Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RCB ಕೆಎಲ್‌ ರಾಹುಲ್, ರಿಷಭ್‌ ಪಂತ್‌, ಶ್ರೇಯಸ್ ಅಯ್ಯರ್‌ಗೆ ಬಿಡ್‌ ಮಾಡದೇ ಇರಲು ಕಾರಣ ಏನು?

ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಸೌದಿಯಲ್ಲಿ ನಡೆದ ಐಪಿಎಲ್‌ ಮೆಗಾ ಹರಾಜಿನಲ್ಲಿ ಉತ್ತಮ ತಂಡವನ್ನು ಆಯ್ಕೆ ಮಾಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಸ್ಟಾರ್ ಆಟಗಾರರನ್ನು ಖರೀದಿಸುವಲ್ಲಿ ಹಿಂದೇಟು ಹಾಕಿದೆ. ಆರ್‌ಸಿಬಿ ಸ್ಟಾರ್‌ ಆಟಗಾರರ ಬೆನ್ನು ಹತ್ತುವ ಗೋಜಿಗೆ ಹೋಗದೇ ಇರುವುದು ದೊಡ್ಡ ಪ್ರಶ್ನೆಯನ್ನು ಉದ್ಭವಿಸಿದೆ. ಈ ಎಲ್ಲ ಪ್ರಶ್ನೆಗಳಿಗೆ ಮೇಲ್ನೋಟಕ್ಕೆ ಉತ್ತರ ಸಿಕ್ಕಂತೆ ಕಾಣುತ್ತಿದೆ. ಆರ್‌ಸಿಬಿ ಯಾವ ಲೆಕ್ಕಾಚಾರದಿಂದ ಸ್ಟಾರ್ ಆಟಗರರಿಗೆ ಬಿಡ್ ಮಾಡಲಿಲ್ಲ ಎಂಬ ಬಗ್ಗೆ ವರದಿ ಇಲ್ಲಿದೆ.

ಐಪಿಎಲ್‌ ಮೆಗಾ ಹರಾಜು ಆರಂಭವಾಗುವ ಮುನ್ನ ಆರ್‌ಸಿಬಿ ಈ ಬಾರಿ ಒಳ್ಳೆಯ ನಾಯಕನ ಹುಡುಕಾಟ ನಡೆಸುತ್ತಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಐಪಿಎಲ್ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಸ್ಟಾರ್‌ ನಾಯಕರಿಗೆ ದೊಡ್ಡ ಮೊತ್ತದ ಬಿಡ್‌ ಮಾಡಲೇ ಇಲ್ಲ. ಹಾಗಿದ್ದರೆ ಆರ್‌ಸಿಬಿ ಈ ಬಾರಿ ಐಪಿಎಲ್‌ 2025ರ ನಾಯಕನ ಹುಡುಕಾಟ ನಿಲ್ಲಿಸಿದೆಯಾ ಎಂಬ ಪ್ರಶ್ನೆಗಳು ಸಹ ಎದ್ದಿವೆ. ಇತ್ತೀಚಿಗೆ ನಡೆದ ಹರಾಜಿನಲ್ಲಿ ಆರ್‌ಸಿಬಿ ಭಾಗವಹಿಸಿದ್ದ ರೀತಿಯನ್ನು ನೋಡಿದರೆ, ನಾಯಕನ ಹುಡುಕಾಟ ನಿಂತಿದೆ ಎಂದು ಮೇಲ್ನೋಟಕ್ಕೆ ಕಾಣಿಸುತ್ತದೆ.

RCB Skips Star Players in IPL 2025 Mega Auction Virat Kohli Likely to Lead

ಆರ್‌ಸಿಬಿ ಈ ಬಾರಿ ಮೆಗಾ ಹರಾಜಿನಲ್ಲಿ ಕೆಎಲ್ ರಾಹುಲ್‌ ಅವರನ್ನು ಕೊಂಡು ಕೊಳ್ಳುತ್ತದೆ ಎಂದು ಎಲ್ಲರು ಲೆಕ್ಕಾಚಾರ ಹಾಕಿಕೊಂಡಿದ್ದರು. ಲಕ್ನೋ ಸೂಪರ್ ಜೈಂಟ್ಸ್ ತಂಡ ಇವರನ್ನು ಕೈ ಬಿಡುತ್ತಿದ್ದಂತೆ ಇವರನ್ನು ತವರಿನ ತಂಡಕ್ಕೆ ಕರೆತರುವಂತೆ ಬೇಡಿಕೆ ಹೆಚ್ಚಾಯಿತು. ಆರ್‌ಸಿಬಿ ಸಹ ಈ ನಿಟ್ಟಿನಲ್ಲಿ ಹರಾಜಿನಲ್ಲಿ ಹಣವನ್ನು ಹೂಡಿತು. ಆದರೆ ರಾಹುಲ್‌ ಅವರನ್ನು ನಾಯಕರನ್ನಾಗಿ ತಂಡಕ್ಕೆ ಸೇರಿಸಿಕೊಳ್ಳುವಷ್ಟು ಹಣವನ್ನು ಬೆಂಗಳೂರು ತಂಡ ಹೂಡಲಿಲ್ಲ. ಅಂದರೆ, ಆರ್‌ಸಿಬಿ ರಾಹುಲ್‌ ಅವರನ್ನು ಒಬ್ಬ ಪ್ಲೇಯರ್‌ ಆಗಿ ತಂಡದಲ್ಲಿ ಸೇರಿಸಿಕೊಳ್ಳುವ ಉದ್ದೇಶದಿಂದಲೇ 10 ಕೋಟಿ ರೂಪಾಯಿ ವರೆಗೆ ಬಿಡ್ ಮಾಡಿತು.

ಸ್ಟಾರ್‌ಗಳಿಗೆ ಬಿಡ್ ಮಾಡದಿರಲು ಕಾರಣ ಏನು?

ಇನ್ನು ಕೆಎಲ್ ರಾಹುಲ್ ಅವರನ್ನು ಬಿಟ್ಟರೆ ಆರ್‌ಸಿಬಿ ರಿಷಭ್ ಪಂತ್ ಅವರತ್ತ ಮುಖ ಮಾಡಲಿದೆ ಎಂಬ ಮಾತುಗಳ ಸಹ ಇದ್ದವು. ಆರ್‌ಸಿಬಿ ಈ ಪ್ರಯತ್ನದಲ್ಲಿ ವಿಫಲವಾಗಿದೆ. ಹಾಗೆ ನೋಡಿದರೆ ಆರ್‌ಸಿಬಿ ಐಪಿಎಲ್ ಮೆಗಾ ಹರಾಜಿಗೆ ಹೋಗುವ ಮುನ್ನವೇ ನಾಯಕನನ್ನು ಫಿಕ್ಸ್ ಮಾಡಿಕೊಂಡು ಹೋದಂತೆ ಕಾಣುತ್ತಿದೆ. ಹೀಗಾಗಿ ತಂಡ ಶ್ರೇಯಸ್ ಅಯ್ಯರ್‌ ಹಾಗೂ ಕಳೆದ ಬಾರಿ ತಂಡವನ್ನು ಮುನ್ನಡೆಸಿದ್ದ ಫಾಫ್ ಡುಪ್ಲೇಸಿಸ್ ಅವರನ್ನು ಕೊಳ್ಳುವಲ್ಲಿ ಸಹ ಇಂಟರೆಸ್ಟ್‌ ತೋರಿಸಲಿಲ್ಲ.

ಆರ್‌ಸಿಬಿ ನಾಯಕ

ಹಾಗಿದ್ದರೆ ಆರ್‌ಸಿಬಿ ಈ ಬಾರಿ ಯಾವ ತಂತ್ರದಿಂದ ಐಪಿಎಲ್ ಮೆಗಾ ಹರಾಜು ಪ್ರವೇಶಿಸಿದೆ ಎಂದು ನೋಡಿದರೆ, ಬೆಂಗಳೂರು ನಾಯಕತ್ವವನ್ನು ವಿರಾಟ್‌ ಕೊಹ್ಲಿ ಅವರಿಗೆ ಒಪ್ಪಿಸಿದಂತೆ ಸ್ಪಷ್ಟವಾಗಿ ಕಾಣುತ್ತದೆ. ಅಲ್ಲವೇ ತಂಡದಲ್ಲಿ ಇರುವ ಅನುಭವಿ ಆಟಗಾರನಿಗೆ ನಾಯಕತ್ವದ ಪಟ್ಟವನ್ನು ನೀಡುವ ಲೆಕ್ಕಾಚಾರ ಹಾಕಿಕೊಂಡಂತೆ ಕಂಡು ಬಂದಿದೆ. ಹೀಗಾಗಿ ಆರ್‌ಸಿಬಿ ಹರಾಜಿನಲ್ಲಿ ಸ್ಟಾರ್ ನಾಯಕರಿಗೆ ಮಣೆ ಹಾಕಲಿಲ್ಲ ಎಂಬುದು ಕಾಣುತ್ತದೆ. ಹಾಗಿದ್ದರೆ 18ನೇ ಆವೃತ್ತಿಯ ಐಪಿಎಲ್‌ನ್ನು ಯಾರು ಮುನ್ನಡೆಸುತ್ತಾರೆ ಎಂಬ ಕ್ಲೀಯರ್ ಪಿಶ್ಚರ್‌ ಟೀಮ್ ಮ್ಯಾನೇಜ್ಮೆಂಟ್‌ಗೆ ಇದ್ದ ಹಾಗೆ ಇದೆ. ಆದರೆ ಈ ಬಗ್ಗೆ ಇನ್ನು ಯಾವುದೇ ಬಹಿರಂಗ ಹೇಳಿಕೆಗಳು ಬಂದಿಲ್ಲ.

Story first published: Wednesday, November 27, 2024, 8:31 [IST]
Other articles published on Nov 27, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+