IPL 2025: RCB ಅಭಿಮಾನಿಗಳ ಅಡುಗೆಯ ರುಚಿ ಹೆಚ್ಚಿಸಿದ ಇಂಗ್ಲೆಂಡ್ ಪ್ಲೇಯರ್
ಭಾರತ ಹಾಗೂ ಇಂಗ್ಲೆಂಡ್ ನಡುವಣ ಐದನೇ ಟಿ20 ಪಂದ್ಯ ಮುಂಬೈನ ವಾಂಖೇಡೆ ಅಂಗಳದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಪ್ರವಾಸಿ ತಂಡ ಹೀನಾಯ ಸೋಲು ಕಂಡಿದೆ. ಕೊನೆಯ ಪಂದ್ಯವನ್ನು ಗೆದ್ದ ಮಾನಉಳಿಸಿಕೊಳ್ಳುವ ಇಂಗ್ಲೆಂಡ್ ತಂಡದ ಆಸೆಗೆ ಪಟ್ಟು ಬಿದ್ದಿದೆ. ಏಕಪಕ್ಷೀಯವಾಗಿ ಟೀಮ್ ಇಂಡಿಯಾ ಪಂದ್ಯವನ್ನು ಗೆದ್ದು ಬೀಗಿದೆ. ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಅಭಿಷೇಕ್ ಶರ್ಮಾ ಎಲ್ಲರ ಗಮನ ಸೆಳೆದಿದ್ದಾರೆ.
ಐದನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಟಾಸ್ ಸೋತರೂ ದೊಡ್ಡ ಮೊತ್ತ ಕಲೆ ಹಾಕಿತು. ಈ ವೇಳೆ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದು ಆಗಿದ್ದು ಅಭಿಷೇಕ್ ಶರ್ಮಾ. ತಮ್ಮ ಮನಮೋಹಕ ಬ್ಯಾಟಿಂಗ್‌ನಿಂದ ತಂಡಕ್ಕೆ ನೆರವಾದ ಅಭಿಷೇಕ್, ಟೀಮ್ ಇಂಡಿಯಾ ಸವಾಲಿನ ಮೊತ್ತ ಕಲೆ ಹಾಕಲು ನೆರವಾದರು. ಇವರು ಶತಕದ ನೆರವಿನಿಂದ ಟೀಮ್ ಇಂಡಿಯಾ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 247 ರನ್ ಸಿಡಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ 10.3 ಓವರ್‌ಗಳಲ್ಲಿ 97 ರನ್‌ಗಳಿಗೆ ಆಲೌಟ್ ಆಯಿತು.

ಮುಂಬೈನಲ್ಲಿ ಸ್ಫೋಟಕ ಆಟ
ಇಂಗ್ಲೆಂಡ್ ಅಲ್ಪ ಮೊತ್ತಕ್ಕೆ ಆಲೌಟ್ ಆದ್ರೂ ಸಹ ಆರ್‌ಸಿಬಿ ಅಭಿಮಾನಿಗಳು ಹಿರಿ ಹಿರಿ ಹಿಗ್ಗುವಂತಹ ಸುದ್ದಿಯೊಂದು ಬಂದಿದೆ. ಇಂಗ್ಲೆಂಡ್ ತಂಡದ ಸ್ಟಾರ್ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಕ್ಲಾಸಿಕ್ ಇನಿಂಗ್ಸ್ ಕಟ್ಟಿ ಆರ್‌ಸಿಬಿ ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣ ಬಡಿಸಿದ್ದಾರೆ. ಪ್ರಸಕ್ತ ಭಾರತದ ಪ್ರವಾಸದಲ್ಲಿ ಫೇಲ್ ಆಗಿದ್ದ ಫಿಲ್ ಸಾಲ್ಟ್ ಕೊನೆಯ ಪಂದ್ಯದಲ್ಲಿ ಅಮೋಘ ಬೌಲಿಂಗ್ ನಡೆಸಿ ತಂಡಕ್ಕೆ ನೆರವಾದರು.
ಫಿಲ್ ಸಾಲ್ಟ್ ಮುಂಬೈನಲ್ಲಿ ಸ್ಫೋಟಕ ಇನಿಂಗ್ಸ್ ಕಟ್ಟಿದರು. ಇವರು 23 ಎಸೆತಗಳಲ್ಲಿ 239 ರ ಸ್ಟ್ರೈಕ್ ರೇಟ್‌ನಲ್ಲಿ 55 ರನ್ ಕಲೆ ಹಾಕಿದರು. ಇದರಲ್ಲಿ 7 ಬೌಂಡರಿಗಳು ಹಾಗೂ 3 ಸಿಕ್ಸರ್‌ಗಳು ಸೇರಿವೆ. ಇಂಗ್ಲೆಂಡ್ ತಂಡದ ಸೋಲಿನ ಅಂತರವನ್ನು ಕಡಿಮೆ ಮಾಡುವಲ್ಲಿ ಫಿಲ್ ಸಾಲ್ಟ್ ದೊಡ್ಡ ಪಾತ್ರವನ್ನು ನಿಭಾಯಿಸಿದರು. ತಂಡ ಕಲೆ ಹಾಕಿದ ಒಟ್ಟು ಮೊತ್ತದ ಶೇಕಡಾ 60 ರಷ್ಟು ರನ್‌ಗಳನ್ನು ಒಬ್ಬನೇ ಪ್ಲೇಯರ್ ಕಲೆ ಹಾಕಿದರು.
ಆರ್‌ಸಿಬಿ ಪರ ಸಾಲ್ಟ್
ಸೌದಿಯಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಫಿಲ್ ಸಾಲ್ಟ್ ಅವರನ್ನು ಖರೀದಿಸಿತ್ತು. ಇವರು ಕಳೆದ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆಡಿದ ಧಾಟಿಯನ್ನು ನೋಡಿ, ಆರ್‌ಸಿಬಿ ಮ್ಯಾನೇಜ್ಮೆಂಟ್ ಇವರಿಗೆ 11.50 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿತು. 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಸಾಲ್ಟ್ ಆರ್‌ಸಿಬಿ ಪರ ಕಣಕ್ಕೆ ಇಳಿಯಲಿದ್ದಾರೆ. ಇದಕ್ಕೂ ಮೊದಲು ಇವರ ಬ್ಯಾಟಿಂಗ್‌ಗೆ ಹಲವು ಪ್ರಶ್ನೆಗಳು ಇದ್ದವು. ಈ ಎಲ್ಲ ಪ್ರಶ್ನೆಗಳಿಗೆ ಮುಂಬೈನಲ್ಲಿ ಉತ್ತರ ನೀಡಿದ್ದಾರೆ. ಇನ್ನು ಸಾಲ್ಟ್ ಏಕದಿನ ಸರಣಿಯಲ್ಲಿ ಹೇಗೆ ಬ್ಯಾಟಿಂಗ್ ಮಾಡುತ್ತಾರೆ ಎಂಬ ಕುತೂಹಲ ಮನೆ ಮಾಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications