For Quick Alerts
ALLOW NOTIFICATIONS  
For Daily Alerts
 

RCB ಬಳಿ ಇದೆ RTM ಬ್ರಹ್ಮಾಸ್ತ್ರ: 3 ಕಾರ್ಡ್‌, 4 ಪ್ಲೇಯರ್ ಟಾರ್ಗೆಟ್‌

ಬಹು ನಿರೀಕ್ಷಿತ ಐಪಿಎಲ್‌ ರಿಟೇನ್ಷನ್‌ ಲೀಸ್ಟ್‌ ರಿಲೀಸ್ ಆಗಿದೆ. ಆರ್ ಸಿಬಿ ಬಲಿಷ್ಠ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ. ಸ್ಟಾರ್ ವಿದೇಶಿ ಆಟಗಾರರನ್ನು ಕೈ ಬಿಟ್ಟಿರುವ ಆರ್‌ಸಿಬಿ ಕೆಲವೊಂದು ಅಚ್ಚರಿಯ ನಡೆಯನ್ನು ಇಟ್ಟಿದೆ. ಆರ್‌ಸಿಬಿ ತನ್ನ ನಾಯಕ ಫಾಫ್‌ ಡುಪ್ಲೇಸಿಸ್ ಅವರನ್ನೇ ಹರಾಜಿನ ಅಂಗಳಕ್ಕೆ ಬಿಟ್ಟಿದ್ದು ಎಲ್ಲರೂ ಹುಬ್ಬೇರುವಂತೆ ಮಾಡಿದೆ.

ಕಳೆದ ಐಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿ ತಂಡವನ್ನು ಮುನ್ನಡೆಸಿದ್ದ ಫಾಫ್ ಡುಪ್ಲೇಸಿಸ್‌ ಈ ಬಾರಿ ಬಿಡ್ ಆಗಲಿದ್ದಾರೆ. ಇವರ ವಯಸ್ಸು ಒಂದು ಇವರಿಗೆ ಸದ್ಯಕ್ಕೆ ದೊಡ್ಡ ತೊಡಕಾಗುತ್ತಿದೆ. ಆದರೆ ಇವರ ಅಂಗಳದಲ್ಲಿ ಇನ್ನೂ ಸಹ ಯುವಕರು ನಾಚುವಂತೆ ಆಟವನ್ನು ಆಡುತ್ತಾರೆ. ಕಳೆದ ಬಾರಿ ಐಪಿಎಲ್‌ ಆವೃತ್ತಿಯಲ್ಲಿ ತಮ್ಮ ಧಮಾಕೆದಾರ್ ಬ್ಯಾಟಿಂಗ್‌ನಿಂದ ತಂಡಕ್ಕೆ ನೆರವಾಗಿದ್ದ ಪ್ಲೇಯರ್ ಫಾಫ್‌ ಅವರನ್ನು, ಈ ಬಾರಿ ಕೈ ಬಿಟ್ಟಿದ್ದು ಏಕೆ ಎಂಬ ಪ್ರಶ್ನೆಗಳು ಉದ್ಭವಿಸಿವೆ.

RCB Shocks with Retention List Targets Faf du Plessis and Siraj for RTM in 2025 Auction

ವಿಲ್ ಜಾಕ್ಸ್‌ ಕೈ ಬಿಟ್ಟ ಆರ್‌ಸಿಬಿ

ಕಳೆದ ಆವೃತ್ತಿಯಲ್ಲಿ ಆರ್‌ಸಿಬಿ ಪರ ಶತಕ ಸಾಧನೆ ಮಾಡಿದ್ದ ವಿಲ್‌ ಜಾಕ್ಸ್‌ ಅವರನ್ನು ಆರ್‌ಸಿಬಿ ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ. ಇವರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲೂ ತಂಡಕ್ಕೆ ನೆರವಾಗಬಲ್ಲ ಪ್ಲೇಯರ್ ಆಗಿದ್ದಾರೆ. ಅಲ್ಲದೆ ಪ್ರಸಕ್ತ ಅವರ ಫಾರ್ಮ್‌ ಸಹ ಅಮೋಘವಾಗಿದೆ. ಆದರೆ ಇವರನ್ನು ರಿಲೀಸ್ ಮಾಡಿದ್ದು ಏಕೆ ಎಂಬ ಪ್ರಶ್ನೆಗಳು ಮೂಡಿವೆ.

ತಂಡದಲ್ಲಿ ಆರ್‌ಸಿಬಿ ಮೂವರು ಆಟಗಾರರನ್ನು ಉಳಿಸಿಕೊಂಡಿದೆ. ಅದರಲ್ಲಿ ವಿರಾಟ್ ಕೊಹ್ಲಿ, ರಜತ್ ಪಟೀದಾರ್, ಯಶ್ ದಯಾಳ್ ಅವರ ಹೆಸರುಗಳು ಸೇರಿವೆ. ಮೊಹಮ್ಮದ್ ಸಿರಾಜ್‌ ಅವರನ್ನು ಉಳಿಸಿಕೊಳ್ಳುವ ಬಗ್ಗೆ ಮಾತುಗಳು ಕೇಳಿ ಬಂದಿದ್ದವು. ಆದರೆ ಎಲ್ಲರ ನಿರೀಕ್ಷೆ ಹುಸಿಯಾಗಿದೆ. ಸಿರಾಜ್‌ ಹರಾಜು ಅಂಗಳ ಪ್ರವೇಶಿಸಲಿದ್ದಾರೆ.

ಆರ್‌ಸಿಬಿ ಬಳಿ ರೈಟ್‌ ಟು ಮ್ಯಾಚ್‌ ಕಾರ್ಡ್‌ ಅವಕಾಶ ಸಹ ಇದೆ. ಹೀಗಾಗಿ ಆರ್‌ಸಿಬಿ ಹರಾಜು ಅಂಗಳದಲ್ಲಿ ಇವುಗಳನ್ನು ಬಳಸಿ ಆಟಗಾರರನ್ನು ತನ್ನ ತಂಡದಲ್ಲಿ ಉಳಿಸಿಕೊಳ್ಳಬಹುದಾಗಿದೆ. ಆರ್‌ಸಿಬಿ RTM ಅನ್ನು ಸಿರಾಜ್ ಹಾಗೂ ಫಾಫ್‌ಗೆ ಬಳಸುವ ಸಾಧ್ಯತೆ ಇದೆ. ಇನ್ನು ಒಂದು ವೇಳೆ ಆರನೇ ಪ್ಲೇಯರ್‌ಗೂ RTM ಇದ್ದಿದ್ದೇ ಆದಲ್ಲಿ ವಿಲ್‌ ಜಾಕ್ಸ್‌ ಅವರನ್ನು ಸಹ ತಂಡದಲ್ಲಿ ಉಳಿಸಿ ಕೊಳ್ಳಬಹುದು. ಇನ್ನು ಕಳೆದ ಆವೃತ್ತಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಕನ್ನಡಿಗ ವಿಜಯ್‌ ಕುಮಾರ್‌ ವೈಶಾಖ್‌ ಅವರನ್ನು ಆರ್‌ಸಿಬಿ ಹರಾಜಿನಲ್ಲಿ ರೈಟ್‌ ಟು ಮ್ಯಾಚ್‌ ಕಾರ್ಡ್‌ ಬಳಸಿ ತಂಡಕ್ಕೆ ಸೆಳೆದುಕೊಳ್ಳಬಹುದಾಗಿದೆ.

4 ಪ್ಲೇಯರ್‌ 3 ಕಾರ್ಡ್‌

ಇನ್ನು ಆರ್‌ಸಿಬಿ ಬಳಿ ಮೂರು ಆರ್‌ಟಿಎಂ ಕಾರ್ಡ್‌ಗಳಿದ್ದು, ಇದನ್ನು ಬಳಸಿ ತನ್ನ ಆಟಗರಾರರನ್ನು ಉಳಿಸಿಕೊಳ್ಳುವ ಅವಕಾಶವನ್ನು ಆರ್‌ಸಿಬಿ ಹೊಂದಿದೆ. ನಾಲ್ಕು ಪ್ಲೇಯರ್‌ಗಳನ್ನು ಗುರಿಯಾಗಿ ಆರ್‌ಸಿಬಿ ಮೂರು ಕಾರ್ಡ್‌ಗಳನ್ನು ಎತ್ತಿಟ್ಟಿದೆ ಎಂದು ಹೇಳಲಾಗುತ್ತಿದೆ. ತವರಿನ ಪ್ರತಿಭೆ ವಿಜಯ್‌ ಕುಮಾರ್ ವೈಶಾಖ್‌ ಅವರಿಗೂ ಆರ್‌ಸಿಬಿ ಮತ್ತೊಮ್ಮೆ ಸ್ಥಾನ ನೀಡುವ ಸಾಧ್ಯತೆ ದಟ್ಟವಾಗಿ ಕಾಣುತ್ತಿದೆ.

Story first published: Friday, November 1, 2024, 7:30 [IST]
Other articles published on Nov 1, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+