For Quick Alerts
ALLOW NOTIFICATIONS  
For Daily Alerts
 

IPL Auction RCB: ಈ ಐದು ಆಟಗಾರರೇ ಆರ್‌ಸಿಬಿ ತಂಡದ ಮೊದಲ ಆಯ್ಕೆ

ಐಪಿಎಲ್‌ ಹರಾಜಿಗೆ ಕ್ಷಣಗಣನೆ ಆರಂಭವಾಗಿದೆ. ಈ ನಿಟ್ಟಿನಲ್ಲಿ ಆರ್‌ಸಿಬಿ ಸಹ ಬಲಿಷ್ಠ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಭರ್ಜರಿ ತಯಾರಿ ನಡೆಸಿದೆ. ಆರ್‌ಸಿಬಿ ಕೇವಲ 3 ಆಟಗಾರರನ್ನು ಮಾತ್ರ ಉಳಿಸಿಕೊಂಡಿದ್ದು, ಉಳಿದ ಸ್ಥಾನಗಳಿಗೆ ಹರಾಜಿನಲ್ಲಿ ಬಾಜಿ ಕಟ್ಟಲಿದೆ. ಈ ವೇಳೆ ಹಲವು ಸ್ಟಾರ್ ಆಟಗಾರರನ್ನು ಆರ್‌ಸಿಬಿ ಸೆಳೆಯಲು ಪ್ಲ್ಯಾನ್ ಮಾಡಿಕೊಂಡಿದೆ. ಈ ಸಾಲಿನಲ್ಲಿ ಹಲವು ಆಟಗಾರರು ಕಾಣಿಸಿಕೊಳ್ಳುತ್ತಾರೆ. ಆದರೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಈ ಐವರು ಆಟಗಾರರನ್ನೇ ಮೊದಲು ಟಾರ್ಗೆಟ್ ಮಾಡಲಿದೆ.

ಆರ್‌ಸಿಬಿ ವಿರಾಟ್‌ ಕೊಹ್ಲಿ, ಮಧ್ಯಮ ಕ್ರಮಾಂಕದ ಸ್ಟಾರ್ ಆಟಗಾರ ರಜತ್ ಪಟಿದಾರ್‌ ಹಾಗೂ ಭರವಸೆಯ ಬೌಲರ್ ಯಶ್ ದಯಾಳ್ ಅವರನ್ನು ಉಳಿಸಿಕೊಂಡಿದೆ. ಈಗ ಹರಾಜಿನಲ್ಲಿ ಆರ್ ಸಿಬಿ ಕನಿಷ್ಠ 15 ಆಟಗಾರರನ್ನು ಖರೀದಿ ಮಾಡಬೇಕಿದೆ. ಇದಕ್ಕಾಗಿ ಆರ್‌ಸಿಬಿ ಪರ್ಸ್‌ನಲ್ಲಿ ಒಟ್ಟು 83 ಕೋಟಿ ರೂಪಾಯಿ ಇನ್ನು ಬಾಕಿ ಇದೆ. ಹೀಗಾಗಿ ಆರ್‌ಸಿಬಿ ಸ್ಟಾರ್ ಆಟಗಾರರಿಗೆ ಬಾಜಿ ಕಟ್ಟುವ ಸಾಧ್ಯತೆ ಇದೆ. ಆ ಆಟಗಾರರ ಪಟ್ಟಿ ಇಲ್ಲಿದೆ.

RCB s Top 5 Target Players for IPL Auction 2024 KL Rahul Rishabh Pant Jos Buttler Among Big Names

ಕೆಎಲ್‌ ರಾಹುಲ್‌

ಲಕ್ನೋ ಸೂಪರ್‌ ಜೈಂಟ್ಸ್ ತಂಡದಿಂದ ಕೈ ಬಿಟ್ಟ ಸ್ಟಾರ್ ಆಟಗಾರ ಕೆಎಲ್ ರಾಹುಲ್‌ ಅವರಿಗೆ ಆರ್‌ಸಿಬಿ ಬಾಜಿ ಕಟ್ಟಲಿದೆ. ಇವರು ಎಲ್‌ಎಸ್‌ಜಿ ತಂಡದ ನಾಯಕರಾಗಿದ್ದರು. ಆದರೆ ಇವರನ್ನು ಉಳಿಸಿಕೊಳ್ಳುವಲ್ಲಿ ಲಕ್ನೋ ವಿಫಲವಾಗಿದ್ದು, ಹರಾಜಿಗೆ ಬಿಟ್ಟಿದೆ. ಈ ಸ್ಟಾರ್ ಪ್ಲೇಯರ್ ಖರೀದಿಗೆ ಆರ್‌ಸಿಬಿ ಮುಂದಾಗಲಿದೆ. ಇವರು ಕರ್ನಾಟಕದ ಆಟಗಾರನೇ ಆಗಿದ್ದು, ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಅಲ್ಲದೆ ಈ ಮೊದಲು ಆರ್‌ಸಿಬಿ ಪರ ಐಪಿಎಲ್‌ನಲ್ಲಿ ಆಡಿ ಮಿಂಚು ಹರಿಸಿದ್ದಾರೆ.

ರಿಷಭ್‌ ಪಂತ್

ಆರ್‌ಸಿಬಿ ತನ್ನ ಬಕೆಟ್‌ ಲೀಸ್ಟ್‌ನಲ್ಲಿ ಇಟ್ಟುಕೊಂಡಿರುವ ಇನ್ನೊಂದು ಹೆಸರು ರಿಷಭ್ ಪಂತ್. ಇವರು ಸಹ ಒಬ್ಬ ಒಳ್ಳೆಯ ವಿಕೆಟ್‌ ಕೀಪರ್ ಬ್ಯಾಟರ್‌. ಇವರನ್ನು ಕೊಳ್ಳಲು ಆರ್‌ಸಿಬಿ ಹಣದ ಹೊಳೆಯನ್ನೇ ಹರಿಸಲಿದೆ. ಇವರು ಮಿಡ್ಲ್‌ ಆರ್ಡರ್‌ನಲ್ಲಿ ತಂಡಕ್ಕೆ ಬಲ ತುಂಬ ಬಲ್ಲ ಪ್ಲೇಯರ್. ಅಲ್ಲದೆ ಇವರು ತಂಡವನ್ನು ಮುನ್ನಡೆಸುವ ಕ್ಷಮತೆಯನ್ನು ಹೊಂದಿದ್ದಾರೆ. ಇವರು ದೇಶದಲ್ಲೆಡೆ ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿದ್ದು, ಇವರನ್ನು ಕೊಂಡರೆ ಆರ್‌ಸಿಬಿ ಬಲಿಷ್ಠವಾಗಲಿದೆ.

ಜೋಸ್‌ ಬಟ್ಲರ್‌

ರಾಜಸ್ಥಾನ ರಾಯಲ್ಸ್ ಕೈ ಬಿಟ್ಟ ಆಟಗಾರರಲ್ಲಿ ಜೋಸ್ ಬಟ್ಲರ್ ಹೆಸರು ಎದ್ದು ಕಾಣುತ್ತಿದೆ. ನಾಯಕನ ಹುಡುಕಾಟದಲ್ಲಿರುವ ತಂಡಗಳು ಇವರಿಗೆ ಬಾಜಿ ಕಟ್ಟಬಹುದು. ಇವರು ಇಂಗ್ಲೆಂಡ್ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಅಲ್ಲದೆ ಬಿಗ್‌ ಇನಿಂಗ್ಸ್ ಕಟ್ಟುವ ಟಾಪ್ ಆರ್ಡರ್ ಬ್ಯಾಟರ್. ಇವರು ಆಕ್ರಮಣಕಾರಿ ಆಟದಿಂದಲೇ ರನ್‌ವೇಗಕ್ಕೆ ಚುರುಕು ಮುಟ್ಟಿಸಬಲ್ಲರು. ಇವರನ್ನು ಕೊಳ್ಳಲು ಸಹ ಆರ್‌ಸಿಬಿ ಹಣ ಹೂಡಬಹುದು.

RCB s Top 5 Target Players for IPL Auction 2024 KL Rahul Rishabh Pant Jos Buttler Among Big Names

ಮೊಹಮ್ಮದ್‌ ಶಮಿ

ಆರ್‌ಸಿಬಿ ಬೌಲಿಂಗ್ ವಿಭಾಗ ಮೊದಲಿನಿಂದಲೂ ಚಿಂತೆಯ ಗೂಡಾಗಿದೆ. ಈ ವಿಭಾಗವನ್ನು ಸಮನಾಗಿಸಲು ಆರ್‌ಸಿಬಿ ಬಲಿಷ್ಠ ಬೌಲರ್ ಹುಡುಕಾಟದಲ್ಲಿದೆ. ಈ ನಿಟ್ಟಿನಲ್ಲಿ ಆರ್‌ಸಿಬಿ ಗುಜರಾತ್ ಟೈಟಾನ್ಸ್‌ನಿಂದ ರಿಲೀಸ್ ಆಗಿರುವ ಮೊಹಮ್ಮದ್‌ ಶಮಿ ಅವರನ್ನು ಗುರಿಯಾಗಿಸಲಿದೆ. ಇವರು ಈಗಾಗಲೇ ಐಪಿಎಲ್‌ನಲ್ಲಿ ಮಿಂಚಿ, ತಮ್ಮ ಕ್ಷಮತೆಯನ್ನು ಸಾಬೀತು ಪಡಿಸಿದ್ದಾರೆ. ಅಲ್ಲದೆ ಇವರು ವೇಗದ ದಾಳಿ ಹಾಗೂ ಸ್ವಿಂಗ್‌ನಿಂದ ಕಾಟ ನೀಡಬಲ್ಲರು.

ಕಗಿಸೊ ರಬಾಡ

ಪವರ್‌ ಪ್ಲೇ ಹಾಗೂ ಡೆತ್‌ ಓವರ್‌ಗಳಲ್ಲಿ ಮೊನಚಾದ ದಾಳಿ ಸಂಘಟಿಸಬಲ್ಲ ಕ್ಷಮತೆಯನ್ನು ಹೊಂದಿರುವ ಪ್ಲೇಯರ್‌ ಕಗಿಸೊ ರಬಾಡ. ಇವರನ್ನು ಡೆಲ್ಲಿ ಕ್ಯಾಪಿಟಲ್ಸ್ ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ. ಇವರನ್ನು ಕೊಳ್ಳಲು ಆರ್‌ಸಿಬಿ ಬಿಡ್ ಮಾಡಲಿದೆ. ಇವರು ತಂಡಕ್ಕೆ ಆಗಮಿಸುವುದರಿಂದ ತಂಡದ ಬೌಲಿಂಗ್‌ ಸ್ಟ್ರೆಂತ್ ಬಲಿಷ್ಠವಾಗಲಿದೆ.

Story first published: Tuesday, November 19, 2024, 17:30 [IST]
Other articles published on Nov 19, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+