For Quick Alerts
ALLOW NOTIFICATIONS  
For Daily Alerts
 

ಸೋಲಿಗೆ ನಾನೇ ಹೊಣೆ ಹೋರುತ್ತೇನೆ: 5ನೇ ಸೋಲಿನ ಬಳಿಕ ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ ಹೇಳಿಕೆ

RCB skipper Smriti Mandhana reaction after lose Delhi Capitals Said The first 14 overs did really hurt us

ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿ ತಂಡ ಐದನೇ ಪಂದ್ಯದ ಬಳಿಕವೂ ಗೆಲುವಿನ ಖಾತೆ ತೆರೆಯಲು ವಿಫಲವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ 6 ವಿಕೆಟ್‌ಗಳ ಅಂತರದ ಸೋಲು ಕಂಡಿತು. ಈ ಸೋಲಿನ ಬಳಿಕ ಮಾತನಾಡಿದ ಸ್ಮೃತಿ ಮಂಧಾನ ಮೊದಲ 14 ಓವರ್‌ಗಳ ಪ್ರದರ್ಶನ ತಮ್ಮ ತಂಡಕ್ಕೆ ಹಿನ್ನಡೆಯುಂಟು ಮಾಡಿತು ಎಂದಿದ್ದಾರೆ.

ಮಾರ್ಚ್ 13 ಸೋಮವಾರ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಡಬ್ಲ್ಯುಪಿಎಲ್‌ನ ಸತತ 5ನೇ ಸೋಲು ಅನುಭವಿಸಿದೆ ಆರ್‌ಸಿಬಿ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡ ಮೊದಲ 14 ಓವರ್‌ಗಳಲ್ಲಿ ಕೇವಲ 68 ರನ್‌ ಮಾತ್ರವೇ ಗಳಿಸಿತ್ತು. ಈ ಅವಧಿಯಲ್ಲಿ 4.85ರ ಸರಾಸರಿಯಲ್ಲಿ ಬ್ಯಾಟಿಂಗ್ ನಡೆಸಿದ ಆರ್‌ಸಿಬಿ ತಂಡ ಮೂರು ಪ್ರಮುಖ ವಿಕೆಟ್‌ಗಳನ್ನು ಕೂಡ ಕಳೆದುಕೊಂಡಿತ್ತು. ಸ್ಮೃತಿ ಮಂಧಾನ, ಸೋಫಿ ಡಿವೈನ್ ಹಾಗೂ ಹೋದರ್ ನೈಟ್ ಅದಾಗಲೇ ವಿಕೆಟ್ ಕಳೆದುಕೊಂಡಿದ್ದರು.

ಆದರೆ ಅದಾದ ಬಳಿಕ ಎಲೀಸ್ ಪೆರ್ರಿ ಹಾಗೂ ರಿಚಾ ಘೋಷ್ ಉತ್ತಮ ಪ್ರದರ್ಶನ ನೀಡಿ ತಂಡದ ಮೊತ್ತವನ್ನು 150ರ ಗಡಿ ದಾಟಿಸುವಲ್ಲಿ ಯಶಸ್ವಿಯಾಗಿದ್ದರು. ಇದನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡ ಕೆಲ ಕಠಿಣ ಸಂದರ್ಭಗಳನ್ನು ಎದುರಿಸಿತು. ಆದರೆ ಅಂತಿಮವಾಗಿ ಎರಡು ಎಸೆತಗಳು ಇರುವಂತೆಯೇ ಡಿಸಿ ಗೆದ್ದು ಬೀಗಿದೆ. ಈ ಹೋರಾಟಕ್ಕೆ ತಂಡದ ಬೌಲರ್‌ಗಳ ಪ್ರದರ್ಶನವನ್ನು ಕೊಂಡಾಡಿದ್ದಾರೆ ನಾಯಕಿ ಸ್ಮೃತಿ ಮಂಧಾನ.

"20ನೇ ಓವರ್ ತನಕ ಪಂದ್ಯವನ್ನು ತೆಗೆದುಕೊಂಡು ಹೋಗಿದ್ದು ಬೌಲರ್‌ಗಳಿಮದ ನಿಜಕ್ಕೂ ಅದ್ಭುತ ಹೋರಾಟವಾಗಿತ್ತು. ಸಾಕಷ್ಟು ಸಕಾರಾತ್ಮಕ ಬದಲಾವಣೆಗಳು ಆಗಿದೆ. ಆದರೆ ಅದು ಇನ್ನಷ್ಟು ಆಗಬೇಕಿದೆ" ಎಂದಿದ್ದಾರೆ ಆರ್‌ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ.

ಇನ್ನು ಈ ಪಂದ್ಯದಲ್ಲಿ ಆರ್‌ಸಿಬಿ ಗೌತವಯುತ ಮೊತ್ತ ಪೇರಿಸಲು ಕಾರಣವಾಗಿದ್ದು ಪೆರ್ರಿ ಮತ್ತು ರಿಚಾ ಜೊತೆಯಾಟ. ಈ ಇಬ್ಬರು 34 ಎಸೆತಗಳಲ್ಲಿ 74 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾಗಿದ್ದರು. ಆರ್‌ಸಿಬಿ ಸಂಕಷ್ಟಕ್ಕೆ ಸಿಲುಕಿದ ನಂತರ ಈ ಇಬ್ಬರು ಆಟಗಾರ್ತಿಯರು ಜವಾಬ್ದಾರಿಯನ್ನು ವಹಿಸಿಕೊಂಡಿದ್ದಕ್ಕೆ ನಾಯಕಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

"ಆ ಜೊತೆಯಾಟ ನಮ್ಮನ್ನು ಪಂದ್ಯದಲ್ಲಿ ಮುಂದುವರಿಯುವಂತೆ ಮಾಡಿತು. ಅವರಿಬ್ಬರು ಕೂಡ ತಮ್ಮ ಅನುಭವವನ್ನು ಬಳಸಿಕೊಂಡು ಉತ್ತಮ ಮೊತ್ತ ಪೇರಿಸಲು ಕಾರಣವಾದರು. ಅದು ನಮಗೆ ಬಲ ನೀಡಿತು. ನನ್ನ ಬ್ಯಾಟಿಂಗ್ ಸೇರಿದಂತೆ ನಮ್ಮದು ಉತ್ತಮ ಆರಂಭವಾಗಿರಲಿಲ್ಲ.ಮೊದಲ 14 ಓವರ್‌ಗಳ ಪ್ರದರ್ಶನ ನಮಗೆ ದೊಡ್ಡ ಹಿನ್ನಡೆಯುಂಟು ಮಾಡಿತು. 10-15 ರನ್ ನಾವು ಹೆಚ್ಚು ಗಳಿಸಿದ್ದರೆ ಅದು ನಮಗೆ ಅನುಕೂಲವಾಗುತ್ತಿತ್ತು" ಎಂದಿದ್ದಾರೆ ಆರ್‌ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ.

Story first published: Tuesday, March 14, 2023, 8:38 [IST]
Other articles published on Mar 14, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+