ನಾ ಡ್ರೈವರ್sss.. ನೀ ನನ್ನ ಲವರ್sss... ಸಾಂಗ್‌ಗೆ ಸೊಂಟ ಬಳುಕಿಸಿದ ಕನ್ನಡತಿ, ಆರ್‌ಸಿಬಿ ಟಗರು ಪುಟ್ಟಿ ಶ್ರೇಯಾಂಕಾ ಪಾಟೀಲ್
RCB Shreyanka Patil: ಮಿ.ನಾಗ್ಸ್ ಅವರು ಆರ್‌ಸಿಬಿ ಆಟಗಾರರ ಸಂದರ್ಶನ ಮತ್ತು ತಮಾಷೆಯ ವಿಡಿಯೋಗಳ ಮೂಲಕ ಪ್ರಸಿದ್ಧರಾಗಿದ್ದಾರೆ. ಇದೀಗ ಇವರು ಹಾಗೂ ಕನ್ನಡತಿ, ಆರ್‌ಸಿಬಿ ಟಗರು ಪುಟ್ಟಿ ಶ್ರೇಯಾಂಕಾ ಪಾಟೀಲ್ ಇಬ್ಬರು ಸೇರಿ ಬಿಗ್‌ಬಾಸ್ ಮಾಳು ಹಾಡಿದ ನಾ ಡ್ರೈವರ್sss.. ನೀ ನನ್ನ ಲವರ್sss.. ಸಾಂಗ್‌ಗೆ ನೃತ್ಯ ಮಾಡಿ ಗಮನ ಸೆಳೆದಿದ್ದಾರೆ. ಈ ವಿಡಿಯೋದಲ್ಲಿ ಶ್ರೇಯಾಂಕ ಸೊಂಟ ಬಳುಕಿಸಿದ್ದಾರೆ. ಅವರು ಹೀಗೆ ಮಾಡಿರುವುದರ ಹಿಂದಿದೆ ಒಂದೊಳ್ಳೆ ಉದ್ದೇಶ.
ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಒಬ್ಬರು ಯಾರಾದ್ರೂ ದುಃಖದಲ್ಲಿ ಇದ್ದಾರೆಂದರೆ ಅವರನ್ನು ಮತ್ತಷ್ಟು ಹೀಯಾಳಿಸುವವರೇ ಹೆಚ್ಚಿದ್ದಾರೆ. ಆಗಂತ ಎಲ್ಲರನ್ನೂ ಇದೇ ಭಾವನೆಯಿಂದ ನೋಡುವುದೂ ಸರಿಯಲ್ಲ. ಸಂತೈಸುವ ಮೂಲಕ ಧೈರ್ಯ ದುಂಬುವವರು ಇದ್ದಾರೆ. ಇದಕ್ಕೆ ಉದಾಹರಣೆ ಮಿ.ನಾಗ್ಸ್ ಹಾಗೂ ಶ್ರೇಯಾಂಕಾ ಪಾಟೀಲ್ ಅವರು ಮಾಡಿದ ಈ ವಿಡಿಯೋನೇ ಸಾಕ್ಷಿಯಾಗಿದೆ.

ಇತ್ತೀಚೆಗಷ್ಟೇ ಕಳೆದ ಕೆಲವು ತಿಂಗಳುಗಳಿಂದ ಪಲಾಶ್ ಮುಚ್ಚಾಲ್, ಮದುವೆಯಂತಹ ವೈಯಕ್ತಿಕ ವಿಚಾರಗಳಿಂದ ಸ್ಮೃತಿ ಮಂಧನಾ ಅವರನ್ನು ನಗಿಸುವಲ್ಲಿ ಕನ್ನಡತಿ ಶ್ರೇಯಾಂಕಾ ಪಾಟೀಲ್ ಹಾಗೂ ಮಿ.ನಾಗ್ಸ್ ಯಶಸ್ವಿ ಆಗಿದ್ದಾರೆ. ಇದೀಗ ಸದ್ಯ ಡಬ್ಲ್ಯೂಪಿಎಲ್‌ನಲ್ಲಿ ಶ್ರೇಯಾಂಕ ಪಾಟೀಲ್ ಅವರಿಗೆ ಉತ್ತಮ ಬೌಲಿಂಗ್, ಬ್ಯಾಟಿಂಗ್ ಪ್ರದರ್ಶನ ಕೂಡ ಕಂಡುಬಂದಿದೆ. ಜೊತೆಗೆ ಇವರು ಟೀಮ್‌ನಲ್ಲಿ ಮನೊಂರಜನೆ ನೀಡುವ ಆಟಗಾರ್ತಿಯಾಗಿಯೂ ಗುರುತಿಸಿಕೊಂಡಿದ್ದಾರೆ.
ಗುರುವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಯುಪಿ ವಾರಿಯರ್ಸ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಸತತ ಎರಡು ಸೋಲುಗಳಿಂದ ನಿರಾಶೆಗೊಂಡಿದ್ದ ಆರ್‌ಸಿಬಿಗೆ ಈ ಗೆಲುವು ಹೊಸ ಉತ್ಸಾಹ ತುಂಬಿದ್ದು, ನಾಯಕಿ ಸ್ಮೃತಿ ಮಂಧನಾ ಸಂತಸದಲ್ಲಿ ತೇಲಾಡುತ್ತಿರುವುದು ಸ್ಪಷ್ಟವಾಗಿ ಕಾಣಿಸಿಕೊಂಡಿದೆ.
ಅಭಿಮಾನಿಗಳ ಮನಸು ಗೆದ್ದ ಶ್ರೇಯಾಂಕಾ: ಈ ಗೆಲುವಿನ ಬೆನ್ನಲ್ಲೇ ಆರ್‌ಸಿಬಿ ಇನ್‌ಸೈಡರ್ ಕಾರ್ಯಕ್ರಮದ ಒಂದು ಮೋಜಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಂಡದ ಡಿಜಿಟಲ್ ಶೋ ಅನ್ನು ಮಿ.ನಾಗ್ಸ್ ಆಗಿ ನಡೆಸಿಕೊಡುವ ಡ್ಯಾನಿಷ್ ಸೇಠ್, ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಕನ್ನಡತಿ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ಜೊತೆ ನಡೆಸಿದ ಹರಟೆ ಅಭಿಮಾನಿಗಳ ಮನಸು ಕದ್ದುಬಿಟ್ಟಿದೆ.
ನಗೆಗಡಲಲ್ಲಿ ತೇಲಾಡಿದ ಸ್ಮೃತಿ ಮಂಧನಾ: ವಿಡಿಯೋ ಅಂತ್ಯದಲ್ಲಿ ಮಿ.ನಾಗ್ಸ್ ಹಾಗೂ ಶ್ರೇಯಾಂಕಾ ಪಾಟೀಲ್ ಇಬ್ಬರೂ ಬಿಗ್‌ಬಾಸ್ ಸೀಸನ್ 12 ಕನ್ನಡ ಸ್ಪರ್ಧಿ ಮಾಳು ನಿಪನಾಳ ಅವರ ಭಾರೀ ಪ್ರಸಿದ್ಧಿಯಾಗಿರುವ 'ನಾ ಡ್ರೈವರಾ.. ನೀ ನನ ಲವರ್ರಾ.. ಸಾಂಗ್‌ಗೆ ಪಿಚ್ ರೋಲರ್ ಮೇಲೆ ಹೆಜ್ಜೆ ಹಾಕಿದ್ದು, ಇದನ್ನು ಆರ್‌ಸಿಬಿ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಂಡಿದೆ. ಪ್ರಾಕ್ಟೀಸ್ ಸಮಯದಲ್ಲಿ ಮೈದಾನದಲ್ಲೇ ನಡೆದ ಈ ಡಾನ್ಸ್ ನೋಡಿ ಸ್ಮೃತಿ ಮಂಧನಾ ನಗೆಗಡಲಲ್ಲಿ ತೇಲಾಡುತ್ತಿರುವ ದೃಶ್ಯಗಳು ಅಭಿಮಾನಿಗಳ ಗಮನ ಸೆಳೆದಿವೆ.
ಅಭಿಮಾನಿಗಳು ಹೇಳೋದೇನು?: ಈ ವಿಡಿಯೋಗೆ ಪ್ರತಿಕ್ರಿಯಿಸಿದ ಹಲವರು, "ಸ್ಮೃತಿ ಮಂಧನಾ ಮುಖದಲ್ಲಿ ಮತ್ತೆ ನಗು ನೋಡಿದ್ದು ಖುಷಿ ನೀಡಿದೆ," ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವರು, "ಕೊನೆಗೂ ಸ್ಮೃತಿಯನ್ನು ನಗಿಸಲು ಆಕೆಯ ಆತ್ಮೀಯ ಗೆಳತಿ ಕನ್ನಡತಿ ಶ್ರೇಯಾಂಕಾ ಪಾಟೀಲ್ ಬಂದಿದ್ದಾರೆ," ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಮಿ.ನಾಗ್ಸ್ ಕೇಳಿದ ಪ್ರಶ್ನೆಗೆ ತಮಾಷೆಯಾಗಿ ಉತ್ತರ ನೀಡಿದ ಶ್ರೇಯಾಂಕಾ, ತಾನು ಬ್ಯಾಟರ್ ಅಥವಾ ಬೌಲರ್‌ಗಿಂತ ಇನ್‌ಫ್ಲುಯೆನ್ಸರ್ ಆಗಿ ಜನರು ನೋಡೋದನ್ನೇ ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ. ಕ್ರಿಕೆಟ್ ತನ್ನ ಜೀವನದ ಒಂದು ಭಾಗ ಮಾತ್ರ ಎಂದ ಅವರು, ವಿಭಿನ್ನ ಹೇರ್‌ಸ್ಟೈಲ್, ಮೇಕಪ್ ಮತ್ತು ಡ್ರೆಸ್‌ಗಳಲ್ಲಿ ಕಾಣಿಸಿಕೊಳ್ಳುವ ಆಸೆಯನ್ನೂ ಬಿಚ್ಚಿಟ್ಟಿದ್ದಾರೆ.
ಇನ್ನೂ ಹಳದಿ ಬಣ್ಣದ ಕುರಿತು ತಮಾಷೆಯ ಟಾಂಗ್ ಕೊಟ್ಟಿದ್ದು, ಇದನ್ನು ಆರ್‌ಸಿಬಿ ಅಭಿಮಾನಿಗಳು ಖುಷಿಯಿಂದ ಸ್ವೀಕರಿಸಿದ್ದಾರೆ. ಹಳದಿ ಬಣ್ಣ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಗುರುತಾಗಿರುವುದರಿಂದ ಈ ಮಾತುಗಳು ಮತ್ತಷ್ಟು ಗಮನ ಸೆಳೆದಿವೆ. ಒಟ್ಟಿನಲ್ಲಿ ಆರ್‌ಸಿಬಿ ಗೆಲುವಿನ ಸಂಭ್ರಮದ ಜೊತೆಗೂಡಿ, ಈ ಇನ್‌ಸೈಡರ್ ವಿಡಿಯೋ ತಂಡದ ಆತ್ಮವಿಶ್ವಾಸ ಮತ್ತು ಸ್ನೇಹಭಾವವನ್ನು ಅಭಿಮಾನಿಗಳಿಗೆ ಮತ್ತೊಮ್ಮೆ ತೋರಿಸಿದೆ.
ಶ್ರೇಯಾಂಕಾ ಪಾಟೀಲ್ ಅವರು ಕ್ರಿಕೆಟ್ ವೇಳೆ ತಮ್ಮ ತಮಾಷೆ ಮಾತು, ಹಾಡು, ಡ್ಯಾನ್ಸ್ ಮೂಲಕ ಬೇಜಾರಿನಲ್ಲಿದ್ದರವನ್ನು ಸಂತೋಷಗೊಳಿಸುತ್ತಲಿರುತ್ತಾರೆ. ಇಂತಹ ವಿಡಿಯೋಗಳನ್ನು ಆರ್‌ಸಿಬಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುತ್ತಲಿರುತ್ತದೆ. ಹಾಗೆಯೇ ಉತ್ತರ ಕರ್ನಾಟಕದ ಮಾಳು ನಿಪ್ಪನಾಳ್ ಆಡಿರುವ ನಾ ಡ್ರೈಬರಾ ಸಾಂಗ್‌ಗೆ ಸೊಂಟ ಬಳುಕಿಸಿ ಸ್ಮೃತಿ ಮಂಧಾನ ಅವರ ನಗುವಿಗೆ ಕಾರಣರಾಗಿದ್ದಾರೆ. ಮಾಳು ಆಡಿರುವ ಈ ಹಾಡು ಇಲ್ಲದೆ, ಟ್ರ್ಯಾಕ್ಟರ್‌ಗಳು ಮುಂದಕ್ಕೆ ಹೋಗುವುದಿಲ್ಲ ಅನ್ನುತ್ತಾರೆ ಡ್ರೈವರ್‌ಗಳು. ಅಷ್ಟರ ಮಟ್ಟಿಗೆ ಈ ಹಾಡು ಪ್ರಸಿದ್ಧಿ ಪಡೆದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications