Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಹರಾಜಿನಲ್ಲಿ ಆರ್‌ಸಿಬಿ ಖರೀದಿಸಿದ ದುಬಾರಿ ಆಟಗಾರರು ಇವರೇ

ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್‌ ಇತಿಹಾಸದಲ್ಲಿ ಒಮ್ಮೆಯೂ ಕಪ್‌ ಗೆದ್ದಿಲ್ಲ. ಆದರೂ ಅದರ ಖ್ಯಾತಿ ಏನು ಕಮ್ಮಿ ಆಗಿಲ್ಲ. ಆರ್‌ಸಿಬಿ ಮೊದಲಿನಿಂದಲೂ ಐಪಿಎಲ್‌ ಮೆಗಾ ಹರಾಜಿನಲ್ಲಿ ಸ್ಟಾರ್‌ ಆಟಗಾರರನ್ನು ಬಿಡ್‌ ಮಾಡುತ್ತಲೇ ಬಂದಿದೆ. ಈ ಬಾರಿ ಆರ್‌ಸಿಬಿ ದುಬಾರಿ ಬೆಲೆ ನೀಡಿ ಸ್ಟಾರ್‌ ಕ್ರಿಕೆಟ್‌ ಆಟಗಾರರನ್ನು ಖರೀದಿ ಮಾಡಿದೆ. ಸೌದಿಯಲ್ಲಿ ನಡೆದ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಖರೀದಿಸಿದ ಟಾಪ್‌ 5 ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ.

ಆರ್‌ಸಿಬಿ ಹಲವು ಬಾರಿ ಫೈನಲ್‌ಗೆ ಅರ್ಹತೆ ಪಡೆದರೂ ಸಹ ಒಮ್ಮೆಯೂ ಪ್ರಶಸ್ತಿ ಗೆಲ್ಲದೇ ಇರುವುದು ನಿಜಕ್ಕೂ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಈ ನಿಟ್ಟಿನಲ್ಲಿ ಕಪ್‌ ಗೆಲುವಿನ ಅಭಿಯಾನವನ್ನು ಆರಂಭಿಸಲು ಆರ್‌ಸಿಬಿ ಈ ಬಾರಿ ಸ್ಟಾರ್‌ ಆಟಗಾರರು ಅಳೆದು ತೂಗಿ ಬಿಡ್ ಮಾಡಿದೆ. ಆರ್‌ಸಿಬಿ ಬಿಡ್‌ ಮಾಡಿರುವ ಆಟಗಾರರನ್ನು ಒಮ್ಮೆ ನೋಡಿದರೆ, ಈ ಬಾರಿ ಬೌಲಿಂಗ್‌ ವಿಭಾಗ ವಿವಿಧತೆಯಿಂದ ಕೂಡಿರುವುದು ಕಂಡು ಬರುತ್ತದೆ.

RCB Splashes Big in Saudi IPL Auction Top 5 Most Expensive Buys Revealed

ಜೋಶ್ ಹ್ಯಾಜಲ್‌ವುಡ್‌

ಆಸ್ಟ್ರೆಲಿಯಾ ತಂಡದ ಸ್ಟಾರ್ ವೇಗದ ಜೋಶ್‌ ಹ್ಯಾಜಲ್‌ ವುಡ್‌ ಅವರನ್ನು ಆರ್‌ಸಿಬಿ ಭಾರೀ ಮೊತ್ತ ನೀಡಿ ತಂಡಕ್ಕೆ ಬರ ಮಾಡಿಕೊಂಡಿದೆ. ಇವರಿಗೆ ಆರ್‌ಸಿಬಿ 12.50 ಕೋಟಿ ನೀಡಿದೆ. ಇವರು ಪವರ್‌ ಪ್ಲೇ ಹಾಗೂ ಡೆತ್‌ ಓವರ್‌ಗಳಲ್ಲಿ ಬಿಗುವಿನ ದಾಳಿಯನ್ನು ಸಂಘಟಿಸ ಬಲ್ಲ ಪ್ಲೇಯರ್. ಅಲ್ಲದೆ ಈಗಾಗಲೇ ಒಂದು ಬಾರಿ ಇವರು ಆರ್‌ಸಿಬಿ ಪರ ಆಡಿ ಸೈ ಎನಿಸಿಕೊಂಡಿದ್ದಾರೆ. ಆರ್‌ಸಿಬಿ ಕಪ್‌ ಗೆಲುವಿಗೆ ಇವರು ಯಾವ ರೀತಿ ಕಾಣಿಕೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಫಿಲ್ ಸಾಲ್ಟ್‌

ಇತ್ತೀಚಿನ ದಿನಗಳಲ್ಲಿ ಇಂಗ್ಲೆಂಡ್ ತಂಡದ ಪರ ಸ್ಫೊಟಕ ಬ್ಯಾಟಿಂಗ್ ನಡೆಸಿ ಹೆಸರು ಮಾಡಿರುವ ಆಟಗಾರ ಫಿಲ್ ಸಾಲ್ಟ್‌. ಟಾಪ್ ಆರ್ಡರ್‌ ಗೆ ಇವರು ಬಲ ತುಂಬ ಬಲ್ಲ ಪ್ಲೇಯರ್. ಇವರು ಇಂಗ್ಲೆಂಡ್ ಪರ 38 ಟಿ20 ಪಂದ್ಯಗಳನ್ನು ಆಡಿದ್ದು, 165ರ ಸ್ಟ್ರೈಕ್‌ ರೇಟ್‌ನಲ್ಲಿ ರನ್ ಬಾರಿಸಬಲ್ಲರು. ಇವರ ಬುಟ್ಟಿಯಲ್ಲಿ 1106 ರನ್‌ ಇದ್ದು, ಇದರಲ್ಲಿ 3 ಶತಕ ಹಾಗೂ 4 ಅರ್ಧಶತಕಗಳು ಸೇರಿವೆ.

ಜಿತೇಶ್ ಶರ್ಮಾ

ಐಪಿಎಲ್‌ನಲ್ಲಿ ಮಿಂಚಿ ಭರವಸೆ ಮೂಡಿಸಿರುವ ಭಾರತೀಯ ಆಟಗಾರ ಜಿತೇಶ್ ಶರ್ಮಾ ಅವರಿಗೆ ಆರ್‌ಸಿಬಿ ಹಣವನ್ನು ಹೂಡಿದೆ. ಇವರು ಐಪಿಎಲ್‌ನಲ್ಲಿ ಆಡಿದ 40 ಪಂದ್ಯಗಳಲ್ಲಿ 730 ರನ್‌ ಸಿಡಿಸಿದ್ದಾರೆ. ಈ ವೇಳೆ ಇವರ ಸ್ಟ್ರೈಕ್‌ ರೇಟ್‌ 151 ಆಗಿದೆ. ಇವರಲ್ಲಿನ ಕ್ಷಮತೆ ಗುರುತಿಸಿ ಆರ್‌ಸಿಬಿ ಭಾರೀ ಮೊತ್ತಕ್ಕೆ ಇವರನ್ನು ಬಿಡ್ ಮಾಡಿದೆ.

ಭುವನೇಶ್ವರ್ ಕುಮಾರ್

ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ಕರಾರುವಕ್ ದಾಳಿ ಸಂಘಟಿಸಿ ಭರವಸೆಯನ್ನು ಮೂಡಿಸಿರುವ ಸ್ವಿಂಗ್ ಬೌಲರ್‌ ಭಾರತದ ಭುವನೇಶ್ವರ್ ಕುಮಾರ್‌ ಅವರಿಗೆ ಆರ್‌ಸಿಬಿ ಹಣ ಹೂಡಿದೆ. ಇವರು ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಪರ ಬಹು ವರ್ಷ ಆಡಿದ ಅನುಭವ ಹೊಂದಿದ್ದಾರೆ. ಅಲ್ಲದೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲೂ ಆಡಿ ಸೈ ಎನಿಸಿಕೊಂಡಿದ್ದಾರೆ. ಪವರ್ ಪ್ಲೇ ಹಾಗೂ ಡೆತ್‌ ಓವರ್‌ಗಳಲ್ಲಿ ಒತ್ತಡವನ್ನು ಮೆಟ್ಟಿನಿಂತು ಬೌಲಿಂಗ್ ನಡೆಸುವುದು ಇವರ ಸ್ಟ್ರೆಂತ್.

ಲಿಯಾಮ್ ಲಿವಿಂಗ್‌ಸ್ಟೋನ್‌

ಇಂಗ್ಲೆಂಡ್ ತಂಡ ಟಿ20 ವಿಶ್ವ ಚಾಂಪಿಯನ್ ಆಗಿದ್ದಾಗ, ತಂಡದ ಪರ ಭರ್ಜರಿ ಪ್ರದರ್ಶನ ನೀಡಿದ್ದ ಪ್ಲೇಯರ್ ಲಿಯಾಮ್‌ ಲಿವಿಂಗ್‌ಸ್ಟೋನ್‌. ಪಂಜಾಬ್‌ ಕಿಂಗ್ಸ್‌ ಪರ ಕಳೆದ ಆವೃತ್ತಿಯಲ್ಲಿ ಆಡಿದ ಅನುಭವ ಇವರದ್ದಾಗಿದೆ. ಇವರು ಮಿಡ್ಲ್ ಆರ್ಡರ್‌ನಲ್ಲಿ ಬ್ಯಾಟಿಂಗ್ ಮಾಡಿ, ಸ್ಪಿನ್ ಬೌಲಿಂಗ್ ನಡೆಸಬಲ್ಲ ಕ್ಷಮತೆ ಹೊಂದಿದ್ದಾರೆ. ಹೀಗಾಗಿ ಆರ್‌ಸಿಬಿ ಇವರಿಗೆ ಹಣ ಹೂಡಿದೆ.

ದುಬಾರಿ ಆಟಗಾರರು

ಜೋಶ್‌ ಹ್ಯಾಜಲ್‌ವುಡ್‌, 12.50 ಕೋಟಿ ರೂ.
ಫಿಲ್ ಸಾಲ್ಟ್, 11,50 ಕೋಟಿ ರೂ.
ಜಿತೇಶ್ ಶರ್ಮಾ, 11,00 ಕೋಟಿ ರೂ.
ಭುವನೇಶ್ವರ್ ಕುಮಾರ್ 10,75 ಕೋಟಿ ರೂ.
ಲಿಯಾಮ್ ಲಿವಿಂಗ್‌ಸ್ಟೋನ್ 8,75 ಕೋಟಿ ರೂ.

Story first published: Tuesday, November 26, 2024, 8:31 [IST]
Other articles published on Nov 26, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+