IPL 2025: ಯುವ ಆಲ್‌ರೌಂಡರ್ ಮೇಲೆ RCB ಕಣ್ಣು: ಇಲ್ಲಿವೇ ಕಾರಣ
ಐಪಿಎಲ್ 2025ಕ್ಕೆ ಇನ್ನು ಹಲವು ತಿಂಗಳು ಬಾಕಿ ಇದೆ. ಆದರೆ ಈ ಬಾರಿ ಮೆಗಾ ಹರಾಜು ನಡೆಯುವುದರಿಂದ ಎಲ್ಲರ ಚಿತ್ತ ಹರಾಜಿನತ್ತ ನೆಟ್ಟಿದೆ. ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್ ಮಾಲೀಕರು ತಾವು ತಂಡದಲ್ಲಿ ಉಳಿಸಿಕೊಂಡ ಹಾಗೂ ಕೈ ಬಿಟ್ಟ ಆಟಗಾರರ ಬಗ್ಗೆ ಬಿಸಿಸಿಐಗೆ ಮಾಹಿತಿಯನ್ನು ನೀಡಬೇಕಿದೆ. ಈ ನಿಟ್ಟಿನಲ್ಲಿ ಮಾಲೀಕರು ಫುಲ್ ಬ್ಯೂಸಿಯಾಗಿದ್ದಾರೆ. ಅಲ್ಲದೆ ಐಪಿಎಲ್ ಹರಾಜಿಗೂ ತೆರೆ ಮರೆಯ ಕಸರತ್ತನ್ನು ನಡೆಸಿದ್ದಾರೆ.
ಈ ಮೆಗಾ ಹರಾಜಿಗೂ ಆರ್‌ಸಿಬಿ ಭರದ ಸಿದ್ಧತೆಯನ್ನು ನಡೆಸಿದೆ. ಅಳೆದು ತೂಗಿ ಆಟಗಾರರಿಗೆ ಮಣೆ ಹಾಕಲು ಆರ್‌ಸಿಬಿ ನಿರ್ಧರಿಸಿದೆ. ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುವುದು ಬಹುತೇಕ ಕನ್ಫರ್ಮ್ ಆದಂತೆ ಕಾಣುತ್ತಿದೆ. ಇನ್ನು ಉಳಿದ ಆಟಗಾರರ ಬಗ್ಗೆ ಅಕ್ಟೋಬರ್ 31 ರಂದು ಮಾಹಿತಿ ಸಿಗಲಿದೆ.

ಆಲ್‌ರೌಂಡರ್ಸ್ ಟಾರ್ಗೆಟ್
ಆರ್‌ಸಿಬಿ ಈ ಬಾರಿ ಹರಾಜಿನಲ್ಲಿ ಟಾರ್ಗೆಟ್ ಮಾಡುವ ಆಟಗಾರರಲ್ಲಿ ಆಲ್‌ರೌಂಡರ್ಸ್‌ಗಳು ಮೊದಲು. ಈ ಆಟಗಾರರು ತಮ್ಮ ಬ್ಯಾಟಿಂಗ್ ಹಾಗೂ ಬೌಲಿಂಗ್ ನಿಂದ ತಂಡಕ್ಕೆ ನೆರವಾಗಬಲ್ಲರು. ಇನ್ನು ಯುವ ಆಲ್‌ರೌಂಡರ್‌ಗಳನ್ನೇ ಆರ್‌ಸಿಬಿಯ ಮೊದಲ ಗುರಿ. ಕಾರಣ ಇವರು ತಂಡದ ಪರ ಅತಿ ಹೆಚ್ಚು ವರ್ಷ ಆಡಬಹುದು ಎಂಬ ಲೆಕ್ಕಾಚಾರವನ್ನು ಟೀಮ್ ಮ್ಯಾನೇಜ್ಮೆಂಟ್ ಹಾಕಿರುತ್ತದೆ. ಈ ನಿಟ್ಟಿನಲ್ಲಿ ಮೊದಲಿಗೆ ಕಾಣಿಸಿಕೊಳ್ಳುವ ಹೆಸರು ತಮಿಳುನಾಡಿನ ವಾಷಿಂಗ್ಟನ್ ಸುಂದರ್.
ಕಿವೀಸ್ ವಿರುದ್ಧ ಆರ್ಭಟ
ದೇಶೀಯ ಟೂರ್ನಿಯಲ್ಲಿ ಆರ್ಭಟ ನಡೆಸಿ, ಭಾರತ ಟೆಸ್ಟ್ ತಂಡದ ಸೇರಿದ ವಾಷಿಂಗ್ಟನ್ ಸುಂದರ್ ಅಮೋಘ ಪ್ರದರ್ಶನ ನೀಡಿದರು. ಪುಣೆ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ, ನ್ಯೂಜಿಲೆಂಡ್ ವಿರುದ್ಧ ಕಂಡಿದ್ದರೂ, ವಾಷಿಂಗ್ಟನ್ ಸುಂದರ್ ಪ್ರದರ್ಶನ ಎಲ್ಲರ ಚಿತ್ತ ಕದ್ದಿದೆ. ಮೊದಲು ಇನಿಂಗ್ಸ್‌ನಲ್ಲಿ ಏಳು ಹಾಗೂ ಎರಡನೇ ಇನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್ ಕಬಳಿಸಿರುವ ವಾಷಿಂಗ್ಟನ್ ನೂತನ ಸ್ಟಾರ್ ಆಗಿ ಮಿಂಚಿದ್ದಾರೆ. ಈ ಯುವ ಆಲ್‌ರೌಂಡರ್ ಮೇಲೆ ಆರ್‌ಸಿಬಿ ಬಾಜಿ ಕಟ್ಟುವ ಸಾಧ್ಯತೆ ಇದೆ.
ಒಂದು ವೇಳೆ ಆರ್‌ಸಿಬಿ ವಾಷಿಂಗ್ಟನ್ ಸುಂದರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ಸಫಲವಾದಲ್ಲಿ, ಯುವ ಆಲೌರೌಂಡರ್ ಒಬ್ಬ ತಂಡಕ್ಕೆ ಸಿಗುತ್ತಾನೆ. ಅದು ಸಹ ಭಾರತೀಯ ಮೂಲದವನು ಎಂಬುದು ವಿಶೇಷ. ಆರ್‌ಸಿಬಿಗೆ ಹಿಂದಿನ ವರ್ಷ ಸ್ಪಿನ್ ಬೌಲರ್‌ಗಳ ಅನುಪಸ್ಥಿತಿ ಬಹುವಾಗಿ ಕಾಡಿತ್ತು. ಇವರು ತಂಡಕ್ಕೆ ಎಂಟ್ರಿ ನೀಡಿದರೆ, ಸ್ಪಿನ್ ಬೌಲಿಂಗ್ ನೊಗವನ್ನು ಹೊರಬಲ್ಲರು. ಇವರ ಆಫ್ ಸ್ಪಿನ್ ಬೌಲಿಂಗ್ ಎಷ್ಟು ಮಾರಕ ಎಂಬುದನ್ನು ಜನ ಈಗಾಗಲೇ ನೋಡಿದ್ದಾರೆ.

ಬ್ಯಾಟಿಂಗ್‌ನಲ್ಲೂ ನೆರವಾಗಬಲ್ಲ ಪ್ಲೇಯರ್
ಇನ್ನು ವಾಷಿಂಗ್ಟನ್ ಸುಂದರ್ ಬರೀ ಸ್ಪಿನ್ ಬೌಲರ್ ಅಲ್ಲ. ಒಬ್ಬ ಬ್ಯಾಟರ್ ಸಹ ಹೌದು. ತಂಡದ ಅಗತ್ಯಕ್ಕೆ ತಕ್ಕಂತೆ ಬ್ಯಾಟ್ ಮಾಡುವ ಕಲೆಯನ್ನು ಇವರು ಕರಗತ ಮಾಡಿಕೊಂಡಿದ್ದಾರೆ. ಇವರು ಆರ್‌ಸಿಬಿ ಸೇರಿದರೆ ತಂಡದ ಬ್ಯಾಟಿಂಗ್ ಲೈನ್ ಅಪ್ ಬೆಳೆಯುತ್ತದೆ. ಅಲ್ಲೆದ ಇವರು ಮಧ್ಯಮ ಕ್ರಮಾಂಕದಲ್ಲಿ ಮನಮೋಹಕ ಬ್ಯಾಟಿಂಗ್ ನಡೆಸಬಲ್ಲರು. ವಾಷಿಂಗ್ಟನ್ ಸುಂದರ್ ಈಗಾಗಲೇ ಆರ್‌ಸಿಬಿ ಪರ ಆಡಿ ಸೈ ಎನಿಸಿಕೊಂಡಿದ್ದಾರೆ. ಇವರ ಮೇಲೆ ಆರ್‌ಸಿಬಿ ಒಂದು ಕಣ್ಣು ನೆಟ್ಟಿರಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications