Mangesh Yadav: ಹರಾಜಿನಲ್ಲಿ RCB ಖರೀದಿಸಿದ ಮಂಗೇಶ್ ಯಾರು?
ಐಪಿಎಲ್ 2026ರ ಮಿನಿ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯುವ ದೇಶೀಯ ಆಟಗಾರರಿಗೆ ಮಣೆ ಹಾಕಿದೆ. ಹರಾಜಿನಲ್ಲಿ ಆರ್‌ಸಿಬಿ ಮಧ್ಯಪ್ರದೇಶದ ಮಂಗೇಶ್ ಯಾದವ್ ಅವರಿಗೆ ಭಾರೀ ಮೊತ್ತವನ್ನು ನೀಡಿ ತಂಡಕ್ಕೆ ಸೇರಿಸಿಕೊಂಡಿದೆ.
ಹರಾಜಿನಲ್ಲಿ ಮಧ್ಯಪ್ರದೇಶದ ಮಂಗೇಶ್ ಯಾದವ್ ಅವರಿಗೆ ತಂಡಕ್ಕೆ ಸೇರಿಸಿಕೊಳ್ಳಲು ಆರ್‌ಸಿಬಿ ಹಾಗೂ ಎಸ್‌ಆರ್‌ಎಚ್ ತಂಡಗಳು ಜಿದ್ದು ನಡೆಸಿದವು. ಈ ವೇಳೆ ಉಭಯ ತಂಡಗಳು 23 ವರ್ಷದ ಯುವ ಆಟಗಾರನಿಗೆ ಹಣವನ್ನು ಹೂಡಿದವು. ಕೊನೆಗೆ ಇವರನ್ನು ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ಆರ್‌ಸಿಬಿ ಯಶಸ್ವಿಯಾಯಿತು. ಆರ್‌ಸಿಬಿ ಮಧ್ಯ ಪ್ರದೇಶದ ಆಲ್‌ರೌಂಡರ್‌ಗೆ 5.20 ಕೋಟಿ ನೀಡಿ ಖರೀದಿಸಿದೆ. ಅಭಿಮಾನಿಗಳು ಇವರ ಬಗ್ಗೆ ಹುಡುಕಾಟ ಆರಂಭಿಸಿದ್ದಾರೆ. ಇವರ ಮೂಲ ಬೆಲೆ 20 ಲಕ್ಷ ರೂ. ಆಗಿತ್ತು.

ಮಂಗೇಶ್ ಯಾದವ್ ಯಾರು?
ಮಧ್ಯ ಪ್ರದೇಶ ಯುವ ಆಲ್‌ರೌಂಡರ್ ಮಂಗೇಶ್ ಅಕ್ಟೋಬರ್ 10, 2002ರಂದು ಜನಿಸಿದ್ದಾರೆ. ಇವರು ಬಲಗೈ ಬ್ಯಾಟಿಂಗ್ ಹಾಗೂ ಎಡಗೈನಲ್ಲಿ ಬೌಲಿಂಗ್ ನಡೆಸಬಲ್ಲ ಕ್ಷಮತೆ ಹೊಂದಿದ್ದಾರೆ. ಇತ್ತೀಚಿಗೆ ನೀಡಿದ ಅಮೋಘ ಪ್ರದರ್ಶನ ಇವರನ್ನು ಮಾಲೀಕರ ಚಿತ್ತ ಕದಿಯುವಂತೆ ಮಾಡಿದೆ. ಗ್ವಾಲಿಯರ್ ಚಿತಾಸ್, ಭೋಪಾಲ್ ಲೆಪರ್ಡ್ಸ್ ಹಾಗೂ ಎಂ.ಎಚ್ ಕ್ಲಬ್ ಪರ ಆಡಿ ಸೈ ಎನಿಸಿಕೊಂಡಿದ್ದರು.
ಮಂಗೇಶ್ ಮಧ್ಯಪ್ರದೇಶದ ಟಿ20 ಲೀಗ್‌ನಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಆಟಗಾರ. ಇವರು ಒಟ್ಟಾರೆ 14 ವಿಕೆಟ್ ಪಡೆದು ಬೀಗಿದ್ದಾರೆ. ಇದರಲ್ಲಿ ಮೂರು ಬಾರಿ ನಾಲ್ಕು ವಿಕೆಟ್ ಪಡೆದಿದ್ದಾರೆ. ಬುಚಿ ಬಾಬು ಟೂರ್ನಿಯಲ್ಲಿ ಬ್ಯಾಟಿಂಗ್‌ನಿಂದಲೂ ಅಬ್ಬರಿಸಿರುವ ಮಂಗೇಶ್ ಬೌಲಿಂಗ್‌ನಲ್ಲಿ ಆರು ವಿಕೆಟ್ ಪಡೆದು ಬೀಗಿದ್ದರು.
ಮಂಗೇಶ್ ಎರಡೂ ಬದಿಯಲ್ಲಿ ಸ್ವಿಂಗ್ ಮಾಡುವ ಕ್ಷಮತೆಯನ್ನು ಹೊಂದಿದ್ದಾರೆ. ಅಲ್ಲದೆ ಪರ್ಫೆಕ್ಟ್ ಯಾರ್ಕರ್‌ಗಳನ್ನು ಎಸೆಯಲು ಹೆಸರುವಾಸಿ. ಅಲ್ಲದೆ ಇವರ ಬತ್ತಳಿಕೆಯಲ್ಲಿ ಸ್ಲೋವರ್ ಒನ್ ಎಸೆತಗಳು ಸಹ ಇವೆ. ಪವರ್ ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ತಂಡಕ್ಕೆ ಆಧಾರವಾಗಬಲ್ಲ ಪ್ಲೇಯರ್.
ಹರಾಜಿನಲ್ಲಿ ಆರ್‌ಸಿಬಿ ಖರೀದಿಸಿದ ಆಟಗಾರರ ಪಟ್ಟಿ
ವೆಂಕಟೇಶ್ ಅಯ್ಯರ್, 7 ಕೋಟಿ ರೂ.
ಮಂಗೇಶ್ ಯಾದವ್, 5.20 ಕೋಟಿ ರೂ.
ಜಾಕೋಬ್ ಡಫಿ, 2 ಕೋಟಿ ರೂ.
ಜೋರ್ಡಾನ್ ಕಾಕ್ಸ್, 75 ಲಕ್ಷ ರೂ.
ಸಾತ್ವಿಕ್ ದೇಸ್ವಾಲ್, 30 ಲಕ್ಷ ರೂ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications