಕೆಂಡ ಕಾರಿದ್ದರು. ಆದರೆ ಆಗ ತಾವು ಮಾಡಿದ ತಪ್ಪು ಏನು ಎಂಬುದನ್ನು ಅರಿಯದ್ದ ಆರ್‌ಸಿಬಿ, ಮಂಗಳವಾರ ಪಂದ್ಯವನ್ನು ನೋಡಿ ಕೈ ಕೈ ಹಿಚಿಕಿಕೊಳ್ಳುವಂತೆ ಆಗಿದೆ. ತನ್ನ ಬಳಿಯೇ ಇದ್ದ ರತ್ನಂವನ್ನು ಬೇರೆ ತಂಡಕ್ಕೆ ಬಿಟ್ಟು ಕೊಟ್ಟ ಬೇಸರ ಆರ್‌ಸಿಗೆ ಆರಂಭವಾಗಿದೆ.
ಪಂಜಾಬ್ ಇವರಲ್ಲಿನ ಬೌಲಿಂಗ್ ಸ್ಕಿಲ್ ಗುರುತಿಸಿ 1.80 ಕೋಟಿ ನೀಡಿ ತಂಡಕ್ಕೆ ಬರಮಾಡಿಕೊಂಡಿದೆ. ಮಂಗಳವಾರ ಗುಜರಾತ್ ವಿರುದ್ಧ ಒಂದೇ ಒಂದು ವಿಕೆಟ್ ಪಡೆಯುವಲ್ಲಿ ವಿಜಯ್‌ಕುಮಾರ್ ವಿಫಲರಾಗಿರಬಹುದು. ಆದರೆ ಹಲವು ಅಭಿಮಾನಿಗಳ ಮನ ಗೆಲ್ಲುವಲ್ಲಿ ಸಫಲರಾಗಿದ್ದಾರೆ.