For Quick Alerts
ALLOW NOTIFICATIONS  
For Daily Alerts
 

ಮಾಕ್ ಆಕ್ಷನ್‌ನಲ್ಲಿ ಆರ್‌ಸಿಬಿಗೆ ಬಂಪರ್‌: 16 ಕೋಟಿ ನೀಡಿ ಸ್ಟಾರ್ ಪ್ಲೇಯರ್ ಖರೀದಿಸಿದ ಬೆಂಗಳೂರು

ಐಪಿಎಲ್‌ ರಿಟೇನ್ಷನ್‌ ಲೀಸ್ಟ್‌ನ್ನು ಮಾಲೀಕರು ಬಿಸಿಸಿಐಗೆ ನೀಡಿ ಆಗಿದೆ. ಬಿಸಿಸಿಐ ಆಟಗಾರರ ಪಟ್ಟಿಯನ್ನು ಮಾಡಿ ಮಾಲೀಕರಿಗೆ ನೀಡಲಿದ್ದು, ಇದೇ ವೇಳೆ ತಮ್ಮ ಆಯ್ಕೆಯ ಆಟಗಾರರ ಬಗ್ಗೆ ಮಾಲೀಕರು ಮಾಹಿತಿ ನೀಡಬೇಕಿದೆ. ಭಾರತ ಹಾಗೂ ವಿದೇಶಿ ಆಟಗಾರರು ಸೇರಿ ಈ ಬಾರಿ 1500ಕ್ಕೂ ಹೆಚ್ಚು ಆಟಗಾರರು ಐಪಿಎಲ್ ಹರಾಜಿನಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ. ಆರ್‌ಸಿಬಿ ಸಹ ಈ ಬಾರಿಯ ಹರಾಜಿನಲ್ಲಿ ಸ್ಟಾರ್‌ ಆಟಗಾರರಿಗೆ ಗಾಳ ಹಾಕುವ ಸಾಧ್ಯತೆ ಇದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಹ ಈ ಬಾರಿಯ ಮೆಗಾ ಹರಾಜಿನಲ್ಲಿ ಬಲಿಷ್ಠ ಟೀಮ್ ಕಟ್ಟುವ ನಿಟ್ಟಿನಲ್ಲಿ ಸಿದ್ಧತೆ ನಡೆಸಿದೆ. ಇದಕ್ಕೆ ಪೂರಕ ಎಂಬಂತೆ ಆರ್‌ಸಿಬಿ ಮಾಡಿರುವ ಮಾಕ್‌ ಆಕ್ಷನ್‌ ವಿಡಿಯೋ ಒಂದು ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋ ಪ್ರಕಾರ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಕೈ ಬಿಡಲಾಗಿರುವ ಪ್ಲೇಯರ್‌ ರಿಷಭ್‌ ಪಂತ್ ಅವರನ್ನು ಆರ್‌ಸಿಬಿ ಕೊಳ್ಳುವಲ್ಲಿ ಸಫಲವಾಗಿದೆ.

RCB Secures Rishabh Pant for 16 Crores in Mega IPL Auction Mock Drill

ಸ್ಟಾರ್‌ ಪ್ಲೇಯರ್‌ಗೆ ಆರ್‌ಸಿಬಿ ಗಾಳ

ಆರ್‌ಸಿಬಿ ರಿಷಭ್‌ ಪಂತ್‌ ಅವರ ಮೇಲೆ ಒಂದು ಕಣ್ಣು ಇಟ್ಟಿದೆ. ಈ ಪ್ಲೇಯರ್‌ ತಂಡಕ್ಕೆ ಎಂಟ್ರೀ ನೀಡಿದರೆ, ತಂಡಕ್ಕೆ ಆನೆ ಬಲ ಬಂದಂತೆ ಆಗುತ್ತದೆ. ರಿಷಭ್ ಪಂತ್ ವಿಕೆಟ್‌ ಕೀಪರ್, ಮಿಡ್ಲ್ ಆರ್ಡರ್ ಬ್ಯಾಟರ್, ಕ್ಯಾಪ್ಟನ್‌ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಬಲ್ಲರು. ಹೀಗಾಗಿ ಆರ್‌ಸಿಬಿ ಪಂತ್‌ ಅವರಿಗೆ ಹಣದ ಹೊಳೆಯನ್ನು ಹರಿಸಿ ತಂಡಕ್ಕೆ ಸೇರಿಸಿಕೊಳ್ಳುವ ಪ್ಲ್ಯಾನ್ ಮಾಡಿಕೊಂಡಿದೆ.

ಯಾವ ತಂಡಗಳ ನಡುವೆ ಫೈಟ್?

ಎಲ್ಲ ತಂಡಗಳು ಐಪಿಎಲ್ ಹರಾಜಿಗೂ ಮುನ್ನ ಮಾಕ್‌ ಆಕ್ಷನ್ ನಡೆಸುವುದು ಕಾಮನ್. ಹಾಗೆ ಆರ್‌ಸಿಬಿ ಸಹ ಮಾಕ್ ಆಕ್ಷನ್‌ ನಡೆಸಿತು. ಈ ವೇಳೆ ಆರ್‌ಸಿಬಿ ಡೆಲ್ಲಿ ಸೂಪರ್ ಸ್ಟಾರ್ ಬ್ಯಾಟರ್‌ಗೆ ಬರೋಬ್ಬರಿ 16 ಕೋಟಿ ರೂಪಾಯಿ ಬಾಜಿ ಕಟ್ಟಿದೆ. ಈ ಸ್ಟಾರ್ ಪ್ಲೇಯರ್‌ನನ್ನು ಕೊಳ್ಳಲು ಆರ್‌ಸಿಬಿ ಸೇರಿದಂತೆ, ಚೆನ್ನೈ ಸೂಪರ್ ಕಿಂಗ್ಸ್, ಕೋಲ್ಕತ್ತಾ ನೈಟ್‌ ರೈಡರ್ಸ್‌ ಮಧ್ಯ ಬಿರುಸಿನ ಬಿಡ್ಡಿಂಗ್ ನಡೆಯಿತು. ಈ ವೇಳೆ ಪಂತ್ ಅವರನ್ನು ಆರ್‌ಸಿಬಿ ತಮ್ಮ ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ರಿಷಭ್ ಪಂತ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್‌ ಹರಾಜಿನ ಅಂಗಳಕ್ಕೆ ಬಿಟ್ಟಿತ್ತು. ಪಂತ್ ಒಬ್ಬ ಮಲ್ಟಿ ಟ್ಯಾಲೆಂಟ್ ಪ್ಲೇಯರ್ ಆಗಿದ್ದರಿಂದ ಇವರನ್ನು ಕೊಳ್ಳಲು ಹಲವು ತಂಡಗಳು ಬಾಜಿ ಕಟ್ಟಲಿವೆ. ಕೋಲ್ಕತ್ತಾ, ಚೆನ್ನೈ, ಬೆಂಗಳೂರು, ಲಕ್ನೋ ತಂಡಗಳು ನಾಯಕನ ಹುಡುಕಾಟದಲ್ಲಿವೆ. ಈ ವೇಳೆ ಪಂತ್‌ ಎಲ್ಲ ಮಾಲೀಕರ ಫಸ್ಟ್‌ ಚಾಯ್ಸ್‌ ಪ್ಲೇಯರ್ ಎನ್ನೋದರಲ್ಲಿ ಎರಡು ಮಾತಿಲ್ಲ. ಇವರು ಸಮಯಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಬಿಗ್ ಹಿಟ್ಟಿಂಗ್ ಎಬಿಲಿಟಿ ಹೊಂದಿರುವ ಪ್ಲೇಯರ್. ಹೀಗಾಗಿ ಹರಾಜಿನಲ್ಲಿ ಈ ಪ್ಲೇಯರ್‌ಗೆ ಮಾಲೀಕರು ಹಣದ ಹೊಳೆ ಹರಿಸಬಹುದು.

ನಾಯಕನ ಹುಡುಕಾಟದಲ್ಲಿ ಆರ್‌ಸಿಬಿ

ಆರ್‌ಸಿಬಿ ತಂಡ ಫಾಫ್‌ ಡುಪ್ಲೇಸಿಸ್‌ ಅವರನ್ನು ತಂಡದಿಂದ ಕೈ ಬಿಟ್ಟಿದ್ದರಿಂದ ಒಳ್ಳೆಯ ನಾಯಕನ ಹುಡುಕಾಟದಲ್ಲಿ ಈ ವೇಳೆ ಪಂತ್‌ ಬೆಸ್ಟ್‌ ಚಾಯ್ಸ್. ಇವರು ವಿಕೆಟ್‌ ಕೀಪರ್‌ ಹಾಗೂ ಬ್ಯಾಟರ್‌ ಆಗಿಯೂ ತಂಡಕ್ಕೆ ಬಲ ತುಂಬ ಬಲ್ಲರು. ಪಂತ್ ಆಗಮನದಿಂದ ಆರ್‌ಸಿಬಿ ಬ್ಯಾಟಿಂಗ್ ಲೈನ್‌ ಅಪ್‌ ಇನ್ನಷ್ಟು ಬಲಾಢ್ಯವಾಗುತ್ತದೆ. ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿರುವ ಐಪಿಎಲ್ ಹರಾಜಿನಲ್ಲಿ ಪಂತ್ ಯಾವ ತಂಡಕ್ಕೆ ಹೋಗುತ್ತಾರೆ ಎಂಬ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.

Story first published: Thursday, November 7, 2024, 14:15 [IST]
Other articles published on Nov 7, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+