Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನನಗೆ ನಿಜಕ್ಕೂ ಈ ಸುದ್ದಿಯನ್ನು ನಂಬಲಾಗುತ್ತಿಲ್ಲ: ಆರ್‌ಸಿಬಿಗೆ ಸೇರ್ಪಡೆ ಬಗ್ಗೆ ಫಿನ್ ಅಲೆನ್ ಪ್ರತಿಕ್ರಿಯೆ

RCBs new recruit Finn Allen reaction on IPL call-up

ಐಪಿಎಲ್ 14ನೇ ಆವೃತ್ತಿಗೆ ಕೆಲವೇ ದಿನಗಳು ಉಳಿದಿದ್ದು ಪ್ರಮುಖ ತಂಡವಾದ ಆರ್‌ಸಿಬಿ ತಂಡದಲ್ಲಿ ಬದಲಾವಣೆಯೊಂದನ್ನು ಮಾಡಿಕೊಂಡಿದೆ. ಈ ಬಾರಿಯ ಟೂರ್ನಿಗೆ ಆಸ್ಟ್ರೇಲಿಯಾದ ಜೋಶ್ ಫಿಲಿಪ್ಪೆ ಅಲಭ್ಯರಾಗುತ್ತಿರುವ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್ ಕ್ರಿಕೆಟಿಗ ಫೀನ್ ಅಲೆನ್ ಅವರನ್ನು ಸೇರ್ಪಡೆಗೊಳಿಸಿದೆ. ಈ ಬೆಳವಣಿಗೆಯ ಬಗ್ಗೆ ಫಿನ್ ಅಲೆನ್ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಫಿನ್ ಅಲೆನ್ ಕೂಡ ಜೋಶ್ ಫಿಲಿಪ್ಪೆ ರೀತಿಯಲ್ಲಿ ಅಗ್ರ ಕ್ರಮಾಂಕದಲ್ಲಿ ಸ್ಪೋಟಕ ಆಟಗಾರನಾಗಿದ್ದು ವಿಕೆಟ್ ಕೀಪಿಂಗ್ ಕೂಡ ನಡೆಸಬಲ್ಲವರಾಗಿದ್ದಾರೆ. ಹೀಗಾಗಿ ಆರ್‌ಸಿಬಿ ಮುಂದಿನ ಆವೃತ್ತಿಗೆ ಜೋಶ್ ಫಿಲಿಪ್ಪೆಗೆ ಬದಲಿಯಾಗಿ ಇಂಗ್ಲೆಂಡ್‌ನ ಈ ಆಟಗಾರನೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಖಾಸಗಿ ವೆಬ್‌ಸೈಟ್‌ನಲ್ಲಿ ಸಂದರ್ಶನ ನೀಡಿದ್ದ ಫಿನ್ ಅಲೆನ್ "ಆರ್‌ಸಿಬಿ ತಂಡದ ಕ್ರಿಕೆಟ್ ಚಟುವಟಿಕೆಗಳ ನಿರ್ದೇಶಕ ಮೈಕ್ ಹಸ್ಸನ್ ಅವರು ನನಗೆ ತಂಡಕ್ಕೆ ಸೇರಿಕೊಳ್ಳಲು ಇಷ್ಟಪಡುತ್ತೀರಾ ಎಂದು ಕೇಳಿದಾಗ ನಾನು ನೀವು ಆ ಬಗ್ಗೆ ನನ್ನನ್ನು ಕೇಳುವ ಅವಶ್ಯಕತೆಯೇ ಇಲ್ಲ. ಇದು ನನ್ನ ಕನಸು ನನಸಾಗುವ ಸಂದರ್ಭ. ಇದು ಸಾಕಷ್ಟು ಉತ್ಸಾಹವನ್ನು ನೀಡುವ ಜೊತೆಗೆ ನಿಜವೇ ಎಂದುಕೊಳ್ಳುವಂತಿದೆ. ನನಗೆ ಇದು ನಿಜಕ್ಕೂ ನಂಬಲಾಗುತ್ತಿಲ್ಲ. ಎಲ್ಲಾ ಮಾಧ್ಯಮಗಳಲ್ಲಿ ಬಂದಿರುವುದು ನೋಡಿದ ಬಳಿಕವೇ ನಾನು ನಿಜ ಎಂದು ನಂಬಿದ್ದೇನೆ" ಎಂದು ಪ್ರತಿಕ್ರಿಯಿಸಿದ್ದಾರೆ.

2017ರಲ್ಲಿ 17ನೇ ವಯಸ್ಸಿನಲ್ಲಿ ಫಿನ್ ಅಲೆನ್ ಆಕ್ಲಂಡ್ ತಂಡದ ಪರವಾಗಿ ಮೊದಲಿಗೆ ಟಿ20 ಕ್ರಿಕೆಟ್‌ ಆಡಲು ಆರಂಭಿಸಿದರು. ಅದಾದ ಬಳಿಕ ಫಿನ್ ಈವರೆಗೆ 17 ಪಂದ್ಯಗಳಲ್ಲಿ ಆಡಿದ್ದಾರೆ. ಇದರಲ್ಲಿ ಅವರು 537 ರನ್‌ಗಳನ್ನು ಗಳಿಸಿದ್ದು 183.27ರ ಭರ್ಜರಿ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ.

ಈ ಬಾರಿಯ ಐಪಿಎಲ್ ಏಪ್ರಿಲ್ 9ರಿಂದ ಆರಂಭವಾಗಲಿದ್ದು ಆರಂಭಿಕ ಪಂದ್ಯದಲ್ಲಿಯೇ ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಆಡಲಿದೆ. ಈ ಮೂಲಕ ಟೂರ್ನಿಯಲ್ಲಿ ಭರ್ಜರಿ ಆರಂಭದ ನಿರೀಕ್ಷೆಯಲ್ಲಿದೆ.

Story first published: Saturday, March 13, 2021, 9:12 [IST]
Other articles published on Mar 13, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+